ಪದ್ಯ (poem) · ಕುಮಾರವ್ಯಾಸ (Kumaravyasa)
ಪಠ್ಯFull text
"ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ-ಈ ಪಂಚಮಂತ್ರಗಳು ಇನ್ನು ಮುಂದಿನ ದೃಷ್ಟಿಯಾಗಬೇಕಾಗಿದೆ." — "Humanity as religion, the world as path, universal upliftment, harmony, and complete vision—these five mantras must become our future perspective." (A powerful, expansive mindset for approaching life and society.)
ಪದಗಳ ಅರ್ಥword meanings
| Kannada | Pronunciation | Meaning |
|---|---|---|
| ಜನಪ | — | ರಾಜ (ಇಲ್ಲಿ ಧರ್ಮರಾಯ); ಅಂಘ್ರಿ-ಪಾದ; ಮಣಿ-ನಮಸ್ಕರಿಸು; ಬೆಸಸು-ಅಪ್ಪಣೆಮಾಡು; ಬೊಪ್ಪ-ತಂದೆ, (ಇಲ್ಲಿ ದೊಡ್ಡಪ್ಪ); ಆಹವ-ಯುದ್ಧ; ಭೇದನ-ಮುರಿಯುವುದು; ಅನುವರ-ಯುದ್ಧ; ಕೃತಾಂತ-ಯಮ; ಅಹಿತರು-ಹಿತವಲ್ಲದವರು, ವೈರಿಗಳು; ಕಾಳಗ-ಯುದ್ಧ |
| ಹಸುಳೆ | — | ಮಗು; ಅದಟು-ಪರಾಕ್ರಮ,ಶೌರ್ಯ; ಘನ-ದೊಡ್ಡ; ಶಿಶು-ಮಗು; ಕಾದುವರು-ಯುದ್ಧ ಮಾಡುವವರು; ಅಸಮಬಲ-ಸಮಾನವಲ್ಲದ ಶಕ್ತಿ ಉಳ್ಳವರು; ಎಸುಗೆ-ಬಾಣ ಪ್ರಯೋಗ; ಸೈರಿಸು-ತಡೆದುಕೊಳ್ಳು; ಆಪೆ-ಸಮರ್ಥನಾಗುವೆ |
| ತೊರೆ | — | ನದಿ, ಹೊಳೆ; ಮರೀಚಿ-ಮೃಗಜಲ (ನೀರು ಎಂಬ ಭ್ರಮೆಯ ಸೃಷ್ಟಿ); ಹರುಗೋಲ-ನಾವೆ, ದೋಣಿ; ಲೆಪ್ಪ-ವಿಗ್ರಹಗಳನ್ನು ಮಾಡಲು ಬಳಸುವ ಎರಕ; ಉರಗ-ಹಾವು; ಕೊಡನ ಮಗ- ದ್ರೋಣ; ಕುಮಂತ್ರ-ಮೋಸದ ಆಲೋಚನೆ; ದಂಡು-ಸೈನ್ಯ; ಅಂಜು-ಹೆದರು; ವೆಗ್ಗಳ-ಅತಿಯಾಗಿ; ಅಮ್ಮೆ-ಸಾಧ್ಯವಿಲ್ಲ |
| ವೈರಿ | — | ಶತ್ರು; ವ್ಯೂಹ-ಸೈನ್ಯವನ್ನು ಒಂದು ವಿಶಿಷ್ಟ ರೀತಿಯಲ್ಲಿ ನಿಲ್ಲಿಸುವ ಕ್ರಮ; ಅಸದಳ-ಅಸಾಧ್ಯ, ಅತಿಶಯ; ಇಂದುಧರ-ಚಂದ್ರನನ್ನು ಧರಿಸಿರುವವ, ಶಿವ; ಅಡಹಾಯ್ದರೂ-ಮೇಲೆ ಬಿದ್ದು ಬಂದರೂ; ಸಮರ-ಯುದ್ಧ |
| ಬೆಮರು | — | ಬೆವರು; ವಹ್ನಿಜ್ವಾಲೆ-ಬೆಂಕಿಯ ಜ್ವಾಲೆ; ಹಿಮ-ಚಳಿಗಾಲ, ಮಂಜಿನ ಹನಿ; ಅಂಜು-ಹೆದರು; ಮಂಜು-ಇಬ್ಬನಿ, ಮೇಲುಗಾಳಿಗೆ-ಸ್ಪರ್ಧಾತ್ಮಕವಾದ ಯುದ್ಧ; ದುಗುಡ-ಚಿಂತೆ, ಆತಂಕ; ನಿಮ್ಮಡಿ ಆಲಿ-ನಿಮ್ಮ ಕಣ್ಣುಗಳಿಗೆ; ಔತಣ-ವಿಶೇಷ ಭೋಜನ; ಇಕ್ಕು-ಇಡು,ಬಡಿಸು; ಒರಸಿ-ನಾಶಮಾಡಿ; ರಿಪುಬಲ-ವೈರಿ ಸೈನ್ಯ |
| ಅರಿಬಲ | — | ವೈರಿ ಸೈನ್ಯ; ಖಂಡಿಗೆಳೆ-ನಾಶಪಡಿಸು; ಮೋಹರ-ಸೈನ್ಯ; ನೇಮ-ಅಪ್ಪಣೆ; ಆಹವ-ಯುದ್ಧ |
ಅಭ್ಯಾಸexercises from the textbook
Model answers — a guide, not the only correct wording. Check with your teacher.
ಅ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.
೧. ಧರ್ಮರಾಯನಿಗೆ ನಮಸ್ಕರಿಸಿದ ಅಭಿಮನ್ಯು ಹೇಳುವುದೇನು?
Answerಧರ್ಮರಾಯನಿಗೆ ನಮಸ್ಕರಿಸಿದ ಅಭಿಮನ್ಯು, ತನಗೆ ಅಪ್ಪಣೆ ಕೊಡಬೇಕೆಂದೂ, ಪದ್ಮವ್ಯೂಹವನ್ನು ಭೇದಿಸಿ, ಯುದ್ಧವನ್ನು ಗೆದ್ದು, ಶತ್ರುಗಳನ್ನು ಯಮನ ಮನೆಗೆ ಕಳುಹಿಸುವೆನೆಂದೂ ಹೇಳುತ್ತಾನೆ.
೨. ಅಭಿಮನ್ಯುವಿನ ಮಾತನ್ನು ಕೇಳಿ ಧರ್ಮರಾಯ ಏನು ಹೇಳುತ್ತಾನೆ?
Answerಅಭಿಮನ್ಯುವಿನ ಮಾತನ್ನು ಕೇಳಿದ ಧರ್ಮರಾಯನು, ಅವನು ಇನ್ನೂ ಚಿಕ್ಕ ಮಗು ಎಂದೂ, ಯುದ್ಧ ಮಾಡುವವರು ಅಸಮಬಲರೆಂದೂ, ಮಹಾರಥರ ಬಾಣಗಳನ್ನು ತಡೆದುಕೊಳ್ಳಲು ಅವನು ಹೇಗೆ ಸಮರ್ಥನಾಗುವೆ ಎಂದೂ ಹೇಳುತ್ತಾನೆ.
೩. ಧರ್ಮರಾಯನ ಮಾತಿಗೆ ಅಭಿಮನ್ಯು ಕೊಡುವ ಉತ್ತರವೇನು?
Answerಅಭಿಮನ್ಯು ಧರ್ಮರಾಯನಿಗೆ, ಮರೀಚಿಯ ನದಿಗೆ ದೋಣಿ ಇಡುವರೇ, ಲೆಪ್ಪದ ಹಾವನ್ನು ಹಿಡಿಯಲು ಗರುಡ ಮಂತ್ರ ಏಕೆ, ತನ್ನನ್ನು ಚಂಚಲ ಎನ್ನಬೇಡ, ದ್ರೋಣನ ಮಗನ ಕುಮಂತ್ರದ ಸೈನ್ಯದ ಕಡಿತಕ್ಕೆ ನಾನು ಹೆದರುವುದಿಲ್ಲ, ನನ್ನನ್ನು ಈಗಲೇ ಯುದ್ಧಕ್ಕೆ ಕಳುಹಿಸಿ ನೋಡು ಎಂದು ಉತ್ತರ ನೀಡುತ್ತಾನೆ.
ಆ. ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.
೧. ಲೆಪ್ಪದುರುಗನ ಹಿಡಿಯಲೇತಕೆ ಗರುಡಮಂತ್ರವು-ಎಂದರೇನು?
Answerಲೆಪ್ಪದಿಂದ ಮಾಡಿದ ಹಾವನ್ನು ಹಿಡಿಯಲು ಗರುಡ ಮಂತ್ರವನ್ನು ಏಕೆ ಉಪಯೋಗಿಸಬೇಕು ಎಂದು ಅಭಿಮನ್ಯು ಹೇಳುವ ಮೂಲಕ, ಅತ್ಯಂತ ಸುಲಭವಾದ ಕಾರ್ಯಕ್ಕೆ ಮಹಾ ಶಕ್ತಿಯ ಅವಶ್ಯಕತೆ ಇಲ್ಲ; ಅಂದರೆ, ವೈರಿಗಳನ್ನು ಸೋಲಿಸಲು ತನ್ನ ಶೌರ್ಯವೇ ಸಾಕು, ಅದಕ್ಕೆ ವಿಶೇಷವಾದ ಉಪಾಯ ಬೇಕಿಲ್ಲ ಎಂಬ ಅರ್ಥವನ್ನು ನೀಡುತ್ತಾನೆ.
೨. ನಿಮ್ಮಡಿಯಾಲಿಗಳಿಗೆ ಔತಣ ಇಕ್ಕುವನು ಎಂದು ಅಭಿಮನ್ಯು ಹೇಳಲು ಕಾರಣವೇನು ?
೩. ವೈರಿವ್ಯೂಹದೊಳಗೆ ಇರುವ ವೀರರು ಯಾರು?
ಇ. ಕೆಳಗಿನ ವಾಕ್ಯಗಳನ್ನು ಯಾರು, ಯಾರಿಗೆ ಹೇಳಿದರು? ತಿಳಿಸಿ.
೧. ಶಿಶುವು ನೀನೆಲೆ ಮಗನೆ ಕಾದುವರಸಮಬಲರು ಕಣಾ!
Answerಈ ಮಾತನ್ನು ಧರ್ಮರಾಯನು ಅಭಿಮನ್ಯುವಿಗೆ ಹೇಳಿದನು.
೨. ಕೊಡನ ಮಗನ ಕುಮಂತ್ರದೊಡ್ಡಿನ ಕಡಿತಕಾನಂಜುವೆನೆ?
Answerಈ ಮಾತನ್ನು ಅಭಿಮನ್ಯು ಧರ್ಮರಾಯನಿಗೆ ಹೇಳಿದನು.
೩. ನೀಗೆಲುವಂದವೆಂತೆ ಸಮರವಿದು ಸಾಮಾನ್ಯವಲ್ಲೆಂದ.
೪. ಬಾಲನಿವನೆನ್ನದಿರು ದುಗುಡವ ತಾಳಲಾಗದು ಬೊಪ್ಪ.
ಈ. ‘ಅ’ ಪಟ್ಟಿಯಲ್ಲಿನ ಪದಗಳಿಗೆ ‘ಆ’ಪಟ್ಟಿಯಲ್ಲಿ ಅರ್ಥ ನೀಡಲಾಗಿದೆ. ಪಟ್ಟಿಗಳ ಪದಗಳನ್ನು ಹೊಂದಿಸಿ ಬರೆಯಿರಿ.
‘ಅ’ ಪಟ್ಟಿ - ‘ಆ’ ಪಟ್ಟಿ
Answerಹೊಂದಿಕೆ: ೧. ಅದಟು - ಪರಾಕ್ರಮ ೨. ಸೈರಿಸಲಾಪೆ - ತಡೆದುಕೊಳ್ಳಲು ಸಾಧ್ಯ ೩. ಅಮ್ಮೆನು - ಸಾಧ್ಯವಾಗುವುದಿಲ್ಲ ೪. ಅಸದಳ - ಅಸಾಧ್ಯ ೫. ಖಂಡಿಗೆಳೆ - ನಾಶಮಾಡು ೬. ನೇಮ - ಅಪ್ಪಣೆ
೧. ಅದಟು - ಅಪ್ಪಣೆ
Answer೧. ಅದಟು - ಪರಾಕ್ರಮ
೨. ಸೈರಿಸಲಾಪೆ - ನಾಶಮಾಡು
Answer೨. ಸೈರಿಸಲಾಪೆ - ತಡೆದುಕೊಳ್ಳಲು ಸಾಧ್ಯ
೩. ಅಮ್ಮೆನು - ಪರಾಕ್ರಮ
Answer೩. ಅಮ್ಮೆನು - ಸಾಧ್ಯವಾಗುವುದಿಲ್ಲ
೪. ಅಸದಳ - ಸಾಧ್ಯವಾಗುವುದಿಲ್ಲ
Answer೪. ಅಸದಳ - ಅಸಾಧ್ಯ
೫. ಖಂಡಿಗೆಳೆ - ಅಸಾಧ್ಯ
Answer೫. ಖಂಡಿಗೆಳೆ - ನಾಶಮಾಡು
೬. ನೇಮ - ತಡೆದುಕೊಳ್ಳಲು ಸಾಧ್ಯ
Answer೬. ನೇಮ - ಅಪ್ಪಣೆ
ಉ. ಈ ವಾಕ್ಯವನ್ನು ಹೊಸಗನ್ನಡಕ್ಕೆ ಪರಿವರ್ತಿಸಿ, ಭಾಷೆಯಲ್ಲಾದ ಬದಲಾವಣೆಗಳನ್ನು ಗುರುತಿಸಿ.
(ಅಭಿಮನ್ಯು) ಜನಪನ ಅಂಘ್ರಿಗೆ ಮಣಿದು, ಕೈ ಮುಗಿದು, “ಎನಗೆ ಬೆಸಸ್ಯೆ ಬೊಪ್ಪ, ಮಹಾ ಆಹವದ ಒಳಗೆ ಪದ್ಮವ್ಯೂಹ ಭೇದನವ ತಾ ಬಲ್ಲೆನು. ಅನುವರವ ಗೆಲುವೆನು, ಅಹಿತರನು ಕೃತಾಂತನ ಮನೆಗೆ ಕಳುಹುವೆನು, ನೀನ್ ಇನಿತು ಚಿಂತಿಸಲೇಕೆ ಕಾಳಗಕೆ ಎನ್ನ ಕಳುಹು” ಎಂದ.
Answerಹೊಸಗನ್ನಡಕ್ಕೆ ಪರಿವರ್ತನೆ: ಅಭಿಮನ್ಯು ರಾಜನ ಪಾದಗಳಿಗೆ ನಮಸ್ಕರಿಸಿ, ಕೈ ಮುಗಿದು, "ನನಗೆ ಅಪ್ಪಣೆ ಕೊಡಿ, ತಂದೆ, ಮಹಾಯುದ್ಧದಲ್ಲಿ ಪದ್ಮವ್ಯೂಹವನ್ನು ಭೇದಿಸುವುದನ್ನು ನಾನು ತಿಳಿದಿದ್ದೇನೆ. ಯುದ್ಧವನ್ನು ಗೆಲ್ಲುವೆನು, ಶತ್ರುಗಳನ್ನು ಯಮನ ಮನೆಗೆ ಕಳುಹಿಸುವೆನು, ನೀವು ಸ್ವಲ್ಪವೂ ಚಿಂತಿಸಬೇಕಿಲ್ಲ, ನನ್ನನ್ನು ಯುದ್ಧಕ್ಕೆ ಕಳುಹಿಸಿ" ಎಂದ. ಭಾಷೆಯಲ್ಲಾದ ಬದಲಾವಣೆಗಳು: • ಅಂಘ್ರಿ → ಪಾದ • ಮಣಿದು → ನಮಸ್ಕರಿಸಿ • ಬೆಸಸ್ಯೆ → ಅಪ್ಪಣೆ ಕೊಡಿ • ಬೊಪ್ಪ → ತಂದೆ • ಆಹವ → ಯುದ್ಧ • ಭೇದನವ → ಭೇದಿಸುವುದನ್ನು • ಬಲ್ಲೆನು → ತಿಳಿದಿದ್ದೇನೆ • ಅನುವರ → ಯುದ್ಧ • ಅಹಿತರು → ಶತ್ರುಗಳು • ಕೃತಾಂತ → ಯಮ • ಕಳುಹುವೆನು → ಕಳುಹಿಸುವೆನು • ನೀನ್ → ನೀವು • ಇನಿತು → ಸ್ವಲ್ಪ • ಚಿಂತಿಸಲೇಕೆ → ಚಿಂತಿಸಬೇಕಿಲ್ಲ • ಕಾಳಗ → ಯುದ್ಧ
ಚಟುವಟಿಕೆ
ಪಠ್ಯದಲ್ಲಿರುವ ಈ ಸಾಲುಗಳನ್ನು ಓದಿ-ಅರ್ಥಮಾಡಿಕೊಳ್ಳಿ.
೧. ವಿಷಯವನ್ನು ಮನಸ್ಸಿಗೆ ನಾಟುವಂತೆ ಮಾಡಲು ಅದೇ ರೀತಿಯ ಮತ್ತೊಂದು ವಿಷಯದ ಮೂಲಕ ಹೇಳುವುದನ್ನು ರೂಪಕ ಎನ್ನುತ್ತಾರೆ. ಅಭಿಮನ್ಯು ಧರ್ಮರಾಯನಿಗೆ ತನ್ನ ಧೈರ್ಯ ಪರಾಕ್ರಮ ಸಾಹಸಗಳನ್ನು ತಿಳಿಸಲು ಬಳಸುವ ರೂಪಕಗಳನ್ನು ಕೆಳಗೆ ನೀಡಲಾಗಿದೆ. ಇವುಗಳನ್ನು ಅರ್ಥಮಾಡಿಕೊಂಡು ವಿವರಿಸಿರಿ.
೧. ಮರೀಚಿಯ ತೊರೆಗೆ ಹರುಗೋಲಿಡುವರುಂಟೇ
೨. ಲೆಪ್ಪದುರುಗನ ಹಿಡಿಯಲೇತಕೆ ಗರುಡಮಂತ್ರವು
೩. ಗಾಳಿಬೆಮರುವುದುಂಟೆ
೪. ವಹ್ನಿಜ್ವಾಲೆ ಹಿಮಕಂಜುವುದೆ
೫. ಮಂಜಿನ ಮೇಲುಗಾಳಿಗವುಂಟೆ ಬಲುಬೇಸಗೆಯ ಬಿಸಿಲೊಳಗೆ
೨. ಕೆಳಗೆ ನೀಡಿರುವ ಪದಗಳು ಇಂದಿನ ಕನ್ನಡದಲ್ಲಿ ಬಳಕೆಯಲ್ಲಿಲ್ಲ. ೧೫-೧೬ನೆಯ ಶತಮಾನದಲ್ಲಿ ಬಳಕೆಯಲ್ಲಿದ್ದವು. ಇಂಥ ಕನ್ನಡವನ್ನು ಸೇರಿದಂತೆ ಇರುವ ಕನ್ನಡ ಭಾಷೆಯನ್ನು ನಡುಗನ್ನಡ ಭಾಷೆ ಎಂದು ಕರೆಯುತ್ತೇವೆ.
ಬೆಸಸ್ಯೆ-ಹೇಳಿ,ಅಪ್ಪಣೆಮಾಡಿ; ಅದಟು-ಪರಾಕ್ರಮ, ಶೌರ್ಯ; ಕೇಳಿದು-ಕೇಳಿ; ಸೈರಿಸಲಾಪೆ-ತಡೆದುಕೊಳ್ಳಲು ಸಾಧ್ಯ; ಅಮ್ಮೆನು-ಸಾಧ್ಯವಾಗುವುದಿಲ್ಲ; ಅಸದಳ-ಅಸಾಧ್ಯ; ಅಡಹಾಯ್ದು-ಮೇಲೆತ್ತಿ ಬಂದರೂ; ಹಿಂದುಮುಂದು-ತಬ್ಬಿಬ್ಬಾಗು; ಎಂತೈ-ಹೇಗೆ; ನಿಮ್ಮಡಿ-ನಿಮ್ಮಲ್ಲಿ; ಖಂಡಿಗೆಳೆ-ನಾಶಮಾಡು; ನೇಮವ-ಅಪ್ಪಣೆಯನ್ನು.
೩. ಮಹಾಭಾರತದಲ್ಲಿ ಬರುವ ವಿವಿಧ ಪುರಾಣ ಪಾತ್ರಗಳ ಹೆಸರುಗಳನ್ನು ಪಟ್ಟಿ ಮಾಡಿ ಸ್ನೇಹಿತರೊಂದಿಗೆ ಹಂಚಿಕೊಂಡು ಅಕಾರಾದಿಯಾಗಿ ಪಟ್ಟಿ ಮಾಡಿ.
Answerಪಠ್ಯದಲ್ಲಿ ಉಲ್ಲೇಖಿತವಾಗಿರುವ ಪಾತ್ರಗಳು: ಅಭಿಮನ್ಯು, ಧರ್ಮರಾಯ, ಕೊಡನ ಮಗ (ದ್ರೋಣನ ಮಗ).
ಛಂದಸ್ಸು
ಕಾವ್ಯ, ಕವನ, ಕವಿತೆ ಎಂದು ಓದುತ್ತೇವಲ್ಲ, ಇದು ತನ್ನ ಸ್ವರೂಪದಲ್ಲಿ ಹೇಗಿರುತ್ತದೆ ಎಂಬುದನ್ನು ತಿಳಿಸುವುದು ಛಂದಸ್ಸು. ಈ ಛಂದಸ್ಸಿನಲ್ಲಿ ಹಲವು ವಿಚಾರಗಳಿವೆ. ನಾವಿಲ್ಲಿ ಮಾತ್ರಾಛಂದಸ್ಸಿನ ಬಗ್ಗೆ ಮಾತ್ರ ತಿಳಿಯುತ್ತೇವೆ.
ಈ ಸಾಲುಗಳನ್ನು ಚಪ್ಪಾಳೆ ತಟ್ಟಿಕೊಂಡು ಗಟ್ಟಿಯಾಗಿ ಓದಿ:
ಅ. ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ
ಜಗ್ಗದೆಯೆ ಕುಗ್ಗದೆಯೆ ಹಿಗ್ಗಿ ನಡೆ ಮುಂದೆ
ಆ. ಕೋಟು ಗೀಟು ತೊಟ್ಟುಕೊಂಡು
ಹೇಟು ಬೂಟು ಹಾಕಿಕೊಂಡು
ಬೂಟಿನಿಂದ ಹೊರಟ ತಮ್ಮ
ಡಬ್ ಡಬ್ ಡಬ್
ಇದನ್ನು ಹೇಳುವಾಗ ಕಿವಿಗೆ ಒಂದು ಕುಣಿತದ ಸ್ಥಿತಿ ಸಿಗುತ್ತದೆ ಅಲ್ಲವೇ? ಇದೇ ಲಯ. ಇದು ಹೇಗೆ ಬಂತು? ಕೆಲವು ಅಕ್ಷರಗಳು ಚಿಕ್ಕವು, ಕೆಲವು ದೊಡ್ಡವು, ಕೆಲವಕ್ಕೆ ಒತ್ತಕ್ಷರವಿದೆ. ಈ ಅಕ್ಷರಗಳನ್ನು ಓದುವಾಗ ಅವು ತೆಗೆದುಕೊಳ್ಳುವ ಸಮಯದಲ್ಲಿ ವ್ಯತ್ಯಾಸವಿದೆ.
ನಡೆ ಎಂಬ ಪದ ತೆಗೆದುಕೊಳ್ಳುವ ಸಮಯಕ್ಕೂ ಮುಂದೆ ಎಂಬ ಪದ ತೆಗೆದುಕೊಳ್ಳುವ ಸಮಯಕ್ಕೂ ವ್ಯತ್ಯಾಸವಿದೆ, ನುಗ್ಗಿ, ಹಿಗ್ಗಿ ಎಂಬ ಪದ ತೆಗೆದುಕೊಳ್ಳುವ ಸಮಯಕ್ಕೂ ಕೋಟು, ಗೀಟು, ಬೂಟು ಎಂಬ ಪದ ತೆಗೆದುಕೊಳ್ಳುವ ಸಮಯಕ್ಕೂ ವ್ಯತ್ಯಾಸವಿದೆ. ಹೀಗೆ ನಿರ್ದಿಷ್ಟ ಸಮಯ ತೆಗೆದುಕೊಳ್ಳುವ ಪದಗಳನ್ನು ಒಂದು ಕ್ರಮದಲ್ಲಿ ಜೋಡಿಸಲಾಗಿದೆ. ಈ ಜೋಡಣೆ ನೀಡುವ ವ್ಯವಸ್ಥೆಯೇ ಲಯ.
ಈಗ ಕೆಳಗೆ ನೀಡಿರುವ ಅಕ್ಷರಗಳನ್ನು ನಿಲ್ಲಿಸದೇ ಜೋರಾಗಿ ಹೇಳಿ ನೋಡಿ :
ಅ ಇ ಉ ಋ ಎ ಒ
ಕ ಲಿ ಕು ರು ಗೆ ಮೊ
ಇವುಗಳನ್ನು ಹೇಳಲು ಒಂದು ಚಿಟಿಕೆಯಷ್ಟು ಕಾಲ ಸಾಕಾಗುತ್ತದೆ. ಛಂದಸ್ಸಿನ ಭಾಷೆಯಲ್ಲಿ ಇದನ್ನು “ಲಘು” ಎಂದು ಹೇಳಲಾಗುತ್ತಿದೆ. ಲಘುವನ್ನು ಗುರುತಿಸಲು ‘U’ ಎಂಬ ಚಿಹ್ನೆ ಬಳಸಲಾಗುತ್ತದೆ. ಈ ಚಿಹ್ನೆಯನ್ನು ಬಳಸಿ ಅಕ್ಷರಗಳನ್ನು ಬರೆಯುವ ರೀತಿಯನ್ನು ಗಮನಿಸಿ:
U U U U U U
ಅ ಇ ಉ ಋ ಎ ಒ
U U U U U U
ಕ ಲಿ ಕು ರು ಗೆ ಮೊ
ಈಗ ಕೆಳಗೆ ನೀಡಿರುವ ಅಕ್ಷರಗಳನ್ನು ನಿಲ್ಲಿಸದೇ ಜೋರಾಗಿ ಹೇಳಿ ನೋಡಿ :
ಆ ಈ ಊ ಏ ಓ ಐ ಔ
ನಾ ಯೀ ಗೂ ಗೇ ಲೋ ಸೈ ಕೌ
ಇವುಗಳನ್ನು ಹೇಳಲು ಹಿಂದಿನ ಎರಡರಷ್ಟು ಕಾಲ (ಎರಡು ಚಿಟಿಕೆಯಷ್ಟು ಕಾಲ) ಬೇಕಾಗುತ್ತದೆ. ಛಂದಸ್ಸಿನ ಭಾಷೆಯಲ್ಲಿ ಇದನ್ನು ‘ಗುರು’ ಎಂದು ಹೇಳಲಾಗುತ್ತದೆ. ಗುರುವನ್ನ ಗುರುತಿಸಲು ‘–’ ಎಂಬ ಚಿಹ್ನೆ ಬಳಸಲಾಗುತ್ತದೆ. ಈ ಚಿಹ್ನೆಯನ್ನು ಬಳಸಿ ಅಕ್ಷರಗಳನ್ನು ಬರೆಯುವ ರೀತಿಯನ್ನು ಗಮನಿಸಿ:
– – – – – – –
Answer– – – – – – –
ಆ ಈ ಊ ಏ ಓ ಐ ಔ
– – – – – – –
Answer– – – – – – –
ನಾ ಯೀ ಗೂ ಗೇ ಲೋ ಸೈ ಕೌ
ಮುಂದೆ ನೀಡಿರುವ ಅಕ್ಷರಗಳನ್ನು ಪ್ರತಿ ಪದಕ್ಕೂ ಒಂದು ಕ್ಷಣ ನಿಲುಗಡೆ ನೀಡಿ ಜೋರಾಗಿ ಹೇಳಿ ಓದಿ :
ಕಗ್ಗ, ಚಿಕ್ಕ, ಅಜ್ಜ, ಅಮ್ಮ, ಅಯ್ಯ, ಸಣ್ಣ, ದೊಡ್ಡ, ಬಚ್ಚಿ, ಬೆಟ್ಟ, ಕತ್ತೆ, ಬೊಪ್ಪ, ಮುದ್ದ, ಹಬ್ಬ.
ನೀವು ಓದುವಾಗ ಇದನ್ನು ಹೀಗೆಯೂ ಓದಿರಬಹುದೆಂಬುದನ್ನು ಗಮನಿಸಿ:
ಕಗ್‌ಗ, ಚಿಕ್ಕ, ಅಜ್ಜ, ಅಮ್ಮ, ಅಯ್ಯ, ಸಣ್ಣ, ದೊಡ್ಡ, ಬಚ್ಚಿ,ಬೆಟ್ಟ, ಕತ್ತೆ, ಬೊಪ್ಪ, ಮುದ್ದ, ಹಬ್‌ಬ.
ಮೇಲಿನ ಪದಗಳಲ್ಲಿ ಒತ್ತಕ್ಷರದ ಹಿಂದಿನ ಪದ ಎರಡು ಚಿಟಿಕೆಯಷ್ಟು ಕಾಲ ತೆಗೆದುಕೊಳ್ಳುವುದರಿಂದ ಒತ್ತಕ್ಷರದ ಹಿಂದಿನಕ್ಷರ ಗುರು ಒತ್ತಕ್ಷರ ಲಘು.
ಮೇಲಿನ ಪದಗಳಿಗೆ ಗುರು ಲಘು ಹಾಕೋಣ
– U | – U | – U | – U | – U | – U | – U | – U |
ಕಗ್ಗ | ಚಿಕ್ಕ | ಅಜ್ಜ | ಅಮ್ಮ | ಅಯ್ಯ | ಸಣ್ಣ | ದೊಡ್ಡ | ಬಚ್ಚಿ |
– U | – U | – U | – U | – U | – U | – U | – U | – U | – U | – U |
ಕ ಗ್ಗ | ಚಿ ಕ್ಕ | ಅಜ್ಜ | ಅಮ್ಮ | ಅಯ್ಯ | ಸಣ್ಣ | ದೊಡ್ಡ | ಬಚ್ಚಿ | ಬೆಟ್ಟ | ಕತ್ತೆ | ಬೊಪ್ಪ|
ಅನುಸ್ವಾರ(೦) ಬಂದರೆ ಅದರ ಹಿಂದಿನಕ್ಷರ ಗುರುವಾಗುತ್ತದೆ
– U | – U | – U | – U | – U | – U | – U | – U | – U | – U |
ಕಂದ | ಮಂಗ | ಚಂಪ | ಸಂತೆ | ಕುಂತಿ | ಗೋಂದು | ಗಿಂಡಿ | ಉಂಡೆ | ಅಂಚೆ |
ಗಮನಿಸಿ
ಗುರು ಎನಿಸುವ ಅಕ್ಷರಗಳು
* ದೀರ್ಘಾಕ್ಷರಗಳು = – U (ಕಾ ಲು) – U U (ಆ ಗ ಸ)
* ಸಂಯುಕ್ತಾಕ್ಷರದ ಹಿಂದಿನ ಅಕ್ಷರ = – U U (ಅ ಕ್ಷ ರ) – U U (ಭ ಕ್ಷ ಣೆ)
* ಅನುಸ್ವಾರ, ವಿಸರ್ಗಗಳಿಂದ ಕೂಡಿರುವ ಅಕ್ಷರ = – U U (ಬಂ ದ ನು) – U (ದುಃಖ)
* ವ್ಯಂಜನಾಕ್ಷರದ ಹಿಂದಿನ ಅಕ್ಷರ = U U – (ಬರುವಾಳ್) U U – (ಮರಗಳ್)
* ಐ, ಔ ಸಹಿತವಾದ ಅಕ್ಷರ = – U U (ಗೈ ಮೆ) – U U (ಔ ಷ ಧ)
* ಷಟ್ಪದಿಯ ಮೂರು ಮತ್ತು ಆರನೆಯ ಪಾದಗಳ ಕೊನೆಯ ಅಕ್ಷರ : ಈ ಅಕ್ಷರಗಳು ಒಂದು ಮಾತ್ರಾ ಲಕ್ಷಣ ಕೂಡಿದ್ದರೂ ಹಾಡುವಾಗ ಎರಡು ಮಾತ್ರಾಕಾಲಗಳಲ್ಲಿ ಉಚ್ಚರಿಸಲ್ಪಡುತ್ತವೆ. ಹಾಗಾಗಿ ಈ ಅಕ್ಷರಗಳು ಗುರು ಎನಿಸಿಕೊಳ್ಳುವ ಯಾವುದೇ ಲಕ್ಷಣಗಳನ್ನು ಪಡೆಯದಿದ್ದರೂ ಗುರುವಾಗಿಯೇ ಪರಿಗಣಿಸಲ್ಪಡುತ್ತವೆ.
ಅಭ್ಯಾಸ
ಅ) ಕೆಳಗಿನ ಅಕ್ಷರಗಳಿಗೆ ಗುರು ಲಘು ಹಾಕಿ :
ಕೋಳಿಕೂಗಿತು ಬೆಳಕುಹರಿಯಿತು
ಕಾಗೆಕೋತಿಮೋಲ
ಆ) ಕೆಳಗಿನ ಪದಗಳಿಗೆ ಗುರು ಲಘು ಹಾಕಿ : ಜನಪ।ಮಣಿ। ಬೊಪ್ಪ।ಆಹವ।ಯುದ್ಧ । ಭೇದನ।ಅನುವರ।ಕೃತಾಂತ। ಅಹಿತರು। ಕಾಳಗ
Answerಜನಪ: U U U ಮಣಿ: U U ಬೊಪ್ಪ: – U ಆಹವ: – U U ಯುದ್ಧ: – U ಭೇದನ: – U U ಅನುವರ: U U U ಕೃತಾಂತ: – – ಅಹಿತರು: U U U ಕಾಳಗ: – U
ಇ) ಕೆಳಗಿನ ಪದಗಳಿಗೆ ಗುರು ಲಘು ಹಾಕಿ :
ಸಂಜೆ।ಬಂಟ।ಸಂಘ।ಪಂಪ।ಸಂಪುಟ।ಹುಂಡಿ।ಗಂಗೆ।ಅಂಬಾ।ಇಂಗು
Answerಸಂಜೆ: – – ಬಂಟ: – U ಸಂಘ: – U ಪಂಪ: – U ಸಂಪುಟ: – U ಹುಂಡಿ: – U ಗಂಗೆ: – U ಅಂಬಾ: – – ಇಂಗು: – U
ಮಾತ್ರಾಗಣ
ಲಘು ಮತ್ತು ಗುರು ಇವುಗಳನ್ನು ಮಾತ್ರೆ ಎಂದೂ ಕರೆಯಲಾಗುತ್ತದೆ. ಲಘು(U)ವಿಗೆ ಒಂದು ಮಾತ್ರೆಯ ಬೆಲೆಯಾದರೆ ಗುರುವಿಗೆ (–) ಎರಡು ಮಾತ್ರೆಯಷ್ಟು ಬೆಲೆ.
ಒಂದು ಮಾತ್ರೆ = U
ಎರಡು ಮಾತ್ರೆ = – ಅಥವಾ UU
ಮೂರು ಮಾತ್ರೆ = U – ಅಥವಾ UUU
ನಾಲ್ಕು ಮಾತ್ರೆ = – – ಅಥವಾ UUUU
ಐದು ಮಾತ್ರೆ = – – U ಅಥವಾ UUUUU
ಗಣ ಎಂದರೆ ಗುಂಪು. ಒಂದು, ಎರಡು, ಮೂರು, ನಾಲ್ಕು, ಐದು ಮಾತ್ರೆಗಳ ಗುಂಪಿಗೆ ಮಾತ್ರಾಗಣ ಎಂದು ಕರೆಯಲಾಗುತ್ತದೆ. ಅಕ್ಷರಗಳನ್ನು ಮತ್ತು ಪದಗಳನ್ನು ಮಾತ್ರೆಯಲ್ಲಿ ಬೆಲೆಕಟ್ಟಿ ಅದನ್ನು ಗುಂಪು ಗುಂಪಾಗಿ ಮಾಡಿ ಮಾತ್ರಾಗಣದ ಗುಂಪು ಎಂದು ಕರೆಯಲಾಗುತ್ತದೆ.
ಉದಾಹರಣೆ
U U U U U
ತ ಕ ತ ಕಿ ಟ = ಒಂದು ಮಾತ್ರೆಯ ಗುಂಪು
UU UU UU
ತಕ ತಕ ತಕ = ಎರಡು ಮಾತ್ರೆಯ ಗುಂಪು
UUU UUU UUU
ತಕಿಟ ತಕಿಟ ತಕಿಟ = ಮೂರು ಮಾತ್ರೆಯ ಗುಂಪು
UU UUU UU UUU UU UUU
ತಕ ತಕಿಟ ತಕ ತಕಿಟ ತಕ ತಕಿಟ = ಎರಡು ಮತ್ತು ಮೂರು ಮಾತ್ರೆಯ ಗುಂಪು
UUU UUUU UUU UUUU UUU UUUU
ತಕಿಟ ತಕತಕ ತಕಿಟ ತಕತಕ ತಕಿಟ ತಕತಕ = ಮೂರು ಮತ್ತು ನಾಲ್ಕು ಮಾತ್ರೆಯ ಗುಂಪು
ಮೂರು ಮಾತ್ರೆಯ ನಾಲ್ಕು ಗುಂಪು ಇರುವ ಪದ್ಯವನ್ನು ನೋಡಿ
UUU | – U | UUU | – U
ರಜೆಯ | ಗೊಜಿ | ಮುಗಿಯಿ | ತಲ್ಲ
– U | – U | UUU | – U
ಗುಲ್ಲು | ಸೊಲ್ಲು | ನಿಲಿಸಿ | ಮೆಲ್ಲ
– U | – U | – U | – U | – U | – U | –
ಮಕ್ಕ | ಳೆಲ್ಲ | ಸಿದ್ಧ | ರಾಗಿ | ಮತ್ತೆ | ಓದಿ | ಗೆ
ನಾಲ್ಕು ಮಾತ್ರೆಯ ಎರಡು ಗುಂಪು ಇರುವ ಪದ್ಯವನ್ನು ನೋಡಿ :
– U U | U U U U
ಬೇಸಿಗೆ | ರಜೆಯಲಿ
– U U | – U U
ಅಜ್ಜಿಯ | ಊರಿಗೆ
– U U | – U U | –
ಹೋಗುವು | ದೆಂಥಮ | ಜಾ
ಷಟ್ಪದಿ
‘ಷಟ್’ ಎಂದರೆ ಆರು ‘ಪದಿ’ ಎಂದರೆ ಪಾದದಿಂದ ಕೂಡಿದ್ದು. ಆರು ಪಾದ ಅಥವಾ ಸಾಲುಗಳಿಂದ ಕೂಡಿದ ಪದ್ಯರೂಪ ಷಟ್ಪದಿ. ಆರು ರೀತಿಯ ಷಟ್ಪದಿಗಳಿವೆ. ಅವುಗಳನ್ನು ಶರ,ಕುಸುಮ,ಭೋಗ, ಭಾಮಿನಿ, ಪರಿವರ್ಧಿನಿ ವಾರ್ಧಕ ಎಂದು ಕರೆಯಲಾಗುತ್ತದೆ. ಮಾತ್ರಾಗಣಗಳ ಆಧಾರದ ಮೇಲೆ ಷಟ್ಪದಿಗಳನ್ನು ಬೇರೆ ಬೇರೆ ಹೆಸರಿನಿಂದ ಕರೆಯಲಾಗಿದೆ.
– U U | – U U
೧. ಬಾಳೆಯ | ತೋಟದ
– U U | – U U
೨. ಪಕ್ಕದ | ಕಾಡೊಳು
– U U | – U U | – U U | –
೩. ವಾಸಿಸು | ತಿದ್ದವು | ಮಂಗಗ | ಳು
– U U | – U U
೪. ಮಂಗಗ | ಳೆಲ್ಲವು
– U U | – U U
೫. ಒಟ್ಟಿಗೆ | ಸೇರುತ
– U U | – U U | – U U | –
೬. ಒಂದುಪ | ವಾಸವ | ಮಾಡಿದ | ವು
ಮೇಲಿನ ಪದ್ಯದಲ್ಲಿ ನಾಲ್ಕು ಮಾತ್ರೆಯ ಎರಡು ಗುಂಪು ೧,೨,೪ ಮತ್ತು ೫ನೆಯ ಸಾಲಿನಲ್ಲೂ ನಾಲ್ಕು ಮಾತ್ರೆಯ ಮೂರು ಗುಂಪು ೩ ಮತ್ತು ೬ನೆಯ ಸಾಲಿನಲ್ಲೂ ಇವೆ. ೩ ಮತ್ತು ೬ನೆಯ ಸಾಲಿನ ಕೊನೆಯಲ್ಲಿ ಒಂದು ಅಕ್ಷರ ಮಾತ್ರ ಇದೆ, ಒಂದೇ ಅಕ್ಷರವಾದರೂ ಅದಕ್ಕೆ ಎರಡು ಮಾತ್ರೆಯ ಕಾಲದ ಉಚ್ಚಾರಣೆಯಿದೆ. ಹಾಗೆ ಅದು ಗುರು, ಪದ್ಯ ಹೀಗಿದ್ದರೆ ಅದು ಶರಷಟ್ಪದಿ. ಇರುವ ಪದ್ಯವನ್ನು ಮುಂದೆ ನೋಡಿ....
ಈ ಪದ್ಯಕ್ಕೆ ಮಾತ್ರೆಗಳನ್ನು (ಪ್ರಸ್ತಾರ) ಹಾಕಿ:
೧. ಹೂವನು/ಮಾರುತ ಘಮಘಮ/ಹೊಗಳು
೨. ಹೂವಾಡಗಿತ್ತಿ ಬೇಕೇ/ಎನ್ನುತ/
೩. ಹಾಡುತ।ಬರುತಿಹಳು; ಹಾಡುತ/ಬರುತಿಹ/ಳು
ಕುಮಾರವ್ಯಾಸ ಬಳಸಿರುವ ಛಂದಸ್ಸು ಭಾಮಿನೀ ಷಟ್ಪದಿ ಇದರ ಸ್ವರೂಪ ನೋಡಿ :
U U U | U U U U | U U U | – U U ೩|೪|೩|೪|
ಹಸುಳೆಯ।ದಟಿನ ನು।ಡಿಯ ಕೇ।ಳಿದು
U U U | U U – | U U U | U U – ೩|೪|೩|೪|
ನಸುನ | ಗುತ ಧ | ರ್ಮಜನು | ಘನ ಪೌ
U U U | U U – | – U | – U U | U U U | U U – | – ೩|೪|೩|೪|೩|೪|೨|
ರುಷವು | ನಿನಗುಂ| ಟೆಂದು | ಕಂದನ | ತೆಗೆದು | ಬಿಗಿಯ | ಪ್ಪಿ
U U U | – U U | U U U | – U U ೩|೪|೩|೪|
ಶಿಶುವು | ನೀನೆಲೆ | ಮಗನೆ | ಕಾದುವ
U U U | U U U U | – U | – U U ೩|೪|೩|೪|
ರಸಮ | ಬಲರು ಕ | ಣಾ ಮ | ಹಾರಥ
U U U | U U – | – U | – U U | – U | – – | – ೩|೪|೩|೪|೩|೪|೨|
ರೆಸುಗೆ | ಯನು ನೀ | ನೆಂತು | ಸೈರಿಸ | ಲಾಪೆ | ಹೇಳೆಂ | ದ
ಮೇಲಿನ ಪದ್ಯದಲ್ಲಿ ಮೂರು।ನಾಲ್ಕು।ಮೂರು।ನಾಲ್ಕು।ಮಾತ್ರೆಯ ಗುಂಪು ೧,೨,೪ ಮತ್ತು ೫ನೆಯ ಸಾಲಿನಲ್ಲೂ ಮೂರು।ನಾಲ್ಕು।ಮೂರು।ನಾಲ್ಕು।ಮೂರು।ನಾಲ್ಕು।ಮಾತ್ರೆಯ ಮೂರು ಗುಂಪು ೩ ಮತ್ತು ೬ನೆಯ ಸಾಲಿನಲ್ಲೂ ಇವೆ. ೩ ಮತ್ತು ೬ನೆಯ ಸಾಲಿನ ಕೊನೆಯಲ್ಲಿ ಒಂದು ಅಕ್ಷರ ಮಾತ್ರ ಇದೆ, ಒಂದೇ ಅಕ್ಷರವಾದರೂ ಅದಕ್ಕೆ ಎರಡು ಮಾತ್ರೆಯ ಕಾಲದ ಉಚ್ಚಾರಣೆಯಿದೆ. ಹಾಗೆ ಅದು ಗುರು. ಪದ್ಯ ಹೀಗಿದ್ದರೆ ಅದು ಭಾಮಿನೀ ಷಟ್ಪದಿ. ಇರುವ ಪದ್ಯವನ್ನು ನೋಡಿ ಮತ್ತು ಈ ಪದ್ಯಕ್ಕೆ ಮಾತ್ರೆಗಳನ್ನು (ಪ್ರಸ್ತಾರ) ಹಾಕಿ.
ಬಾಲನಿವನೆನ್ನದಿರು ದುಗುಡವ
ತಾಳಲಾಗದು ಬೊಪ್ಪ ನಿಮ್ಮಡಿ
ಯಾಲಿಗಳಿಗೌತಣವನಿಕ್ಕುವೆನೊರಸಿ ರಿಪುಬಲವ
ಬೆನ್ನುಡಿ
“ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ-ಈ ಪಂಚಮಂತ್ರಗಳು ಇನ್ನು ಮುಂದಿನ ದೃಷ್ಟಿಯಾಗಬೇಕಾಗಿದೆ. ಅಂದರೆ, ನಮಗೆ ಇನ್ನು ಬೇಕಾದುದು ಆ ಮತ ಈ ಮತ ಅಲ್ಲ; ಮನುಜಮತ. ಆ ಪಥ ಈ ಪಥ ಅಲ್ಲ; ವಿಶ್ವಪಥ. ಆ ಒಬ್ಬರ ಈ ಒಬ್ಬರ ಉದಯ ಮಾತ್ರವಲ್ಲ; ಸರ್ವರ ಸರ್ವಸ್ತರದ ಉದಯ. ಪರಸ್ಪರ ವಿಮುಖವಾಗಿ ಸಿಡಿದು ಹೋಗುವುದಲ್ಲ; ಸಮನ್ವಯಗೊಳ್ಳುವುದು. ಮಿತಮತದ ಆಂಶಿಕ ದೃಷ್ಟಿಯಲ್ಲ; ಭೌತಿಕ, ಪಾರಮಾರ್ಥಿಕ ಎಂಬ ಭಿನ್ನ ದೃಷ್ಟಿಯಲ್ಲ; ಎಲ್ಲವನ್ನೂ ಭಗವದ್ ದೃಷ್ಟಿಯಿಂದ ಕಾಣುವ ಪೂರ್ಣದೃಷ್ಟಿ”.
—ಕುವೆಂಪು (ಜ್ಞಾನಪೀಠ, ಕರ್ನಾಟಕ ರತ್ನ ಮುಂತಾದ ಪ್ರಶಸ್ತಿಗಳಿಂದ ಪುರಸ್ಕೃತರಾದ ರಾಷ್ಟ್ರಕವಿ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ)