CRECT Education

Class 7 Kannada Lesson 17: The Dream of a Beggar | KTBS Savi Kannada

Description

Learn Class 7 Kannada First Language poem 'ತಿರುಕನ ಕನಸು' (The Dream of a Beggar) by Muppina Shadakshari from the KTBS textbook, with stanza-by-stanza explanation, vocabulary, and questions.

ಪದ್ಯ (poem) · ಮುಪ್ಪಿನ ಷಡಕ್ಷರಿ

ಪಠ್ಯFull text

ತಿರುಕನೋರ್ವನೂರ ಮುಂದೆ ಮುರುಕುಧರ್ಮ ಶಾಲೆಯಲ್ಲಿ ಒರಗಿರುತ್ತಲೊಂದು ಕನಸ ಕಂಡನೆಂತೆನೆ ಪುರದ ರಾಜ ಸತ್ತನವಗೆ ವರಕುಮಾರರಿಲ್ಲದಿರಲು ಕರಿಯ ಕೈಗೆ ಕುಸುಮಮಾಲೆಯಿತ್ತು ಪುರದೊಳು || ೧ || ನಡೆದು ಯಾರ ಕೊರಳಿನಲ್ಲಿ ತೊಡರಿಸುವುದೊ ಅವರ ಪಟ್ಟ ಕೊಡೆಯರನ್ನು ಮಾಳ್ಪೆವೆಂದು ಬಿಟ್ಟರಲ್ಲಿಯೆ ಒಡನೆ ತನ್ನ ಕೊರಳಿನಲ್ಲಿ ತೊಡರಿಸಲ್ಕೆ ಕಂಡು ತಿರುಕ ಪೊಡವಿಯಾಣ್ಮನಾದೆನೆಂದು ಹಿಗ್ಗುತಿರ್ದನು || ೨ ||

**ಚಿನ್ನುಡಿ** ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು ಹೊಸಯುಕ್ತಿ ಹಳೆತತ್ತ್ವದೊಡಗೂಡೆ ಧರ್ಮ ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ ಜಸವು ಜನಜೀವನಕೆ - ಮಂಕುತಿಮ್ಮ - ಡಿ.ವಿ.ಜಿ (New shoots and old roots together make a tree beautiful; new skills and old principles together make righteousness. When sage words blend with art and science, it brings joy to human life.)

ಪದಗಳ ಅರ್ಥword meanings

KannadaPronunciationMeaning
ತಿರುಕಭಿಕ್ಷುಕ; ಮುರುಕು - ಪಾಳುಬಿದ್ದ, ಮುರಿದು ಬಿದ್ದ; ಪುರ - ಪಟ್ಟಣ, ನಗರ; ಕರಿ - ಆನೆ; ಕುಸುಮಮಾಲೆ - ಹೂವಿನಮಾಲೆ
ಧರ್ಮಶಾಲೆಅನ್ನಛತ್ರ
ತೊಡರಿಸುಧರಿಸು, ಹಾಕು; ಪಟ್ಟ - ಸಿಂಹಾಸನ; ಒಡೆಯ - ರಾಜ, ದೊರೆ; ಮಾಳ್ಪೆವು - ಮಾಡುವೆವು; ಒಡನೆ - ತಕ್ಷಣ; ಪೊಡವಿ - ರಾಜ್ಯ; ಆಣ್ಮ - ಒಡೆಯ, ರಾಜ
ಹಿಗ್ಗುಸಂತೋಷಪಡು, ಹರ್ಷಿಸು; ೩
ನೃಪರಾಜ, ದೊರೆ ; ಭಟ್ಟಿನಿಗಳು - ಹೆಂಡತಿಯರು
; ನಲ್ಲಪ್ರಿಯತಮ ; ೪
ಓಲಗರಾಜಸಭೆ ; ಲೀಲೆ - ವಿನೋದ, ವಿಲಾಸ ; ಚಾತುರಂಗ - ಸೈನ್ಯದ ನಾಲ್ಕು ಅಂಗಗಳು (ಆನೆ, ಕುದುರೆ, ರಥ, ಕಾಲಾಳಿನ ಬಲ) ಲೋಲ - ಉತ್ಸುಕ, ಸಂತೋಷ; ಸುತ - ಮಗ ; ೫
ಜೀಯಸ್ವಾಮಿ, ಒಡೆಯ ; ಸಕಲ - ಎಲ್ಲಾ ; ಸಂಭ್ರಮ - ಹರ್ಷ, ಉಲ್ಲಾಸ ; ಅಖಿಲ - ಸಕಲ, ಎಲ್ಲಾ ; ರಾಯ - ರಾಜ, ಅರಸ ; ಮೆಚ್ಚು - ಒಪ್ಪು, ಮೆಚ್ಚಿಕೊಳ್ಳು ; ಅಂದದಿ - ರೀತಿಯಲ್ಲಿ ; ೬
ಧನಹಣ, ಸಂಪತ್ತು ; ಮದ - ಗರ್ವ, ಅಹಂಕಾರ ; ತನುಜ - ಮಗ ; ಜನಿತ - ಹುಟ್ಟು, ಜನ್ಮತಾಳು ; ಅನಿತರೊಳಗೆ - ಅಷ್ಟರಲ್ಲಿ ; ದಂಡು -ಸೈನ್ಯ ; ಮುತ್ತು - ಆವರಿಸು, ಸುತ್ತುವರಿ;

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

  1. ೧. ತಿರುಕನು ಎಲ್ಲಿ ಕನಸನ್ನು ಕಂಡನು ?

    Answer

    ತಿರುಕನು ಊರ ಮುಂದಿನ ಮುರುಕು ಧರ್ಮಶಾಲೆಯಲ್ಲಿ ಕನಸನ್ನು ಕಂಡನು.

  2. ೨. ಆನೆಯು ಯಾರ ಕೊರಳಿಗೆ ಮಾಲೆಯನ್ನು ಹಾಕಿತು ?

    Answer

    ಆನೆಯು ತಿರುಕನ ಕೊರಳಿಗೆ ಮಾಲೆಯನ್ನು ಹಾಕಿತು.

  3. ೩. ತಿರುಕನಿಗೆ ಪಟ್ಟವನ್ನು ಕಟ್ಟಿದವರು ಯಾರು ?

    Answer

    ಪುರದ ಜನರು ತಿರುಕನಿಗೆ ಪಟ್ಟವನ್ನು ಕಟ್ಟಿದರು.

  4. ೪. ರಾಜ ಲೋಲನಾಗಿ ಮಂತ್ರಿಗೆ ಏನೆಂದು ನುಡಿದನು ?

  5. ೫. ‘ತಿರುಕನ ಕನಸು’ ಈ ಪದ್ಯವನ್ನು ಬರೆದ ಕವಿ ಯಾರು?

ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.

  1. ೧. ಕರಿಯ ಕೈಗೆ ಕುಸುಮ ಮಾಲೆಯನ್ನು ಕೊಡಲು ಕಾರಣವೇನು?

    Answer

    ಪುರದ ರಾಜನು ಮರಣಹೊಂದಿದನು. ಅವನಿಗೆ ಯೋಗ್ಯರಾದ ಕುಮಾರರು ಇರಲಿಲ್ಲ. ಆದ್ದರಿಂದ ಮುಂದಿನ ರಾಜನನ್ನು ಆಯ್ಕೆ ಮಾಡಲು ಆನೆಯ ಕೈಗೆ ಹೂವಿನ ಮಾಲೆಯನ್ನು ಕೊಡಲಾಯಿತು.

  2. ೨. ತಿರುಕ ಪೊಡವಿಯಾಣ್ಮನದುದು ಹೇಗೆ?

    Answer

    ಆನೆಯು ಬಿಡಲ್ಪಟ್ಟು ತಿರುಕನ ಕೊರಳಿಗೆ ಮಾಲೆಯನ್ನು ಹಾಕಿತು. ಆಗ ಪುರದ ಜನರು ಅವನನ್ನು ರಾಜನನ್ನಾಗಿ ಮಾಡಿದರು. ಹೀಗೆ ತಿರುಕನು ಪೊಡವಿಯಾಣ್ಮನಾದನು.

  3. ೩. ಕನಸು ಕಾಣುತ್ತಿದ್ದ ತಿರುಕನು ಹೆದರಿ ಏಕೆ ಕಣ್ಣು ತೆರೆದನು?

ಇ. ಐದಾರು ವಾಕ್ಯಗಳಲ್ಲಿ ಉತ್ತರಿಸಿ.

  1. ೧. ತಿರುಕನು ರಾಜನಾದದ್ದು ಹೇಗೆ ?

    Answer

    ತಿರುಕನು ಊರ ಮುಂದಿನ ಮುರುಕು ಧರ್ಮಶಾಲೆಯಲ್ಲಿ ಮಲಗಿ ಕನಸು ಕಂಡನು. ಕನಸಿನಲ್ಲಿ ಪುರದ ರಾಜ ಸತ್ತಿದ್ದನು. ಅವನಿಗೆ ವರಕುಮಾರರಿಲ್ಲದ ಕಾರಣ, ಜನರು ಆನೆಯ ಕೈಗೆ ಹೂಮಾಲೆ ಕೊಟ್ಟು ಬಿಟ್ಟರು. ಆನೆಯು ನಡೆದು ತಿರುಕನ ಕೊರಳಿಗೆ ಮಾಲೆ ಹಾಕಿತು. ಆಗ ಜನರು ತಿರುಕನಿಗೆ ಪಟ್ಟ ಕಟ್ಟಿದರು. ಹೀಗೆ ತಿರುಕನು ರಾಜನಾದನು.

  2. ೨. ತಿರುಕನು ಕನಸಿನಲ್ಲಿ ರಾಜ್ಯವನ್ನು ಆಳಿದ ರೀತಿಯನ್ನು ವಿವರಿಸಿ.

ಈ. ಈ ಪದ್ಯಭಾಗವನ್ನು ಪೂರ್ಣಗೊಳಿಸಿ.

  1. ಧನದ ಮದವು--------------------

  2. ------------------------------

  3. ------------------------------

  4. ------------------------------

  5. ------------------------------

  6. ------------------ ಕಣ್ಣ ತೆರೆದನು.

ಉ. ಮಾದರಿಯಂತೆ ಕೊಟ್ಟಿರುವ ಪದಗಳನ್ನು ಬಿಡಿಸಿ ಬರೆಯಿರಿ.

ಮಾದರಿ : ತಿರುಕನೋರ್ವನೂರಮುಂದೆ = ತಿರುಕನು + ಒರ್ವನು + ಊರ + ಮುಂದೆ

  1. ೧. ಒರಗಿರುತ್ತಲೊಂದು

    Answer

    ಒರಗಿರುತ್ತ + ಒಂದು

  2. ೨. ವರಕುಮಾರರಿಲ್ಲದಿರಲು

    Answer

    ವರ + ಕುಮಾರರು + ಇಲ್ಲದಿರಲು

  3. ೩. ಪೊಡವಿಯಾಣ್ಮನಾದನೆಂದು.

    Answer

    ಪೊಡವಿ + ಆಣ್ಮ + ಆದನು + ಎಂದು

  4. ೪. ನಿಷ್ಟಸುಖದೊಳಿರಲವಂಗೆ

Interactive Lab

ತಿರುಕಭಿಕ್ಷುಕ; ಮುರುಕು - ಪಾಳುಬಿದ್ದ, ಮುರಿದು ಬಿದ್ದ; ಪುರ - ಪಟ್ಟಣ, ನಗರ; ಕರಿ - ಆನೆ; ಕುಸುಮಮಾಲೆ - ಹೂವಿನಮಾಲೆ
ಧರ್ಮಶಾಲೆಅನ್ನಛತ್ರ
ತೊಡರಿಸುಧರಿಸು, ಹಾಕು; ಪಟ್ಟ - ಸಿಂಹಾಸನ; ಒಡೆಯ - ರಾಜ, ದೊರೆ; ಮಾಳ್ಪೆವು - ಮಾಡುವೆವು; ಒಡನೆ - ತಕ್ಷಣ; ಪೊಡವಿ - ರಾಜ್ಯ; ಆಣ್ಮ - ಒಡೆಯ, ರಾಜ
ಹಿಗ್ಗುಸಂತೋಷಪಡು, ಹರ್ಷಿಸು; ೩
ನೃಪರಾಜ, ದೊರೆ ; ಭಟ್ಟಿನಿಗಳು - ಹೆಂಡತಿಯರು
; ನಲ್ಲಪ್ರಿಯತಮ ; ೪
ಓಲಗರಾಜಸಭೆ ; ಲೀಲೆ - ವಿನೋದ, ವಿಲಾಸ ; ಚಾತುರಂಗ - ಸೈನ್ಯದ ನಾಲ್ಕು ಅಂಗಗಳು (ಆನೆ, ಕುದುರೆ, ರಥ, ಕಾಲಾಳಿನ ಬಲ) ಲೋಲ - ಉತ್ಸುಕ, ಸಂತೋಷ; ಸುತ - ಮಗ ; ೫
ಜೀಯಸ್ವಾಮಿ, ಒಡೆಯ ; ಸಕಲ - ಎಲ್ಲಾ ; ಸಂಭ್ರಮ - ಹರ್ಷ, ಉಲ್ಲಾಸ ; ಅಖಿಲ - ಸಕಲ, ಎಲ್ಲಾ ; ರಾಯ - ರಾಜ, ಅರಸ ; ಮೆಚ್ಚು - ಒಪ್ಪು, ಮೆಚ್ಚಿಕೊಳ್ಳು ; ಅಂದದಿ - ರೀತಿಯಲ್ಲಿ ; ೬
ಧನಹಣ, ಸಂಪತ್ತು ; ಮದ - ಗರ್ವ, ಅಹಂಕಾರ ; ತನುಜ - ಮಗ ; ಜನಿತ - ಹುಟ್ಟು, ಜನ್ಮತಾಳು ; ಅನಿತರೊಳಗೆ - ಅಷ್ಟರಲ್ಲಿ ; ದಂಡು -ಸೈನ್ಯ ; ಮುತ್ತು - ಆವರಿಸು, ಸುತ್ತುವರಿ;