CRECT Education

Class 7 Kannada Lesson 5: The Huttari Song | KTBS Kannada

Description

Learn the poem 'ಹುತ್ತರಿ ಹಾಡು' by Panje Mangesharao, from the Class 7 First Language Kannada textbook, line by line.

ಪದ್ಯ (poem) · ಪಂಜೆ ಮಂಗೇಶರಾವ್ (Panje Mangesharao)

ಪಠ್ಯFull text

ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳೋ? ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲಿ ನಿಂದಳೋ? ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ಹೊಳೆ ಹೊಳೆವಳೋ? ಎಲ್ಲಿ ನೆಲವನು ತಣಿಸಿ ಜನಮನ ಹೊಲದ ಕಳೆಕಳೆ ಕಳೆವಳೋ? ಅಲ್ಲೆ ಆ ಕಡೆ ನೋಡಲಾ! ಅಲ್ಲೆ ಕೊಡಗರ ನಾಡಲಾ ಅಲ್ಲೆ ಕೊಡವರ ಬೀಡಲಾ! ಸವಿದು ಮೆದ್ದರೊ ಯಾರು ಪೂರ್ವದಿ ಹುಲಿಯ ಹಾಲಿನ ಮೇವನು? ಕವಣೆ ತಿರಿಕಲ್ಲಾಟ ಹಗ್ಗಕೆ ಸೆಳೆದರೋ ಹೆಬ್ಬಾವನು? ಸವರಿ ಆನೆಯ ಸೊಂಡಲಿನ ರಣಕೊಂಬನಾರ್ ಭೋರ್ಗರೆದರೋ? ಸವೆದು ಸವೆಯದ ಸಾಹಸತ್ವದ ಕ್ಷಾತ್ರ ಬೇಟೆಯ ಮೆರೆದರೋ? ಅವರು ಸೋಲ್ ಸಾವರಿಯರು! ಅವರು ಕಡುಗಲಿ ಗರಿಯರು! ಅವರೆ ಕೊಡಗಿನ ಹಿರಿಯರು! ತಮ್ಮ ನಾಡಿನ ಕೊರಳು ದಾಸ್ಯದ ನೊಗದ ಭಾರಕೆ ಬಗ್ಗದೋಲ್ ಹೆಮ್ಮೆಹಗೆಗಳ ಹೊಡೆದು ಹಿರಿಯರು ಹಸಿದು ಹಾರುವ ಬಗ್ಗದೋಲ್ ಬೊಮ್ಮಗಿರಿಯಿಂ ಪುಷ್ಪಗಿರಿ ಪರ್ಯಂತ ಬೆಳೆದೀ ದೇಶವು ಧರ್ಮದಾನವ ಕಟ್ಟು ಕಟ್ಟಳೆ ರೀತಿ ನೀತಿಯ ಕೋಶವು ನಮ್ಮ ಕೊಡಗಿದು ಜಮ್ಮದು; ಜಮ್ಮ ಕೊಡಗಿದು ನಮ್ಮದು; ನಮ್ಮೊಡಲ್ ಬಿಡಲಮ್ಮದು ! ಇದು ಅಗಸ್ತ್ಯನ ತಪದ ಮನೆ, ಕಾವೇರಿ ತಾಯ ತವಮರ್ನೆ, ಕದನ ಸಿರಿಗುಯ್ಯಾಲೆ ತೂಗಿದನಿಲ್ಲಿ ಚಂದರವರ್ಮನೆ! ಇದಕೊ! ಚೆಂಗಾಳ್ವರಸರಾಡಂಬರವು ಕುಣಿದ ಶ್ರೀರಂಗವು ಇದೊ! ಇದೊ! ಇಲ್ಲರುಳ್ಳ ಹಾಲೇರಿಯರ ಬಲಗಿರಿಶೃಂಗವು ವಿಧಿಯ ಮಾಟದ ಕೊಡಗಿದು ಮೊದಲೆ ನಮ್ಮದು, ಕಡೆಗಿದು ಕದಲದೆಮ್ಮನು; ಬೆಡಗಿದು. ಒಮ್ಮತವು ಒಗ್ಗಟ್ಟು ಒಂದೇ ಮನವು ಎಲ್ಲಿದೆ ಹೇಳಿರಿ? ಸುಮ್ಮನಿತ್ತರೊ ದಟ್ಟಿಕುಪ್ಪಸ? ಹಾಡುಹುತ್ತರಿಗೇಳಿರಿ! ಚಿಮ್ಮಿ ಪಾತುರೆಕೋಲ ಹೊಯ್ಲಿಗೆ ಕುಣಿವ ಪದ ಹೊರ ಹೊಮ್ಮಲಿ! ಅಮ್ಮೆ ಹರಸಿದ ಸೀಮೆ ನಮಗಿದು ಇರಲಿ ನಮ್ಮದೆ ನಮ್ಮಲಿ! ನೆಮ್ಮದಿಯನಿದು ತಾಳಲಿ ಅಮ್ಮೆಯಾ ಬಲತೋಳಲಿ ನಮ್ಮ ಕೊಡಗಿದು ಬಾಳಲಿ

ಪದಗಳ ಅರ್ಥword meanings

KannadaPronunciationMeaning
ಒಡಲ್ಶರೀರ, ದೇಹ ಕಡುಗಲಿ - ಮಹಾಶೂರ ಕ್ಷಾತ್ರ - ಕ್ಷತ್ರಿಯ ಕುಲ, ಕ್ಷತ್ರಿಯನ ತೇಜಸ್ಸು ಗರಿಯರು - ಹಿರಿಮೆಯುಳ್ಳವರು ಜಮ್ಮದು - ಅರಸನು ಇನಾಮಾಗಿ ಕೊಟ್ಟ ಭೂಮಿ ದಟ್ಟಿಕುಪ್ಪಸ - ಸೊಂಟಕ್ಕೆ ಕಟ್ಟುವ ವಸ್ತ್ರ ಬಗ್ಗ - ಹುಲಿ, ವ್ಯಾಘ್ರ ಬಿಮ್ಮನೆ - ವೇಗವಾಗಿ, ಸುಮ್ಮನೆ ಭೂರಮೆ - ಭೂದೇವಿ ಹುತ್ತರಿ - ಕೊಡಗರು ಹೊಸ ಅಕ್ಕಿಯನ್ನು ಮನೆಗೆ ತರುವಾಗ ಆಚರಿಸುವ ಹಬ್ಬ, ಕೊಡಗಿನ ಸುಗ್ಗಿ ಹಬ್ಬ ಹೊಯ್ಲು - ಹೊಡೆತ

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

  1. ೧. ಕಾವೇರಿಯು ಹೇಗೆ ಹೊಳೆಯುತ್ತಾಳೆ?

    Answer

    ಕಾವೇರಿಯು ಮುಗಿಲಲ್ಲಿ ಮಿಂಚಿನಂತೆ ಹೊಳೆಯುತ್ತಾಳೆ.

  2. ೨. ಸೋಲು ಸಾವರಿಯದವರು ಯಾರು?

    Answer

    ಸೋಲು ಸಾವರಿಯದವರು ಕೊಡಗಿನ ಹಿರಿಯರು.

  3. ೩. ಕೊಡಗು ಯಾವ ಗಿರಿಯಿಂದ ಯಾವ ಗಿರಿಯ ಪರ್ಯಂತ ಬೆಳೆದಿದೆ?

    Answer

    ಕೊಡಗು ಬೊಮ್ಮಗಿರಿಯಿಂದ ಪುಷ್ಪಗಿರಿಯ ಪರ್ಯಂತ ಬೆಳೆದಿದೆ.

  4. ೪. ಕಾವೇರಿಯ ತವಮರ್ನೆ ಯಾವುದು?

    Answer

    ಕಾವೇರಿ ತಾಯಿಯ ತವಮರ್ನೆ ಕೊಡಗು.

  5. ೫. ಯಾವ ಹೊಯ್ಲಿಗೆ ಕುಣಿವ ಪದ ಹೊರ ಹೊಮ್ಮಬೇಕು?

    Answer

    ಚಿಮ್ಮಿ ಪಾತುರೆಕೋಲ ಹೊಯ್ಲಿಗೆ ಕುಣಿವ ಪದ ಹೊರ ಹೊಮ್ಮಬೇಕು.

ಆ. ಕೆಳಗಿನ ಪದ್ಯಭಾಗವನ್ನು ಪೂರ್ಣಗೊಳಿಸಿ, ಕಂಠಪಾಠ ಮಾಡಿರಿ.

  1. ೧. ಎಲ್ಲಿ ಭೂರಮೆ __________________________________________________

    Answer

    ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳೋ?

  2. __________________________________________________________________

    Answer

    ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲಿ ನಿಂದಳೋ?

  3. __________________________________________________________________

    Answer

    ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ಹೊಳೆ ಹೊಳೆವಳೋ?

  4. ________________________________________________________ಕಳೆವಳೋ?

    Answer

    ಎಲ್ಲಿ ನೆಲವನು ತಣಿಸಿ ಜನಮನ ಹೊಲದ ಕಳೆಕಳೆ ಕಳೆವಳೋ?

  5. ೨. ಒಮ್ಮತವು ______________________________________________________

    Answer

    ಒಮ್ಮತವು ಒಗ್ಗಟ್ಟು ಒಂದೇ ಮನವು ಎಲ್ಲಿದೆ ಹೇಳಿರಿ?

  6. __________________________________________________________________

    Answer

    ಸುಮ್ಮನಿತ್ತರೊ ದಟ್ಟಿಕುಪ್ಪಸ? ಹಾಡುಹುತ್ತರಿಗೇಳಿರಿ!

  7. __________________________________________________________________

    Answer

    ಚಿಮ್ಮಿ ಪಾತುರೆಕೋಲ ಹೊಯ್ಲಿಗೆ ಕುಣಿವ ಪದ ಹೊರ ಹೊಮ್ಮಲಿ!

  8. ______________________________________________________ ನಮ್ಮಲಿ!

    Answer

    ಅಮ್ಮೆ ಹರಸಿದ ಸೀಮೆ ನಮಗಿದು ಇರಲಿ ನಮ್ಮದೆ ನಮ್ಮಲಿ!

Interactive Lab

ಒಡಲ್ಶರೀರ, ದೇಹ ಕಡುಗಲಿ - ಮಹಾಶೂರ ಕ್ಷಾತ್ರ - ಕ್ಷತ್ರಿಯ ಕುಲ, ಕ್ಷತ್ರಿಯನ ತೇಜಸ್ಸು ಗರಿಯರು - ಹಿರಿಮೆಯುಳ್ಳವರು ಜಮ್ಮದು - ಅರಸನು ಇನಾಮಾಗಿ ಕೊಟ್ಟ ಭೂಮಿ ದಟ್ಟಿಕುಪ್ಪಸ - ಸೊಂಟಕ್ಕೆ ಕಟ್ಟುವ ವಸ್ತ್ರ ಬಗ್ಗ - ಹುಲಿ, ವ್ಯಾಘ್ರ ಬಿಮ್ಮನೆ - ವೇಗವಾಗಿ, ಸುಮ್ಮನೆ ಭೂರಮೆ - ಭೂದೇವಿ ಹುತ್ತರಿ - ಕೊಡಗರು ಹೊಸ ಅಕ್ಕಿಯನ್ನು ಮನೆಗೆ ತರುವಾಗ ಆಚರಿಸುವ ಹಬ್ಬ, ಕೊಡಗಿನ ಸುಗ್ಗಿ ಹಬ್ಬ ಹೊಯ್ಲು - ಹೊಡೆತ