ಪದ್ಯ (poem) · ಡಾ. ಎಂ. ಅಕಬರ ಅಲಿ
ಪಠ್ಯFull text
**ಚಿನ್ನುಡಿ** “ತನ್ನನ್ನು ತಾನು ಗುರುತಿಸಿಕೊಂಡು, ತನ್ನ ವಿಶೇಷವನ್ನು ಶಕ್ತಿಯ ಪರಿಮಿತಿಯನ್ನು ಅರಿತು, ತನ್ನತನದ ವೈಶಿಷ್ಟ್ಯವನ್ನು ಬೆಳೆಸಿಕೊಳ್ಳುತ್ತಾ ಉಳಿದವರ ಜೊತೆಗೆ ಸಮಭಾವದಿಂದ ಸಹಕರಿಸಲು ಕಲಿಸುವುದೇ ನಿಜವಾದ ಸಂಸ್ಕೃತಿಯ ಲಕ್ಷಣ” — ಎಂ. ಗೋಪಾಲಕೃಷ್ಣ ಅಡಿಗ (ಕವಿ) (Recognizing oneself, knowing one's uniqueness and the limits of one's strength, developing one's individuality while learning to cooperate with others with a sense of equality is the true mark of culture.)
ಪದಗಳ ಅರ್ಥword meanings
| Kannada | Pronunciation | Meaning |
|---|---|---|
| ನಿರ್ಭೀತ | — | ಭಯವಿಲ್ಲದ; ಮಸ್ತಕ-ತಲೆ; ಹೋಳು-ತುಂಡು; ಹರಹು-ವಿಸ್ತಾರ ; ವಾಹಿನಿ-ನದಿ; ಹರಿಗಡಿಯದೆ-ಹರಿಯುವಿಕೆಯು ನಿಲ್ಲದೆ; ವೈಶಾಲ್ಯ-ವಿಶಾಲತೆ; ಧ್ರುವತಾರೆ-ಧ್ರುವನಕ್ಷತ್ರ (ಸ್ಥಿರವಾದ ಲಕ್ಷ್ಯ); ನಿರ್ಮುಕ್ತ-ಸರ್ವಸ್ವತಂತ್ರ |
ಅಭ್ಯಾಸexercises from the textbook
Model answers — a guide, not the only correct wording. Check with your teacher.
ಅ. ಮುಂದೆ ನೀಡಿರುವ ವಾಕ್ಯಗಳಲ್ಲಿ ಖಾಲಿ ಬಿಟ್ಟಿರುವ ಸ್ಥಳದಲ್ಲಿ ಆವರಣದಲ್ಲಿ ನೀಡಿರುವ ಪದಗಳ ಬಹುವಚನ ರೂಪ ಬರೆಯಿರಿ.
೧. ನಮ್ಮ ಮನೆಯಲ್ಲಿ ಎಂಟು ________________ (ದನ, ಇದೆ)
Answerದನಗಳು
೨. ನಮ್ಮ ತರಗತಿಯಲ್ಲಿ ಅರವತ್ತು ________________ (ಹುಡುಗ, ಇದ್ದಾನೆ)
Answerಹುಡುಗರು
೩. ಆರನೆಯ ತರಗತಿಯಲ್ಲಿ ಇಪ್ಪತ್ತು ________________ (ಹುಡುಗಿ, ಇದ್ದಾಳೆ)
Answerಹುಡುಗಿಯರು
ಆ. ಕೆಳಗೆ ಏಕವಚನ, ಬಹುವಚನದ ಪದಗಳನ್ನು ಕೊಡಲಾಗಿದೆ. ಇವುಗಳನ್ನು ಗಮನಿಸಿ.
ಉದಾಹರಣೆ : ೧
(A table with ಏಕವಚನ and ಬಹುವಚನ forms is shown: ಪುಸ್ತಕ - ಪುಸ್ತಕಗಳು, ದನ - ದನಗಳು, ಮನೆ - ಮನೆಗಳು, ಬಸ್ಸು - ಬಸ್ಸುಗಳು, ರಾಜ್ಯ - ರಾಜ್ಯಗಳು, ಶಾಲೆ - ಶಾಲೆಗಳು, ತರಗತಿ - ತರಗತಿಗಳು)
ಉದಾಹರಣೆ : ೨
(A table with ಏಕವಚನ and ಬಹುವಚನ forms is shown: ಯುವಕ - ಯುವಕರು, ಮುದುಕ - ಮುದುಕರು, ಆಟಗಾರ - ಆಟಗಾರರು, ಚಾಲಕಿ - ಚಾಲಕಿಯರು, ಬಾಲಕಿ - ಬಾಲಕಿಯರು, ಶಾಸಕಿ - ಶಾಸಕಿಯರು, ಬಾಲಕ - ಬಾಲಕರು)
ಉದಾಹರಣೆ : ೩
(A table with ಏಕವಚನ and ಬಹುವಚನ forms is shown: ಅಕ್ಕ - ಅಕ್ಕಂದಿರು, ತಾಯಿ - ತಾಯಂದಿರು, ಚಿಕ್ಕಪ್ಪ - ಚಿಕ್ಕಪ್ಪಂದಿರು, ದೊಡ್ಡಪ್ಪ - ದೊಡ್ಡಪ್ಪಂದಿರು, ತಂಗಿ - ತಂಗಿಯರು)
ವಚನಗಳಿಗೆ ಸಂಬಂಧಿಸಿದ ಉದಾಹರಣೆಗಳನ್ನು ಗಮನಿಸಿ. ಉದಾಹರಣೆ ೧ರಲ್ಲಿ ನಪುಂಸಕ ಪದಗಳಿವೆ. ಇವುಗಳಲ್ಲಿ-ಗಳು ಎಂಬ ಬಹುವಚನ ಪ್ರತ್ಯಯ ಬಳಕೆಯಾಗಿದೆ. ಉದಾಹರಣೆ ೨ರಲ್ಲಿ ಸ್ತ್ರೀಲಿಂಗ ಪುಲ್ಲಿಂಗ ಪದಗಳಿವೆ. ಇಲ್ಲಿ ಸ್ತ್ರೀಲಿಂಗದಲ್ಲಿ –ಅರು ಎಂಬ ಬಹುವಚನ ಪ್ರತ್ಯಯ, ಪುಲ್ಲಿಂಗದಲ್ಲಿ –ರು ಅನ್ನುವ ಪ್ರತ್ಯಯ ಬಳಕೆಯಾಗಿದೆ. ಉದಾಹರಣೆ ೩ರಲ್ಲಿ ಸಂಬಂಧವಾಚಿ ಪದಗಳಿವೆ. ಇಲ್ಲೆಲ್ಲ –ಅಂದಿರು ಎಂಬ ಬಹುವಚನ ಪ್ರತ್ಯಯ ಬಳಕೆಯಾಗಿದೆ. ಈ ಸೂತ್ರದ ಆಧಾರದ ಮೇಲೆ ಅಭ್ಯಾಸ ೧ ಮತ್ತು ೨ರ ಏಕವಚನ ಪದಗಳಿಗೆ ಬಹುವಚನ ಪದಗಳನ್ನು ಬರೆಯಿರಿ.
ಅಭ್ಯಾಸ ೧
(A fill-in-the-blank table is shown. Column 1: ಜಿಲ್ಲೆ - _________, ಊರು - _________, ಕೊಠಡಿ - _________, ನಾಯಿ - _________. Column 2: ಹಕ್ಕಿ - _________, ನದಿ - _________, ಬೆಟ್ಟ - _________, ಗುಡ್ಡ - _________.)
ಅಭ್ಯಾಸ ೨
(A fill-in-the-blank table is shown. Column 1: ಅಣ್ಣ - _________, ಚಿಕ್ಕಮ್ಮ - _________, ದೊಡ್ಡಮ್ಮ - _________. Column 2: ಅತ್ತೆ - _________, ತಮ್ಮ - _________, ಭಾವ - _________.)