ಪದ್ಯ (poem) · ಜೇಡರ ದಾಸಿಮಯ್ಯ, ಮಡಿವಾಳ ಮಾಚಯ್ಯ, ಮುಕ್ತಾಯಕ್ಕ ಮತ್ತು ಸತ್ಯಕ್ಕ - ವಚನಕಾರರು
ಪಠ್ಯFull text
**ಚಿನ್ನುಡಿ** “ಲೋಕದಲ್ಲಿ ಎಷ್ಟು ಜನರಿದ್ದಾರೋ ಅಷ್ಟು ಅನುಭವಗಳಿವೆ. ಅವುಗಳಲ್ಲಿ ಕೆಲವು ಗ್ರಾಹ್ಯವಾದವು, ಕೆಲವು ತ್ಯಾಜ್ಯವಾದವು. ಯಾವುದು ತ್ಯಾಜ್ಯ ಎಂದು ನಿರ್ಧಾರ ಮಾಡುವ ಒರೆಗಲ್ಲು ಯಾವುದು? ಅವರವರ ಸ್ವಂತ ಅನುಭವವೇ!” –ಜಿ.ಪಿ. ರಾಜರತ್ನಂ (ಕವಿ ಹಾಗೂ ಚಿಂತಕರು) (There are as many experiences in the world as there are people. Some are to be accepted, some to be discarded. What is the touchstone to decide what to discard? One's own experience!)
ಪದಗಳ ಅರ್ಥword meanings
| Kannada | Pronunciation | Meaning |
|---|---|---|
| ಹರಿದ | — | ಕಿತ್ತುಹೋಗಿರುವ, ಗೋಣಿ-ಸೇಣಬಿನ ಚೀಲ, ಕಳವೆ-ಭತ್ತ, ಇರುಳು-ರಾತ್ರಿ, ಸುಂಕ-ತೆರಿಗೆ, ಅಂಧಕಾರ-ಕತ್ತಲೆ, ತಿಮಿರ; ಪ್ರಭೆ-ಕಾಂತಿ, ಪ್ರಕಾಶ; ನಿಂದಕರು-ನಿಂದಿಸುವವ, ಬಯ್ಯುವವ; ಏಡಿಸಲು-ಛೇಡಿಸು, ಚೇಷ್ಟೆಮಾಡು; ಕುತರ್ಕ-ನ್ಯಾಯವಿಲ್ಲದ ಮಾತು; ಪಥ-ಮಾರ್ಗ, ದಾರಿ; ವ್ರತ-ನಿಯಮ, ಪೂಜೆ, ಧಾರ್ಮಿಕ ಅನುಷ್ಠಾನ; ಬಟ್ಟೆ-ಮಾರ್ಗ, ದಾರಿ; ಪ್ರಮಥರು-ಶಿವನ ಭಕ್ತರು; ಅಳಿಮನ-ದೃಢವಲ್ಲದ ಮನಸ್ಸು, ಅಸ್ಥಿರವಾದ ಮನಸ್ಸು; ಅದ್ದಿ-ಮುಳುಗಿಸಿ, ತೋಯಿಸಿ; |
ಅಭ್ಯಾಸexercises from the textbook
Model answers — a guide, not the only correct wording. Check with your teacher.
ಅ. ಕೆಳಗಿನ ವಾಕ್ಯಗಳಲ್ಲಿ ಕರ್ಮಪದ, ಕರ್ತೃಪದ ಮತ್ತು ಕ್ರಿಯಾಪದಗಳನ್ನು ಗುರುತಿಸಿ.
(A table with columns for ಕ್ರ.ಸಂ., ವಾಕ್ಯಗಳು, ಕರ್ತೃಪದ, ಕರ್ಮಪದ, ಕ್ರಿಯಾಪದ)
೧. ಉಮಾ ಹಾಡನ್ನು ಹಾಡಿದಳು.
Answerಕರ್ತೃಪದ: ಉಮಾ ಕರ್ಮಪದ: ಹಾಡನ್ನು ಕ್ರಿಯಾಪದ: ಹಾಡಿದಳು
೨. ಕೇಶವನು ಕುಂಬಳಕಾಯಿಯನ್ನು ಕೊಯ್ದನು.
Answerಕರ್ತೃಪದ: ಕೇಶವನು ಕರ್ಮಪದ: ಕುಂಬಳಕಾಯಿಯನ್ನು ಕ್ರಿಯಾಪದ: ಕೊಯ್ದನು
೩. ಗಣೇಶನು ಗಡಿಗೆಯನ್ನು ಒಡೆದನು.
Answerಕರ್ತೃಪದ: ಗಣೇಶನು ಕರ್ಮಪದ: ಗಡಿಗೆಯನ್ನು ಕ್ರಿಯಾಪದ: ಒಡೆದನು
೪. ಹಸೀನ ಕೊಡೆಯನ್ನು ಬಿಡಿಸಿದಳು.
Answerಕರ್ತೃಪದ: ಹಸೀನ ಕರ್ಮಪದ: ಕೊಡೆಯನ್ನು ಕ್ರಿಯಾಪದ: ಬಿಡಿಸಿದಳು
೫. ರಜನಿಯು ಸಿನಿಮಾವನ್ನು ನೋಡಿದಳು.
Answerಕರ್ತೃಪದ: ರಜನಿಯು ಕರ್ಮಪದ: ಸಿನಿಮಾವನ್ನು ಕ್ರಿಯಾಪದ: ನೋಡಿದಳು
೬. ಅಧ್ಯಾಪಕರು ಪಾಠವನ್ನು ಬೋಧಿಸಿದರು.
Answerಕರ್ತೃಪದ: ಅಧ್ಯಾಪಕರು ಕರ್ಮಪದ: ಪಾಠವನ್ನು ಕ್ರಿಯಾಪದ: ಬೋಧಿಸಿದರು
ಆ. ಕೆಳಗಿನ ವಾಕ್ಯಗಳಲ್ಲಿ ಕ್ರಿಯಾಪದಗಳನ್ನೂ ಕ್ರಿಯಾಪದದ ವಿಧಗಳನ್ನೂ ಸೂಚಿಸಿ.
(A table with columns for ಕ್ರ.ಸಂ., ವಾಕ್ಯಗಳು, ಕ್ರಿಯಾಪದ, ಕ್ರಿಯಾಪದದ ವಿಧ (ಕಾಲಕ್ಕನುಗುಣವಾಗಿ))
Answerಕ್ರ.ಸಂ. | ವಾಕ್ಯಗಳು | ಕ್ರಿಯಾಪದ | ಕ್ರಿಯಾಪದದ ವಿಧ
೧. ರೈತರು ಕಾಳುಗಳನ್ನು ಬಿತ್ತಿದರು.
Answerಕ್ರಿಯಾಪದ: ಬಿತ್ತಿದರು ಕ್ರಿಯಾಪದದ ವಿಧ: ಭೂತಕಾಲ
೨. ಅಧ್ಯಾಪಕರು ಸಿನಿಮಾ ತೋರಿಸುತ್ತಾರೆ.
Answerಕ್ರಿಯಾಪದ: ತೋರಿಸುತ್ತಾರೆ ಕ್ರಿಯಾಪದದ ವಿಧ: ವರ್ತಮಾನಕಾಲ
೩. ನನ್ನ ಅಕ್ಕ ಭಾವ ಮುಂದಿನ ತಿಂಗಳು ಬರುವರು.
Answerಕ್ರಿಯಾಪದ: ಬರುವರು ಕ್ರಿಯಾಪದದ ವಿಧ: ಭವಿಷ್ಯತ್ಕಾಲ
೪. ಬೆಳಗ್ಗೆ ಕೋಳಿ ಕೂಗುತ್ತದೆ.
Answerಕ್ರಿಯಾಪದ: ಕೂಗುತ್ತದೆ ಕ್ರಿಯಾಪದದ ವಿಧ: ವರ್ತಮಾನಕಾಲ