ಪದ್ಯ (poem) · ಭಾಸ್ಕರ ನೆಲ್ಯಾಡಿ
ಪಠ್ಯFull text
ಅಭ್ಯಾಸexercises from the textbook
Model answers — a guide, not the only correct wording. Check with your teacher.
I. ಪದಗಳ ಅರ್ಥ ತಿಳಿಯಿರಿ :
ಕಿರುಚು – ಚೀರು; ಒದರು; ಕೂಗು.
ತೆಪ್ಪಗಾಗು – ಸುಮ್ಮನಾಗು
ಬಾನು – ಆಕಾಶ; ಗಗನ.
ಸಂಗ – ಗೆಳೆತನ; ಸ್ನೇಹ.
ಹೆಕ್ಕಿ – ಆರಿಸಿ; ಹುಡುಕಿ.
ಕೊಳ – ಸರೋವರ
ಪಡ್ಡೆ – ಪ್ರಾಯಕ್ಕೆ ಬಂದವರು; ತರುಣರು.
ಬೆಪ್ಪ – ದಡ್ಡ; ಮೂರ್ಖ.
ಹಂಸ – ಒಂದು ಜಾತಿಯ ಪಕ್ಷಿ.
II. ಪ್ರಶ್ನೆಗಳು :
ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.
೧. ಕೊಳದಲ್ಲಿನ ಆಮೆಗೆ ಯಾವ ಆಸೆ ಮೂಡಿತು?
Answerಕೊಳದಲ್ಲಿನ ಆಮೆಗೆ ಹಕ್ಕಿಯಂತೆ ಬಾನಿನಲ್ಲಿ ಒಮ್ಮೆ ಹಾರಬೇಕೆಂಬ ಆಸೆ ಮೂಡಿತು.
೨. ಆಮೆ ಹಂಸಗಳ ಸಂಗವನ್ನು ಏಕೆ ಬೆಳೆಸಿತು?
Answerಆಮೆಯು ತನ್ನ ಮನದಲ್ಲಿರುವ ಬಯಕೆಯನ್ನು ಹೇಳಲು ಹಂಸಗಳ ಸಂಗವನ್ನು ಬೆಳೆಸಿತು.
೩. ಬಾನಿನಲ್ಲಿ ಸಾಗಿದ ಆಮೆಗೆ ಏಕೆ ಸಿಟ್ಟು ಬಂತು?
೪. ಆಮೆ ಪಡ್ಡೆ ಹುಡುಗರಿಗೆ ಏನೆಂದು ಬೈದಿತು?
ಆ) ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.
೧. ಹಂಸಗಳು ಆಮೆಯನ್ನು ಬಾನಲ್ಲಿ ಒಯ್ಯಲು ಮಾಡಿದ ಉಪಾಯವೇನು?
Answerಹಂಸಗಳು ಉದ್ದವಾದ ಒಂದು ಕೋಲನ್ನು ತಂದವು. ಆಮೆಯು ಆ ಕೋಲನ್ನು ಮಧ್ಯದಲ್ಲಿ ಕಚ್ಚಿ ಹಿಡಿಯಿತು. ಹಂಸಗಳು ಕೋಲಿನ ಎರಡೂ ತುದಿಗಳನ್ನು ತಮ್ಮ ಕೊಕ್ಕಿನಲ್ಲಿ ಎತ್ತಿಕೊಂಡು ಆಮೆಯನ್ನು ಬಾನಿನಲ್ಲಿ ಒಯ್ದವು.
೨. ಬಾನಿನಲ್ಲಿ ಸಾಗಿದ ಆಮೆಗೆ ಯಾವ ಅನುಭವಗಳಾದವು?
೩. ಆಮೆಯು ಪಡ್ಡೆ ಹುಡುಗರನ್ನು ಹೇಗೆ ಬೆಪ್ಪು ಮಾಡಿತು?
ಇ) ಬಿಟ್ಟ ಸ್ಥಳವನ್ನು ಸೂಕ್ತ ಪದದಿಂದ ತುಂಬಿರಿ.
೧. ಆಮೆಯು __________________ ಸಂಗ ಬೆಳೆಸಿತು.
Answerಆಮೆಯು ಹಂಸಗಳಲಿ ಸಂಗ ಬೆಳೆಸಿತು.
೨. ಬಾನಿನಲ್ಲಿ ಸಾಗಿದ ಆಮೆಯು ಸನಿಹದಿಂದ __________________ ಕಂಡೆನೆಂದಿತು.
೩. ಪಡ್ಡೆ ಹುಡುಗರು __________________ ಬೀಳಬೇಕು ಎಂದುಕೊಂಡರು.
೪. ಆಮೆಯು ಪಡ್ಡೆ ಹುಡುಗರಿಗೆ ನೀವು __________________ ಎಂದು ಬಿಡುವಿರಿ ಎಂದಿತು.
III. ಭಾಷಾಭ್ಯಾಸ :
ಅ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ.
೧. ಬಾನಲೊಮ್ಮೆ = __________________ + __________________
Answerಬಾನಲೊಮ್ಮೆ = ಬಾನಲಿ + ಒಮ್ಮೆ
೨. ಆಮೆಗೊಂದು = __________________ + __________________
Answerಆಮೆಗೊಂದು = ಆಮೆಗೆ + ಒಂದು
೩. ಬಯಕೆಯನ್ನು = __________________ + __________________
Answerಬಯಕೆಯನ್ನು = ಬಯಕೆ + ಅನ್ನು
೪. ಹಂಸವೆರಡು = __________________ + __________________
Answerಹಂಸವೆರಡು = ಹಂಸ + ಎರಡು
೫. ಹಾರಲೆಂದಿತು = __________________ + __________________
Answerಹಾರಲೆಂದಿತು = ಹಾರಲು + ಎಂದಿತು
ಆ) ಕೆಳಗೆ ನೀಡಲಾಗಿರುವ ಪದಗಳ ಅರ್ಥ ವ್ಯತ್ಯಾಸ ಬರೆಯಿರಿ.
ಉದಾಹರಣೆ : ಧನ - ದನ (ಧನ - ಹಣ ದನ - ಹಸು)
೧. ಕೊಳ - ಕೋಳ (ಕೊಳ - ___________ ಕೋಳ - ___________)
೨. ಬಾನು - ಭಾನು (ಬಾನು - ___________ ಭಾನು - ___________)
೩. ಹಾರು - ಆರು (ಹಾರು - ___________ ಆರು - ___________)
೪. ಮಧ್ಯ - ಮದ್ಯ (ಮಧ್ಯ - ___________ ಮದ್ಯ - ___________)
೫. ಮತ್ತೆ - ಮೆತ್ತೆ (ಮತ್ತೆ - ___________ ಮೆತ್ತೆ - ___________)
೬. ಹಕ್ಕಿ - ಹೆಕ್ಕಿ (ಹಕ್ಕಿ - ___________ ಹೆಕ್ಕಿ - ___________)
ಇ) ಕೆಳಗಿನ ಶಬ್ದಗಳ ಹಿಂದೆ ಅಥವಾ ಮುಂದೆ ಒಂದು ಅಕ್ಷರ ಸೇರಿಸಿ, ಹೊಸ ಪದ ರಚಿಸಿರಿ.
ಮಾದರಿ : __ ಸಂಗ. (ಪ್ರಸಂಗ)
೧. __ ಹಾರ
Answerಆಹಾರ
೨. __ ಮನ
Answerಮನಸ್ಸು
೩. ಕೊಳ __
Answerಕೊಳಲು
ಈ) ‘ಜಾಣ ಆಮೆ’ ಪದ್ಯದಲ್ಲಿನ ಪ್ರಾಸಪದಗಳನ್ನು ಪಟ್ಟಿ ಮಾಡಿರಿ.
ಉದಾ : ಮೂಡಿತು - ಬೆಳೆಸಿತು
೧. ಬಂದವು -
Answerಬಂದವು - ತಂದವು
೨. ಹಾರತೊಡಗಿತು -
೩. ಕಂಡರು -
೪. ಬೆಪ್ಪಾದರು -
೫. ಎಂದಿತು -
IV. ಚಟುವಟಿಕೆಗಳು :
೧. ಪ್ರಾಣಿ ಪಕ್ಷಿಗಳನ್ನು ಕುರಿತಾದ ಕಥನ ಕವನಗಳನ್ನು ಓದಿರಿ.
೨. ಸಮಸ್ಯೆಗಳು ಬಂದಾಗ ಅವುಗಳನ್ನು ಜಾಣತನದಿಂದ ಹೇಗೆ ಪರಿಹರಿಸಬಹುದು ಎಂಬುದನ್ನು ತರಗತಿಯಲ್ಲಿ ಚರ್ಚಿಸಿರಿ.
೩. ‘ಜಾಣ ಆಮೆ’ ಕಥೆಯನ್ನು ನಿಮ್ಮದೇ ಮಾತುಗಳಲ್ಲಿ ವಿವರಿಸಿರಿ.