CRECT Education

Class 7 Kannada Lesson 22: In the Dream | KTBS Second Language

Description

Walk through the poem ಕನಸಿನಲ್ಲಿ (In the Dream) by V.G. Bhatta — vocabulary, recitation, and comprehension questions from the Class 7 Second Language textbook.

ಪದ್ಯ · ವಿ.ಜಿ. ಭಟ್ಟ

ಪಠ್ಯFull text

ಕಾಡಿಗೆ ಹೋದೆನು ಕನಸಿನಲಿ ಒಯ್ದಿತು ನನ್ನನ್ನು ಪಟ್ಟೆಹುಲಿ ಸೊಂಡಿಲಿನಲಿ ತಣ್ಣೀರನು ತಂದು ಆನೆಯು ಜಳಕವ ಮಾಡಿಸಿತು ಮರಗಳು ನೀಡಿದ ಹಣ್ಣುಗಳನ್ನು ಸಿಂಹವು ಊಡಿಸಿತು ಹಂಸಗಳೆಲ್ಲಾ ಹಾಸಿಗೆ ಮಾಡಿ ಹಕ್ಕಿಗಳೆಲ್ಲಾ ಹಾಡನು ಹಾಡಿ ಮೊಲಗಳು ಕತೆಯನು ಹೇಳಿದವು ನಿಮ್ಮೂರಿನ ಮಳೆ ಬೆಳೆ ಹೇಗೆಂದು ನರಿಗಳು ಕೇಳಿದವು ಗಾಳಿಯ ಹಾಕಿತು ನವಿಲಿನ ಹಿಂಡು ಇದನೆಲ್ಲಾ ನನ್ನಪ್ಪನು ಕಂಡು ಕೈಯಲಿ ಭಡಿಯನ್ನು ಹಿಡಿದೆ ಬಂದು ‘ನನ್ನನು ಕೇಳದೆ ಯಾತಕೆ ಬಂದೆ?’ ಎಂದಬ್ಬರಿಸಲು ಹೆದರಿಕೆಯಿಂದ ಪ್ರಾಣಿಗಳೆಲ್ಲಾ ಓಡಿದವು ದೂರದಿ ಗವಿಯಲಿ ಸುಮ್ಮನೆ ನಿಂತು ಅಪ್ಪನ ನೋಡಿದವು ಬೆನ್ನಿಗೆ ಭಡಿಗಳು ಬೀಳಲು ಅಯ್ಯೋ ಅಯ್ಯೋ ಎಂದತ್ತೆ ಎಚ್ಚರವಾಯಿತು–ಅಪ್ಪನು ಇಲ್ಲ! ಕಾಡಿಗೆ ಹೋಗಲು ಆಗಲೆ ಇಲ್ಲ ಎಂದೆಂದೂ ಮತ್ತೆ

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

  1. ೧. ಕಾಡಿನಲ್ಲಿ ಯಾವ ಪ್ರಾಣಿಯು ಬಾಲಕನನ್ನು ಒಯ್ದಿತು?

    Answer

    ಕಾಡಿನಲ್ಲಿ ಪಟ್ಟೆಹುಲಿಯು ಬಾಲಕನನ್ನು ಒಯ್ದಿತು.

  2. ೨. ಆನೆ, ಸಿಂಹಗಳು ಬಾಲಕನನ್ನು ಹೇಗೆ ಉಪಚರಿಸಿದವು?

    Answer

    ಆನೆಯು ಸೊಂಡಿಲಿನಲ್ಲಿ ತಣ್ಣೀರನ್ನು ತಂದು ಜಳಕ ಮಾಡಿಸಿತು; ಸಿಂಹವು ಮರಗಳು ನೀಡಿದ ಹಣ್ಣುಗಳನ್ನು ಊಡಿಸಿತು.

  3. ೩. ನರಿಗಳು ಬಾಲಕನನ್ನು ಏನೆಂದು ಕೇಳಿದವು?

    Answer

    ನರಿಗಳು ಬಾಲಕನನ್ನು 'ನಿಮ್ಮೂರಿನ ಮಳೆ ಬೆಳೆ ಹೇಗೆ?' ಎಂದು ಕೇಳಿದವು.

  4. ೪. ಪ್ರಾಣಿಗಳೆಲ್ಲವೂ ಹೆದರಿದ್ದೇಕೆ?

    Answer

    ಅಪ್ಪನು ಕೈಯಲ್ಲಿ ಭಡಿಯನ್ನು ಹಿಡಿದು 'ನನ್ನನು ಕೇಳದೆ ಯಾತಕೆ ಬಂದೆ?' ಎಂದು ಅಬ್ಬರಿಸಿದ್ದರಿಂದ ಪ್ರಾಣಿಗಳೆಲ್ಲವೂ ಹೆದರಿದವು.

Interactive Lab