ಗದ್ಯ (prose) · ಸಂಪಾದಿತ
ಪಠ್ಯFull text
**ಗೆಳೆತನವೆ ಇಹಲೋಕಕ್ಕಿರುವ ಅಮೃತ. ಗೆಳೆತನವೆ ಚಿರಬಾಳ ಸಂಜೀವಿನಿ.** (Friendship is the nectar of this world. Friendship is the elixir of a long life.)
ಅಭ್ಯಾಸexercises from the textbook
Model answers — a guide, not the only correct wording. Check with your teacher.
I. ಪದಗಳ ಅರ್ಥ ತಿಳಿಯಿರಿ :
ಅವಿನಾಶಿ - ನಾಶವಿಲ್ಲದ್ದು
ಆಜ್ಞೆ - ಅಪ್ಪಣೆ
ಕೌಶಲ - ಜಾಣತನ, ನಿಪುಣತೆ
ತೇಜಸ್ವಿ - ತೇಜಸ್ಸುಳ್ಳವ; ಕಾಂತಿಯುಳ್ಳವ.
ದ್ವಾರ - ಬಾಗಿಲು
ಮಿತ್ರ - ಸ್ನೇಹಿತ; ಗೆಳೆಯ.
ಸಮಾಗಮ - ಸೇರುವುದು
ಅಸಮಾಧಾನ - ಬೇಸರ; ಅತೃಪ್ತಿ.
ಆಲಂಗಿಸು - ಅಪ್ಪಿಕೊಳ್ಳು
ತವಕ - ಆತುರ; ಕಾತರ.
ದರ್ಬಾರು - ರಾಜಾಸ್ಥಾನ; ಅಧಿಕಾರ ನಡೆಸುವಿಕೆ.
ಮಾರುತ - ಗಾಳಿ
ರಾಜ್ಯಭಾರ - ರಾಜ್ಯದ ಹೊಣೆಗಾರಿಕೆ; ಆಳ್ವಿಕೆ.
ಸ್ವಾರ್ಥ - ಸ್ವಹಿತ; ಸ್ವಪ್ರಯೋಜನ.
II. ಪ್ರಶ್ನೆಗಳು :
ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.
೧. ಅಕ್ಬರ್ ಮತ್ತು ಬೀರಬಲ್ ಇವರ ನಡುವಿನ ಸಂಬಂಧ ಯಾವ ರೀತಿಯದು?
Answerಅಕ್ಬರ್ ಮತ್ತು ಬೀರಬಲ್ ದೊರೆ ಮಂತ್ರಿಯಾಗಿದ್ದಂತೆ ಆತ್ಮೀಯ ಮಿತ್ರರೂ ಆಗಿದ್ದರು.
೨. ಅಕ್ಬರ್ ಬೀರಬಲ್ಲನನ್ನು ಏಕೆ ಹುಡುಕಾಡಿಸಿದನು?
Answerಅಕ್ಬರನಿಗೆ ಬೀರಬಲ್ಲನನ್ನು ಕಾಣುವ ತವಕ ಉಂಟಾದ್ದರಿಂದ ಅವನಿಗಾಗಿ ಹುಡುಕಾಡಿಸಿದನು.
೩. ಅರಮನೆಯನ್ನು ಪ್ರವೇಶಿಸಿದ ಸಾಧು ಹೇಗಿದ್ದನು?
Answerಅರಮನೆಯನ್ನು ಪ್ರವೇಶಿಸಿದ ಸಾಧು ತುಂಬಾ ತೇಜಸ್ವಿಯಾಗಿದ್ದನು.
೪. ಅಕ್ಬರನ ಆಸ್ಥಾನದಲ್ಲಿದ್ದ ವಿದ್ವಾಂಸರುಗಳ ಹೆಸರುಗಳೇನು?
Answerಅಕ್ಬರನ ಆಸ್ಥಾನದಲ್ಲಿದ್ದ ವಿದ್ವಾಂಸರುಗಳೆಂದರೆ ತಾನ್‍ಸೇನ್, ತೋದರಮಲ್ಲ, ಅಬುಲ್ ಫಜಲ್, ಫೈಜಿ ಮತ್ತು ಮಾನ್‍ಸಿಂಗ್.
೫. ವಿಶ್ವದಲ್ಲಿ ಅತ್ಯುತ್ತಮವಾದ ವಸ್ತು ಯಾವುದು?
Answerವಿಶ್ವದಲ್ಲಿ ಅತ್ಯುತ್ತಮವಾದ ವಸ್ತು ಜ್ಞಾನ.
೬. ಕಳೆದು ಹೋದವುಗಳನ್ನು ಮತ್ತೆ ಪಡೆಯಲು ಸಾಧ್ಯವಾಗದೇ ಇರುವವು ಯಾವುವು?
Answerಕಳೆದುಹೋದವುಗಳನ್ನು ಮತ್ತೆ ಪಡೆಯಲು ಸಾಧ್ಯವಾಗದೇ ಇರುವವು ಜೀವ, ಅವಕಾಶ ಮತ್ತು ಸಮಯ.
ಆ) ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.
೧. ಬೀರಬಲ್ ಅಕ್ಬರನಿಗೆ ಕಾಣದಂತೆ ಏಕೆ ಮರೆಯಾಗಿದ್ದನು?
Answerಅಕ್ಬರ್ ಮಹಾಶಯನಿಗೆ ಬೀರಬಲ್ಲನ ಮೇಲೆ ಯಾವುದೋ ಕಾರಣಕ್ಕೆ ಅಸಮಾಧಾನ ಉಂಟಾಯಿತು. ಆಗ ಅಕ್ಬರ್ “ನಿನ್ನ ಮುಖವನ್ನು ತೋರಿಸಬೇಡ, ಎಲ್ಲಿಗಾದರೂ ಹೊರಟು ಹೋಗು” ಎಂದು ಆದೇಶಿಸಿದನು. ಆದ್ದರಿಂದ ಬೀರಬಲ್ ಅಕ್ಬರನಿಗೆ ಕಾಣದಂತೆ ಮರೆಯಾಗಿದ್ದನು.
೨. ಸೇವಕನು ಸಾಧುವಿನ ಬಗ್ಗೆ ಅಕ್ಬರನಲ್ಲಿಗೆ ಬಂದು ಏನೆಂದು ಹೇಳಿದನು?
Answerಸೇವಕನು ಅಕ್ಬರನಲ್ಲಿಗೆ ಬಂದು, “ಪ್ರಭು! ಅರಮನೆಯ ದ್ವಾರದಲ್ಲಿ ಒಬ್ಬ ಸಾಧು ಬಂದಿದ್ದಾರೆ. ಅವರ ಶಿಷ್ಯರು ಆ ಸಾಧು ವಿಶ್ವದಲ್ಲಿಯೇ ದೊಡ್ಡ ಮೇಧಾವಿ ಹಾಗೂ ತುಂಬಾ ಬುದ್ಧಿವಂತರೆಂದು ಹೇಳುತ್ತಿದ್ದಾರೆ” ಎಂದು ಹೇಳಿದನು.
೩. ಅರಮನೆಯನ್ನು ಪ್ರವೇಶಿಸಿದ ಸಾಧುವಿಗೆ ಅಕ್ಬರ್ ಹೇಳಿದುದೇನು?
Answerಅರಮನೆಯನ್ನು ಪ್ರವೇಶಿಸಿದ ಸಾಧುವಿಗೆ ಅಕ್ಬರ್, “ಸಾಧು ! ನೀನು ಬಹಳ ಬುದ್ಧಿವಂತನೆಂದು ಕೇಳಿದೆ. ನಿನ್ನನ್ನು ಪರೀಕ್ಷಿಸುವ ಸಲುವಾಗಿ ಆಸ್ಥಾನದ ಪಂಡಿತರು ನಿನಗೆ ಪ್ರಶ್ನೆಗಳನ್ನು ಕೇಳಲು ಹೇಳುತ್ತೇನೆ. ಸರಿಯಾಗಿ ಉತ್ತರಿಸಿದರೆ ಅಮೂಲ್ಯವಾದ ಉಡುಗೊರೆಗಳನ್ನು ನೀಡುತ್ತೇನೆ” ಎಂದು ಹೇಳಿದನು.
೪. ಮಾನ್‍ಸಿಂಗ್‍ನ ಪ್ರಶ್ನೆಗಳಿಗೆ ಸಾಧುವಿನ ಉತ್ತರಗಳೇನು?
Answerಮಾನ್‍ಸಿಂಗ್‍ನ ಪ್ರಶ್ನೆಗಳಿಗೆ ಸಾಧು, ವ್ಯಕ್ತಿಯ ಅತ್ಯುತ್ತಮ ಸಾಮರ್ಥ್ಯ ಆತನ ಧೈರ್ಯ; ಮಾರುತಕ್ಕಿಂತ ವೇಗವಾದುದು ಮನುಷ್ಯನ ಕಲ್ಪನೆ; ಅತ್ಯಂತ ಸಿಹಿಯಾದದ್ದು ಮಗುವಿನ ನಗು ಎಂದು ಉತ್ತರಿಸಿದನು.
೫. ಸಾಧುವಿನ ಉತ್ತರಗಳಿಂದ ಸಂತಸಪಟ್ಟ ಅಕ್ಬರ್ ಏನು ಹೇಳಿದನು?
Answerಸಾಧುವಿನ ಉತ್ತರಗಳಿಂದ ಸಂತಸಪಟ್ಟ ಅಕ್ಬರ್, ಅವನಿಗೆ ತನ್ನ ಆಸ್ಥಾನದಲ್ಲಿ ಒಂದು ಸ್ಥಾನವನ್ನು ಕೊಡುವುದಾಗಿ ಹೇಳಿದನು. ನಂತರ, “ಅಯ್ಯಾ ! ಸಾಧುಗಳಿಗೆ ವಿಶೇಷ ಶಕ್ತಿಗಳಿರುತ್ತವೆ ಎಂದು ಕೇಳಿದ್ದೇನೆ. ನಿನಗೆ ಅಂಥ ಯಾವುದಾದರೂ ಶಕ್ತಿ ಇದೆಯೇ?” ಎಂದು ಕೇಳಿದನು.
೬. ಅಕ್ಬರನಿಗೆ ಸಾಧು ತನ್ನ ನಿಜರೂಪವನ್ನು ಹೇಗೆ ತೋರಿಸಿದನು?
Answerಅಕ್ಬರನಿಗೆ ಸಾಧು ತನ್ನ ನಿಜರೂಪವನ್ನು ತೋರಿಸಲು, ನಿಧಾನವಾಗಿ ತನ್ನ ಗಡ್ಡ ಮೀಸೆಗಳನ್ನು ಕಳಚಿದನು. ಆಗ ಎದುರಿಗೆ ಬೀರಬಲ್ ನಿಂತಿದ್ದನು.
ಇ) ಕೆಳಗಿನ ಪ್ರಶ್ನೆಗೆ ಏಳು-ಎಂಟು ವಾಕ್ಯಗಳಲ್ಲಿ ಉತ್ತರಿಸಿರಿ.
೧. ಅಕ್ಬರನ ಆಸ್ಥಾನದಲ್ಲಿದ್ದ ವಿದ್ವಾಂಸರು ಹಾಗೂ ಸಾಧುವಿನ ನಡುವೆ ನಡೆದ ಸಂಭಾಷಣೆ ಏನು?
Answerಅಕ್ಬರನ ಆಸ್ಥಾನದಲ್ಲಿದ್ದ ವಿದ್ವಾಂಸರು ಸಾಧುವಿಗೆ ಪ್ರಶ್ನೆಗಳನ್ನು ಕೇಳಿದರು. ಅಬುಲ್ ಫಜಲ್ ಕಳೆದುಹೋದುದನ್ನು ಮತ್ತೆ ಪಡೆಯಲಾಗದ್ದು ಯಾವುದು ಎಂದು ಕೇಳಿದಾಗ, ಸಾಧು ಜೀವ, ಅವಕಾಶ, ಸಮಯ ಎಂದನು. ತೋದರಮಲ್ಲ ಜಗತ್ತಿನಲ್ಲಿ ಅತ್ಯುತ್ತಮನಾದ ಸ್ನೇಹಿತನಾರು ಎಂದು ಕೇಳಿದಾಗ, ಸಾಧು ಯುಕ್ತಾಯುಕ್ತ ಪರಿಜ್ಞಾನ, ವ್ಯಕ್ತಿಯ ಮುಂದಾಲೋಚನೆ ಎಂದನು. ಫೈಜಿ ವಿಶ್ವದಲ್ಲಿ ಅತ್ಯುತ್ತಮವಾದ ವಸ್ತು ಯಾವುದು ಎಂದು ಕೇಳಿದಾಗ, ಸಾಧು ಜ್ಞಾನ ಎಂದನು. ಮಾನ್‍ಸಿಂಗ್ ವ್ಯಕ್ತಿಯ ಅತ್ಯುತ್ತಮ ಸಾಮರ್ಥ್ಯ, ಮಾರುತಕ್ಕಿಂತ ವೇಗವಾದುದು ಮತ್ತು ಅತ್ಯಂತ ಸಿಹಿಯಾದುದು ಯಾವುದು ಎಂದು ಕೇಳಿದಾಗ, ಸಾಧು ಅನುಕ್ರಮವಾಗಿ ಧೈರ್ಯ, ಕಲ್ಪನೆ ಮತ್ತು ಮಗುವಿನ ನಗು ಎಂದನು. ತಾನ್‍ಸೇನ್ ಸಂಗೀತದಲ್ಲಿ ಅವಿನಾಶಿ ಯಾವುದು ಎಂದು ಕೇಳಿದಾಗ, ಸಾಧು ಸ್ವರಗಳು ಎಂದು ಉತ್ತರಿಸಿದನು. ಹೀಗೆ ವಿದ್ವಾಂಸರು ಮತ್ತು ಸಾಧುವಿನ ನಡುವೆ ಸಂಭಾಷಣೆ ನಡೆಯಿತು.
ಈ) ಕೆಳಗಿನ ಮಾತುಗಳನ್ನು ಯಾರು ಯಾರಿಗೆ ಹೇಳಿದರು ತಿಳಿಸಿರಿ.
೧. “ಎಂಥ ಕೆಲಸ ಆಗಿಹೋಯಿತು.”
Answerಈ ಮಾತನ್ನು ಅಕ್ಬರನು ತನ್ನ ಮನಸ್ಸಿನಲ್ಲಿ ಅಂದುಕೊಂಡನು.
೨. “ಕಳೆದು ಹೋದುದನ್ನು ಮತ್ತೆ ಪಡೆಯಲಾಗದ್ದು ಯಾವುದು?”
Answerಈ ಮಾತನ್ನು ಅಬುಲ್ ಫಜಲ್ ಸಾಧುವಿಗೆ ಹೇಳಿದನು.
೩. “ನನ್ನ ಮಂತ್ರಿ ಬೀರಬಲ್ ಕಾಣೆಯಾಗಿದ್ದಾನೆ.”
Answerಈ ಮಾತನ್ನು ಅಕ್ಬರನು ಸಾಧುವಿಗೆ ಹೇಳಿದನು.
ಉ) ಪ್ರತಿ ಹೇಳಿಕೆಯ ಕೆಳಗೆ ನೀಡಿರುವ ನಾಲ್ಕು ಆಯ್ಕೆಗಳಲ್ಲಿ ಸರಿಯಾದುದನ್ನು ಆರಿಸಿ ಬರೆಯಿರಿ.
೧. ಅಕ್ಬರನಿಗೆ ಅಸಮಾಧಾನ ಉಂಟು ಮಾಡಿದ ವ್ಯಕ್ತಿ ____________
Answer೧. ಅಕ್ಬರನಿಗೆ ಅಸಮಾಧಾನ ಉಂಟು ಮಾಡಿದ ವ್ಯಕ್ತಿ ಈ) ಬೀರಬಲ್
ಅ) ಮಾನ್ ಸಿಂಗ್
ಆ) ತೋದರ ಮಲ್ಲ
ಇ) ತಾನ್ ಸೇನ್
ಈ) ಬೀರಬಲ್
೨. ಬೀರಬಲ್ಲನು ಅಕ್ಬರನ ಆಸ್ಥಾನಕ್ಕೆ ಬರುವಾಗ ಧರಿಸಿದ್ದ ವೇಷ ____________
Answer೨. ಬೀರಬಲ್ಲನು ಅಕ್ಬರನ ಆಸ್ಥಾನಕ್ಕೆ ಬರುವಾಗ ಧರಿಸಿದ್ದ ವೇಷ ಆ) ಸಾಧು
ಅ) ಮಂತ್ರಿ
ಆ) ಸಾಧು
ಇ) ವಿದ್ವಾಂಸ
ಈ) ವ್ಯಾಪಾರಿ
೩. ಮಾರುತಕ್ಕಿಂತ ವೇಗವಾದುದು ____________
Answer೩. ಮಾರುತಕ್ಕಿಂತ ವೇಗವಾದುದು ಇ) ಕಲ್ಪನೆ
ಅ) ಜ್ಞಾನ
ಆ) ಧೈರ್ಯ
ಇ) ಕಲ್ಪನೆ
ಈ) ಸ್ವಾರ್ಥ
III. ಭಾಷಾಭ್ಯಾಸ :
ಅ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.
೧. ಅಸಮಾಧಾನ x ________________
Answer೧. ಅಸಮಾಧಾನ x ಸಮಾಧಾನ
೨. ಮಿತ್ರ x ________________
Answer೨. ಮಿತ್ರ x ಶತ್ರು
೩. ಸೇವಕ x ________________
Answer೩. ಸೇವಕ x ಯಜಮಾನ
೪. ಬುದ್ಧಿವಂತ x ________________
Answer೪. ಬುದ್ಧಿವಂತ x ಮೂರ್ಖ
೫. ಜ್ಞಾನ x ________________
Answer೫. ಜ್ಞಾನ x ಅಜ್ಞಾನ
೬. ಸಿಹಿ x ________________
Answer೬. ಸಿಹಿ x ಕಹಿ
೭. ನಗು x ________________
Answer೭. ನಗು x ಅಳು
೮. ಸ್ವಾರ್ಥ x ________________
Answer೮. ಸ್ವಾರ್ಥ x ನಿಸ್ವಾರ್ಥ
ಆ) ಕೆಳಗಿನ ಪದಗಳನ್ನು ನಿಮ್ಮ ಸ್ವಂತ ವಾಕ್ಯಗಳಲ್ಲಿ ಬಳಸಿ ಬರೆಯಿರಿ.
೧. ತವಕ :________________________________________________________
Model sentenceತವಕ: ನನಗೆ ಹೊಸ ಸೈಕಲ್ ತರುವರೆಂದು ತಿಳಿದು ತುಂಬಾ ತವಕವಾಯಿತು.
೨. ಮೇಧಾವಿ :________________________________________________________
Model sentenceಮೇಧಾವಿ: ನಮ್ಮ ತರಗತಿಯಲ್ಲಿ ರಮೇಶನು ತುಂಬಾ ಮೇಧಾವಿ.
೩. ತೇಜಸ್ವಿ :________________________________________________________
Model sentenceತೇಜಸ್ವಿ: ನಮ್ಮ ಶಾಲೆಯ ಮುಖ್ಯೋಪಾಧ್ಯಾಯರು ತುಂಬಾ ತೇಜಸ್ವಿಯಾಗಿ ಕಾಣುತ್ತಾರೆ.
೪. ಉಡುಗೊರೆ:________________________________________________________
Model sentenceಉಡುಗೊರೆ: ನನ್ನ ಹುಟ್ಟುಹಬ್ಬಕ್ಕೆ ಅಪ್ಪ ಒಂದು ಸುಂದರವಾದ ಉಡುಗೊರೆ ತಂದರು.
೫. ಜ್ಞಾನ :________________________________________________________
Model sentenceಜ್ಞಾನ: ಪುಸ್ತಕಗಳನ್ನು ಓದುವುದರಿಂದ ನಮ್ಮ ಜ್ಞಾನ ಹೆಚ್ಚುತ್ತದೆ.
ಇ) ಇಲ್ಲಿರುವ ಪದಗಳನ್ನು ಬಿಡಿಸಿ ಬರೆಯಿರಿ.
೧. ಅತ್ಯುತ್ತಮ = ________________ + ________________
Answer೧. ಅತ್ಯುತ್ತಮ = ಅತಿ + ಉತ್ತಮ
೨. ಅವನೊಬ್ಬ = ________________ + ________________
Answer೨. ಅವನೊಬ್ಬ = ಅವನು + ಒಬ್ಬ
೩. ಮುಖವನ್ನು = ________________ + ________________
Answer೩. ಮುಖವನ್ನು = ಮುಖ + ಅನ್ನು
೪. ಕಾಣೆಯಾಗು = ________________ + ________________
Answer೪. ಕಾಣೆಯಾಗು = ಕಾಣೆ + ಆಗು
IV. ಸೈದ್ಧಾಂತಿಕ ವ್ಯಾಕರಣ :
ಅ) ಲೇಖನ ಚಿಹ್ನೆಗಳು.
ಬರವಣಿಗೆಯಲ್ಲಿ ಲೇಖನ ಚಿಹ್ನೆಗಳು ಅತ್ಯಂತ ಮಹತ್ವವನ್ನು ಪಡೆಯುತ್ತವೆ. ಮಾತಿನಲ್ಲಿ ಧ್ವನಿಯ ಏರಿಳಿತಗಳ ಮೂಲಕ ನಮ್ಮ ಭಾವನೆಗಳನ್ನು ಸ್ಪಷ್ಟವಾಗಿ ತಿಳಿಸಬಹುದು. ಅದೇರೀತಿ ಲೇಖನ ಚಿಹ್ನೆಗಳ ಮೂಲಕ ಬರವಣಿಗೆಯಲ್ಲಿ ನಮ್ಮ ಭಾವನೆಗಳನ್ನು ಸ್ಪಷ್ಟವಾಗಿ ತಿಳಿಸಬಹುದಾಗಿದೆ. ಅವುಗಳನ್ನು ಅರಿತು ಬರವಣಿಗೆಯಲ್ಲಿ ಬಳಸುವುದನ್ನು ರೂಢಿಮಾಡಿಕೊಳ್ಳಬೇಕು.
೧. ಪೂರ್ಣವಿರಾಮ (.) - ಕ್ರಿಯೆಯಿಂದ ಪೂರ್ಣಗೊಂಡ ವಾಕ್ಯದ ಕೊನೆಯಲ್ಲಿ ಚಿಹ್ನೆಯನ್ನು ಬಳಸಬೇಕು.
೨. ಅರ್ಧವಿರಾಮ (;) - ಒಂದು ಪ್ರಧಾನ ವಾಕ್ಯಕ್ಕೆ ಅಧೀನವಾಗುವ ಉಪವಾಕ್ಯಗಳ ಕೊನೆಯಲ್ಲಿ ಅರ್ಧವಿರಾಮವನ್ನು ಬಳಸಲಾಗುತ್ತದೆ.
೩. ಅಲ್ಪವಿರಾಮ (,) - ಕರ್ತೃ, ಕರ್ಮ, ಕ್ರಿಯಾ ಪದಗಳಿಗೆ ಬೇರೆ ಬೇರೆ ವಿಶೇಷಣಗಳನ್ನು ನೀಡಿದಾಗ ಅಲ್ಪವಿರಾಮವನ್ನು ಬಳಸಲಾಗುತ್ತದೆ.
೪. ಪ್ರಶ್ನಾರ್ಥಕ (?) - ಪ್ರಶ್ನೆ ರೂಪದ ಪದ ಮತ್ತು ವಾಕ್ಯಗಳ ಮುಂದೆ ಬಳಸುವ ಚಿಹ್ನೆ ಇದಾಗಿದೆ.
೫. ಭಾವಸೂಚಕ (!) - ಅಚ್ಚರಿ, ಖೇದ, ಸಂತೋಷ, ವಿಷಾದ ಇತ್ಯಾದಿ ಭಾವಗಳನ್ನು ಸೂಚಿಸುವ ಸಂದರ್ಭಗಳಲ್ಲಿ ಭಾವಸೂಚಕ ಚಿಹ್ನೆ ಬಳಸಬೇಕು.
೬. ಉದ್ಧರಣ (“ ”) - ಒಬ್ಬರು ಹೇಳಿದ ಮಾತನ್ನು ಯಥಾವತ್ತಾಗಿ ಬರೆಯುವಾಗ ಈ ಚಿಹ್ನೆಯನ್ನು ಬಳಸಲಾಗುವುದು.
೭. ಆವರಣ ಚಿಹ್ನೆ ( ) - ಒಂದು ಪದವನ್ನೋ ವಾಕ್ಯವನ್ನೋ ಹೇಳಿ ಅದಕ್ಕೆ ಸಮನಾರ್ಥಕ ಪದವನ್ನೋ ವಾಕ್ಯವನ್ನೋ ಹೇಳುವಾಗ ಈ ಚಿಹ್ನೆಯನ್ನು ಬಳಸಲಾಗುತ್ತದೆ.
೮. ವಿವರಣ ಚಿಹ್ನೆ (:) - ಒಂದು ಅಭಿಪ್ರಾಯದ ವಿವರಣೆಯನ್ನು ನೀಡುವಾಗ ಈ ಚಿಹ್ನೆಯನ್ನು ಬಳಸಬೇಕು.
ಆ) ಈ ಕೆಳಗಿನ ವಾಕ್ಯಗಳಿಗೆ ಲೇಖನ ಚಿಹ್ನೆಗಳನ್ನು ಬಳಸಿ ಬರೆಯಿರಿ.
೧. ಕುವೆಂಪು ಬೇಂದ್ರೆ ಕಾರಂತ ಮಾಸ್ತಿ ವಿನಾಯಕ ಅನಂತಮೂರ್ತಿ ಕಾರ್ನಾಡ ಕಂಬಾರ ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು
೨. ಬಸವಣ್ಣನವರು ದಯವೇ ಧರ್ಮದ ಮೂಲ ಎಂದು ಹೇಳಿದರು
Answerಬಸವಣ್ಣನವರು “ದಯವೇ ಧರ್ಮದ ಮೂಲ” ಎಂದು ಹೇಳಿದರು.
೩. ಪಂಪ ಯಾವ ಶತಮಾನದ ಕವಿ
Answerಪಂಪ ಯಾವ ಶತಮಾನದ ಕವಿ?
೪. ಅಯ್ಯೋ ವಿಧಿ ಬರಹವನ್ನು ಯಾರೂ ಅಳಿಸಲಾರರು
Answerಅಯ್ಯೋ! ವಿಧಿ ಬರಹವನ್ನು ಯಾರೂ ಅಳಿಸಲಾರರು.
ಇ) ಈ ಕೆಳಗಿನ ವಾಕ್ಯಗಳನ್ನು ಪ್ರಶ್ನಾರ್ಥಕ ವಾಕ್ಯಗಳನ್ನಾಗಿ ಪರಿವರ್ತಿಸಿರಿ.
೧. ಅಕ್ಬರನಿಗೆ ಬೀರಬಲ್ಲನ ಮೇಲೆ ಅಸಮಾಧಾನ ಉಂಟಾಯಿತು.
Answerಅಕ್ಬರನಿಗೆ ಬೀರಬಲ್ಲನ ಮೇಲೆ ಅಸಮಾಧಾನ ಉಂಟಾಯಿತೇ?
೨. ಅಕ್ಬರ್ ಬೀರಬಲ್ಲನಿಗಾಗಿ ಹುಡುಕಾಡಿಸಿದ.
Answerಅಕ್ಬರ್ ಬೀರಬಲ್ಲನಿಗಾಗಿ ಹುಡುಕಾಡಿಸಿದನೇ?
೩. ಸಾಧುವಿನ ವೇಷದಲ್ಲಿ ಬಂದಿದ್ದವನು ಬೀರಬಲ್ಲನೇ ಆಗಿದ್ದ.
Answerಸಾಧುವಿನ ವೇಷದಲ್ಲಿ ಬಂದಿದ್ದವನು ಬೀರಬಲ್ಲನೇ ಆಗಿದ್ದನೇ?
V. ಚಟುವಟಿಕೆಗಳು :
೧. ಕರ್ಣ-ದುರ್ಯೋಧನ, ಕೃಷ್ಣ-ಕುಚೇಲ ಮೊದಲಾದವರ ಕಥೆಗಳನ್ನು ಓದಿ ಆತ್ಮೀಯ ಸ್ನೇಹದ ಮಹತ್ವವನ್ನು ತಿಳಿಯಿರಿ.
೨. ಚೆನ್ನವೀರ ಕಣವಿ ಅವರ ‘ಗೆಳೆತನ’ ಪದ್ಯವನ್ನು ಓದಿರಿ.
೩. ಗೆಳೆತನದ ಮಹತ್ವ ಸಾರುವ ಹೇಳಿಕೆಗಳನ್ನು ಸಂಗ್ರಹಿಸಿರಿ.
೪. ಗೆಳೆತನದ ಲಕ್ಷಣಗಳನ್ನು ಪಟ್ಟಿಮಾಡಿರಿ.