ಗದ್ಯ (prose) · ಪ್ರಕಾಶ ಕಂಬತ್ತಳ್ಳಿ
ಪಠ್ಯFull text
ಅಭ್ಯಾಸexercises from the textbook
Model answers — a guide, not the only correct wording. Check with your teacher.
I. ಪದಗಳ ಅರ್ಥ ತಿಳಿಯಿರಿ :
ಖುಷಿ - ಸಂತೋಷ; ಆನಂದ.
ನೆರೆಯವ - ಸಮೀಪದವ; ಅಕ್ಕಪಕ್ಕದವನು.
ಪರಿಪರಿಯಾಗಿ - ನಾನಾ ವಿಧದಲ್ಲಿ
ವಂಶಾವಳಿ - ಪೀಳಿಗೆ
ಸೋಮಾರಿ - ಮೈಗಳ್ಳತನ; ಆಲಸ್ಯ.
ಜಾಲಾಡು - ಶೋಧಿಸು; ಹುಡುಕು.
ಪರಂಪರೆ - ಕುಲ; ವಂಶ.
ಬೀರು - ಕಪಾಟು
ಸಂತೆ - ವಸ್ತುಗಳನ್ನು ಕೊಂಡುಕೊಳ್ಳುವುದಕ್ಕಾಗಿ ಸೇರುವ ಜನರ ಗುಂಪು.
ಹರಟೆ - ಕೆಲಸಕ್ಕೆ ಬಾರದ ಮಾತು.
II. ಪ್ರಶ್ನೆಗಳು :
ಅ) ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.
೧. ನೆರೆಯವನು ನಸಿರುದ್ದೀನನ ಕತ್ತೆಯನ್ನು ಕೇಳಿದ್ದೇಕೆ?
Answerನೆರೆಯವನಿಗೆ ಕೆಲವು ಸಾಮಾನು ಸಾಗಿಸಬೇಕಾಗಿದ್ದರಿಂದ ಅವನು ನಸಿರುದ್ದೀನನ ಕತ್ತೆಯನ್ನು ಕೇಳಿದನು.
೨. ಕತ್ತೆ ಅರಚುವುದನ್ನು ಕೇಳಿದ ನೆರೆಯವನು ನಸಿರುದ್ದೀನನಿಗೆ ಏನೆಂದು ಹೇಳಿದನು?
Answerನೆರೆಯವನು ಕತ್ತೆ ನಾನಿಲ್ಲಿದ್ದೇನೆ ಅಂತ ಕೂಗಿ ಹೇಳುತ್ತಿದೆಯಲ್ಲಾ ಎಂದು ವ್ಯಂಗ್ಯವಾಗಿ ಹೇಳಿದನು.
೩. ನಸಿರುದ್ದೀನನು ತನಗೆ ಎಷ್ಟು ವಯಸ್ಸಾಗಿದೆ ಎಂದನು?
Answerನಸಿರುದ್ದೀನನು ತನಗೆ ನಲವತ್ತು ವರ್ಷ ವಯಸ್ಸಾಗಿದೆ ಎಂದನು.
೪. ನಸಿರುದ್ದೀನನ ವಯಸ್ಸಿನ ಬಗ್ಗೆ ಆತನ ಸ್ನೇಹಿತರಿಗೆ ಅನುಮಾನ ಏಕೆ ಬಂತು?
Answerಅವನ ಸುಕ್ಕುಗಟ್ಟಿದ ಮುಖ ಮತ್ತು ಬಿಳಿಯ ಕೂದಲು ನೋಡಿದರೆ ನಲವತ್ತು ವಯಸ್ಸಿನವನಂತೆ ಕಾಣುತ್ತಿರಲಿಲ್ಲವಾದ್ದರಿಂದ ಸ್ನೇಹಿತರಿಗೆ ಅನುಮಾನ ಬಂತು.
೫. ನಸಿರುದ್ದೀನನು ಬೀರುವಿನಲ್ಲಿ ಬಚ್ಚಿಟ್ಟುಕೊಂಡದ್ದು ಏಕೆಂದರೆ ಕಳ್ಳನಿಗೆ ಹೇಳಿದನು?
Answerಮನೆಯಲ್ಲಿ ಕದ್ದೊಯ್ಯಲು ಏನೂ ಸಿಗಲಿಲ್ಲವಾದ್ದರಿಂದ ನಾಚಿಕೆಯಾಗಿ ಮುಖ ತೋರಿಸಲಾರದೆ ಬೀರುವಿನಲ್ಲಿ ಬಚ್ಚಿಟ್ಟುಕೊಂಡಿದ್ದೇನೆ ಎಂದು ನಸಿರುದ್ದೀನನು ಕಳ್ಳನಿಗೆ ಹೇಳಿದನು.
೬. ನಸಿರುದ್ದೀನನು ತನ್ನ ಕತ್ತೆಯನ್ನು ಏಕೆ ಮಾರಿದನು?
Answerನಸಿರುದ್ದೀನನ ಕತ್ತೆ ತೀರಾ ಸೋಮಾರಿಯಾಗಿ ಏನುಮಾಡಿದರೂ ಬದಲಾಗದಿದ್ದುದರಿಂದ ಬೇಸತ್ತು ಅವನು ಅದನ್ನು ಮಾರಿದನು.
೭. ನಸಿರುದ್ದೀನನು ತನ್ನ ಕತ್ತೆಯನ್ನು ತಾನೇ ಕೊಂಡದ್ದು ಏಕೆ?
Answerಕತ್ತೆಯ ಗುಣಗಾನ ಕೇಳಿ ಅದು ಇಷ್ಟೆಲ್ಲಾ ಗುಣಗಳನ್ನು ಹೊಂದಿದೆಯೇ ಎಂದು ಆಶ್ಚರ್ಯವಾಗಿ, ಬೇರೆಯವರು ಕೊಂಡುಕೊಂಡಾರೆಂಬ ಆತಂಕದಿಂದ ನಸಿರುದ್ದೀನನು ತನ್ನ ಕತ್ತೆಯನ್ನು ತಾನೇ ಕೊಂಡನು.
ಆ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.
೧. ನಸಿರುದ್ದೀನನು ನೆರೆಯವನಿಗೆ ಕತ್ತೆ ಕೊಡಲು ನಿರಾಕರಿಸಿದ ಪ್ರಸಂಗವನ್ನು ವಿವರಿಸಿ.
Answerನೆರೆಯವನು ಸಾಮಾನು ಸಾಗಿಸಲು ಕತ್ತೆ ಕೇಳಿದಾಗ ನಸಿರುದ್ದೀನನು ತನ್ನ ಬಳಿ ಕತ್ತೆ ಇಲ್ಲ ಎಂದನು. ಆಗ ಮನೆಯಲ್ಲಿದ್ದ ಕತ್ತೆ ಜೋರಾಗಿ ಅರಚಿತು. ನೆರೆಯವನು ವ್ಯಂಗ್ಯವಾಗಿ ಹೇಳಿದಾಗ ನಸಿರುದ್ದೀನನು ದೊಡ್ಡಮನುಷ್ಯನ ಮಾತಿಗಿಂತ ಕತ್ತೆಯ ಮಾತಿನಲ್ಲಿ ನಂಬಿಕೆ ಹೆಚ್ಚೋ ಎಂದು ಕೋಪದಿಂದ ಕೇಳಿದನು.
೨. ನಸಿರುದ್ದೀನನು ತನ್ನ ವಯಸ್ಸಿನ ಬಗ್ಗೆ ಏನೆಂದು ಸಮರ್ಥನೆ ನೀಡಿದನು?
Answerಹತ್ತು ವರ್ಷದ ಹಿಂದೆಯೂ ತಾನು ನಲವತ್ತು ವರ್ಷ ಎಂದಿದ್ದೆ ಎಂದು ಆತ ಹೇಳಿದ. ತಾನು ಆಗೊಂದು ಈಗೊಂದು ಮಾತನಾಡುವವನಲ್ಲ, ನನ್ನದು ಯಾವಾಗಲೂ ಒಂದೇ ಮಾತು ಎಂದು ಸಮರ್ಥನೆ ನೀಡಿದನು.
೩. ಕಳ್ಳರು ನಸಿರುದ್ದೀನನ ಮನೆಗೆ ನುಗ್ಗಿದ ಪ್ರಸಂಗವನ್ನು ವಿವರಿಸಿ.
Answerಒಂದು ರಾತ್ರಿ ನಾಲ್ಕೈದು ಮಂದಿ ಕಳ್ಳರು ನಸಿರುದ್ದೀನನ ಮನೆಗೆ ನುಗ್ಗಿದರು. ದೂರದಿಂದ ಗಮನಿಸಿದ ನಸಿರುದ್ದೀನ್ ಬೀರುವಿನಲ್ಲಿ ಬಾಗಿಲು ಹಾಕಿಕೊಂಡು ಅಡಗಿಕೊಂಡನು. ಕಳ್ಳರು ಮನೆಯನ್ನೆಲ್ಲಾ ಜಾಲಾಡಿದರೂ ಏನೂ ಸಿಗದೆ, ಒಬ್ಬ ಕಳ್ಳ ಬೀರು ತೆರೆದಾಗ ನಸಿರುದ್ದೀನ್ ಅಲ್ಲಿ ಮುದುಡಿ ಕುಳಿತಿದ್ದನು.
೪. ಕತ್ತೆಯನ್ನು ಕೊಂಡವನು ಕತ್ತೆಯನ್ನು ಏನೆಂದು ಗುಣಗಾನ ಮಾಡಿದನು?
Answerಕತ್ತೆಯನ್ನು ಕೊಂಡವನು ಅದನ್ನು ಸಂತೆಯಲ್ಲಿ ಹರಾಜು ಹಾಕಿದನು. ಅವನು ಕತ್ತೆಯ ಕೆಲಸ ಮಾಡುವ ರೀತಿ, ಸಾಮರ್ಥ್ಯ, ಪರಂಪರೆ, ವಂಶಾವಳಿ ಮತ್ತು ಮುಂದೆ ಹಾಕುವ ಮರಿಗಳು ಇತ್ಯಾದಿ ಗುಣಗಳನ್ನು ವರ್ಣಿಸಿ ಗುಣಗಾನ ಮಾಡಿದನು.
೫. ನಸಿರುದ್ದೀನನು ತನ್ನ ಕತ್ತೆಯನ್ನು ತಾನೇ ಕೊಂಡುಕೊಂಡ ಪ್ರಸಂಗ ಯಾವುದು?
Answerನಸಿರುದ್ದೀನನು ಸೋಮಾರಿಯಾದ ಕತ್ತೆಯನ್ನು ನಲವತ್ತು ನಾಣ್ಯಗಳಿಗೆ ಮಾರಿದನು. ಕೊಂಡವನು ಅದನ್ನು ಸಂತೆಯಲ್ಲಿ ಹರಾಜು ಹಾಕಿ ಗುಣಗಾನ ಮಾಡಿದನು. ಆಶ್ಚರ್ಯ ಮತ್ತು ಆತಂಕದಿಂದ ನಸಿರುದ್ದೀನನು ತಾನೇ ಎಪ್ಪತ್ತು ನಾಣ್ಯಗಳಿಗೆ ಕೂಗಿ ಕತ್ತೆಯನ್ನು ಕೊಂಡುಕೊಂಡನು.
ಇ) ಕೆಳಗಿನ ಮಾತುಗಳನ್ನು ಯಾರು ಯಾರಿಗೆ ಹೇಳಿದರು?
೧. “ಇಲ್ಲ ಮಿತ್ರ, ಈಗ ನನ್ನ ಬಳಿ ಯಾವ ಕತ್ತೆಯೂ ಇಲ್ಲ.”
Answerನಸಿರುದ್ದೀನನು ನೆರೆಯವನಿಗೆ ಹೇಳಿದನು.
೨. “ನಾನು ಆಗೊಂದು ಈಗೊಂದು ಮಾತನಾಡುವವನಲ್ಲ.”
Answerನಸಿರುದ್ದೀನನು ಸ್ನೇಹಿತನಿಗೆ ಹೇಳಿದನು.
೩. “ಅರೇ! ಇಲ್ಲೇನು ಮಾಡುತ್ತಿದ್ದೀಯಾ?”
Answerಕಳ್ಳನು ನಸಿರುದ್ದೀನನಿಗೆ ಹೇಳಿದನು.
III. ಭಾಷಾಭ್ಯಾಸ :
ಅ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.
೧. ಆತಂಕ X ___________
Answerಆತಂಕ X ನಿಶ್ಚಿಂತೆ
೨. ದೂರ X ___________
Answerದೂರ X ಹತ್ತಿರ
೩. ಧೈರ್ಯ X ___________
Answerಧೈರ್ಯ X ಭಯ
೪. ನಂಬಿಕೆ X ___________
Answerನಂಬಿಕೆ X ಅಪನಂಬಿಕೆ
೫. ರಾತ್ರಿ X ___________
Answerರಾತ್ರಿ X ಹಗಲು
೬. ಮಿತ್ರ X ___________
Answerಮಿತ್ರ X ಶತ್ರು
೭. ಸುಂದರ X ___________
Answerಸುಂದರ X ಕುರೂಪ
೮. ಹೊಗಳು X ___________
Answerಹೊಗಳು X ತೆಗಳು
ಆ) ಕೆಳಗಿನ ಪದಗಳನ್ನು ಸ್ವಂತ ವಾಕ್ಯಗಳಲ್ಲಿ ಬಳಸಿ ಬರೆಯಿರಿ.
೧. ಆತಂಕ : __________________________________________________________________
Model sentenceಆತಂಕ: ಪರೀಕ್ಷೆಯ ಫಲಿತಾಂಶ ಬರುವವರೆಗೂ ನನಗೆ ಆತಂಕವಿತ್ತು.
೨. ನೆರೆಯವ : __________________________________________________________________
Model sentenceನೆರೆಯವ: ನಮ್ಮ ನೆರೆಯವರು ನನಗೆ ಸಿಹಿ ಕೊಟ್ಟರು.
೩. ಖುಷಿ : __________________________________________________________________
Model sentenceಖುಷಿ: ಗೆಳೆಯನೊಂದಿಗೆ ಆಟವಾಡಿದಾಗ ನನಗೆ ತುಂಬಾ ಖುಷಿಯಾಯಿತು.
೪. ನಾಚಿಕೆ : __________________________________________________________________
Model sentenceನಾಚಿಕೆ: ತಪ್ಪು ಮಾಡಿದಾಗ ನನಗೆ ನಾಚಿಕೆಯಾಯಿತು.
೫. ಜಾಲಾಡು : __________________________________________________________________
Model sentenceಜಾಲಾಡು: ನನ್ನ ಪೆನ್ಸಿಲ್ ಸಿಗದೆ ಶಾಲಾ ಚೀಲವನ್ನೆಲ್ಲಾ ಜಾಲಾಡಿದೆ.
ಇ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ.
೧. ವಯಸ್ಸೆಷ್ಟು = ___________ + ___________
Answerವಯಸ್ಸು + ಎಷ್ಟು
೨. ಆಗೊಂದು = ___________ + ___________
Answerಆಗ + ಒಂದು
೩. ನಾನಿಲ್ಲಿದ್ದೇನೆ = ___________ + ___________
Answerನಾನು + ಇಲ್ಲಿದ್ದೇನೆ
೪. ನಾಲ್ಕೈದು = ___________ + ___________
Answerನಾಲ್ಕು + ಐದು
೫. ಕದ್ದೊಯ್ಯಲು = ___________ + ___________
Answerಕದ್ದು + ಒಯ್ಯಲು
ಈ) ಕೆಳಗಿನ ಪದಗಳಿಗೆ ಸಮನಾರ್ಥಕ ಪದಗಳನ್ನು ಬರೆಯಿರಿ.
೧. ಖುಷಿ - ___________
Answerಖುಷಿ - ಸಂತೋಷ
೨. ಸ್ನೇಹಿತ - ___________
Answerಸ್ನೇಹಿತ - ಗೆಳೆಯ
೩. ಆತಂಕ - ___________
Answerಆತಂಕ - ಚಿಂತೆ
ಉ) ಕೆಳಗಿನ ವಾಕ್ಯಗಳಲ್ಲಿರುವ ಪದಗಳನ್ನು ಅರ್ಥಪೂರ್ಣವಾಗಿ ಜೋಡಿಸಿ ಬರೆಯಿರಿ.
೧. ನಂಬಲಿಲ್ಲ ಅವನ ಸ್ನೇಹಿತರು ಮಾತನ್ನು.
Answerಸ್ನೇಹಿತರು ಅವನ ಮಾತನ್ನು ನಂಬಲಿಲ್ಲ.
೨. ಕೂಗಿ ಅಂತ ನಾನಿಲ್ಲಿದ್ದೇನೆ ಹೇಳುತ್ತಿದೆಯಲ್ಲಾ ಕತ್ತೆ.
Answerಕತ್ತೆ ನಾನಿಲ್ಲಿದ್ದೇನೆ ಅಂತ ಕೂಗಿ ಹೇಳುತ್ತಿದೆಯಲ್ಲಾ.
೩. ಮಂದಿ ನಾಲ್ಕೈದು ಮನೆಗೆ ನಸಿರುದ್ದೀನನ ಕಳ್ಳರು ನುಗ್ಗಿದರು.
Answerನಾಲ್ಕೈದು ಮಂದಿ ಕಳ್ಳರು ನಸಿರುದ್ದೀನನ ಮನೆಗೆ ನುಗ್ಗಿದರು.
೪. ತೀರಾ ಕತ್ತೆ ನಸಿರುದ್ದೀನನ ಬರಬರುತ್ತಾ ಸೋಮಾರಿಯಾಗತೊಡಗಿತು.
Answerನಸಿರುದ್ದೀನನ ಕತ್ತೆ ಬರಬರುತ್ತಾ ತೀರಾ ಸೋಮಾರಿಯಾಗತೊಡಗಿತು.
IV. ಚಟುವಟಿಕೆಗಳು :
೧. ನಸಿರುದ್ದೀನನ ಇನ್ನಿತರ ಕತೆಗಳನ್ನು ಓದಿರಿ.
೨. ಇಲ್ಲಿರುವ ಕತೆಗಳನ್ನು ನಿಮ್ಮದೇ ದಾಟಿಯಲ್ಲಿ ಇತರರಿಗೆ ಹೇಳಿ ಸಂತೋಷ ಹಂಚಿಕೊಳ್ಳಿರಿ.
೩. ನಿಮ್ಮ ಅನುಭವಕ್ಕೆ ಬಂದ ಹಾಸ್ಯಮಯ ಪ್ರಸಂಗಗಳನ್ನು ಬರೆದು ಶಿಕ್ಷಕರ ಮಾರ್ಗದರ್ಶನ ಪಡೆಯಿರಿ.