CRECT Education

Lesson 12: ಪ್ರವಾಸ ಹೋಗೋಣ (Let's Go on a Trip) - Learn the Story

Description

Join a school trip to Shravanabelagola and learn Kannada vocabulary from the railway station.

ಗದ್ಯ (prose) · ಸಮಿತಿ ರಚನೆ (Committee-authored)

ಪಠ್ಯFull text

ಬೇಗೂರಿನ ಪ್ರಾಥಮಿಕ ಶಾಲೆಯ ಮಕ್ಕಳನ್ನು ಶಿಕ್ಷಕರು ಪ್ರವಾಸಕ್ಕೆ ಕರೆದುಕೊಂಡು ಹೋಗಲು ತೀರ್ಮಾನಿಸಿದರು. ಮಕ್ಕಳ ಇಚ್ಛೆಯಂತೆ ರೈಲಿನಲ್ಲಿ ಶ್ರವಣಬೆಳಗೊಳಕ್ಕೆ ಪ್ರವಾಸ ಹೊರಡಲು ಸಿದ್ಧರಾಗಿ ರೈಲುನಿಲ್ದಾಣದ ಹತ್ತಿರ ಬಂದರು. ಶಿಕ್ಷಕರು : ಮಕ್ಕಳೇ, ಇಬ್ಬಿಬ್ಬರಂತೆ ಕೈ ಹಿಡಿದು ನನ್ನ ಹಿಂದೆ ಸಾಲಾಗಿ ಬನ್ನಿರಿ. ಈಗ ರೈಲು ನಿಲ್ದಾಣದ ಒಳಗೆ ಹೋಗೋಣ. ಶಾಲಿನಿ : ಗುರುಗಳೆ ಇದೇನು? ಇಷ್ಟುದ್ದದ ಜನರ ಸಾಲು ಇದೆ. ಶಿಕ್ಷಕರು : ಅದು ಟಿಕೆಟ್ ತೆಗೆದುಕೊಳ್ಳಲು ನಿಂತಿರುವವರ ಸಾಲು. ನಾನು ಸಹ ನಿಮ್ಮೆಲ್ಲರಿಗೂ ಟಿಕೆಟ್ ತೆಗೆದುಕೊಳ್ಳಲು ಹೋಗುತ್ತೇನೆ. ಥಾಮಸ್ : ಗುರುಗಳೆ, ಇವರೆಲ್ಲರೂ ನಮ್ಮಂತೆಯೇ ಪ್ರವಾಸಕ್ಕೆ ಹೊರಟಿರುವವರೇ? ಶಿಕ್ಷಕರು : ಅವರೆಲ್ಲಾ ಬೇರೆಬೇರೆ ಸ್ಥಳಗಳಿಗೆ ಹೋಗಲು ಟಿಕೆಟ್ ತೆಗೆದುಕೊಳ್ಳಲು ನಿಂತಿದ್ದಾರೆ. ಕೌಸ್ತುಭ : ಎಲ್ಲರಿಗೂ ಒಂದೇ ಕಡೆ ಟಿಕೆಟ್ ಹೇಗೆ ಕೊಡ್ತಾರೆ? ಶಿಕ್ಷಕರು : ಅಲ್ಲಿ ನೋಡಿ, ಟಿಕೆಟ್ ಕೌಂಟರಿನಲ್ಲಿ ಕುಳಿತಿರುವವರು ಕಂಪ್ಯೂಟರ್ ಮೂಲಕ ಕೇಳಿದ ಸ್ಥಳಗಳಿಗೆ ಟಿಕೆಟ್ ನೀಡುತ್ತಿದ್ದಾರೆ. ಅಬ್ದುಲ್ : ಎಲ್ಲರೂ ಒಂದೇ ಕಡೆಯೇ ರೈಲು ಹತ್ತಬೇಕೇ ಗುರುಗಳೆ? ಶಿಕ್ಷಕರು : ಇಲ್ಲಾ ಇಲ್ಲಾ. ಬೇರೆ ಬೇರೆ ರೈಲುಗಳಿಗೆ ನಿಗದಿತ ಪ್ಲಾಟ್‌ಫಾರಂಗಳಿರುತ್ತವೆ. ಅಲ್ಲಿಗೆ ರೈಲುಗಳು ಬಂದು ನಿಲ್ಲುತ್ತವೆ. ಮಕ್ಕಳು : ಗುರುಗಳೆ, ಪ್ಲಾಟ್‌ಫಾರಂ ಅಂದರೇನು? ಶಿಕ್ಷಕರು : ರೈಲು ಬಂದು ನಿಲ್ಲಲು ಮತ್ತು ಹೊರಡಲು ನಿಗದಿಪಡಿಸಿರುವ ಸ್ಥಳವನ್ನು ಪ್ಲಾಟ್‌ಫಾರಂ ಎನ್ನುತ್ತಾರೆ. ಶಾಲಿನಿ : ಯಾವ ರೈಲು ಯಾವ ಪ್ಲಾಟ್‌ಫಾರಂನಲ್ಲಿ ನಿಲ್ಲುತ್ತದೆ ಎಂದು ಹೇಗೆ ತಿಳಿಯುವುದು? ಶಿಕ್ಷಕರು : ರೈಲು ಬರುವ ಮೊದಲು ಧ್ವನಿವರ್ಧಕದಲ್ಲಿ ಯಾವ ರೈಲು ಯಾವ ಪ್ಲಾಟ್‌ಫಾರಂನಲ್ಲಿ ನಿಲ್ಲುತ್ತದೆ ಎಂಬುದನ್ನು ಬಿತ್ತರಿಸುತ್ತಿರುತ್ತಾರೆ. ಜೊತೆಗೆ ಹೊರಗಡೆ ಇರುವ ಸೂಚನಾ ಫಲಕದಲ್ಲಿಯೂ ನಮೂದಿಸಿರುತ್ತಾರೆ. ಮುಖ್ಯಶಿಕ್ಷಕರು : ಎಲ್ಲರೂ ನಾಲ್ಕನೆಯ ಪ್ಲಾಟ್‌ಫಾರಂಗೆ ನಡೆಯಿರಿ. ಅಲ್ಲಿಂದ ನಮ್ಮ ರೈಲು ಹೊರಡುತ್ತದೆ. ಶಿಕ್ಷಕರು : ಇಲ್ಲಿ ನೋಡಿ. ಪ್ರಯಾಣಿಕರ ಅನುಕೂಲಕ್ಕಾಗಿ ವಿಶ್ರಾಂತಿ ಕೊಠಡಿ, ಲಗೇಜು ರೂಮ್, ಶೌಚಾಲಯ, ಕುಡಿಯುವ ನೀರು, ಹೋಟೆಲ್ ಇತ್ಯಾದಿ ವ್ಯವಸ್ಥೆಗಳು ಇವೆ. ಬೇಗಂ : ಗುರುಗಳೆ, ಈ ರೀತಿ ಕಬ್ಬಿಣದ ಕಂಬಿಗಳನ್ನು ಒಂದರ ಪಕ್ಕ ಒಂದರಂತೆ ಏಕೆ ಜೋಡಿಸಿದ್ದಾರೆ? ಶಿಕ್ಷಕರು : ಅವು ರೈಲು ಕಂಬಿಗಳು. ಆ ಕಂಬಿಗಳ ಮೇಲೆಯೇ ರೈಲು ಚಲಿಸುತ್ತದೆ. ಮಕ್ಕಳು : ಹಾಗಾದರೆ ರೈಲು ಹೋಗಬೇಕಾದರೆ ಕಂಬಿ ಇರಲೇಬೇಕೇ ಗುರುಗಳೆ? ಶಿಕ್ಷಕರು : ಹೌದು. ಬಸ್ಸುಗಳಂತೆ ರಸ್ತೆಯಲ್ಲಿ ಇವು ಚಲಿಸುವುದಿಲ್ಲ. ರೈಲುಗಳಿಗೆ ಕಂಬಿಗಳು ಬೇಕೇ ಬೇಕು. ಪಲ್ಲವಿ : ಕಂಬಿಗಳು ಇದ್ದಿದ್ದರೆ ನಮ್ಮ ಊರಿಗೂ ರೈಲು ಬರುತ್ತಿತ್ತು, ಅಲ್ಲವೇ ಗುರುಗಳೆ? ಶಿಕ್ಷಕರು : ಹೌದು ಪಲ್ಲವಿ, ನೀನು ಹೇಳುತ್ತಿರುವುದು ಸರಿಯಾಗಿದೆ. ಬೇಗಂ : ಗುರುಗಳೆ, ನಾನು ಇದುವರೆಗೂ ರೈಲನ್ನೇ ನೋಡಿರಲಿಲ್ಲ. ಅದರ ಶಬ್ದವನ್ನು ಕೇಳಿರಲಿಲ್ಲ. ಅಬ್ಬಬ್ಬಾ! ಎಷ್ಟು ಉದ್ದವಿದೆ ಈ ರೈಲು? ಕೆನಡಿ : ನಿಮ್ಮದು ಯಾವೂರು ಮಕ್ಕಳೇ? ಎಲ್ಲಿಗೆ ಪ್ರವಾಸ ಹೊರಟಿರುವಿರಿ? ಕಾವ್ಯ : ನಾವು ಬೇಗೂರು ಶಾಲೆಯವರು. ಶ್ರವಣಬೆಳಗೊಳಕ್ಕೆ ಪ್ರವಾಸ ಹೊರಟಿದ್ದೇವೆ. ಕೆನಡಿ : ಹೌದೆ? ಎಲ್ಲರೂ ನೋಡಲೇಬೇಕಾದ ಸ್ಥಳ. ನಾನು ರಾಜು ಮತ್ತು ಮಧು ಈಗಾಗಲೇ ಶ್ರವಣಬೆಳಗೊಳಕ್ಕೆ ಹೋಗಿ ಬಂದೆವು. ಅಬ್ದುಲ್ : ನಾವು ಇದೇ ಮೊದಲ ಬಾರಿಗೆ ಅಲ್ಲಿಗೆ ಹೋಗುತ್ತಿರುವುದು. ಮಧು: ಎಂತಹ ಅದ್ಭುತವಾದ ತಾಣ. ನನಗಂತೂ ತುಂಬ ಖುಷಿಯಾಯಿತು. ಕೆನಡಿ : ಅಲ್ಲಿನ ಏಕಶಿಲಾ ಗೊಮ್ಮಟಮೂರ್ತಿ, ಆ ಬೆಟ್ಟದ ಮೇಲಿಂದ ಕಾಣುವ ಪ್ರಕೃತಿ ಸೌಂದರ್ಯವನ್ನು ನೋಡಲು ಎರಡು ಕಣ್ಣುಗಳು ಸಾಲದು. (ಮಕ್ಕಳ ಮಾತುಗಳನ್ನು ಕೇಳುತ್ತಿದ್ದ ಕೆನಡಿ, ಮಧು, ರಾಜು, ಮಕ್ಕಳೊಂದಿಗೆ ಸಂಭಾಷಣೆಯಲ್ಲಿ ತೊಡಗಿದರು.) ಮಕ್ಕಳು : ಬೆಟ್ಟ ಹತ್ತುವಾಗ ನಿಮಗೆ ಕಷ್ಟ ಅನಿಸಲಿಲ್ಲವೇ? ಮಧು : ಬೆಟ್ಟ ಹತ್ತೋ ಹುಮ್ಮಸ್ಸಿನಲ್ಲಿ ಕಷ್ಟ ಗೊತ್ತಾಗಲೇ ಇಲ್ಲ. ಬೇಗಂ : ಅಣ್ಣಾ ! ಬೆಟ್ಟಕ್ಕೆ ಎಷ್ಟು ಮೆಟ್ಟಿಲುಗಳಿವೆ? ಮಧು : ೬೪೦ ಮೆಟ್ಟಿಲುಗಳಿವೆ ಎಂದು ಅಲ್ಲಿಯೇ ಬರೆದಿದೆಕಣಮ್ಮ. ಕೌಸ್ತುಭ : ಬೆಟ್ಟದ ಮೇಲೆ ನೀವು ಏನೇನು ನೋಡಿದಿರಿ? ಮಧು : ಮಕ್ಕಳೇ, ಬೆಳಗೊಳ ಬೆಟ್ಟದಲ್ಲಿ ಭರತ, ಬಾಹುಬಲಿ ಹಾಗೂ ಇತರ ತೀರ್ಥಂಕರರ ಮೂರ್ತಿಗಳನ್ನು ನೋಡಿದೆವು. ಅವುಗಳನ್ನು ನೋಡುತ್ತಿದ್ದರೆ ಭಕ್ತಿಯು ಉಕ್ಕಿ ಬರುತ್ತದೆ. ಆ ಮೂರ್ತಿಗಳ ಮುಖದಲ್ಲಿ ಶಾಂತತೆಯ ಭಾವನೆಯು ಎದ್ದು ಕಾಣುತ್ತದೆ. ಅಲ್ಲಿ ಬಸದಿಗಳೂ ಸಹ ಇವೆ. ಕಾವ್ಯ : ಗುರುಗಳೇ! ಅವರು ಹೇಳಿದ ಸ್ಥಳಗಳ ಬಗ್ಗೆ ನಮಗೆ ಅಲ್ಲಿಗೆ ಹೋದ ಮೇಲೆ ತಿಳಿಸಿಕೊಡಿ. ಶಿಕ್ಷಕರು : ನಾವು ಈಗ ಅಲ್ಲಿಗೇ ಹೋಗುತ್ತಿದ್ದೇವಲ್ಲ. ಇನ್ನು ಚೆನ್ನಾಗಿ ನಿಮಗೆ ತಿಳಿಸಿಕೊಡುತ್ತೇವೆ. ಕಾರ್ತಿಕ್: ಅದೋ ರೈಲು ಬಂದೇ ಬಿಟ್ಟಿತು. ರಾಜು : ನಿಧಾನವಾಗಿ ಹೋಗಿ. ಅವಸರ ಬೇಡ. ರೈಲು ಇನ್ನೂ ಹತ್ತು ನಿಮಿಷ ಇಲ್ಲಿ ನಿಲ್ಲುತ್ತದೆ. ಶಿಕ್ಷಕರು : ನಿಲ್ಲಿ! ನಿಲ್ಲಿ! ನಾವು ಆರನೇ ಬೋಗಿ ಹತ್ತಬೇಕು. ಅದು ಎಲ್ಲಿ ನಿಲ್ಲುತ್ತದೆ ನೋಡೋಣ. ಮಕ್ಕಳು : ಇಲ್ಲಿ ನೋಡಿ ಗುರುಗಳೆ. ಆರು ಎಂದು ಬರೆದಿರುವ ಬೋಗಿ ಮುಂದೆ ಹೋಯಿತು. ಶಿಕ್ಷಕರು : ಸರಿ ಬನ್ನಿ, ಅಲ್ಲಿಗೆ ಹೋಗಿ ಹತ್ತಿಕೊಳ್ಳೋಣ. (ಎಲ್ಲರೂ ರೈಲು ಹತ್ತಿದರು. ಚುಕ್ ಬುಕ್ ಚುಕ್ ಬುಕ್ ಎಂದು ಶಬ್ದ ಮಾಡುತ್ತಾ ರೈಲು ಹೊರಟಿತು) ದೇಶ ತಿರುಗು - ಕೋಶ ಓದು

"ದೇಶ ತಿರುಗು - ಕೋಶ ಓದು" — "Travel the country, read books." A beautiful Kannada proverb printed at the end of the story, emphasizing that real education comes from a balance of seeing the world and studying literature.

ಪದಗಳ ಅರ್ಥword meanings

KannadaPronunciationMeaning
ಕಂಪ್ಯೂಟರ್kam-pyoo-tarcomputer
ಶೌಚಾಲಯshau-chaa-la-yatoilet, washroom
ಆಲಿಸುaa-li-sulisten attentively
ಫೋಟೋpho-tophotograph
ಆಯಾಸaa-yaa-safatigue, tiredness, effort
ಚುಕ್ ಬುಕ್ ಚುಕ್ ಬುಕ್chuk buk chuk bukthe sound of a moving train
ಖುಷಿkhu-shihappiness, joy
ವ್ಯವಸ್ಥೆvya-vas-thearrangement, facility
ಇಚ್ಛೆich-chedesire, wish

ಟಿಪ್ಪಣಿnotes

  • ಟಿಕೆಟ್ – ಪ್ರಯಾಣ ಅಥವಾ ಪ್ರವೇಶಕ್ಕಾಗಿ (ಹಣಪಡೆದು) ಅನುಮತಿ ನೀಡುವ ಚೀಟಿ.
  • ಟಿಕೆಟ್ ಕೌಂಟರ್– ಪ್ರಯಾಣ ಅಥವಾ ಪ್ರವೇಶಕ್ಕಾಗಿ ಅನುಮತಿ ನೀಡುವ ಚೀಟಿಕೊಡುವ ಜಾಗ.
  • ಪ್ಲಾಟ್‌ಫಾರಂ – ರೈಲು ಬಂದು ನಿಲ್ಲಲು ಮತ್ತು ಹೊರಡಲು ನಿಗದಿಪಡಿಸಿರುವ ಜಾಗ.
  • ಲಗೇಜ್‌ರೂಮ್ – ವಸ್ತು ಅಥವಾ ಇತರೆ ಸಾಮಗ್ರಿಗಳನ್ನು ಇಡುವ ಕೊಠಡಿ.
  • ಭರತ – ಭಾರತವನ್ನಾಳಿದ ಒಬ್ಬ ಪ್ರಸಿದ್ಧ ಚಕ್ರವರ್ತಿ. ಬಾಹುಬಲಿಯ ಅಣ್ಣ.
  • ಬಸದಿ – ಜೈನ ದೇವಾಲಯ.
  • ರೈಲು ಕಂಬಿ – ರೈಲು ಹೋಗುವುದಕ್ಕೆ ಜೋಡಿಸಿರುವ ಕಂಬಿಗಳು.
  • ಅಬ್ಬಬ್ಬಾ – ಆಶ್ಚರ್ಯ, ಮೆಚ್ಚುಗೆ, ತಿರಸ್ಕಾರ ಇತ್ಯಾದಿಗಳನ್ನು ಸೂಚಿಸುವ ಒಂದು ಶಬ್ದ.

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ.

  1. ೧. ಮಕ್ಕಳೆಲ್ಲರು ಎಲ್ಲಿಗೆ ಪ್ರವಾಸ ಹೋಗಲು ಸಿದ್ಧರಾದರು ?

    Answer

    ಮಕ್ಕಳೆಲ್ಲರು ಶ್ರವಣಬೆಳಗೊಳಕ್ಕೆ ಪ್ರವಾಸ ಹೋಗಲು ಸಿದ್ಧರಾದರು.

  2. ೨. 'ಪ್ಲಾಟ್‌ಫಾರಂ' ಎಂದರೇನು?

    Answer

    ಪ್ಲಾಟ್‌ಫಾರಂ ಎಂದರೆ ರೈಲು ಬಂದು ನಿಲ್ಲಲು ಮತ್ತು ಹೊರಡಲು ನಿಗದಿಪಡಿಸಿರುವ ಸ್ಥಳ.

  3. ೩. ರೈಲ್ವೆ ನಿಲ್ದಾಣದಲ್ಲಿ ಮಕ್ಕಳು ಯಾರ ಜೊತೆ ಸಂವಾದ ನಡೆಸಿದರು?

    Answer

    ರೈಲ್ವೆ ನಿಲ್ದಾಣದಲ್ಲಿ ಮಕ್ಕಳು ಕೆನಡಿ, ಮಧು ಮತ್ತು ರಾಜು ಅವರ ಜೊತೆ ಸಂವಾದ ನಡೆಸಿದರು.

  4. ೪. ರೈಲು ಯಾವ ಶಬ್ದ ಮಾಡುತ್ತಾ ಚಲಿಸುತ್ತದೆ?

    Answer

    ರೈಲು ಚುಕ್ ಬುಕ್ ಚುಕ್ ಬುಕ್ ಎಂದು ಶಬ್ದ ಮಾಡುತ್ತಾ ಚಲಿಸುತ್ತದೆ.

ಆ. ಎರಡು/ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ.

  1. ೧. ಬೆಳಗೊಳ ಬೆಟ್ಟದಲ್ಲಿ ಮೂರ್ತಿಗಳನ್ನು ನೋಡುತ್ತಿದ್ದರೆ ಭಕ್ತಿ ಏಕೆ ಉಕ್ಕಿ ಬರುತ್ತದೆ?

    Answer

    ಬೆಳಗೊಳ ಬೆಟ್ಟದಲ್ಲಿರುವ ಮೂರ್ತಿಗಳ ಮುಖದಲ್ಲಿ ಶಾಂತತೆಯ ಭಾವನೆಯು ಎದ್ದು ಕಾಣುತ್ತದೆ. ಆದ್ದರಿಂದ ಅವುಗಳನ್ನು ನೋಡುತ್ತಿದ್ದರೆ ಭಕ್ತಿಯು ಉಕ್ಕಿ ಬರುತ್ತದೆ.

  2. ೨. ರೈಲು ನಿಲ್ದಾಣದಲ್ಲಿ ಏನೇನು ಸೌಲಭ್ಯಗಳಿರುತ್ತವೆ?

    Answer

    ರೈಲು ನಿಲ್ದಾಣದಲ್ಲಿ ವಿಶ್ರಾಂತಿ ಕೊಠಡಿ, ಲಗೇಜು ರೂಮ್, ಶೌಚಾಲಯ, ಕುಡಿಯುವ ನೀರು ಮತ್ತು ಹೋಟೆಲ್ ಮೊದಲಾದ ಸೌಲಭ್ಯಗಳಿರುತ್ತವೆ.

ಇ. ಕೊಟ್ಟಿರುವ ಮಾತನ್ನು ಯಾರು? ಯಾರಿಗೆ ಹೇಳಿದರು.?

  1. ೧. "ನಿಮ್ಮದು ಯಾವೂರು ಮಕ್ಕಳೇ?"

    Answer

    ಕೆನಡಿ

  2. ಯಾರು? ............................................................................................

    Answer

    ಮಕ್ಕಳಿಗೆ

  3. ಯಾರಿಗೆ? ............................................................................................

    Answer

    ಮಕ್ಕಳು

  4. ೨. "ಬೆಟ್ಟ ಹತ್ತುವಾಗ ನಿಮಗೆ ಕಷ್ಟ ಅನಿಸಲಿಲ್ಲವೇ?"

    Answer

    ಮಧು

  5. ಯಾರು? ............................................................................................

    Answer

    ಕಾರ್ತಿಕ್

  6. ಯಾರಿಗೆ? ............................................................................................

    Answer

    ರಾಜು

  7. ೩. "ಅದೋ ರೈಲು ಬಂದೇ ಬಿಟ್ಟಿತು."

  8. ಯಾರು? ............................................................................................

  9. ಯಾರಿಗೆ? ............................................................................................

ಈ. ಕೊಟ್ಟಿರುವ ಪದಗಳಲ್ಲಿ ಸರಿಯಾದ ಪದ ಆರಿಸಿ ಬಿಟ್ಟ ಸ್ಥಳದಲ್ಲಿ ಬರೆಯಿರಿ.

  1. ೧. ಇವರೆಲ್ಲರೂ ನಮ್ಮಂತೆಯೇ.................................. ಹೊರಟಿರುವವರೆ ಗುರುಗಳೆ.

    Answer

    ಪ್ರವಾಸಕ್ಕೆ

  2. (೧. ಪ್ರಯಾಣಕ್ಕೆ ೨. ಪ್ರವಾಸಕ್ಕೆ ೩. ಕೆಲಸಕ್ಕೆ ೪. ಸ್ಥಳಗಳಿಗೆ)

  3. ೨. ಕಂಬಿಗಳ ಮೇಲೆ .................................. ಚಲಿಸುತ್ತದೆ.

  4. (೧. ಬಸ್ಸು ೨. ರೈಲು ೩. ವಿಮಾನ ೪. ದೋಣಿ)

  5. ೩. ಮೂರ್ತಿಗಳ ಮುಖದಲ್ಲಿ ..................................ಯ ಭಾವನೆಯು ಎದ್ದು ಕಾಣುತ್ತದೆ.

  6. (೧. ಕ್ರೂರತೆ ೨. ಶಾಂತತೆ ೩. ವಿಧೇಯತೆ ೪. ಗಂಭೀರತೆ)

ಉ. ಸ್ಥಳ ಹಾಗೂ ಸ್ಥಳ ವಿಶೇಷಗಳನ್ನು ಪರಸ್ಪರ ಹೊಂದಿಸಿ ಬರೆಯಿರಿ

  1. ಅ (೧. ಹಂಪಿ, ೨. ಶ್ರವಣಬೆಳಗೊಳ, ೩. ವಿಜಯಪುರ, ೪. ಬೆಂಗಳೂರು) — ಆ (ಗೊಮ್ಮಟೇಶ್ವರ ವಿಗ್ರಹ, ಕಲ್ಲಿನರಥ, ವಿಧಾನಸೌಧ, ಗೋಲ್‌ಗುಂಬಜ್, ತಾಜ್‌ಮಹಲ್)

ಭಾಷಾ ಚಟುವಟಿಕೆ

  1. ಅ. ಮಾದರಿಯಲ್ಲಿ ಸೂಚಿಸಿರುವಂತೆ ಪ್ರಶ್ನಾರ್ಥಕ ವಾಕ್ಯ ರಚಿಸಿ.

  2. ಮಾದರಿ : ವಿಧಾನಸೌಧ ಬೆಂಗಳೂರಿನಲ್ಲಿದೆ.

  3. ವಿಧಾನಸೌಧ ಯಾವ ಊರಿನಲ್ಲಿದೆ?

    Answer

    ವಿಧಾನಸೌಧ ಬೆಂಗಳೂರಿನಲ್ಲಿದೆ.

  4. ೧. ಮಕ್ಕಳು ಮೈಸೂರಿಗೆ ಪ್ರವಾಸ ಹೋದರು.

  5. ೨. ರೈಲುಗಳು ಕಂಬಿಗಳ ಮೇಲೆ ಚಲಿಸುತ್ತವೆ.

  6. ೩. ಮೇರಿ ನಾಲ್ಕನೆಯ ತರಗತಿಯಲ್ಲಿ ಓದುತ್ತಿದ್ದಾಳೆ.

  7. ಆ. ಕೊಟ್ಟಿರುವ ಪದ ಬಳಸಿ ಸ್ವಂತ ವಾಕ್ಯ ಬರೆಯಿರಿ.

  8. ಪ್ರವಾಸ - ............................................................................................

    Answer

    ಪ್ರವಾಸ: ನಮ್ಮ ಶಾಲೆಯಿಂದ ಪ್ರವಾಸಕ್ಕೆ ಹೋದೆವು.

  9. ಸಂಭಾಷಣೆ - ............................................................................................

    Answer

    ಸಂಭಾಷಣೆ: ನಾನು ಸ್ನೇಹಿತನೊಂದಿಗೆ ಸಂಭಾಷಣೆ ಮಾಡಿದೆ.

  10. ಅದ್ಭುತ - ............................................................................................

    Answer

    ಅದ್ಭುತ: ಆ ಚಿತ್ರ ಅದ್ಭುತವಾಗಿತ್ತು.

  11. ನಮಸ್ಕರಿಸು - ............................................................................................

    Answer

    ನಮಸ್ಕರಿಸು: ನಾನು ಗುರುಗಳಿಗೆ ನಮಸ್ಕರಿಸಿದೆ.

  12. ಇ. ಸ್ವೀಕೃತ (ಬಳಕೆಯಲ್ಲಿರುವ) ಪದ ರೂಪ ಗಮನಿಸಿ. (A table showing common English loan words used in Kannada):

  13. ಪ್ಲೇಟ್, ಕ್ಲಾರ್ಕ್, ಲಗೇಜ್‌ರೂಮ್, ಕಂಪ್ಯೂಟರ್, ರೈಲ್, ಡಾಕ್ಟರ್

  14. ಕ್ಲಾಸ್, ಸ್ಕ್ರೂ, ಫೋಟೋ, ಸ್ಕೂಲ್, ಡ್ರೆಸ್, ಕಂಡಕ್ಟರ್

  15. ಪ್ಲಾಟ್‌ಫಾರಂ, ಟಿಕೆಟ್‌ಕೌಂಟರ್, ಬ್ಯಾಗ್, ಪೊಲೀಸ್, ಇಂಜಿನಿಯರ್, ಡ್ರೈವರ್

  16. ಈ. ಮಾದರಿಯಲ್ಲಿ ಸೂಚಿಸಿರುವಂತೆ ಸೂಕ್ತ ಪದ ರಚಿಸಿ ಬರೆಯಿರಿ.

  17. ಮಾದರಿ : ಕೇಳು - ಕೇಳಿಯಾನು - ಕೇಳಿಯಾರು

  18. ಹೇಳು : ............................................ ............................................

    Answer

    ಹೇಳು - ಹೇಳಿಯಾನು - ಹೇಳಿಯಾರು

  19. ಹೋಗು : ............................................ ............................................

    Answer

    ಹೋಗು - ಹೋಗಿಯಾನು - ಹೋಗಿಯಾರು

  20. ಬೇಡು : ............................................ ............................................

    Answer

    ಬೇಡು - ಬೇಡಿಯಾನು - ಬೇಡಿಯಾರು

  21. ಮಾಡು : ............................................ ............................................

    Answer

    ಮಾಡು - ಮಾಡಿಯಾನು - ಮಾಡಿಯಾರು

  22. ಉ. ಮಾದರಿಯಂತೆ ಪದ ಬಳ್ಳಿ ರಚಿಸಿ

    Answer

    ಮರ-ರಸ-ಸರ-ರಥ

  23. ಮಾದರಿ : ಮರ-ರಸ-ಸರ-ರಥ

    Answer

    ಜನಕ - ಕನಸು - ಸುರ - ರಥ

  24. ಜನಕ : ............................................ ............................................

    Answer

    ವನಜ - ಜಲ - ಲತೆ - ತೆರೆ

  25. ವನಜ : ............................................ ............................................

    Answer

    ಭವನ - ನಗರ - ರಸ - ಸರ

  26. ಭವನ : ............................................ ............................................

ಬಳಕೆ ಚಟುವಟಿಕೆ

  1. ೧. ನೀವು ಪ್ರವಾಸದಲ್ಲಿ ನೋಡಿದ ಸ್ಥಳಗಳ ಹೆಸರುಗಳನ್ನು ಪಟ್ಟಿ ಮಾಡಿ

  2. ೨. ನೀವು ನೋಡಿರುವ ವಾಹನಗಳ ಚಿತ್ರಗಳನ್ನು ಸಂಗ್ರಹಿಸಿ ಚಿತ್ರಕೋಶ ಸಿದ್ಧಪಡಿಸು.

  3. ೩. ಚಿತ್ರಗಳನ್ನು ಗಮನಿಸಿ. ಇಬ್ಬರ ನಡುವೆ ನಡೆಯುತ್ತಿರಬಹುದಾದ ಸಂಭಾಷಣೆಗಳನ್ನು ಊಹಿಸಿ ಬರೆಯಿರಿ.

  4. (An illustration shows a doctor sitting at a desk examining a patient with a stethoscope. Below are alternating blank lines for a dialogue):

  5. ವೈದ್ಯ : ............................................................................................

  6. ರೋಗಿ : ............................................................................................

  7. ವೈದ್ಯ : ............................................................................................

  8. ರೋಗಿ : ............................................................................................

  9. ವೈದ್ಯ : ............................................................................................

  10. ರೋಗಿ : ............................................................................................

  11. ವೈದ್ಯ : ............................................................................................

  12. ರೋಗಿ : ............................................................................................

  13. (On the next page, an illustration labeled 'ಚಿತ್ರ - ೨' shows a bus conductor standing in a bus, taking money and handing a ticket to a seated passenger. Below are alternating blank lines for a dialogue):

  14. ಕಂಡಕ್ಟರ್ : ............................................................................................

  15. ಪ್ರಯಾಣಿಕ : ............................................................................................

  16. ಕಂಡಕ್ಟರ್ : ............................................................................................

  17. ಪ್ರಯಾಣಿಕ : ............................................................................................

  18. ಕಂಡಕ್ಟರ್ : ............................................................................................

  19. ಪ್ರಯಾಣಿಕ : ............................................................................................

  20. ೪. ಯಾರು-ಯಾವ ಮಾತನ್ನು ಹೇಳಿರಬಹುದು? ಗೆರೆ ಎಳೆದು ಹೊಂದಿಸು.

  21. ಅ (೧. ಶಿಕ್ಷಕ, ೨. ದರ್ಜಿ, ೩. ರೈತ, ೪. ವೈದ್ಯ, ೫. ಹೂವಾಡಗಿತ್ತಿ) — ಬ (ನಿಮಗೆ ಎಷ್ಟು ದಿನಗಳಿಂದ ಜ್ವರವಿದೆ?, ಹೊಲಕ್ಕೆ ಮಧ್ಯಾಹ್ನ ಬುತ್ತಿ ತಾ, ಮಾರಿಗೆ ಹತ್ತು ರೂಪಾಯಿ, ಈ ಪಾಠ ಓದಿಕೊಂಡು ಬನ್ನಿ, ನಿನಗೆ ಅಂಗಿ ಹೊಲಿಯಲು ೨ ಮೀಟರ್ ಬಟ್ಟೆ ಬೇಕು)

  22. ೫. ತರಗತಿಯಲ್ಲಿನ ಎಲ್ಲ ಮಕ್ಕಳು ಸೇರಿ ಶಿಕ್ಷಕರ ಸಹಾಯದಲ್ಲಿ ಅಂತ್ಯಾಕ್ಷರಿ (ಹಾಡು, ಪದ, ಹೆಸರು ಇತ್ಯಾದಿ) ಆಟ ಆಡಿ.

  23. (A closing text box featuring children reading reads):

  24. ಜಾಣ ಮರಿ

  25. ನೀನೀಗ ಅಪರಿಚಿತ ಸನ್ನಿವೇಶಗಳಲ್ಲಿನ ಸಂಭಾಷಣೆ ಮತ್ತು ಸಂವಾದಗಳನ್ನು ಆಲಿಸಿ ಅರ್ಥಮಾಡಿಕೊಳ್ಳ ಬಲ್ಲೆಯಲ್ಲವೇ?

Interactive Lab

ಕಂಪ್ಯೂಟರ್kam-pyoo-tarcomputer
ಶೌಚಾಲಯshau-chaa-la-yatoilet, washroom
ಆಲಿಸುaa-li-sulisten attentively
ಫೋಟೋpho-tophotograph
ಆಯಾಸaa-yaa-safatigue, tiredness, effort
ಚುಕ್ ಬುಕ್ ಚುಕ್ ಬುಕ್chuk buk chuk bukthe sound of a moving train
ಖುಷಿkhu-shihappiness, joy
ವ್ಯವಸ್ಥೆvya-vas-thearrangement, facility
ಇಚ್ಛೆich-chedesire, wish