CRECT Education

Practice & Play: ವೀರಮಾತೆ ಜೀಜಾಬಾಯಿ (Brave Mother Jijabai)

Description

Test your comprehension of the story of Jijabai and Shivaji with practice exercises and word games from the CBSE Class 4 Kannada textbook.

ಗದ್ಯ (prose) · Committee-authored

ಪಠ್ಯFull text

"ಮಾತಾಜಿಯವರಿಗೆ ನನ್ನ ಪ್ರಣಾಮಗಳು" ಚಿಗುರು ಮೀಸೆಯ ವೀರಬಾಲಕ ನಮ್ರತೆಯಿಂದ ನುಡಿದನು. ಹುಸಿನಗೆ ಬೀರುತ್ತಾ ಅವನ ತಾಯಿ "ಬಾ ಕಂದ ಇಲ್ಲಿ ಕುಳಿತುಕೊ" ಎಂದಳು. "ಆಗಲಿ ತಾಯಿ" ಎಂದು ಬಾಲಕ ಕುಳಿತುಕೊಂಡನು. "ಅಮ್ಮಾ ನನ್ನನ್ನು ಕರೆಸಿದ ಕಾರಣವೇನು? ನನ್ನಿಂದ ಏನಾಗಬೇಕು ಕೇಳು ತಾಯಿ" ಎಂದನು ಬಾಲಕ. "ನಾನು ಕೇಳಿದ್ದನ್ನು ಕೊಡುವೆಯಾ ಮಗನೆ?" ಎಂದು ತಾಯಿ ಅಭಿಮಾನದಿಂದ ನುಡಿದಳು. "ಆಗಲಿ ಮಾತಾಜಿ... ಭವಾನಿ ತಾಯಿಯ ಮೇಲೆ ಆಣೆ. ನೀನು ಕೇಳಿದ್ದನ್ನು ಕೊಡುವೆ" ಎಂದನು ಮಗ. ತಾಯಿ ಮನಸ್ಸಿನಲ್ಲಿ ಯೋಚಿಸುತ್ತಾ "ಕುಮಾರ, ಆಡಿದ ಮಾತಿನಂತೆ ನಾನು ಕೇಳಿದ್ದನ್ನು ಕೊಡಬೇಕು" ಎಂದಳು. "ಕೇಳು ತಾಯಿ ಅಗತ್ಯವಾಗಿ ನೀಡುತ್ತೇನೆ" ಎಂದನು ಮಗ ಸಂತೋಷದಿಂದ. "ನಾನು ಧನ್ಯ ಕಂದಾ, ಈಗ ಹೇಳುವೆನು ಕೇಳು. ಕೊಂಡಾಣದುರ್ಗವು ಮೊಘಲರ ವಶದಲ್ಲಿದೆ. ಅದನ್ನು ನೀನು ಗೆದ್ದು ನನಗೆ ಬಹುಮಾನವಾಗಿ ಕೊಡಬೇಕು" ಎಂದಳು ಹೆಮ್ಮೆಯಿಂದ ಮಗನನ್ನು ನೋಡುತ್ತಾ ತಾಯಿ. ಈ ರೀತಿ ಸಂಭಾಷಣೆ ನಡೆಸಿದ ತಾಯಿಮಗ ಯಾರು ಗೊತ್ತೆ? ಇವರೇ ಭಾರತದ ಇತಿಹಾಸದಲ್ಲಿ ಶಾಶ್ವತ ಸ್ಥಾನ ಪಡೆದಿರುವ ವೀರಮಾತೆ ಜೀಜಾಬಾಯಿ ಹಾಗೂ ಅವಳ ಪುತ್ರ ಮರಾಠ ಸಾಮ್ರಾಜ್ಯದ ಉನ್ನತಿಗೆ ಕಾರಣನಾದ 'ಛತ್ರಪತಿ ಶಿವಾಜಿ'. ಜೀಜಾಬಾಯಿ ಕ್ರಿ.ಶ. 1597ರಲ್ಲಿ ಲಖುಜಿ ಜಾಧವರಾವ್ ಅವರ ಮಗಳಾಗಿ ಜನಿಸಿದಳು. ಕ್ರಿ.ಶ. 1605ರಲ್ಲಿ ಷಹಾಜಿಯನ್ನು ವಿವಾಹವಾದಳು. ಷಹಾಜಿಯು ಬಿಜಾಪುರದ ಆದಿಲ್ ಶಾಹಿಯಲ್ಲಿ ಉದ್ಯೋಗ ಮಾಡುತ್ತಿದ್ದನು. ಕ್ರಿ.ಶ. 1627ರಲ್ಲಿ ಶಿವನೇರಿ ದುರ್ಗದಲ್ಲಿ ಈ ದಂಪತಿಗಳ ಮಗನಾಗಿ ಶಿವಾಜಿಯ ಜನಿಸಿದನು. ಷಹಾಜಿಯ ಮಗ ಶಿವಾಜಿಯನ್ನು ಗುರುವಾದ ದಾದಾಜಿಕೊಂಡದೇವನಲ್ಲಿ ವಿದ್ಯಾಭ್ಯಾಸಕ್ಕೆ ಕಳುಹಿಸಿದನು. ಗುರು ದಾದಾಜಿಕೊಂಡದೇವನು ಶಿವಾಜಿಗೆ ಕತ್ತಿವರಸೆ, ಕುದುರೆ ಸವಾರಿ ಮುಂತಾದ ಯುದ್ಧಕಲೆಗಳನ್ನು ಕಲಿಸಿದನು. ಷಹಾಜಿ ಅನಿವಾರ್ಯವಾಗಿ ತನ್ನಿಂದ ದೂರವಾದಾಗ ಜೀಜಾಬಾಯಿ ಬಹಳ ನೊಂದುಕೊಂಡಳು. ಆದರೂ ಎದೆಗುಂದದೆ ಸ್ವತಂತ್ರವಾಗಿ ಬದುಕಲು ಪ್ರಾರಂಭಿಸಿದಳು. ಮಗನನ್ನು ಓರ್ವ ವೀರಯೋಧನನ್ನಾಗಿ ಬೆಳೆಸುವ ಹೊಂಗನಸಿನೊಂದಿಗೆ ಪುಣೆಗೆ ಬಂದು ಅವನೊಂದಿಗೆ ನೆಲೆಸಿದಳು. ಜೀಜಾಬಾಯಿ ಚಾಣಾಕ್ಷ ಹೆಣ್ಣುಮಗಳು. ಕೇವಲ ಓರ್ವ ಸಾಮಾನ್ಯ ಮಹಿಳೆಯಂತೆ ಬದುಕಿನ ಆಗುಹೋಗುಗಳನ್ನು ನೆನೆದು ದೂಬಿಸುವ ಹೆಣ್ಣಾಗಿರಲಿಲ್ಲ. ಅಖಂಡ ಭಾರತದಲ್ಲಿ ಮೊಘಲರ ಆಳ್ವಿಕೆಯನ್ನು ಕೊನೆಗೊಳಿಸಲು ಪಣತೊಟ್ಟಳು. ಭಾರತದಾದ್ಯಂತ ಮರಾಠ ಸಾಮ್ರಾಜ್ಯದ ವಿಜಯ ಪತಾಕೆಯನ್ನು ಹಾರಿಸಬೇಕೆಂದು ತೀರ್ಮಾನಿಸಿದಳು. ಪರಕೀಯರ ಗುಲಾಮಗಿರಿಯಿಂದ ಹೊರಬಂದು ಸ್ವತಂತ್ರವಾಗಿ ಬಾಳಬೇಕೆಂದು ನಿರ್ಧರಿಸಿದಳು. ಶಿವಾಜಿಗೆ ಪ್ರತಿನಿತ್ಯ ರಾಮಾಯಣ – ಮಹಾಭಾರತ ಮುಂತಾದ ಪುರಾಣ ಪುಣ್ಯಕಥೆಗಳನ್ನು ಹೇಳುತ್ತಿದ್ದಳು. ನ್ಯಾಯ-ನೀತಿ, ಸ್ತ್ರೀಯರಲ್ಲಿ ಗೌರವ, ಕಷ್ಟಸಹಿಷ್ಣುತೆ ಇತ್ಯಾದಿ ಗುಣಗಳನ್ನು ಬಾಲ್ಯದಿನಿಂದಲೇ ಮಗನಲ್ಲಿ ಬೆಳೆಸಿದಳು. ಶಿವಾಜಿಗೆ ವೀರಪುರುಷ ಕಥೆಗಳನ್ನು ಕೇಳುವ, ಸಾಹಸಿ ಕೆಲಸಗಳನ್ನು ಮಾಡುವ ಆದರ್ಶಗಳನ್ನು ಬಾಲ್ಯದಿಂದಲೇ ಬಿತ್ತಿದಳು. ಹೀಗೆ ಜೀಜಾಬಾಯಿ ಮಗನಲ್ಲಿ ಧೈರ್ಯ, ಸ್ವಾಭಿಮಾನ, ಸಾಹಸ, ಸೇವೆ, ತ್ಯಾಗ ಮುಂತಾದ ಮೌಲ್ಯಗಳನ್ನು ಬಾಲ್ಯದಲ್ಲಿಯೇ ತುಂಬಿದಳು. ಅವನನ್ನು ಉತ್ತಮ ದೇಶಭಕ್ತನನ್ನಾಗಿ ಬೆಳೆಸಿದಳು. ಅವಳಿಂದ ಮರಾಠ ಸಾಮ್ರಾಜ್ಯದ ಉನ್ನತಿಗೆ ದಾರಿದೀಪವಾದಳು. ಮುಂದೆ ಶಿವಾಜಿಯು ಪ್ರಬಲ ಮೊಘಲ ಸಾಮ್ರಾಟ ಔರಂಗಜೇಬನ ವಿರುದ್ಧ ಹೋರಾಡಿ ಜಯಗಳಿಸಿದನು. ಜೀಜಾಬಾಯಿ ಮಗನ ವಿಜಯೋತ್ಸವಕ್ಕೆ ಬಹಳ ಸಂತೋಷಪಟ್ಟಳು. ರಾಯಗಡದಲ್ಲಿ ಶಿವಾಜಿಯ ಪಟ್ಟಾಭಿಷೇಕವು ಅತ್ಯಂತ ವೈಭವದಿಂದ ನಡೆಯಿತು. ಸ್ವಾಮಿ ರಾಮದಾಸರು ಬಂದು ತಮ್ಮ ಹಸ್ತದಿಂದ ಶಿವಾಜಿಗೆ ಮುಕುಟ ಧಾರಣೆ ಮಾಡಿದರು. ಜೀಜಾಬಾಯಿ ಶಿವಾಜಿಯ ಬಾಲ್ಯದಲ್ಲಿದ್ದಾಗ ತಾನು ಕಂಡ ಕನಸು ನನಸಾಯಿತು ಎಂದು ಖುಷಿಪಟ್ಟು ಶಿವಾಜಿಯನ್ನು ಆಶೀರ್ವದಿಸಿದಳು. ಅಂದು ಅವಳು ಸಹ ರಾಜಮಾತೆ ಎನಿಸಿಕೊಂಡಳು. ಈ ಸಂತೋಷದ ದಿನಗಳನ್ನು ಅನುಭವಿಸಲು ಹೆಚ್ಚು ಅವಕಾಶ ಜೀಜಾಬಾಯಿಗೆ ಲಭಿಸಲಿಲ್ಲ. ಶಿವಾಜಿ ಗದ್ದಿಗೆಯೇರಿದ ಕೆಲವೇ ದಿನಗಳಲ್ಲಿ ಹಾಸಿಗೆ ಹಿಡಿದಳು. ಸುಮಾರು ಎಂಬತ್ತು ವರ್ಷಗಳ ಕಾಲ ಜೀವಿಸಿದ ಜೀಜಾಬಾಯಿ ಮರಾಠರ ಅಭ್ಯುದಯ ಕಂಡಳು. ಅನಂತರ ರಾಯಗಡದ ಬಳಿಯಿರುವ ಪಾಚಾಡ ಎಂಬ ಹಳ್ಳಿಯಲ್ಲಿ ಕ್ರಿ.ಶ. 1674ರಲ್ಲಿ ನಿಧನ ಹೊಂದಿದಳು. "ಮನೆಯೇ ಮೊದಲ ಪಾಠಶಾಲೆ, ಜನನಿ ತಾನೇ ಮೊದಲ ಗುರುವು. ಜನನಿಯಿಂದ ಪಾಠ ಕಲಿತ ಜನರೇ ಧನ್ಯರು."

"ಮನೆಯೇ ಮೊದಲ ಪಾಠಶಾಲೆ, ಜನನಿ ತಾನೇ ಮೊದಲ ಗುರುವು." — "Home is the first school, mother is the first teacher." (a nice callback for the growth-mindset close, since Lesson 1 was also by Kuvempu, who wrote this famous line)

ಪದಗಳ ಅರ್ಥword meanings

KannadaPronunciationMeaning
ಪ್ರಣಾಮpra-naa-masalutation
ನಮ್ರತೆnam-ra-tehumility
ಗದ್ದಿಗೆgad-di-gethrone
ಸ್ವಾಭಿಮಾನswaa-bhi-maa-naself-respect
ಉನ್ನತಿun-na-tiprogress, rise
ಹೊಂಗನಸುhon-ga-na-sugolden dream
ಗುಲಾಮಗಿರಿgu-laa-ma-gi-rislavery
ಮುಕುಟmu-ku-tacrown

ಟಿಪ್ಪಣಿnotes

  • ವಿಜಯೋತ್ಸವ — a victory celebration
  • ಸಾಮ್ರಾಜ್ಯ — empire
  • ಪಟ್ಟಾಭಿಷೇಕ — coronation

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ

  1. 1. ತಾಯಿಗೆ ಮಗನು ಏನೆಂದು ಕೇಳಿದನು?

    Answer

    ತಾಯಿಗೆ ಮಗನು 'ಅಮ್ಮಾ ನನ್ನನ್ನು ಕರೆಸಿದ ಕಾರಣವೇನು? ನನ್ನಿಂದ ಏನಾಗಬೇಕು ಕೇಳು ತಾಯಿ' ಎಂದು ಕೇಳಿದನು.

  2. 2. ಕೊಂಡಾಣದುರ್ಗವು ಯಾರ ವಶದಲ್ಲಿತ್ತು?

    Answer

    ಕೊಂಡಾಣದುರ್ಗವು ಮೊಘಲರ ವಶದಲ್ಲಿತ್ತು.

  3. 3. ಜೀಜಾಬಾಯಿಯ ತಂದೆಯ ಹೆಸರೇನು?

    Answer

    ಜೀಜಾಬಾಯಿಯ ತಂದೆಯ ಹೆಸರು ಲಖುಜಿ ಜಾಧವರಾವ್.

  4. 4. ಶಿವಾಜಿಯ ಗುರುವಿನ ಹೆಸರೇನು?

    Answer

    ಶಿವಾಜಿಯ ಗುರುವಿನ ಹೆಸರು ದಾದಾಜಿಕೊಂಡದೇವ.

ಆ. ಕೊಟ್ಟಿರುವ ಪದಗಳಲ್ಲಿ ಸರಿಯಾದ ಪದ ಆರಿಸಿ ಬಿಟ್ಟ ಸ್ಥಳದಲ್ಲಿ ಬರೆಯಿರಿ

  1. (ಮಹಾಭಾರತ, ಜೀಜಾಬಾಯಿ, ರಾಯಗಡ, ಷಹಾಜಿ, ರಾಮಾಯಣ)

  2. 1. ಛತ್ರಪತಿ ಶಿವಾಜಿ ತಾಯಿಯ ಹೆಸರು _____.

    Answer

    ಛತ್ರಪತಿ ಶಿವಾಜಿ ತಾಯಿಯ ಹೆಸರು ಜೀಜಾಬಾಯಿ.

  3. 2. ಜೀಜಾಬಾಯಿ _____ ಎಂಬುವವನನ್ನು ವಿವಾಹವಾದಳು.

    Answer

    ಜೀಜಾಬಾಯಿ ಷಹಾಜಿ ಎಂಬುವವನನ್ನು ವಿವಾಹವಾದಳು.

  4. 3. ಜೀಜಾಬಾಯಿ ಶಿವಾಜಿಗೆ ಪ್ರತಿನಿತ್ಯ _____ ಮತ್ತು _____ ಕಥೆಗಳನ್ನು ಹೇಳುತ್ತಿದ್ದಳು.

    Answer

    ಜೀಜಾಬಾಯಿ ಶಿವಾಜಿಗೆ ಪ್ರತಿನಿತ್ಯ ರಾಮಾಯಣ ಮತ್ತು ಮಹಾಭಾರತ ಕಥೆಗಳನ್ನು ಹೇಳುತ್ತಿದ್ದಳು.

  5. 4. ಶಿವಾಜಿ ಪಟ್ಟಾಭಿಷೇಕವು _____ ದಲ್ಲಿ ನಡೆಯಿತು.

    Answer

    ಶಿವಾಜಿ ಪಟ್ಟಾಭಿಷೇಕವು ರಾಯಗಡ ದಲ್ಲಿ ನಡೆಯಿತು.

ಇ. ಕೊಟ್ಟಿರುವ ಪದ ಗಮನಿಸಿ ವಿರುದ್ಧಾರ್ಥಕ ಪದ ಬರೆಯಿರಿ

  1. ಧೈರ್ಯ ×, ಜಯ ×, ಗೌರವ ×, ನೀತಿ ×

    Answer

    ಧೈರ್ಯ × ಭಯ ಜಯ × ಅಪಜಯ ಗೌರವ × ಅಗೌರವ ನೀತಿ × ಅನೀತಿ

ಈ. ಮಾದರಿಯಂತೆ ಕೊಟ್ಟಿರುವ ಪದ ಗಮನಿಸಿ ಎರಡೆರಡು ಸಮಾನಾರ್ಥಕ ಪದಗಳನ್ನು ಬರೆಯಿರಿ

  1. ಮಾದರಿ: ಸಾಗರ — ಸಮುದ್ರ, ಕಡಲು. ಪುತ್ರ / ರಾಜ / ಯುದ್ಧ — ಗೆ ಎರಡೆರಡು ಸಮಾನಾರ್ಥಕ ಪದ ಬರೆಯಿರಿ.

    Answer

    ಪುತ್ರ — ಮಗ, ಕುಮಾರ ರಾಜ — ಅರಸ, ದೊರೆ ಯುದ್ಧ — ಕಾಳಗ, ಸಮರ

ಉ. ಕೊಟ್ಟಿರುವ ಪದ ಬಳಸಿ ಸ್ವಂತ ವಾಕ್ಯ ಬರೆಯಿರಿ

  1. ಬಹುಮಾನ, ಉದ್ಯೋಗ, ಗುಲಾಮಗಿರಿ, ವೈಭವ, ಆಶೀರ್ವಾದ

    Model sentence

    ಬಹುಮಾನ: ಓಟದ ಸ್ಪರ್ಧೆಯಲ್ಲಿ ನನಗೆ ಬಹುಮಾನ ಸಿಕ್ಕಿತು. ಉದ್ಯೋಗ: ನನ್ನ ಚಿಕ್ಕಪ್ಪನಿಗೆ ಬ್ಯಾಂಕಿನಲ್ಲಿ ಉದ್ಯೋಗ ಸಿಕ್ಕಿದೆ. ಗುಲಾಮಗಿರಿ: ನಮ್ಮ ದೇಶವು ಗುಲಾಮಗಿರಿಯಿಂದ ಮುಕ್ತವಾಯಿತು. ವೈಭವ: ನಮ್ಮ ಶಾಲೆಯ ವಾರ್ಷಿಕೋತ್ಸವವು ಬಹಳ ವೈಭವದಿಂದ ನಡೆಯಿತು. ಆಶೀರ್ವಾದ: ನಾನು ಪರೀಕ್ಷೆಗೆ ಹೋಗುವಾಗ ಅಜ್ಜಿ ನನಗೆ ಆಶೀರ್ವಾದ ಮಾಡಿದಳು.

ಊ. ಕೊಟ್ಟಿರುವ ಮಾತನ್ನು ಯಾರು? ಯಾರಿಗೆ ಹೇಳಿದರು?

  1. 1. 'ಮಾತಾಜಿಯವರಿಗೆ ನನ್ನ ಪ್ರಣಾಮಗಳು' — ಯಾರು? / ಯಾರಿಗೆ?

    Answer

    ಈ ಮಾತನ್ನು ಶಿವಾಜಿಯು ತನ್ನ ತಾಯಿ ಜೀಜಾಬಾಯಿಗೆ ಹೇಳಿದನು.

  2. 2. 'ನೀನು ಗೆದ್ದು ನನಗೆ ಬಹುಮಾನವಾಗಿ ಕೊಡಬೇಕು' — ಯಾರು? / ಯಾರಿಗೆ?

    Answer

    ಈ ಮಾತನ್ನು ಜೀಜಾಬಾಯಿಯು ತನ್ನ ಮಗ ಶಿವಾಜಿಗೆ ಹೇಳಿದಳು.

ಋ. ಪದಗಳನ್ನು ಸರಿಯಾಗಿ ಜೋಡಿಸಿ ವಾಕ್ಯ ರಚಿಸಿ ಬರೆಯಿರಿ

  1. 1. ತಾಯಿ ನೀಡುತ್ತೇನೆ ಕೇಳು ಅಗತ್ಯವಾಗಿ.

    Answer

    ತಾಯಿ ಕೇಳು ಅಗತ್ಯವಾಗಿ ನೀಡುತ್ತೇನೆ.

  2. 2. ಚಾಣಾಕ್ಷ ಜೀಜಾಬಾಯಿ ಹೆಣ್ಣುಮಗಳು.

    Answer

    ಜೀಜಾಬಾಯಿ ಚಾಣಾಕ್ಷ ಹೆಣ್ಣುಮಗಳು.

  3. 3. ಪಟ್ಟಾಭಿಷೇಕವು ಅತಿ ಶಿವಾಜಿಯ ನಡೆಯಿತು ವೈಭವದಿಂದ.

    Answer

    ಶಿವಾಜಿಯ ಪಟ್ಟಾಭಿಷೇಕವು ಅತಿ ವೈಭವದಿಂದ ನಡೆಯಿತು.

ಭಾಷಾ ಚಟುವಟಿಕೆ

  1. ಅ. ಮಾದರಿಯಲ್ಲಿ ಸೂಚಿಸಿರುವಂತೆ ಸೂಕ್ತ ಪದ ರಚಿಸಿ ಬರೆಯಿರಿ:

  2. ಮಾದರಿ: ಬರು + ಅಂತೆ = ಬರುವಂತೆ → ಹೋಗು+ಅಂತೆ, ನೋಡು+ಅಂತೆ, ಮಗು+ಅಂತೆ

    Answer

    ಹೋಗು+ಅಂತೆ = ಹೋಗುವಂತೆ ನೋಡು+ಅಂತೆ = ನೋಡುವಂತೆ ಮಗು+ಅಂತೆ = ಮಗುವಂತೆ

  3. ಮಾದರಿ: ಹುಡುಗ + ಆಟ = ಹುಡುಗಾಟ → ಬಂದು+ಆಗ, ಕಾಡು+ಆನೆ, ಬಾಯಿ+ಆರಿಕೆ

    Answer

    ಬಂದು+ಆಗ = ಬಂದಾಗ ಕಾಡು+ಆನೆ = ಕಾಡಾನೆ ಬಾಯಿ+ಆರಿಕೆ = ಬಾಯಾರಿಕೆ

  4. ಆ. ಕೊಟ್ಟಿರುವ ಪದಗಳನ್ನು ಗಮನಿಸಿ ಓದಿ: ಪದೇ–ಪದೇ; ಸಣ್ಣ–ಸಣ್ಣ; ಓಡಿ–ಓಡಿ.

  5. ಇ. ಆವರಣದಲ್ಲಿರುವ ಪದಗಳನ್ನು ಗಮನಿಸಿ. ಅವುಗಳ ಸಹಾಯದಿಂದ ಗಾದೆಗಳನ್ನು ಪೂರ್ಣ ಮಾಡಿ.

  6. (ಪರರಿಗೆ ಉಪಕಾರಿ, ಬಾಳಿಯಾರು, ಮೌನ ಬಂಗಾರ, ಬಾಯಿ ಮೊಸರು)

  7. 1. ತಾಳಿದವರು _____.

    Answer

    ತಾಳಿದವರು ಬಾಳಿಯಾರು.

  8. 2. ಕೈ ಕೆಸರಾದರೆ _____.

    Answer

    ಕೈ ಕೆಸರಾದರೆ ಬಾಯಿ ಮೊಸರು.

  9. 3. ಮಾತು ಬೆಳ್ಳಿ _____.

    Answer

    ಮಾತು ಬೆಳ್ಳಿ ಮೌನ ಬಂಗಾರ.

  10. 4. ಮನೆಗೆ ಮಾರಿ _____.

    Answer

    ಮನೆಗೆ ಮಾರಿ ಪರರಿಗೆ ಉಪಕಾರಿ.

ಬಳಕೆ ಚಟುವಟಿಕೆ

  1. 1. ನೀನು ಜೀಜಾಬಾಯಿಯ ಯಾವ ಗುಣವನ್ನು ಇಷ್ಟಪಡುವೆ? ಏಕೆ?

  2. 2. ನಿನಗೆ ಗೊತ್ತಿರುವ ವೀರಮಹಿಳೆಯರ ಹೆಸರುಗಳನ್ನು ಸಂಗ್ರಹಿಸಿ, ಪಟ್ಟಿ ಮಾಡಿ.

  3. 3. ನಿನ್ನ ಮತ್ತು ತಾಯಿಯ ನಡುವೆ ಬೆಳಗ್ಗೆ ಶಾಲೆಗೆ ಹೊರಡುವ ಸಮಯದಲ್ಲಿ ನಡೆಯುವ ಸಂಭಾಷಣೆಯನ್ನು

  4. ಊಹಿಸಿ ಬರೆದು, ಸೂಕ್ತ ಲೇಖನ ಚಿಹ್ನೆಗಳನ್ನು ಹಾಕು.

  5. 4. ಈ ಗದ್ಯದಲ್ಲಿ ಬರುವ ಶಿವಾಜಿ ಮತ್ತು ಜೀಜಾಬಾಯಿ ಅವರ ಸಂಭಾಷಣೆಗಳನ್ನು ತರಗತಿಯಲ್ಲಿ ಗೆಳೆಯರೊಂದಿಗೆ

  6. ಸೇರಿ ಅಭಿನಯದ ಮೂಲಕ ಪ್ರದರ್ಶಿಸಿ.

Interactive Lab

ಪ್ರಣಾಮpra-naa-masalutation
ನಮ್ರತೆnam-ra-tehumility
ಗದ್ದಿಗೆgad-di-gethrone
ಸ್ವಾಭಿಮಾನswaa-bhi-maa-naself-respect
ಉನ್ನತಿun-na-tiprogress, rise
ಹೊಂಗನಸುhon-ga-na-sugolden dream
ಗುಲಾಮಗಿರಿgu-laa-ma-gi-rislavery
ಮುಕುಟmu-ku-tacrown