ಪದ್ಯ (poem) · ಸರ್ವಜ್ಞ (Sarvajna)
ಪಠ್ಯFull text
"ನುಡಿದಂತೆ ನಡೆ, ನಡೆದಂತೆ ನುಡಿ." — "Act as you speak, speak as you act." (A reminder to maintain integrity between one's words and actions).
ಪದಗಳ ಅರ್ಥword meanings
| Kannada | Pronunciation | Meaning |
|---|---|---|
| Kannada (Word - Synonym) | Phonetic (Main Word) | English |
| ಗರ್ವ - ಜಂಬ | gar-va | pride, arrogance |
| ನುಡಿ - ಮಾತು | nu-di | word, speech |
| ಪರ್ವತ - ಬೆಟ್ಟ | par-va-ta | mountain |
| ಅಗ್ನಿ - ಬೆಂಕಿ | ag-ni | fire |
| ಕುಲಗೋತ್ರ - ಜಾತಿ, ವಂಶ | ku-la-go-tra | caste, lineage, ancestry |
| ಆಪತ್ತು - ಅಪಾಯ, ತೊಂದರೆ | aa-pat-tu | danger, trouble |
| ಬಗೆ - ರೀತಿ, ವಿಧ | ba-ge | type, manner, way |
ಟಿಪ್ಪಣಿnotes
- ಬುತ್ತಿ - ಪ್ರಯಾಣ ಕಾಲಕ್ಕಾಗಿ ಕಟ್ಟಿ ಸಿದ್ಧಪಡಿಸಿದ ಮೊಸರನ್ನ, ಕಲಸನ್ನ, ರೊಟ್ಟಿ ಮೊದಲಾದವುಗಳನ್ನು ಒಳಗೊಂಡದ್ದು.
- ತ್ರಿಪದಿ - ಮೂರು ಸಾಲುಗಳನ್ನು ಹೊಂದಿರುವ ಪದ್ಯ.
ಅಭ್ಯಾಸexercises from the textbook
Model answers — a guide, not the only correct wording. Check with your teacher.
ಅ. ಒಂದೊಂದು ವಾಕ್ಯದಲ್ಲಿ ಉತ್ತರ ಬರೆಯಿರಿ.
೧. ಸರ್ವಜ್ಞನು ಯಾವ ರೀತಿ ಆಗಿದ್ದಾನೆ?
Answerಸರ್ವಜ್ಞನು ಸರ್ವರೊಳಗೊಂದೊಂದು ನುಡಿಗಲಿತು ವಿದ್ಯೆಯ ಪರ್ವತವೇ ಆಗಿದ್ದಾನೆ.
೨. ಕೊಟ್ಟಿದ್ದು ತನಗಾದರೆ ಬಚ್ಚಿಟ್ಟಿದ್ದು ಯಾರಿಗೆ?
Answerಕೊಟ್ಟಿದ್ದು ತನಗಾದರೆ ಬಚ್ಚಿಟ್ಟಿದ್ದು ಪರರಿಗೆ.
೩. ಯಾರ ಮನೆಯ ಜ್ಯೋತಿಯು ಹೀನವಲ್ಲ?
Answerಜಾತಿಹೀನನ ಮನೆಯ ಜ್ಯೋತಿಯು ಹೀನವಲ್ಲ.
೪. ಪಾಪದ ನೆಲೆಗಟ್ಟು ಯಾವುದು?
Answerಪಾಪದ ನೆಲೆಗಟ್ಟು ಕೋಪವು.
ಆ. ಎರಡು-ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ.
೧. ಸರ್ವಜ್ಞನು ವಿದ್ಯೆಯ ಪರ್ವತ ಆದದ್ದು ಹೇಗೆ ?
Answerಸರ್ವಜ್ಞನು ಗರ್ವದಿಂದ ಆದವನಲ್ಲ. ಆತನು ಸರ್ವರಲ್ಲಿಯೂ ಒಂದೊಂದು ಮಾತನ್ನು ಕಲಿತು ವಿದ್ಯೆಯ ಪರ್ವತವೇ ಆದನು.
೨. ಕುಲಗೋತ್ರಗಳ ನಡುವೆ ಭಿನ್ನತೆ ಏಕೆ ಇರಬಾರದು?
Answerಎಲ್ಲರೂ ನಡೆಯುವುದು ಒಂದೇ ಭೂಮಿ, ಕುಡಿಯುವುದು ಒಂದೇ ನೀರು, ಸುಡುವುದು ಒಂದೇ ಅಗ್ನಿ. ಆದ್ದರಿಂದ ಕುಲಗೋತ್ರಗಳ ನಡುವೆ ಭಿನ್ನತೆ ಇರಬಾರದು.
ಭಾಷಾ ಚಟುವಟಿಕೆ
ಅ. ಸ್ಪಷ್ಟವಾಗಿ ಓದಿ ವ್ಯತ್ಯಾಸ ಗಮನಿಸಿ
ಹಾಳು — ಆಳು
ಹುಳಿ — ಉಳಿ
ಹುಣ್ಣು — ಉಣ್ಣು
ಹೇಳು — ಏಳು
ಹೊತ್ತು — ಒತ್ತು
ಆ. ಮಾದರಿಯಂತೆ ಪದಗಳನ್ನು ಬರೆ
ಮಾದರಿ : ಟ್ಟು - ಕಟ್ಟು -ಅಟ್ಟು - ತಟ್ಟು - ಪೆಟ್ಟು
ಡ್ಡಿ ...................... ...................... ......................
Answerಅಡ್ಡಿ ಬಡ್ಡಿ ಗಡ್ಡಿ
ತ್ತಿ ...................... ...................... ......................
Answerಹತ್ತಿ ಬತ್ತಿ ಮತ್ತಿ
ಕ್ಕ ...................... ...................... ......................
Answerಅಕ್ಕ ಬಕ್ಕ ಚಕ್ಕ
ಇ. ಮಾದರಿಯಂತೆ ಸೂಕ್ತ ಸ್ಥಳದಲ್ಲಿ ಸ, ಶ, ಷ ಸೇರಿಸಿ ಪದ ರಚಿಸು
ಮಾದರಿ: ಸನ್ಯಾಸ, ವಿನಾಶ, ಪುರುಷ
ಪ್ರಯಾ.......... ಆಕಾ.......... ದೋ..........
Answerಪ್ರಯಾಸ ಆಕಾಶ ದೋಷ
ಪ್ರವಾ.......... ವಿವ.......... ರೋ..........
Answerಪ್ರವಾಸ ವಿವಶ ರೋಷ
ನೀರ.......... ವಿದೇ.......... ಹರು..........
Answerನೀರಸ ವಿದೇಶ ಹರುಷ
ವಿಶ್ವಾ.......... ಹತಾ.......... ವಿಶೇ..........
Answerವಿಶ್ವಾಸ ಹತಾಶ ವಿಶೇಷ
ವಿಲಾ.......... ವ.......... ನಿಮಿ..........
Answerವಿಲಾಸ ವಶ ನಿಮಿಷ
ಬಳಕೆ ಚಟುವಟಿಕೆ
ಅ. ಈ ವಾಕ್ಯವನ್ನು ಸ್ಪುಟವಾಗಿ ನಕಲು ಮಾಡಿ..
೧. ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಂಗೆ
ಆ. ಸರ್ವಜ್ಞನ ತ್ರಿಪದಿಗಳನ್ನು ಕಂಠಪಾಠ ಮಾಡಿ ನಿಮ್ಮದೇ ರಾಗದಲ್ಲಿ ಹಾಡಿ.
ಇ. ನಮ್ಮ ರಾಷ್ಟ್ರಗೀತೆಯನ್ನು ಇಲ್ಲಿ ಬರೆಯಿರಿ.
(Lines provided for the student to write the National Anthem).
ಸೂಚನೆ
ತರಗತಿಯಲ್ಲಿರುವ ಮಕ್ಕಳನ್ನು ವಿವಿಧ ಗುಂಪುಗಳಾಗಿ ವಿಂಗಡಿಸಿಕೊಳ್ಳಿ. ನಂತರ ಪ್ರತಿ ತಂಡದವರೂ ರಾಷ್ಟ್ರಗೀತೆಯನ್ನು ಹಾಡಲಿ. ಒಬ್ಬರು ಹಾಡಿಗೆ ತೆಗೆದುಕೊಂಡ ಸಮಯ ಗುರುತಿಸಿಕೊಳ್ಳಲಿ. ಯಾವ ಗುಂಪು ೪೮-೫೨ ಸೆಕೆಂಡ್‌ನಲ್ಲಿ ಹಾಡುತ್ತದೋ ಆ ಗುಂಪು ಗೆದ್ದಂತೆ. ಈ ಆಟಕ್ಕೆ ಶಿಕ್ಷಕರ ಸಹಕಾರ ಪಡೆಯಿರಿ.
ಅಂತ್ಯಾಕ್ಷರಿ ಆಟ
ಆಟದ ವಿಧಾನ:- ತರಗತಿಯ ಮಕ್ಕಳು ಎರಡು ಗುಂಪುಗಳಾಗುವುದು. ಒಂದು ಗುಂಪಿನವರು ಯಾವುದಾದರೂ ಹಾಡಿನ ೨ ರಿಂದ ೪ ಸಾಲುಗಳನ್ನು ಹಾಡಬೇಕು. ಕೊನೆಯ ಅಕ್ಷರದಿಂದ ಆರಂಭಿಸಿ ಎರಡನೆಯ ತಂಡದವರು ಹಾಡಬೇಕು. ಕೊನೆಯಲ್ಲಿ ಯಾವ ತಂಡದವರು ಹಾಡದೆ ನಿಲ್ಲಿಸುವರೋ ಅವರು ಸೋತಂತೆ. ಹಾಡಿದ ಹಾಡನ್ನು ಪುನಃ ಹಾಡಿದರೆ ಎದುರಿನ ತಂಡದವರಿಗೆ ಒಂದು ಅಂಕ.
(At the bottom of the page, an illustration of a boy and a girl holding a banner that says "ಜಾಣ ಮರಿ" (Smart child), with a picture of a paper labeled "ಸಾಮರ್ಥ್ಯ" (Ability), followed by this text):
ನೀನೀಗ ಅಚ್ಚುಕಟ್ಟಾಗಿ ಮತ್ತು ಸ್ಪುಟವಾಗಿ ಬರೆಯುವ ಸಾಮರ್ಥ್ಯವನ್ನು ರೂಢಿಸಿಕೊಂಡಿರುವೆಯಲ್ಲವೆ?