CRECT Education

Class 4 Kannada Lesson 18: Come See Srirangapatna | KTBS Kannada 2nd Lang – Practice & Quiz

Description

Practice exercises and language play from Lesson 18 of the Class 4 Kannada Second Language textbook.

ಗದ್ಯ (prose) · ಸಮಿತಿ ರಚನೆ (Committee-authored)

ಪಠ್ಯFull text

(ನಾಲ್ಕನೆಯ ತರಗತಿಯ ಮಕ್ಕಳು ಶಿಕ್ಷಕರೊಂದಿಗೆ ಪ್ರವಾಸಕ್ಕೆ ಹೊರಟರು.) **ಕಮಲ:** ಗುರುಗಳೇ, ಎಲ್ಲರೂ ಬಂದರು. ಹೊರಡೋಣವೆ? **ಶಿಕ್ಷಕರು:** ಮಕ್ಕಳೇ, ಇತ್ತ ಗಮನಿಸಿ. ಈಗ ನಾವು ಪ್ರವಾಸಿ ತಾಣ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣಕ್ಕೆ ಹೋಗುತ್ತಿದ್ದೇವೆ. (ಶ್ರೀರಂಗಪಟ್ಟಣ ತಲುಪಿದ ನಂತರ ಮಕ್ಕಳೆಲ್ಲರೂ ಬಸ್ಸಿನಿಂದ ಇಳಿದು ಶಿಕ್ಷಕರೊಡನೆ ಸಾಲಾಗಿ ಹೊರಟರು.) **ಶಿಕ್ಷಕರು:** ರೀಟಾ, ಅಲ್ಲಿ ಕಾಣುತ್ತಿರುವ ಸೂಚನಾ ಫಲಕವನ್ನು ಓದು. **ರೀಟಾ:** ಆಗಲಿ ಗುರುಗಳೇ, ‘ಐತಿಹಾಸಿಕ ಪುರಾಣ ಪ್ರಸಿದ್ಧ ಶ್ರೀರಂಗಪಟ್ಟಣಕ್ಕೆ ಸುಸ್ವಾಗತ’ ಎಂದು ಬರೆದಿದೆ. **ಶಿಕ್ಷಕರು:** ಮಕ್ಕಳೇ, ಮುಂದೆ ಕಾಣುತ್ತಿರುವ ಕೋಟೆಯ ಹೆಬ್ಬಾಗಿಲಿನ ಮೂಲಕ ಊರೊಳಗೆ ಹೋಗೋಣ. **ಮೇರಿ:** ಗುರುಗಳೇ, ಈ ಕೋಟೆಯನ್ನು ಏಕೆ ಕಟ್ಟಿದ್ದಾರೆ? **ಶಿಕ್ಷಕರು:** ಹಿಂದೆ ಹಲವಾರು ರಾಜರು ಈ ಊರನ್ನು ಆಳುತ್ತಿದ್ದರು. ಊರನ್ನು ಶತ್ರುಗಳಿಂದ ರಕ್ಷಿಸಲು ಕೋಟೆಯನ್ನು ಕಟ್ಟಿದ್ದಾರೆ. **ರಹೀಮ:** ಗುರುಗಳೇ, ಅಲ್ಲಿ ನೋಡಿ, ಮಸೀದಿ ಕಾಣುತ್ತಿದೆ. **ಶಿಕ್ಷಕರು:** ರಹೀಮ, ಇದು ಟಿಪ್ಪು ಸುಲ್ತಾನ್ ತನ್ನ ಆಡಳಿತದ ಅವಧಿಯಲ್ಲಿ ನಿರ್ಮಿಸಿದ ಜಾಮಿಯಾ ಮಸೀದಿ. ಬನ್ನಿ ಮಕ್ಕಳೇ, ಇಲ್ಲಿರುವ ಮಾಹಿತಿ ಫಲಕವನ್ನು ಓದಿರಿ. (ಮಕ್ಕಳು ಓದುವರು. ಅಷ್ಟರಲ್ಲಿ......) **ಗೋವಿಂದ:** ಅಲ್ಲಿ ನೋಡಿ, ‘ಮದ್ದಿನ ಮನೆ’ ಎಂದು ನಾಮಫಲಕ ಹಾಕಿದ್ದಾರೆ ಗುರುಗಳೆ. **ಶಿಕ್ಷಕರು:** ಹೌದು, ಇದನ್ನು ಯುದ್ಧದ ಸಮಯದಲ್ಲಿ ಮದ್ದುಗುಂಡುಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲು ಬಳಸುತ್ತಿದ್ದರು. **ಫಾತಿಮ:** ಅರೇ! ಇದೇನು! ಇಲ್ಲಿ ‘ಕಾರಾಗೃಹ’ ಎಂದು ನಾಮಫಲಕ ಹಾಕಿದ್ದಾರೆ. **ಶಿಕ್ಷಕರು:** ಇಲ್ಲಿ ನೋಡಿ, ಇದು ‘ಥಾಮಸ್ ಇನ್‌ಮನ್ ಕಾರಾಗೃಹ’. ಕೈದಿಗಳನ್ನು ಸೆರೆ ಇಡಲು ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಇದನ್ನು ಬಳಸುತ್ತಿದ್ದರು. **ಪೀಟರ್:** ಅಲ್ಲೊಂದು ಮಾಹಿತಿ ಫಲಕ ಕಾಣುತ್ತಿದೆ. ಅದನ್ನು ಓದಲೇ ಗುರುಗಳೆ? **ಶಿಕ್ಷಕರು:** ಆಗಲಿ, ಓದು ಪೀಟರ್. **ಪೀಟರ್:** ಟಿಪ್ಪು ಸುಲ್ತಾನ್ ಮಡಿದ ಸ್ಥಳದ ಬಗ್ಗೆ ಮಾಹಿತಿ ಇದೆ ಗುರುಗಳೆ. **ಶಿಕ್ಷಕರು:** ಹೌದು, ಇದು ಕೊನೆಯ ಮೈಸೂರು ಯುದ್ಧದಲ್ಲಿ ಬ್ರಿಟಿಷರಿಂದ ಟಿಪ್ಪು ಸುಲ್ತಾನ್ ಮಡಿದ ಸ್ಮಾರಕ ಸ್ಥಳ. **ಗೌರಿ:** ಅಲ್ಲಿ ನೋಡಿ, ಯಾವುದೋ ಹಳೆಯ ಅರಮನೆಯ ಸ್ಥಳ ಕಾಣುತ್ತಿದೆ. **ರೇಷ್ಮೆ:** ಹೌದು, ಎಲ್ಲರೂ ಬನ್ನಿ, ಬನ್ನಿ. ಹಾಳಾಗಿರುವ ಈ ಅರಮನೆ ನೋಡಿ. **ಶಿಕ್ಷಕರು:** ಕೇಳಿ ಮಕ್ಕಳೇ, ಟಿಪ್ಪು ಸುಲ್ತಾನ್ ತನ್ನ ಆಡಳಿತದ ಕಾಲದಲ್ಲಿ ಈ ಲಾಲ್‌ಮಹಲ್ ಅರಮನೆಯಲ್ಲಿ ವಾಸವಾಗಿದ್ದನು. ಅನಂತರ ಬ್ರಿಟಿಷರಿಂದ ಈ ಅರಮನೆ ನಾಶವಾಯಿತು. ಇದರ ಇತಿಹಾಸವು ಈ ಫಲಕದಲ್ಲಿದೆ ಓದಿರಿ ಮಕ್ಕಳೆ. **ಗೀತ:** ಮುಂದೆ ದೇವಾಲಯ ಕಾಣುತ್ತಿದೆ. ಅಲ್ಲಿಗೆ ಹೋಗೋಣವೆ ಗುರುಗಳೆ? **ಶಿಕ್ಷಕರು:** ಆಗಲಿ, ಎಲ್ಲರೂ ಬನ್ನಿರಿ. ಇತಿಹಾಸ ಪ್ರಸಿದ್ಧವಾದ ಆದಿ ರಂಗನಾಥಸ್ವಾಮಿ ದೇವಾಲಯಕ್ಕೆ ಹೋಗೋಣ. (ಮಕ್ಕಳೆಲ್ಲರೂ ದೇವಾಲಯದ ಬಳಿಗೆ ಬಂದು ಬಾಗಿಲ ಬಳಿ ಇರುವ ಫಲಕದಲ್ಲಿರುವ ದೇವಾಲಯ ನಿರ್ಮಾಣದ ಇತಿಹಾಸವನ್ನು ತಿಳಿದುಕೊಂಡರು. ಅನಂತರ ದೇವರ ದರ್ಶನ ಪಡೆದರು.) **ಶಿಕ್ಷಕರು:** ಮಕ್ಕಳೇ, ಇಲ್ಲಿಯವರೆಗೆ ಶ್ರೀರಂಗಪಟ್ಟಣದ ಪ್ರಮುಖ ಸ್ಥಳಗಳನ್ನು ನೋಡಿದಿರಿ. ಇಲ್ಲಿ ನೋಡುವಂತಹ ಕರ್ನಲ್ ಬೈಲಿ ಕಾರಾಗೃಹ, ಬ್ರಿಟಿಷ್ ಸೈನಿಕರ ಸ್ಮಾರಕ, ಬೇಸಿಗೆ ಅರಮನೆ, ಚರ್ಚ್, ಗುಂಬಜ್, ನಿಮಿಷಾಂಬ ದೇವಾಲಯ, ನದಿಸಂಗಮ, ಘೋಸಾಯಿ ಘಾಟ್ ಮುಂತಾದ ಸ್ಥಳಗಳಿವೆ. ಸಂಜೆಯಾಯಿತು. ಮುಂದೊಂದು ದಿನ ಬರೋಣ. ನಡೆಯಿರಿ, ಬೇಗ ಊರು ಸೇರಿಕೊಳ್ಳೋಣ. **ಮಕ್ಕಳು:** ಆಗಲಿ ಗುರುಗಳೆ. (ಎಲ್ಲರೂ ಬಸ್ಸು ಹತ್ತಿ ಕುಳಿತರು, ಮಕ್ಕಳು ತಾವು ನೋಡಿದ ಸೂಚನಾ ಫಲಕ, ಮಾಹಿತಿ ಫಲಕಗಳಲ್ಲಿ ಓದಿದ ವಿಷಯದ ಬಗ್ಗೆ ಮಾತನಾಡಿಕೊಳ್ಳುತ್ತಾ ಊರು ತಲುಪಿದರು.) **ಕೌಶಲ :- ಓದುವುದು.** **ಸಾಮರ್ಥ್ಯ:- ಸೂಚನಾ ಫಲಕಗಳಲ್ಲಿನ ಸರಳ ಸೂಚನೆಗಳನ್ನು ಓದುವುದು.**

"ದೇಶ ಸುತ್ತು; ಕೋಶ ಓದು." — "Travel the country; read the dictionary (books)." A great reminder that experience and knowledge go hand in hand.

ಪದಗಳ ಅರ್ಥword meanings

KannadaPronunciationMeaning
ಗಮನಿಸುga-ma-ni-supay attention, notice
ತಾಣtaa-naplace, base
ಹೆಬ್ಬಾಗಿಲುheb-baa-gi-lumain gate, great entrance
ರಕ್ಷಿಸುrak-shi-suprotect, save, guard
ಸುರಕ್ಷಿತsu-rak-shi-tasafe, secure
ಸಂಗ್ರಹಿಸುsan-gra-hi-sucollect, gather, store
ನಿರ್ವಹಣೆnir-va-ha-nemanagement, maintenance

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ) ಬಿಟ್ಟ ಸ್ಥಳಗಳಲ್ಲಿ ಸೂಕ್ತ ಪದಗಳನ್ನು ಆರಿಸಿ ಬರೆಯಿರಿ.

  1. (ಶ್ರೀರಂಗಪಟ್ಟಣ, ಮಕ್ಕಳು, ದೇವಾಲಯ, ಸಮಯ, ಮಾಹಿತಿ)

  2. ೧. ನಾಲ್ಕನೇ ತರಗತಿಯ ......................... ಶಿಕ್ಷಕರೊಂದಿಗೆ ಪ್ರವಾಸಕ್ಕೆ ಹೊರಟರು.

    Answer

    ನಾಲ್ಕನೇ ತರಗತಿಯ ಮಕ್ಕಳು ಶಿಕ್ಷಕರೊಂದಿಗೆ ಪ್ರವಾಸಕ್ಕೆ ಹೊರಟರು.

  3. ೨. ಐತಿಹಾಸಿಕ ಪುರಾಣ ಪ್ರಸಿದ್ಧ ......................... ಕ್ಕೆ ಸುಸ್ವಾಗತ.

    Answer

    ಐತಿಹಾಸಿಕ ಪುರಾಣ ಪ್ರಸಿದ್ಧ ಶ್ರೀರಂಗಪಟ್ಟಣಕ್ಕೆ ಸುಸ್ವಾಗತ.

  4. ೩. ಟಿಪ್ಪುಸುಲ್ತಾನ್ ಮಡಿದ ಸ್ಥಳದ ಬಗ್ಗೆ ......................... ಇದೆ.

    Answer

    ಟಿಪ್ಪುಸುಲ್ತಾನ್ ಮಡಿದ ಸ್ಥಳದ ಬಗ್ಗೆ ಮಾಹಿತಿ ಇದೆ.

  5. ೪. ಇತಿಹಾಸ ಪ್ರಸಿದ್ಧವಾದ ಆದಿ ರಂಗನಾಥಸ್ವಾಮಿ ......................... ಕ್ಕೆ ಹೋಗೋಣ.

    Answer

    ಇತಿಹಾಸ ಪ್ರಸಿದ್ಧವಾದ ಆದಿ ರಂಗನಾಥಸ್ವಾಮಿ ದೇವಾಲಯಕ್ಕೆ ಹೋಗೋಣ.

ಆ) ಕೆಳಗೆ ವಾಕ್ಯದ ಪದಗಳನ್ನು ಅದಲು ಬದಲು ಮಾಡಿ ನೀಡಿದೆ. ಅದನ್ನು ಸರಿಪಡಿಸಿ ಬರೆಯಿರಿ.

  1. ೧. ಕಾಣುತ್ತಿರುವ ಓದು ಸೂಚನಾ ಫಲಕವನ್ನು ಅಲ್ಲಿ

  2. .........................................................................................................

    Answer

    ಅಲ್ಲಿ ಕಾಣುತ್ತಿರುವ ಸೂಚನಾ ಫಲಕವನ್ನು ಓದು.

  3. ೨. ಕಟ್ಟಿದ್ದಾರೆ? ಕೋಟೆಯನ್ನು ಏಕೆ ಈ

  4. .........................................................................................................

    Answer

    ಈ ಕೋಟೆಯನ್ನು ಏಕೆ ಕಟ್ಟಿದ್ದಾರೆ?

  5. ೩. ಮೈಸೂರು ಕೊನೆಯ ಇದು ಯುದ್ಧ

  6. .........................................................................................................

    Answer

    ಇದು ಕೊನೆಯ ಮೈಸೂರು ಯುದ್ಧ.

ಇ) ಈ ಮಾತನ್ನು ಯಾರು, ಯಾರಿಗೆ ಹೇಳಿದರು?

  1. ೧. ಊರನ್ನು ಶತ್ರುಗಳಿಂದ ರಕ್ಷಿಸಲು ಕೋಟೆಯನ್ನು ಕಟ್ಟಿದ್ದಾರೆ.

  2. ಯಾರು ಹೇಳಿದರು? .........................................................................

    Answer

    ಶಿಕ್ಷಕರು

  3. ಯಾರಿಗೆ ಹೇಳಿದರು? .........................................................................

    Answer

    ಮೇರಿಗೆ

  4. ೨. ಟಿಪ್ಪುಸುಲ್ತಾನ್ ಮಡಿದ ಸ್ಥಳದ ಬಗ್ಗೆ ಮಾಹಿತಿ ಇದೆ.

  5. ಯಾರು ಹೇಳಿದರು? .........................................................................

    Answer

    ಪೀಟರ್

  6. ಯಾರಿಗೆ ಹೇಳಿದರು? .........................................................................

    Answer

    ಶಿಕ್ಷಕರಿಗೆ

  7. ೩. ಯಾವುದೋ ಹಳೆಯ ಅರಮನೆ ಸ್ಥಳ ಕಾಣುತ್ತಿದೆ.

  8. ಯಾರು ಹೇಳಿದರು? .........................................................................

    Answer

    ಗೌರಿ

  9. ಯಾರಿಗೆ ಹೇಳಿದರು? .........................................................................

    Answer

    ಎಲ್ಲರಿಗೆ

ಈ) ಒಂದು ವಾಕ್ಯದಲ್ಲಿ ಉತ್ತರಿಸಿರಿ.

  1. ೧. ಮಕ್ಕಳು ಯಾವ ಊರಿಗೆ ಪ್ರವಾಸ ಹೊರಟರು?

  2. .........................................................................................................

    Answer

    ಮಕ್ಕಳು ಶ್ರೀರಂಗಪಟ್ಟಣಕ್ಕೆ ಪ್ರವಾಸ ಹೊರಟರು.

  3. ೨. ಶ್ರೀರಂಗಪಟ್ಟಣ ಯಾವ ಜಿಲ್ಲೆಗೆ ಸೇರಿದೆ?

  4. .........................................................................................................

    Answer

    ಶ್ರೀರಂಗಪಟ್ಟಣ ಮಂಡ್ಯ ಜಿಲ್ಲೆಗೆ ಸೇರಿದೆ.

  5. ೩. ಜಾಮಿಯಾ ಮಸೀದಿ ಯಾರ ಅವಧಿಯಲ್ಲಿ ನಿರ್ಮಿಸಲಾಗಿದೆ?

  6. .........................................................................................................

    Answer

    ಜಾಮಿಯಾ ಮಸೀದಿಯನ್ನು ಟಿಪ್ಪು ಸುಲ್ತಾನನ ಆಡಳಿತದ ಅವಧಿಯಲ್ಲಿ ನಿರ್ಮಿಸಲಾಗಿದೆ.

  7. ೪. ಟಿಪ್ಪುಸುಲ್ತಾನ್ ವಾಸವಿದ್ದ ಅರಮನೆಯ ಹೆಸರೇನು?

  8. .........................................................................................................

    Answer

    ಟಿಪ್ಪುಸುಲ್ತಾನ್ ವಾಸವಿದ್ದ ಅರಮನೆಯ ಹೆಸರು ಲಾಲ್‌ಮಹಲ್.

ಉ) ಕೆಳಗಿನ ಪ್ರಶ್ನೆಗಳಿಗೆ ಎರಡು ಅಥವಾ ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ಶ್ರೀರಂಗಪಟ್ಟಣದಲ್ಲಿ ಕೋಟೆಯನ್ನು ಏಕೆ ಕಟ್ಟಿದ್ದಾರೆ?

  2. .........................................................................................................

    Answer

    ಹಿಂದೆ ಹಲವಾರು ರಾಜರು ಈ ಊರನ್ನು ಆಳುತ್ತಿದ್ದರು.

  3. .........................................................................................................

    Answer

    ಊರನ್ನು ಶತ್ರುಗಳಿಂದ ರಕ್ಷಿಸಲು ಕೋಟೆಯನ್ನು ಕಟ್ಟಿದ್ದಾರೆ.

  4. ೨. ಮದ್ದಿನ ಮನೆಯನ್ನು ಏಕೆ ನಿರ್ಮಿಸಿದ್ದಾರೆ?

  5. .........................................................................................................

    Answer

    ಶ್ರೀರಂಗಪಟ್ಟಣದಲ್ಲಿ ಮದ್ದಿನ ಮನೆ ಇದೆ.

  6. .........................................................................................................

    Answer

    ಯುದ್ಧದ ಸಮಯದಲ್ಲಿ ಮದ್ದುಗುಂಡುಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲು ಇದನ್ನು ನಿರ್ಮಿಸಿದ್ದಾರೆ.

Interactive Lab

ಗಮನಿಸುga-ma-ni-supay attention, notice
ತಾಣtaa-naplace, base
ಹೆಬ್ಬಾಗಿಲುheb-baa-gi-lumain gate, great entrance
ರಕ್ಷಿಸುrak-shi-suprotect, save, guard
ಸುರಕ್ಷಿತsu-rak-shi-tasafe, secure
ಸಂಗ್ರಹಿಸುsan-gra-hi-sucollect, gather, store
ನಿರ್ವಹಣೆnir-va-ha-nemanagement, maintenance