CRECT Education

Class 4 Kannada Lesson 7: How Many Crows? | KTBS Second Language – Practice & Quiz

Description

Practice comprehension questions and a proverb puzzle from the Birbal story 'How Many Crows?' (ಕಾಗೆಗಳೆಷ್ಟು?). Part 2 review for Class 4 Second Language.

ಗದ್ಯ (prose) · ಸಮಿತಿ ರಚನೆ (Committee-authored)

ಪಠ್ಯFull text

ಅಕ್ಬರ್ ಬಾದಶಹನು ತನ್ನ ಆಸ್ಥಾನದ ಮಂತ್ರಿಗಳಿಗೆ ಆಗಾಗ ಅನೇಕ ಪ್ರಶ್ನೆಗಳನ್ನು ಕೇಳಿ ಅವರ ಬುದ್ಧಿವಂತಿಕೆಯನ್ನು ಪರೀಕ್ಷಿಸುತ್ತಿದ್ದನು. ಅವುಗಳಲ್ಲಿ ಕೆಲವು ತಮಾಷೆಯ ಪ್ರಶ್ನೆಗಳಿರುತ್ತಿದ್ದವು. ಕೆಲವು ಪ್ರಶ್ನೆಗಳಿಗೆ ಉತ್ತರ ಹೇಳಲು ಮಂತ್ರಿಗಳು ಸಹ ತಡವರಿಸುತ್ತಿದ್ದರು. ಆ ಸಮಯದಲ್ಲಿ ಬಾದಶಹನ ಆಸ್ಥಾನದ ಜಾಣ ಮಂತ್ರಿ ಬೀರಬಲ್ಲನು ಅಕ್ಬರ ಬಾದಶಹನ ಪ್ರಶ್ನೆಗೆ ಸೂಕ್ತ ಉತ್ತರ ಹೇಳಿ ಸಮಾಧಾನಪಡಿಸುತ್ತಿದ್ದನು. ಒಂದು ದಿನ ಅಕ್ಬರನು ಒಡ್ಡೋಲಗವನ್ನು ನಡೆಸುತ್ತಿದ್ದಾಗ ಆಸ್ಥಾನದ ಒಳಗೆ ಎರಡು ಕಾಗೆಗಳು ಹಾರಿ ಬಂದವು. ಬಾದಶಹನು ಕಾವಲುಗಾರರಿಗೆ ಆ ಕಾಗೆಗಳನ್ನು ಓಡಿಸಲು ಹೇಳಿದನು. ಅಷ್ಟರಲ್ಲಿ ಅಕ್ಬರನಿಗೆ ಒಂದು ಸಂದೇಹ ಬಂದಿತು. "ನಮ್ಮ ದೆಹಲಿಯಲ್ಲಿ ಈಗ ಎಷ್ಟು ಕಾಗೆಗಳಿರಬಹುದು?" ಈ ಸಮಸ್ಯೆಯನ್ನು ಸಭೆಯ ಮುಂದಿರಿಸಿದನು. ಅದನ್ನು ಕೇಳಿ ಸಭೆಯಲ್ಲಿದ್ದ ಮಂತ್ರಿಗಳಿಗೆ, ಜನರಿಗೆ ತಲೆ ತಿರುಗಿದಂತಾಯಿತು. ಏನು ಉತ್ತರ ಹೇಳುವುದು ಎಂದು ಗೊತ್ತಾಗದೆ ಎಲ್ಲರೂ ಬೀರಬಲ್ಲನ ಕಡೆಗೆ ನೋಡಿದರು. ಬೀರಬಲ್ಲನು ತಾನು ಕುಳಿತಲ್ಲೆ ಏನೋ ಲೆಕ್ಕಾಚಾರ ಮಾಡುತ್ತಿದ್ದನು. ಅಕ್ಬರ್ ಬಾದಶಹನು ಎಲ್ಲರಿಗೂ ಪ್ರಶ್ನೆ ಕೇಳುತ್ತ ಬೀರಬಲ್ಲನ ಕಡೆ ತಿರುಗಿ "ಬೀರಬಲ್ಲ, ನನ್ನ ಪ್ರಶ್ನೆಗೆ ನೀನಾದರೂ ಉತ್ತರ ಹೇಳಬಲ್ಲೆಯಾ?" ಎಂದನು. ಅದಕ್ಕೆ ಬೀರಬಲ್ಲನು "ಖಂಡಿತ ಜಹಾಪನಾ, ಉತ್ತರ ಹೇಳುತ್ತೇನೆ. ಆದರೆ ನನಗೆ ಮೂರು ದಿನಗಳ ಕಾಲಾವಕಾಶ ಬೇಕು" ಎಂದು ಹೇಳಿದ. ಅಕ್ಬರನು ಮೂರು ದಿನಗಳ ಕಾಲಾವಕಾಶವನ್ನು ನೀಡಿದ. ಬೀರಬಲ್ಲ ಕಾಗೆಗಳನ್ನು ಎಣಿಸದೆ ಮನೆಯಲ್ಲಿ ಆರಾಮವಾಗಿ ಅಷ್ಟೂ ದಿನ ವಿಶ್ರಾಂತಿಯನ್ನು ಪಡೆದುಕೊಂಡ. ಮೂರು ದಿನಗಳ ಬಳಿಕ ಬೀರಬಲ್ಲನು ಅಕ್ಬರನ ಆಸ್ಥಾನಕ್ಕೆ ಬಂದನು. ಎಲ್ಲರೂ ಬೀರಬಲ್ಲ ಹೇಳುವ ಉತ್ತರಕ್ಕಾಗಿ ಕಾತರದಿಂದ ಕಾಯುತ್ತಿದ್ದರು. ಆಗ ಅಕ್ಬರ್ ಬಾದಶಹನು, "ಬೀರಬಲ್ಲ, ನನ್ನ ಪ್ರಶ್ನೆಗೆ ಉತ್ತರ ಹೇಳುವೆಯಾ?" ಎಂದ. ಅದಕ್ಕೆ ಬೀರಬಲ್ಲನು "ಪ್ರಭುಗಳೇ, ಮೂರು ದಿನಗಳಿಂದ ನಾನು ಮತ್ತು ನಗರ ಕಾಯುವ ಸೇವಕರು ಸೇರಿ ಬಹಳ ಕಷ್ಟಪಟ್ಟು ದೆಹಲಿಯಲ್ಲಿರುವ ಕಾಗೆಗಳನ್ನು ಎಣಿಸಿದ್ದೇವೆ" ಎಂದ. "ಹಾಗಾದರೆ ನಮ್ಮ ನಗರದಲ್ಲಿರುವ ಕಾಗೆಗಳೆಷ್ಟು?" ಎಂದು ಅಕ್ಬರ್ ಕೇಳಿದಾಗ, ಬೀರಬಲ್– "ನಮ್ಮ ನಗರದಲ್ಲಿ ಐವತ್ತೊಂದು ಸಾವಿರದ ಆರುನೂರ ಹದಿನೈದು ಕಾಗೆಗಳಿವೆ ಜಹಾಪನಾ" ಎಂದು ಉತ್ತರಿಸಿದ. ಇದನ್ನು ಕೇಳಿ ಆಶ್ಚರ್ಯಪಟ್ಟ ಅಕ್ಬರ್, "ಇಷ್ಟು ನಿಖರವಾಗಿ ಕಾಗೆಗಳ ಗಣತಿ ಮಾಡಿರುವ ನಿನಗೆ ಧನ್ಯವಾದಗಳು. ಆದರೆ ನಾನೊಮ್ಮೆ ನಿನ್ನ ಗಣತಿಯ ಆಧಾರದಲ್ಲಿ ಕಾಗೆಗಳನ್ನು ಪುನಃ ಎಣಿಸಿದಾಗ ಲೆಕ್ಕಾಚಾರ ಹೆಚ್ಚುಕಮ್ಮಿಯಾದರೆ?" ಎಂದಾಗ ಬೀರಬಲ್ಲನು ಕೊಂಚವೂ ತಡವರಿಸದೆ, "ಪ್ರಭುಗಳೇ, ನೀವು ಕಾಗೆಗಳನ್ನು ಲೆಕ್ಕ ಹಾಕುವಾಗ ಒಂದೊಮ್ಮೆ ಕಡಿಮೆಯಾದರೆ ಕಡಿಮೆಯಾದಷ್ಟು ಕಾಗೆಗಳು ಅವುಗಳ ನೆಂಟರ ಊರಿಗೆ ಹೋಗಿದ್ದಾವೆ ಎಂದು ಅರ್ಥ. ಒಂದೊಮ್ಮೆ ನೀವು ಕಾಗೆಗಳನ್ನು ಲೆಕ್ಕ ಹಾಕುವಾಗ ಹೆಚ್ಚಾದರೆ ಪರಸ್ಥಳದಲ್ಲಿರುವ ಕಾಗೆಗಳು ಅವುಗಳ ನೆಂಟರ ಮನೆಗೆ ಬಂದಿದ್ದಾವೆ ಎಂದರ್ಥ" ಎಂದು ಹೇಳಿ ಸುಮ್ಮನಾದನು. ಅಕ್ಬರನು ಬೀರಬಲ್ಲನ ಜಾಣ ಉತ್ತರವನ್ನು ಕೇಳಿ ಮನಸ್ಸಿನಲ್ಲಿ ನಗುತ್ತ, "ಬೀರಬಲ್ಲ ನೀನು ಸಾಮಾನ್ಯದವನಲ್ಲ. ಬಹಳ ಉತ್ತಮವಾದ ಉತ್ತರವನ್ನು ಕೊಟ್ಟು ನನ್ನನ್ನು ಸಮಾಧಾನಪಡಿಸಿದ್ದೀಯಾ" ಎಂದು ಚಿನ್ನದ ಹಾರದ ಉಡುಗೊರೆಯನ್ನು ನೀಡಿ ಗೌರವಿಸಿದನು. ನೆರೆದಿದ್ದ ಸಭಿಕರು, ಮಂತ್ರಿಗಳು ಬೀರಬಲ್ಲನ ಜಾಣ್ಮೆಯ ಉತ್ತರಕ್ಕೆ 'ಶಹಬ್ಬಾಸ್' ಎಂದರು. **ಕೌಶಲ :- ಬರೆಯುವುದು.** **ಸಾಮರ್ಥ್ಯ:** ಬರೆವಣಿಗೆಯಲ್ಲಿ ಲೇಖನ ಚಿಹ್ನೆಗಳನ್ನು ಗಮನಿಸಿ ಬರೆಯುವುದು.

**ಶುಭನುಡಿ (Good words)** * ಚೆನ್ನಾಗಿ ಓದು, ಚೆನ್ನಾಗಿ ಬಾಳು. (Read well, live well.) * ಪ್ರಯತ್ನದಿಂದಲೇ ಕಾರ್ಯಸಿದ್ಧಿ. (Success comes from effort.) * ಉಪಾಯ ಬಲ್ಲವನಿಗೆ ಅಪಾಯವಿಲ್ಲ. (One who knows a trick/solution has no danger.)

ಪದಗಳ ಅರ್ಥword meanings

KannadaPronunciationMeaning
ತಡವರಿಸುta-da-va-ri-suಹುಡುಕು, ತಡಕಾಡು (fumble, search)
ಸಮಾಧಾನsa-maa-dhaa-naಮನಸ್ಸಿನ ಶಾಂತಿ, ನೆಮ್ಮದಿ (peace of mind, calmness)
ಒಡ್ಡೋಲಗod-do-la-gaದೊಡ್ಡ ದರ್ಬಾರು, ಸಭೆ (grand court, assembly)
ಸಂದೇಹsan-day-haಅನುಮಾನದಿಂದ ಕೂಡಿದ (doubtful)
ತಲೆತಿರುಗಿದಂತಾಗುta-le-ti-ru-gi-dan-taa-guತಬ್ಬಿಬ್ಬಾಗು, ತಲೆಸುತ್ತು ಬರು, ಬವಳಿಬರು (to feel dizzy, confused)
ಔದಾರ್ಯou-daar-yaಉದಾರತೆ (generosity)
ನಿಖರni-kha-raಕರಾರುವಾಕ್ಕು, ನಿರ್ದಿಷ್ಟ (exact, precise)
ಗಲಾಟೆga-laa-teಗಲಭೆ (commotion, noise)
ಪರಸ್ಥಳpa-ras-tha-laಹೊರನಾಡು, ಪರದೇಶ (other place, foreign land)
ನೆಂಟರುnen-ta-ruಬಂಧುಗಳು, ಸಂಬಂಧಿಕರು (relatives)
ಗೌರವgou-ra-vaಮರ್ಯಾದೆ, ಶ್ರೇಷ್ಠತೆ (respect, honor)

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ) ಬಿಟ್ಟಿರುವ ಪದಗಳನ್ನು ಸರಿಯಾಗಿ ತುಂಬಿರಿ.

  1. ೧. ಅಕ್ಬರ್ ಬಾದಶಹನು ಮಂತ್ರಿಗಳ .......................... ಪರೀಕ್ಷಿಸುತ್ತಿದ್ದನು.

    Answer

    ಅಕ್ಬರ್ ಬಾದಶಹನು ಮಂತ್ರಿಗಳ ಬುದ್ಧಿವಂತಿಕೆಯನ್ನು ಪರೀಕ್ಷಿಸುತ್ತಿದ್ದನು.

  2. ೨. ದೆಹಲಿಯಲ್ಲಿ ಈಗ .......................... ಕಾಗೆಗಳಿರಬಹುದು?

    Answer

    ದೆಹಲಿಯಲ್ಲಿ ಈಗ ಎಷ್ಟು ಕಾಗೆಗಳಿರಬಹುದು?

  3. ೩. ಬೀರಬಲ್ಲ 'ನನಗೆ ................. ದಿನಗಳ ಕಾಲಾವಕಾಶಬೇಕು' ಎಂದು ಹೇಳಿದ.

    Answer

    ಬೀರಬಲ್ಲ 'ನನಗೆ ಮೂರು ದಿನಗಳ ಕಾಲಾವಕಾಶ ಬೇಕು' ಎಂದು ಹೇಳಿದ.

  4. ೪. ಮಂತ್ರಿಗಳು ಬೀರಬಲ್ಲನ ಜಾಣ್ಮೆಯ ಉತ್ತರಕ್ಕೆ .......................... ಎಂದರು.

    Answer

    ಮಂತ್ರಿಗಳು ಬೀರಬಲ್ಲನ ಜಾಣ್ಮೆಯ ಉತ್ತರಕ್ಕೆ 'ಶಹಬ್ಬಾಸ್' ಎಂದರು.

ಆ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

  1. ೧. ಅಕ್ಬರನ ಒಡ್ಡೋಲಗ ನಡೆಯುವಾಗ ಒಳಗೆ ಹಾರಿ ಬಂದ ಪಕ್ಷಿಗಳು ಯಾವುವು?

    Answer

    ಅಕ್ಬರನ ಒಡ್ಡೋಲಗ ನಡೆಯುವಾಗ ಒಳಗೆ ಹಾರಿ ಬಂದ ಪಕ್ಷಿಗಳು ಎರಡು ಕಾಗೆಗಳು.

  2. ೨. ಕಾಗೆ ಎಣಿಸಲು ಬೀರಬಲ್ಲ ಎಷ್ಟು ದಿನಗಳ ಕಾಲಾವಕಾಶ ಕೇಳಿದ?

    Answer

    ಕಾಗೆ ಎಣಿಸಲು ಬೀರಬಲ್ಲ ಮೂರು ದಿನಗಳ ಕಾಲಾವಕಾಶ ಕೇಳಿದ.

  3. ೩. 'ಗಣತಿ' ಈ ಪದದ ಅರ್ಥವೇನು?

    Answer

    ಗಣತಿ ಎಂದರೆ ಎಣಿಕೆ.

  4. ೪. ಅಕ್ಬರನ 'ಕಾಗೆಗಳೆಷ್ಟು' ಎಂಬ ಪ್ರಶ್ನೆಗೆ ಬೀರಬಲ್ಲನ ಉತ್ತರವೇನು?

    Answer

    ಅಕ್ಬರನ 'ಕಾಗೆಗಳೆಷ್ಟು' ಎಂಬ ಪ್ರಶ್ನೆಗೆ ಬೀರಬಲ್ಲನು ನಮ್ಮ ನಗರದಲ್ಲಿ ಐವತ್ತೊಂದು ಸಾವಿರದ ಆರುನೂರ ಹದಿನೈದು ಕಾಗೆಗಳಿವೆ ಎಂದು ಉತ್ತರಿಸಿದ.

  5. ೫. ಮಂತ್ರಿಗಳು ಬೀರಬಲ್ಲನಿಗೆ ಏಕೆ ಶಹಬ್ಬಾಸ್ ಎಂದರು?

    Answer

    ಮಂತ್ರಿಗಳು ಬೀರಬಲ್ಲನ ಜಾಣ್ಮೆಯ ಉತ್ತರಕ್ಕೆ ಶಹಬ್ಬಾಸ್ ಎಂದರು.

ಇ) ಕೆಳಗಿನ ಪ್ರಶ್ನೆಗಳಿಗೆ ಎರಡು ಅಥವಾ ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ಅಕ್ಬರನು 'ಪುನಃ ಗಣತಿ ಮಾಡಿದಾಗ ಕಾಗೆಗಳು ಹೆಚ್ಚು ಕಡಿಮೆಯಾದರೆ' ಎಂದಾಗ ಬೀರಬಲ್ಲನು ನೀಡಿದ ಉತ್ತರವೇನು?

    Answer

    ಅಕ್ಬರನು ಪುನಃ ಗಣತಿ ಮಾಡಿದಾಗ ಕಾಗೆಗಳು ಕಡಿಮೆಯಾದರೆ ಕಡಿಮೆಯಾದಷ್ಟು ಕಾಗೆಗಳು ಅವುಗಳ ನೆಂಟರ ಊರಿಗೆ ಹೋಗಿದ್ದಾವೆ ಎಂದು ಬೀರಬಲ್ಲನು ಹೇಳಿದ. ಹೆಚ್ಚಾದರೆ ಪರಸ್ಥಳದಲ್ಲಿರುವ ಕಾಗೆಗಳು ಅವುಗಳ ನೆಂಟರ ಮನೆಗೆ ಬಂದಿದ್ದಾವೆ ಎಂದು ಅರ್ಥ ಎಂದನು.

  2. ೨. ನಿಮಗೆ ಈ ಪ್ರಶ್ನೆಯನ್ನು ಕೇಳಿದ್ದರೆ ನೀವೇನು ಮಾಡುತ್ತಿದ್ದಿರಿ ಮಕ್ಕಳೇ?

ಭಾಷಾಭ್ಯಾಸ (Language Exercise)

ಅ) ಕೆಳಗಿನ ಪದಗಳನ್ನು ಬಳಸಿ ಸ್ವಂತ ವಾಕ್ಯ ರಚಿಸಿರಿ.

  1. ೧. ಕಾವಲುಗಾರ: ........................................................................................................

    Model sentence

    ಕಾವಲುಗಾರ: ನಮ್ಮ ಶಾಲೆಯ ಗೇಟಿನ ಬಳಿ ಕಾವಲುಗಾರರು ನಿಲ್ಲುತ್ತಾರೆ. ವಿಶ್ರಾಂತಿ: ಆಟವಾಡಿದ ಮೇಲೆ ನಾನು ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳುತ್ತೇನೆ. ಜಾಣ: ನನ್ನ ಗೆಳೆಯ ರಮೇಶ ತುಂಬಾ ಜಾಣ.

  2. ೨. ವಿಶ್ರಾಂತಿ: ........................................................................................................

  3. ೩. ಜಾಣ: ........................................................................................................

ಆ) ಈ ವಾಕ್ಯಗಳನ್ನು ಹೇಳುತ್ತಾ ಬರೆಯಿರಿ.

  1. ೧. ಖಂಡಿತ ಜಹಾಪನಾ, ಉತ್ತರ ಹೇಳುತ್ತೇನೆ.

  2. ೨. ನಮ್ಮ ನಗರದಲ್ಲಿರುವ ಕಾಗೆಗಳೆಷ್ಟು?

ಭಾಷಾ ಚಟುವಟಿಕೆ (Language activity)

೧) ಲೇಖನ ಚಿಹ್ನೆಗಳನ್ನು ತಿಳಿಯಿರಿ. ಮತ್ತು ಅವುಗಳನ್ನು ವಾಕ್ಯಗಳಲ್ಲಿ ಬಳಸುವ ಅಭ್ಯಾಸ ಮಾಡಿರಿ.

  1. ೧. ಪೂರ್ಣ ವಿರಾಮ – (.)

  2. ೨. ಅರ್ಧ ವಿರಾಮ – (;)

  3. ೩. ಅಲ್ಪ ವಿರಾಮ– (,)

  4. ೪. ಕೂಡು ಚಿಹ್ನೆ– (+)

  5. ೫. ಸಮಾನಾರ್ಥಕ ಚಿಹ್ನೆ– (=)

  6. ೬. ಪ್ರಶ್ನಾರ್ಥಕ ಚಿಹ್ನೆ– (?)

  7. ೭. ಭಾವಸೂಚಕ ಚಿಹ್ನೆ – (!)

  8. ೮. ವಿವರಣ ಚಿಹ್ನೆ– (:)

  9. ೯. ಉದ್ಧರಣ ಚಿಹ್ನೆ– ("..........")

  10. ೧೦.ವಾಕ್ಯವೇಷ್ಟನ ಚಿಹ್ನೆ– ('.........')

೨) ಕೆಳಗಿನ ವಾಕ್ಯಗಳಲ್ಲಿ ಲೇಖನ ಚಿಹ್ನೆಗಳನ್ನು ಬಳಸಿದೆ. ಗಮನಿಸಿರಿ.

  1. ೧. ಸುರಾನ ಶಾಲೆಗೆ ಬಂದಳು. (.)

  2. ೨. ಅಶೋಕನು ಹಲವು ರಾಜ್ಯಗಳನ್ನು ಗೆದ್ದ; ಕಳಿಂಗದ ಮೇಲೆ ದಾಳಿ ಮಾಡಿದ.(;)

  3. ೩. ಅಬ್ದುಲ್, ಅಂತೋಣಿ, ಚಂಗಪ್ಪ ಊರಿಗೆ ಹೊರಟರು. (,)

  4. ೪. ಅಬ್ಬಾ! ಈ ನವಿಲು ಎಷ್ಟು ಸುಂದರವಾಗಿದೆ! (!)

  5. ೫. ಕರ್ನಾಟಕ: ಇದು ನಮ್ಮ ದೇಶದ ಸುಂದರವಾದ ರಾಜ್ಯ. (:)

  6. ೬. ಏಕ+ಏಕ= ಏಕೈಕ (+)

  7. ೭. ಗರ್ವ= ಜಂಬ (=)

  8. ೮. ನಿನ್ನ ಹೆಸರೇನು? (?)

  9. ೯. "ನಾನು ಪೇಟೆಗೆ ಹೋಗುತ್ತೇನೆ" ಮಾಲಿನಿ ಹೇಳಿದಳು. ("....")

  10. ೧೦. 'ನನ್ನ ಬದುಕು ಇನ್ನು ಮುಂದೆ ಪಕ್ಷಿ ಅಧ್ಯಯನಕ್ಕೆ ಮೀಸಲು' ('.....')

೩) ಪಾಠದ ಯಾವುದಾದರೊಂದು ಭಾಗದ ಉಕ್ತಲೇಖನ ಬರೆಯಿಸಿ, ಅದಕ್ಕೆ ಸೂಕ್ತ ಲೇಖನ ಚಿಹ್ನೆಗಳನ್ನು ಅಳವಡಿಸುವಂತೆ ಹೇಳುವುದು.

೪) ಈ ಚಿತ್ರ ಸಹಿತ ಅಪೂರ್ಣ ಗಾದೆಗಳನ್ನು ಓದಿ, ಕೆಳಗೆ ನೀಡಲಾದ ಸಾಲುಗಳಲ್ಲಿ ಅವುಗಳ ಪೂರ್ಣ ರೂಪ ಬರೆಯಿರಿ.

  1. (1. An image of a pot full of something with the word ಭಕ್ಷ್ಯ written on it, followed by "ಮೇಲೆ ಆಸೆ," then an image of a family, followed by "ಮೇಲೆ ಪ್ರೀತಿ")

  2. (2. "ಅಂಬಲಿ ಕುಡಿಯುವವನಿಗೆ" followed by an image of a man with a large mustache twisting it, followed by "ತಿಕ್ಕುವವನೊಬ್ಬ")

  3. (3. "ದೂರದ" followed by an image of a mountain, followed by "ನುಣ್ಣಗೆ")

  4. ೧) ...........................................................................................................................

    Answer

    ಭಕ್ಷ್ಯದ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ.

  5. ೨) ...........................................................................................................................

  6. ೩) ...........................................................................................................................

ಓದಿಗೆ ಮನ್ನಣೆ (Value for reading)

  1. * ಅಕ್ಬರ್ ಬೀರಬಲ್ಲರ ಕಥೆಗಳನ್ನು ಓದಿರಿ.

  2. * ತೆನಾಲಿ ರಾಮಕೃಷ್ಣನ ಕಥೆಗಳನ್ನು ಓದಿರಿ.

  3. * ಬುದ್ಧಿವಂತಿಕೆಗೆ ಸಂಬಂಧಿಸಿದ ಕಥೆಗಳನ್ನು, ಘಟನೆಗಳನ್ನು ಓದಿ/ಕೇಳಿ ತಿಳಿಯಿರಿ.

Interactive Lab

ತಡವರಿಸುta-da-va-ri-suಹುಡುಕು, ತಡಕಾಡು (fumble, search)
ಸಮಾಧಾನsa-maa-dhaa-naಮನಸ್ಸಿನ ಶಾಂತಿ, ನೆಮ್ಮದಿ (peace of mind, calmness)
ಒಡ್ಡೋಲಗod-do-la-gaದೊಡ್ಡ ದರ್ಬಾರು, ಸಭೆ (grand court, assembly)
ಸಂದೇಹsan-day-haಅನುಮಾನದಿಂದ ಕೂಡಿದ (doubtful)
ತಲೆತಿರುಗಿದಂತಾಗುta-le-ti-ru-gi-dan-taa-guತಬ್ಬಿಬ್ಬಾಗು, ತಲೆಸುತ್ತು ಬರು, ಬವಳಿಬರು (to feel dizzy, confused)
ಔದಾರ್ಯou-daar-yaಉದಾರತೆ (generosity)
ನಿಖರni-kha-raಕರಾರುವಾಕ್ಕು, ನಿರ್ದಿಷ್ಟ (exact, precise)
ಗಲಾಟೆga-laa-teಗಲಭೆ (commotion, noise)
ಪರಸ್ಥಳpa-ras-tha-laಹೊರನಾಡು, ಪರದೇಶ (other place, foreign land)
ನೆಂಟರುnen-ta-ruಬಂಧುಗಳು, ಸಂಬಂಧಿಕರು (relatives)
ಗೌರವgou-ra-vaಮರ್ಯಾದೆ, ಶ್ರೇಷ್ಠತೆ (respect, honor)