CRECT Education

Class 5 Kannada Lesson 17: Eastern House | KTBS Savi Kannada – Learn the Poem

Description

A line-by-line walkthrough of the patriotic Kannada poem 'ಮೂಡಲ ಮನೆ' (Eastern House) by Dr. Chandrashekhara Kambara — with vocabulary teaching, practice loops, and comprehension quiz.

ಪದ್ಯ (poem) · ಚಂದ್ರಶೇಖರ ಕಂಬಾರ

ಪಠ್ಯFull text

ನಮ್ಮೂರ ಅಗಸ್ಯಾಗ ಆಲದ ಮರ ಬೆಳೆದು ಹಾದಿ ಬೀದೆಲ್ಲಾ ತಂಪು ನೆರಳ। ನೆತ್ತಿಗೂದಲ ಹರವಿ ತಪವ ಮಾಡೋನ್ಯಾರ। ಜಡಿಮುನಿಯ ಜಡಿಯ ಹಾಂಗ ಬಿಳಲ॥ ರೆಂಬಿ ಕೊಂಬಿಯ ಮ್ಯಾಲ ಗೂಡ ಕಟ್ಟಿದಾವ ರೆಕ್ಕೆ ಬಲಿತ ಹಕ್ಕಿ ಗೂಡಿನಾಗ । ಮಲಗ್ಯಾವ ಮರಿಹಕ್ಕಿ ॥ ದೂರ ದೇಶದ ವಲಸಿಗ ಹಕ್ಕಿಗು ಐತಿ ಜಾಗ ಒಳಗ । ಬನ್ನಿರಿ । ನೀವು ನಮ್ಮ ಬಳಗ ॥ ಹಳೆಯ ಬಾವಿಯ ತಳದ ನೀರಿನಾಗ ಹಸರು ಚಿಗರತಾವ । ಬೇರಿಗೆ ಮೊಳಕಿ ಒಡಿಯತಾವ ॥ ಭೂತ ಬೇತಾಳ ಜೋತ ಬಾವಲಿ ಮ್ಯಾಲ ಕೂಗತಾವ । ಮರದಾಗ ॥ ಕರಗ ಕುಣಿಯತಾವ ॥ ಮರದ ಎಲೆ ನೆರಳು ಮನೆಯ ಗೋಡೆ ಮ್ಯಾಲ ಆಡತಾವ ಆಟ ಮೂಡ್ನಾವ । ತೊಗಲ ಗೊಂಬಿಯಾಟ ಕರುಳ ಬಳ್ಳಿಯ ಕತೆಯ ಹೇಳತಾವ ನೋಡ್ರಿ ಶಾಂತ ಚಿತ್ತ । ನಾವೂನು ಅದರ ಭಾಗ ಮಾತ್ರ ॥

"ನಿನ್ನ ದೇಶಕ್ಕಾಗಿ ನೀನು ಯಾವ ತ್ಯಾಗಕ್ಕಾದರೂ ಸಿದ್ಧನಾಗು." — "Be ready to make any sacrifice for your country."

ಪದಗಳ ಅರ್ಥword meanings

KannadaPronunciationMeaning
ಅಗಸಿಊರಿನ ಪ್ರವೇಶದ್ವಾರ, ಊರ ಹೆಬ್ಬಾಗಿಲು ಐತಿ - ಇದೆ, ಇರುವುದು ಕರಗ - ಒಂದು ಉತ್ಸವದ ಹೆಸರು

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

  1. ೧. ಆಲದ ಮರ ಎಲ್ಲಿ ಬೆಳೆದು ನಿಂತಿದೆ?

    Answer

    ನಮ್ಮೂರ ಅಗಸಿಯಲ್ಲಿ ಆಲದ ಮರ ಬೆಳೆದು ನಿಂತಿದೆ.

  2. ೨. ರೆಂಬೆ ಕೊಂಬೆಯ ಮೇಲೆ ಯಾರು ಗೂಡು ಕಟ್ಟಿದ್ದಾರೆ?

    Answer

    ರೆಂಬೆ ಕೊಂಬೆಯ ಮೇಲೆ ರೆಕ್ಕೆ ಬಲಿತ ಹಕ್ಕಿಯು ಗೂಡು ಕಟ್ಟಿದೆ.

  3. ೩. ಬನ್ನಿರಿ, ನೀವು ನಮ್ಮ ಬಳಗ ಎಂದು ಕವಿ ಯಾರಿಗೆ ಹೇಳುತ್ತಿದ್ದಾರೆ?

    Answer

    ಕವಿ ದೂರ ದೇಶದ ವಲಸಿಗ ಹಕ್ಕಿಗಳಿಗೆ ಹೇಳುತ್ತಿದ್ದಾರೆ.

  4. ೪. ಮರದಲ್ಲಿ ಯಾರೆಲ್ಲಾ ಸೇರಿ ಕರಗ ಕುಣಿಯುತ್ತಾರೆ?

    Answer

    ಭೂತ, ಬೇತಾಳ ಮತ್ತು ಬಾವಲಿಗಳು ಸೇರಿ ಮರದಲ್ಲಿ ಕರಗ ಕುಣಿಯುತ್ತಾರೆ.

  5. ೫. ಮರದ ಎಲೆಗಳ ನೆರಳಾಟ ಎಲ್ಲಿ ನಡೆಯುತ್ತಿದೆ?

    Answer

    ಮರದ ಎಲೆಗಳ ನೆರಳಾಟ ಮನೆಯ ಗೋಡೆಯ ಮೇಲೆ ನಡೆಯುತ್ತಿದೆ.

  6. ೬. ಕವಿ ಇಲ್ಲಿ ದೇಶವನ್ನು ಯಾವುದಕ್ಕೆ ಹೋಲಿಸಿದ್ದಾರೆ?

ಆ. ಕೆಳಗಿನ ಪದ್ಯಭಾಗವನ್ನು ಪೂರ್ಣಗೊಳಿಸಿ, ಕಂಠಪಾಠ ಮಾಡಿರಿ.

  1. ೧. ನಮ್ಮೂರ ________________________________________

    Answer

    ಅಗಸ್ಯಾಗ ಆಲದ ಮರ ಬೆಳೆದು

  2. ________________________________________

    Answer

    ಹಾದಿ ಬೀದೆಲ್ಲಾ ತಂಪು ನೆರಳ।

  3. ________________________________________

    Answer

    ನೆತ್ತಿಗೂದಲ ಹರವಿ ತಪವ ಮಾಡೋನ್ಯಾರ।

  4. ________________________________________ ಹ್ಯಾಂಗ ಬಿಳಲ॥

    Answer

    ಜಡಿಮುನಿಯ ಜಡಿಯ

  5. ೨. ಮೂಡ್ನಾವ । ________________________________________

    Answer

    ತೊಗಲ ಗೊಂಬಿಯಾಟ

  6. ________________________________________

    Answer

    ಕರುಳ ಬಳ್ಳಿಯ ಕತೆಯ ಹೇಳತಾವ

  7. ________________________________________

    Answer

    ನೋಡ್ರಿ ಶಾಂತ ಚಿತ್ತ ।

  8. ________________________________________ ಭಾಗ ಮಾತ್ರ ॥

    Answer

    ನಾವೂನು ಅದರ

Interactive Lab

ಅಗಸಿಊರಿನ ಪ್ರವೇಶದ್ವಾರ, ಊರ ಹೆಬ್ಬಾಗಿಲು ಐತಿ - ಇದೆ, ಇರುವುದು ಕರಗ - ಒಂದು ಉತ್ಸವದ ಹೆಸರು