CRECT Education

Class 5 Kannada Lesson 18: Goddess Bhuvaneshwari | KTBS Class 5 Kannada First Language

Description

Walkthrough of the poem Bhuvaneshwari by B.V. Satyanarayana Rao, covering Karnataka's history, vocabulary, and comprehension.

ಪದ್ಯ · ಬಿ.ವಿ. ಸತ್ಯನಾರಾಯಣರಾವ್

ಪಠ್ಯFull text

ಭುವನೇಶ್ವರಿ ಪದ ಪೂಜಿಸಿ ಹೇಳುವೆ ಸಿರಿಗನ್ನಡ ವರ ಚರಿತೆಯನು । ಕನ್ನಡ ನಾಡಿನ ಹೆಮ್ಮೆಯ ಮಕ್ಕಳೆ ಕೇಳಿರಿ ನಾಡಿನ ಸೊಬಗನ್ನು ॥೧॥ ಗೆದ್ದು ಪಲ್ಲವರ ಕದಂಬಮಯೂರ ಮೆರೆದನು ವರಬನವಾಸಿಯಲಿ । ತದನಂತರ ಚಾಲುಕ್ಯರ ಆಳ್ವಿಕೆ ವೀರತಾಣ ಬಾದಾಮಿಯಲಿ ॥೨॥ ನಾಡಿನ ಹೆಮ್ಮೆಯು ಗಂಗ ಮನೆತನ ರಾಷ್ಟ್ರಕೂಟ ಹೊಯ್ಸಳ ಹಿರಿಮೆ । ವಿಜಯನಗರಸಿರಿ ಕೆಳದಿಯ ವೈಭವ ಕನ್ನಡಮಾತೆಯ ನಿಜಗರಿಮೆ ॥೩॥ ಹೊಯ್ಸಳ ಪತನದ ನಂತರ ಬೆಳೆಯಿತು ವಿಜಯನಗರವತಿ ಶೀಘ್ರದಲಿ । ಲೋಕವೆ ಬೆರಗಾಗುವ ಸಿರಿಸಂಪದ ಮೆರೆಯಿತು ಈ ಸಾಮ್ರಾಜ್ಯದಲಿ ॥೪॥ ಯುದ್ಧದಿ ಆಂಗ್ಲರನೆದುರಿಸಿ ಗೆದ್ದಳು ಚನ್ನಮ್ಮನು ಕಿತ್ತೂರಿನಲಿ । ದ್ರೋಹಕೆ ಸೆರೆಯಾಗುತ ದಿನವನು ದೂಡಿದಳವಳು ಜೈಲಿನಲಿ ॥೫॥ ರಾಜರ ಅಂತಃಕಲಹದಿ ಬಿಳಿಯರು ಭಾರತವನ್ನೇ ನುಂಗಿದರು । ಮೈಸೂರಿನ ಹುಲಿ ಟೀಪುವ ಸೋಲಿಸಿ ರಂಗಪಟ್ಟಣವನಮರಿದರು ॥೬॥ ಸ್ವತಂತ್ರ ಭಾರತ ಚಳುವಳಿ ದೇಶದಿ ಬೆಳೆಯಿತು ಗಾಂಧೀ ತತ್ವದಲಿ । ಸ್ವದೇಶಿ ಚಳುವಳಿ ಅಸಹಕಾರಗಳು ಮೊಳೆತವು ಹಿರಿಯರ ಮಾರ್ಗದಲಿ ॥೭॥ ನಲವತ್ತೇಳರ ಆಗಸ್ಟಿನಲಿ ಹದಿನಾಲ್ಕರ ನಡುರಾತ್ರಿಯಲಿ । ಹಾರಿತು ಸ್ವತಂತ್ರ ಭಾರತಬಾವುಟ ಹೆಮ್ಮೆಯ ಭಾರತ ದೇಶದಲಿ ॥೮॥ ಐವತ್ತಾರರ ನವೆಂಬರೊಂದು-ವಿಶಾಲ ಮೈಸೂರಿನ ಉದಯ । ಭಾವನೆ ತುಂಬಲು ಎಪ್ಪತ್ತೂರರಲಿ ಕರ್ನಾಟಕವಾಗಿಹ ಪರಿಯ ॥೯॥ ಹಿಂದೂ ಮುಸ್ಲಿಂ ಕ್ರೈಸ್ತ ಜೈನ ಬಸವೇಶ್ವರರ ಸಿರಿಪಂಥವಿದೆ । ಕೊಂಕಣಿ ಉರ್ದು ತುಳುವಿನ ಸಂಸ್ಕೃತಿ ಕನ್ನಡತನಜಲ ಚಿಮ್ಮುತಿದೆ ॥೧೦॥ "ಕನ್ನಡಗೆಲ್ಲಲಿ ಕನ್ನಡಬಾಳಲಿ" ನಮ್ಮೀ ಕನ್ನಡ ನೆಲದಲ್ಲಿ । "ಕನ್ನಡ ಕಲಿಯಿರಿ ಕನ್ನಡ ಪೋಷಿಸಿ" ನಮ್ಮಯ ಕನ್ನಡನಾಡಿನಲಿ ॥೧೧॥

"ಕನ್ನಡ ನಾಡಿನಲ್ಲಿ ಕನ್ನಡವೇ ರಾಜ-ರಾಣಿ ಎಲ್ಲವೂ." — "In the land of Kannada, Kannada itself is the king, queen, and everything." A strong affirmation of linguistic pride and cultural sovereignty.

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

  1. ೧. ಪಲ್ಲವರನ್ನು ಗೆದ್ದು ಮೆರೆದವರು ಯಾರು?

    Answer

    ಪಲ್ಲವರನ್ನು ಗೆದ್ದು ಮೆರೆದವರು ಕದಂಬಮಯೂರ.

  2. ೨. ಬಾದಾಮಿಯಲ್ಲಿ ಆಳ್ವಿಕೆ ನಡೆಸಿದವರಾರು?

    Answer

    ಬಾದಾಮಿಯಲ್ಲಿ ಆಳ್ವಿಕೆ ನಡೆಸಿದವರು ಚಾಲುಕ್ಯರು.

  3. ೩. ಯಾರ ಪತನದ ನಂತರ ವಿಜಯನಗರ ಬೆಳೆಯಿತು?

    Answer

    ಹೊಯ್ಸಳರ ಪತನದ ನಂತರ ವಿಜಯನಗರ ಬೆಳೆಯಿತು.

  4. ೪. ಯುದ್ಧದಲ್ಲಿ ಆಂಗ್ಲರನ್ನು ಎದುರಿಸಿ ಗೆದ್ದವರು ಯಾರು?

    Answer

    ಯುದ್ಧದಲ್ಲಿ ಆಂಗ್ಲರನ್ನು ಎದುರಿಸಿ ಗೆದ್ದವರು ಕಿತ್ತೂರಿನ ಚನ್ನಮ್ಮನು.

  5. ೫. ಭಾರತ ಸ್ವಾತಂತ್ರ್ಯದ ಚಳವಳಿ ಯಾರ ತತ್ವದಲ್ಲಿ ಬೆಳೆಯಿತು?

    Answer

    ಭಾರತ ಸ್ವಾತಂತ್ರ್ಯದ ಚಳವಳಿ ಗಾಂಧೀ ತತ್ವದಲ್ಲಿ ಬೆಳೆಯಿತು.

  6. ೬. ವಿಶಾಲ ಮೈಸೂರಿನ ಉದಯವಾದುದು ಯಾವಾಗ?

    Answer

    ವಿಶಾಲ ಮೈಸೂರಿನ ಉದಯವಾದುದು ಐವತ್ತಾರರ ನವೆಂಬರ್ ಒಂದರಂದು.

  7. ೭. ನಮ್ಮ ನಾಡಿನಲ್ಲಿ ಯಾವುದು ಗೆಲ್ಲಬೇಕು? ಯಾವುದು ಬಾಳಬೇಕು?

    Answer

    ನಮ್ಮ ನಾಡಿನಲ್ಲಿ ಕನ್ನಡ ಗೆಲ್ಲಬೇಕು ಮತ್ತು ಕನ್ನಡ ಬಾಳಬೇಕು.

ಆ. ಕೆಳಗಿನ ಪದ್ಯಭಾಗವನ್ನು ಪೂರ್ಣಗೊಳಿಸಿ, ಕಂಠಪಾಠ ಮಾಡಿರಿ.

  1. ೧. ಹೊಯ್ಸಳ ಪತನದ ________________________________________

    Answer

    ಹೊಯ್ಸಳ ಪತನದ ನಂತರ ಬೆಳೆಯಿತು ವಿಜಯನಗರವತಿ ಶೀಘ್ರದಲಿ ।

  2. ________________________________________ ಸಾಮ್ರಾಜ್ಯದಲಿ

    Answer

    ಲೋಕವೆ ಬೆರಗಾಗುವ ಸಿರಿಸಂಪದ ಮೆರೆಯಿತು ಈ ಸಾಮ್ರಾಜ್ಯದಲಿ ।

  3. ೨. ಯುದ್ಧದಿ ________________________________________

    Answer

    ಯುದ್ಧದಿ ಆಂಗ್ಲರನೆದುರಿಸಿ ಗೆದ್ದಳು ಚನ್ನಮ್ಮನು ಕಿತ್ತೂರಿನಲಿ ।

  4. ________________________________________ ಜೈಲಿನಲ್ಲಿ

    Answer

    ದ್ರೋಹಕೆ ಸೆರೆಯಾಗುತ ದಿನವನು ದೂಡಿದಳವಳು ಜೈಲಿನಲಿ ।

  5. ೩. ಹಿಂದೂ ಮುಸ್ಲಿಂ ________________________________________

    Answer

    ಹಿಂದೂ ಮುಸ್ಲಿಂ ಕ್ರೈಸ್ತ ಜೈನ ಬಸವೇಶ್ವರರ ಸಿರಿಪಂಥವಿದೆ ।

  6. ________________________________________ ಚಿಮ್ಮುತಿದೆ

    Answer

    ಕೊಂಕಣಿ ಉರ್ದು ತುಳುವಿನ ಸಂಸ್ಕೃತಿ ಕನ್ನಡತನಜಲ ಚಿಮ್ಮುತಿದೆ ।

  7. ೪. "ಕನ್ನಡಗೆಲ್ಲಲಿ ________________________________________

    Answer

    “ಕನ್ನಡಗೆಲ್ಲಲಿ ಕನ್ನಡಬಾಳಲಿ” ನಮ್ಮೀ ಕನ್ನಡ ನೆಲದಲ್ಲಿ ।

  8. ________________________________________ ನಮ್ಮಯ ಕನ್ನಡನಾಡಿನಲಿ

    Answer

    “ಕನ್ನಡ ಕಲಿಯಿರಿ ಕನ್ನಡ ಪೋಷಿಸಿ” ನಮ್ಮಯ ಕನ್ನಡನಾಡಿನಲಿ ।

Interactive Lab