CRECT Education

Class 5 Kannada Lesson 5: Plants and Trees | KTBS First Language – Poem

Description

Learn the poem 'ಗಿಡ ಮರ' (Plants and Trees) from the KTBS Class 5 Kannada First Language textbook. We walk through each stanza, break down key vocabulary, and test your understanding.

ಪದ್ಯ (poem) · ಸತ್ಯಾನಂದ ಪಾತ್ರೋಟ (Satyananda Patrota)

ಪಠ್ಯFull text

ಬೊಡ್ಡೆ ಕರಿದು ಎಲೆ ಹಸಿರು ಹೂವು ನಾನಾ ತರತರ ಎಂಥ ಸೊಗಸು ಏನು ಕಂಪು ಬೆಳೆದು ನಿಂತ ಗಿಡ ಮರ ಯಾರೇ ಬಂದು ಏನೇ ಮಾಡಲಿ ಎಲ್ಲದಕ್ಕೂ ದಿವ್ಯ ಮೌನ ರೆಂಬೆ ಕೊಂಬೆ ಚಿಗುರುವಲ್ಲಿ ಕಡಲುಕ್ಕುವ ಚೇತನ ಮನುಷ್ಯನಲ್ಲಿ ಮಾತು ಉಂಟು ಮಾತಿನಂತೆ ಇಲ್ಲ ಮನ ಲಿಂಗ ವರ್ಣ ಜಾತಿ ಧರ್ಮ ಹಾಳು ಕೊಂಪೆ ಇವನ ಮನ ಜಾತಿ-ಗೀತಿ, ಲಿಂಗ-ಧರ್ಮ ಮೀರಿ ಬೆಳೆದ ಗಿಡಮರ ಅವನು ಇವಳು ಅದು ಇದು ಎಣಿಸುತ್ತಿಲ್ಲ ಒಂದು ದಿನ ಬೊಡ್ಡೆ ಕರಿದು ಎಲೆ ಹಸಿರು ಹೂವು ನಾನಾ ತರತರ ಬಿಸಿಲು ಮಳೆ ಚಳಿಯ ತಡೆದು ಅರಳುತಿಹವು ಅನುದಿನ.

ಪದಗಳ ಅರ್ಥword meanings

KannadaPronunciationMeaning
ಬೊಡ್ಡೆಮರದ ಕಾಂಡದ ಭಾಗ; ಅನುದಿನ-ದಿನನಿತ್ಯ; ಕರಿದು-ಕಪ್ಪಾದ ಬಣ್ಣ; ತರತರ-ವಿಧವಿಧವಾದ; ಕಡಲುಕ್ಕುವ-ಸಮುದ್ರ ಉಕ್ಕಿದಂತೆ; ಮನ-ಮನಸ್ಸು; ಹಾಳುಕೊಂಪೆ-ನಾಶಹೊಂದಿದ ಊರು

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

  1. ೧. ಯಾರೇ ಏನೇ ಮಾಡಿದರೂ ಗಿಡಮರ ಏನು ಮಾಡುತ್ತವೆ?

    Answer

    ಯಾರೇ ಏನೇ ಮಾಡಿದರೂ ಗಿಡಮರ ದಿವ್ಯ ಮೌನ ತಾಳುತ್ತವೆ.

  2. ೨. ಕಡಲುಕ್ಕುವ ಚೇತನ ಎಲ್ಲಿ ಕಾಣಬರುತ್ತದೆ?

    Answer

    ಕಡಲುಕ್ಕುವ ಚೇತನವು ರೆಂಬೆ ಕೊಂಬೆ ಚಿಗುರುವಲ್ಲಿ ಕಾಣಬರುತ್ತದೆ.

  3. ೩. ಅದು ಇದು ಎಣಿಸದಿರುವುದು ಯಾವುದು?

    Answer

    ಗಿಡ ಮರಗಳು ಅದು ಇದು ಎಣಿಸುವುದಿಲ್ಲ.

  4. ೪. ಗಿಡ ಮರಗಳು ಹೇಗೆ ಬೆಳೆದು ಅರಳುತ್ತಿವೆ?

    Answer

    ಗಿಡ ಮರಗಳು ಬಿಸಿಲು ಮಳೆ ಚಳಿಯನ್ನು ತಡೆದು ಅನುದಿನ ಅರಳುತ್ತಿವೆ.

ಆ. ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.

  1. ೧. ಬೆಳೆದು ನಿಂತ ಗಿಡಮರ ಹೇಗಿವೆ?

    Answer

    ಬೆಳೆದು ನಿಂತ ಗಿಡಮರಗಳು ಬೊಡ್ಡೆ ಕರಿದಾಗಿಯೂ ಎಲೆ ಹಸಿರಾಗಿಯೂ ಹೂವು ನಾನಾ ತರತರವಾಗಿಯೂ ಇದ್ದು, ಎಂಥ ಸೊಗಸು ಮತ್ತು ಏನು ಕಂಪನ್ನು ಹೊಂದಿವೆ.

  2. ೨. ಯಾರ ಮಾತಿನಂತೆ ಮನ ಇಲ್ಲ? ಏಕೆ?

    Answer

    ಮನುಷ್ಯನ ಮಾತಿನಂತೆ ಅವನ ಮನ ಇಲ್ಲ. ಏಕೆಂದರೆ ಮನುಷ್ಯನ ಮನದಲ್ಲಿ ಲಿಂಗ, ವರ್ಣ, ಜಾತಿ, ಧರ್ಮ ಎಂಬ ಹಾಳು ಕೊಂಪೆಗಳಿವೆ.

  3. ೩. ಗಿಡ ಮರಗಳು ಯಾವುದನ್ನು ಮೀರಿ ಬೆಳೆದಿವೆ?

    Answer

    ಗಿಡ ಮರಗಳು ಜಾತಿ-ಗೀತಿ, ಲಿಂಗ-ಧರ್ಮಗಳನ್ನು ಮೀರಿ ಬೆಳೆದಿವೆ.

ಇ. ಬಿಟ್ಟ ಸ್ಥಳವನ್ನು ಪದ್ಯದಿಂದ ಆರಿಸಿದ ಸೂಕ್ತ ಪದಗಳಿಂದ ತುಂಬಿರಿ.

  1. ಎಂಥ ಸೊಗಸು _______________

    Answer

    ಎಂಥ ಸೊಗಸು ಏನು ಕಂಪು

  2. ಬೆಳೆದು ನಿಂತ _______________

    Answer

    ಬೆಳೆದು ನಿಂತ ಗಿಡ ಮರ

  3. ರೆಂಬೆ ಕೊಂಬೆ _______________

    Answer

    ರೆಂಬೆ ಕೊಂಬೆ ಚಿಗುರುವಲ್ಲಿ

  4. ಕಡಲುಕ್ಕುವ _______________

    Answer

    ಕಡಲುಕ್ಕುವ ಚೇತನ

  5. ಮನುಷ್ಯನಲ್ಲಿ _______________

    Answer

    ಮನುಷ್ಯನಲ್ಲಿ ಮಾತು ಉಂಟು

  6. ಮಾತಿನಂತೆ _______________

    Answer

    ಮಾತಿನಂತೆ ಇಲ್ಲ ಮನ

  7. ಜಾತಿ-ಗೀತಿ _______________

    Answer

    ಜಾತಿ-ಗೀತಿ ಲಿಂಗ-ಧರ್ಮ

  8. ಮೀರಿ ಬೆಳೆದ _______________

    Answer

    ಮೀರಿ ಬೆಳೆದ ಗಿಡಮರ

ಈ. ಕೆಳಗೆ ನೀಡಿರುವ ಪದಗಳಲ್ಲಿ ಗಿಡ ಮರಗಳಿಗೆ ಮತ್ತು ಮಾನವನಿಗೆ ಸಂಬಂಧಿಸಿರುವ ಪದಗಳನ್ನು ಪ್ರತ್ಯೇಕವಾಗಿ ಪಟ್ಟಿ ಮಾಡಿ.

  1. | ಬೊಡ್ಡೆ | ಮಾತು | ಅವನು |

    Answer

    ಗಿಡ ಮರಗಳಿಗೆ ಸಂಬಂಧಿಸಿದ ಪದಗಳು: ಬೊಡ್ಡೆ ಮಾನವನಿಗೆ ಸಂಬಂಧಿಸಿದ ಪದಗಳು: ಮಾತು, ಅವನು

  2. |---|---|---|

    Answer

    ಗಿಡ ಮರಗಳಿಗೆ ಸಂಬಂಧಿಸಿದ ಪದಗಳು: ಹಸಿರು ಮಾನವನಿಗೆ ಸಂಬಂಧಿಸಿದ ಪದಗಳು: ಮನ, ಧರ್ಮ

  3. | ಮನ | ಹಸಿರು | ಧರ್ಮ |

    Answer

    ಗಿಡ ಮರಗಳಿಗೆ ಸಂಬಂಧಿಸಿದ ಪದಗಳು: ಚಿಗುರು, ಹೂವು ಮಾನವನಿಗೆ ಸಂಬಂಧಿಸಿದ ಪದಗಳು: ಜಾತಿ

  4. | ಚಿಗುರು | ಜಾತಿ | ಹೂವು |

    Answer

    ಗಿಡ ಮರಗಳಿಗೆ ಸಂಬಂಧಿಸಿದ ಪದಗಳು: ಕೊಂಬೆ, ರೆಂಬೆ ಮಾನವನಿಗೆ ಸಂಬಂಧಿಸಿದ ಪದಗಳು: ಅವಳು

  5. | ಕೊಂಬೆ | ಅವಳು | ರೆಂಬೆ |

ಚಟುವಟಿಕೆ

ಅ. ಕೆಳಗೆ ನೀಡಿರುವ ಪದಗಳನ್ನು ‘ಅ’ ಕಾರಾದಿಯಾಗಿ ಬರೆಯಿರಿ.

  1. ಬೊಡ್ಡೆ, ಕರಿದು, ಎಲೆ, ಹಸಿರು, ಹೂವು, ತರತರ, ಎಂಥ, ಸೊಗಸು, ಏನು, ಕಂಪು, ಬೆಳೆ, ನಿಂತ, ಗಿಡ, ಮರ, ಮಾಡಲಿ, ದಿವ್ಯ, ಮೌನ, ರೆಂಬೆ, ಕೊಂಬೆ, ಚಿಗುರು, ಕಡಲು, ಚೇತನ.

    Answer

    ಎಲೆ ಎಂಥ ಏನು ಕಡಲು ಕಂಪು ಕರಿದು ಕೊಂಬೆ ಗಿಡ ಚಿಗುರು ಚೇತನ ತರತರ ದಿವ್ಯ ನಿಂತ ಬೆಳೆ ಬೊಡ್ಡೆ ಮರ ಮಾಡಲಿ ಮೌನ ರೆಂಬೆ ಹಸಿರು ಹೂವು ಸೊಗಸು

ಆ. ಪ್ರಕೃತಿಯಲ್ಲಿಲ್ಲದ ಭೇದ ಭಾವ ಮನುಷ್ಯನಿಗೆ ಬೇಕೆ? ಈ ಬಗ್ಗೆ ಯೋಚಿಸಿ, ಪುಟ್ಟ ಪ್ರಬಂಧ ಸಿದ್ಧಪಡಿಸಿ.

ಇ. ನಿಮಗೆ ಗೊತ್ತಿರುವ, ಸ್ನೇಹಿತರಿಗೆ ಗೊತ್ತಿರುವ, ಮನೆಯಲ್ಲಿನ ಹಿರಿಯರಿಗೆ ಗೊತ್ತಿರುವ, ಮರಗಳ ಹೆಸರುಗಳನ್ನು ಪುನರಾವರ್ತನೆಯಾಗದಂತೆ ಪ್ರತ್ಯೇಕವಾಗಿ ಪಟ್ಟಿಮಾಡಿ.

Interactive Lab

ಬೊಡ್ಡೆಮರದ ಕಾಂಡದ ಭಾಗ; ಅನುದಿನ-ದಿನನಿತ್ಯ; ಕರಿದು-ಕಪ್ಪಾದ ಬಣ್ಣ; ತರತರ-ವಿಧವಿಧವಾದ; ಕಡಲುಕ್ಕುವ-ಸಮುದ್ರ ಉಕ್ಕಿದಂತೆ; ಮನ-ಮನಸ್ಸು; ಹಾಳುಕೊಂಪೆ-ನಾಶಹೊಂದಿದ ಊರು