CRECT Education

Class 5 Kannada Lesson 6: The Lamp of Freedom | KTBS Savi Kannada

Description

A line-by-line walkthrough of the poem 'ಸ್ವಾತಂತ್ರ್ಯದ ಹಣತೆ' by K. S. Nissar Ahmed, teaching vocabulary and comprehension for Class 5 Kannada First Language.

ಪದ್ಯ (poem) · ಕೆ. ಎಸ್. ನಿಸಾರ್ ಅಹಮ್ಮದ್ (K. S. Nissar Ahmed)

ಪಠ್ಯFull text

ಸದಾ ಉರಿಯುತಿರುವ ಹಾಗೆ ಸ್ವಾತಂತ್ರ್ಯದ ಹಣತೆ ದುಡಿಮೆ ತೈಲವೆರೆಯುತಿರಲು ಬಿಡುವಿಲ್ಲದೆ ಜನತೆ ಎಂತು ಕುಂದಬಹುದು ಎಮ್ಮ ತಾಯ್ನಾಡಿನ ಘನತೆ ॥ ಸದಾ ॥ ಮುಳ್ಳಿನಿಂದ ಅರಿವೆ ಬಿಡಿಸಿದಂತೆ ಬಂತೆ ಮುಕ್ತಿ? ಹುಲಿಯ ಬಾಯ ಮೇವ ಕಸಿಯುವಂತೆ ಧೀರಶಕ್ತಿ ಪಡೆಯಿತದನು ಜನತೆ, ಬಾಳ ಬೆಸೆಯೆ ನಾಡ ಭಕ್ತಿ ॥ ಸದಾ ॥ ಸ್ವಾತಂತ್ರ್ಯದ ಜೊತೆಗೆ ಬಂದು ಕೂಡಲಿಲ್ಲ ಗಳಿಕೆ ವ್ಯಕ್ತಿ ವ್ಯಕ್ತಿ ಬೆವರ ಹೀರಿ ಮರವಾಗಿದೆ ಮೊಳಕೆ, ಮೇಲೇರಿದ ಹಾಗೆ ಭದ್ರ ಪಾಯವುಂಟು ಗೃಹಕೆ ॥ ಸದಾ ॥ ಸಾಗಿದಂತೆ ಸಲ್ಲುತಿರಲಿ ಸಾಧನೆಯೆಡೆ ಗಮನ ಪ್ರಾಣವನ್ನೆ ಪಗಡೆಯಾಡಿದವರಿಗೊಮ್ಮೆ ನಮನ, ತಾಯ ಮುಡಿಗೆ ದಿನವು ಏರುತಿರಲಿ ಹೂವು ದವನ ॥ ಸದಾ ॥

"ಒಗ್ಗಟ್ಟಿನಲ್ಲಿ ಬಲವಿದೆ." — "Unity is strength."

ಪದಗಳ ಅರ್ಥword meanings

KannadaPronunciationMeaning
ಅರಿವೆಬಟ್ಟೆಬೆಸೆ
ಗಳಿಕೆಸಂಪಾದನೆಮೊಳಕೆ
ಗೃಹಮನೆಪಗಡೆ
ಘನತೆಶ್ರೇಷ್ಠತೆಪಾಯ
ತೈಲಎಣ್ಣೆಹಣತೆ

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

  1. ೧. ಸದಾ ಉರಿಯುತ್ತಿರಬೇಕಾದುದು ಯಾವುದು?

    Answer

    ಸದಾ ಉರಿಯುತ್ತಿರಬೇಕಾದುದು ಸ್ವಾತಂತ್ರ್ಯದ ಹಣತೆ.

  2. ೨. ಧೀರಶಕ್ತಿ ಉಳ್ಳವರು ಏನು ಮಾಡಬಲ್ಲರು?

    Answer

    ಧೀರಶಕ್ತಿ ಉಳ್ಳವರು ಹುಲಿಯ ಬಾಯಿಂದ ಮೇವನ್ನು ಕಸಿಯಬಲ್ಲರು.

  3. ೩. ಮೊಳಕೆ ಉಂಟಾದುದು ಹೇಗೆ?

    Answer

    ವ್ಯಕ್ತಿ ವ್ಯಕ್ತಿಯ ಬೆವರ ಹೀರಿ ಮೊಳಕೆ ಉಂಟಾಗಿದೆ.

  4. ೪. ನಮ್ಮ ಗಮನ ಯಾವುದರ ಕಡೆಗೆ ಸಲ್ಲಬೇಕು?

    Answer

    ನಮ್ಮ ಗಮನ ಸಾಧನೆಯ ಕಡೆಗೆ ಸಲ್ಲಬೇಕು.

ಆ. ಕೆಳಗಿನ ಪದ್ಯಭಾಗವನ್ನು ಪೂರ್ಣಗೊಳಿಸಿ, ಕಂಠಪಾಠ ಮಾಡಿರಿ.

  1. ೧. ಸದಾ ________________________________________

    Answer

    ಉರಿಯುತಿರುವ ಹಾಗೆ ಸ್ವಾತಂತ್ರ್ಯದ ಹಣತೆ

  2. ________________________________________

    Answer

    ದುಡಿಮೆ ತೈಲವೆರೆಯುತಿರಲು ಬಿಡುವಿಲ್ಲದೆ ಜನತೆ

  3. ________________________________________ ಘನತೆ ॥ ಸದಾ ॥

    Answer

    ಎಂತು ಕುಂದಬಹುದು ಎಮ್ಮ ತಾಯ್ನಾಡಿನ

  4. ೨. ಸಾಗಿದಂತೆ ________________________________________

    Answer

    ಸಲ್ಲುತಿರಲಿ ಸಾಧನೆಯೆಡೆ ಗಮನ

  5. ________________________________________

    Answer

    ಪ್ರಾಣವನ್ನೆ ಪಗಡೆಯಾಡಿದವರಿಗೊಮ್ಮೆ ನಮನ

  6. ________________________________________ ದವನ ॥ ಸದಾ ॥

    Answer

    ತಾಯ ಮುಡಿಗೆ ದಿನವು ಏರುತಿರಲಿ ಹೂವು

Interactive Lab

ಅರಿವೆಬಟ್ಟೆಬೆಸೆ
ಗಳಿಕೆಸಂಪಾದನೆಮೊಳಕೆ
ಗೃಹಮನೆಪಗಡೆ
ಘನತೆಶ್ರೇಷ್ಠತೆಪಾಯ
ತೈಲಎಣ್ಣೆಹಣತೆ