CRECT Education

Class 5 Kannada Lesson 7: Vachanas | KTBS Savi Kannada

Description

Learn the four vachanas of Basavanna, Ambigara Chowdayya, Akkamahadevi, and Ayidakki Lakkamma — a Class 5 Kannada First Language poem from the KTBS textbook.

ಪದ್ಯ (poem) · ಬಸವಣ್ಣ, ಅಂಬಿಗರ ಚೌಡಯ್ಯ, ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ

ಪಠ್ಯFull text

ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ, ಇದೇ ಅಂತರಂಗಶುದ್ಧಿ; ಇದೇ ಬಹಿರಂಗಶುದ್ಧಿ; ಇದೇ ನಮ್ಮ ಕೂಡಲ ಸಂಗಮದೇವನೊಲಿಸುವ ಪರಿ. – ಬಸವಣ್ಣ

"ಬಹಿರಂಗಶುದ್ಧಿಗಿಂತ ಅಂತರಂಗಶುದ್ಧಿ ಬಹಳ ಮುಖ್ಯ." — Inner purity is far more important than outward purity. (Or: "ಹೊಗಳಿಕೆಗೆ ಹಿಗ್ಗಬಾರದು; ತೆಗಳಿಕೆಗೆ ಕುಗ್ಗಬಾರದು." — Do not be elated by praise; do not be depressed by criticism.)

ಪದಗಳ ಅರ್ಥword meanings

KannadaPronunciationMeaning
ಅರಿವುತಿಳಿವಳಿಕೆ, ಜ್ಞಾನ ಒಲಿಸು - ಮನವೊಪ್ಪಿಸು ಗರ್ವ - ಸೊಕ್ಕು, ಅಹಂಕಾರ ದ್ರವ್ಯ - ಐಶ್ವರ್ಯ, ಸಂಪತ್ತು ಪರಿ - ರೀತಿ, ಕ್ರಮ ಹಳಿ - ನಿಂದಿಸು, ದೂಷಿಸು ಹಾನಿ - ಕೇಡು, ನಾಶ, ನಷ್ಟ ಹುಸಿ - ಸುಳ್ಳು, ಅಸತ್ಯ

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.

  1. ೧. ಯಾರನ್ನು ಹಳಿಯಬಾರದು?

  2. ೨. ಬಡತನಕ್ಕೆ ಯಾವ ಚಿಂತೆ?

  3. ೩. ಲೋಕದಲ್ಲಿ ಸ್ತುತಿನಿಂದೆಗಳು ಬಂದರೆ ಹೇಗಿರಬೇಕು?

  4. ೪. ಎಂತಹ ಭಕ್ತಿಯಿಂದ ದ್ರವ್ಯದ ಕೇಡಾಗುತ್ತದೆ?

  5. ೫. ಅಕ್ಕಮಹಾದೇವಿ ಅವರ ಅಂಕಿತ ಏನು?

ಆ. ಕೆಳಗಿನ ಪದ್ಯಭಾಗವನ್ನು ಪೂರ್ಣಗೊಳಿಸಿ, ಕಂಠಪಾಠ ಮಾಡಿರಿ.

  1. ೧. ಕಳಬೇಡ, __________________________________________

    Answer

    ಕೊಲಬೇಡ, ಹುಸಿಯ ನುಡಿಯಲು ಬೇಡ,

  2. __________________________________________________

    Answer

    ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ,

  3. __________________________________________________

    Answer

    ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ,

  4. __________________________________________________

    Answer

    ಇದೇ ಅಂತರಂಗಶುದ್ಧಿ; ಇದೇ ಬಹಿರಂಗಶುದ್ಧಿ;

  5. __________________ ಸಂಗಮದೇವನೊಲಿಸುವ ಪರಿ.

    Answer

    ಇದೇ ನಮ್ಮ ಕೂಡಲ

  6. ೨. ಗರ್ವದಿಂದ __________________________________________

  7. __________________________________________________

  8. __________________________________________________

  9. __________________________________________________

  10. __________________________________________________

  11. ______________________________________ ಮುಟ್ಟದ ಭಕ್ತಿ.

ಅ. ಸಂಧಿ ಪರಿಚಯ.

  1. ನಾವು ಮಾತನಾಡುವಾಗ ಕೆಲವು ಶಬ್ದಗಳನ್ನು ಬಿಡಿಬಿಡಿಯಾಗಿ ಹೇಳುವುದಿಲ್ಲ. ಅವನು + ಅಲ್ಲಿ ಎಂಬ ಎರಡು ಶಬ್ದಗಳನ್ನು ಕೂಡಿಸಿ 'ಅವನಲ್ಲಿ' ಎಂದು ಹೇಳುತ್ತೇವೆ. ಅಂದರೆ ಅವುಗಳನ್ನು ಕೂಡಿಸಿಯೇ ಹೇಳುತ್ತೇವೆ.

  2. ಉದಾ :

  3. ಆಡು + ಇಸು = ಆಡಿಸು

  4. ಮರ + ಅನ್ನು = ಮರವನ್ನು

  5. ದೇವರು + ಇಗೆ = ದೇವರಿಗೆ

  6. ಮಳೆ + ಕಾಲ = ಮಳೆಗಾಲ

  7. ಹೀಗೆ ಎರಡು ಅಕ್ಷರಗಳು ಯಾವ ಕಾಲವಿಳಂಬವೂ ಇಲ್ಲದೆ ಪರಸ್ಪರ ಸೇರುವುದಕ್ಕೆ 'ಸಂಧಿ' ಎನ್ನುವರು.

  8. ಪದ | ಪದ | ಸಂಧಿರೂಪ

  9. --- | --- | ---

  10. ಅವನ | + ಅಂಗಡಿ | = ಅವನಂಗಡಿ

  11. ಕುಲ | + ಅನ್ನು | = ಕುಲವನ್ನು

  12. ಬೆಟ್ಟ | + ತಾವರೆ | = ಬೆಟ್ಟದಾವರೆ

  13. ಮಳೆ | + ಕಾಲ | = ಮಳೆಗಾಲ

  14. ಹೀಗೆ ಒಂದು ಪದ ಇನ್ನೊಂದು ಪದದೊಡನೆ ಸೇರಿದಾಗ ಪೂರ್ವಪದದ ಅಂತ್ಯದಲ್ಲಿ ಮತ್ತು ಉತ್ತರಪದದ ಆದಿಯಲ್ಲಿ ಮೂರು ಬಗೆಯ ಕಾರ್ಯಗಳು ನಡೆಯಬಹುದು. ಅಕ್ಷರವೊಂದು ಲೋಪವಾಗಬಹುದು, ಇನ್ನೊಂದು ಆಗಮಿಸಬಹುದು, ಒಂದು ಅಕ್ಷರ ಹೋಗಿ ಅದರ ಸ್ಥಾನದಲ್ಲಿ ಬೇರೆಯೇ ಅಕ್ಷರ ಬರಬಹುದು. ಇದನ್ನು 'ಸಂಧಿಕಾರ್ಯ' ಎನ್ನುವರು.

  15. ಪೂರ್ವಪದ | + | ಉತ್ತರಪದ | = | ಸಂಧಿಕಾರ್ಯ

  16. --- | --- | --- | --- | ---

  17. ಮಾತು | + | ಅನ್ನು | = | ಮಾತನ್ನು

  18. (ಉ) | + | (ಅ) | = | ಉ ಲೋಪ

  19. ಸಂಧಿಯ ವಿವಿಧ ಪ್ರಕಾರಗಳ ಬಗ್ಗೆ ಮುಂದಿನ ಪಾಠದಲ್ಲಿ ತಿಳಿದುಕೊಳ್ಳೋಣ.

Interactive Lab

ಅರಿವುತಿಳಿವಳಿಕೆ, ಜ್ಞಾನ ಒಲಿಸು - ಮನವೊಪ್ಪಿಸು ಗರ್ವ - ಸೊಕ್ಕು, ಅಹಂಕಾರ ದ್ರವ್ಯ - ಐಶ್ವರ್ಯ, ಸಂಪತ್ತು ಪರಿ - ರೀತಿ, ಕ್ರಮ ಹಳಿ - ನಿಂದಿಸು, ದೂಷಿಸು ಹಾನಿ - ಕೇಡು, ನಾಶ, ನಷ್ಟ ಹುಸಿ - ಸುಳ್ಳು, ಅಸತ್ಯ