CRECT Education

Class 5 Kannada Lesson 10: The Spider as Teacher | KTBS Kannada Second Language – Practice & Play

Description

Practice and play: test your comprehension of the story 'ಗುರುವಾದ ಜೇಡರಹುಳು' with questions from the textbook, plus a fun Kannada proverb challenge.

ಗದ್ಯ (prose) · ಡಾ. ಸೀ. ಹೊಸಬೆಟ್ಟು ಪುತ್ತೂರು.

ಪಠ್ಯFull text

ಸಾಧಕರಿಗೆ ಜೇಡರಹುಳು ಒಂದು ಜೀವಂತ ಪಾಠವಾಗಿದೆ. ಸಹನೆ ಮತ್ತು ಪ್ರಯತ್ನಶೀಲತೆಗೆ ಜೇಡರಹುಳು ಒಂದು ಆದರ್ಶ. ಬಲೆ ನಿರ್ಮಿಸುವ ಕೆಲಸದಲ್ಲಿ ಅದು ಹಲವು ಬಾರಿ ಸೋಲುತ್ತದೆ. ನೆಲಕ್ಕೆ ಉರುಳುತ್ತದೆ. ಆದರೂ ಅದು ಸದ್ದಿಲ್ಲದೆ ತನ್ನ ಪ್ರಯತ್ನವನ್ನು ಸಹನೆಯಿಂದ ಮುಂದುವರೆಸುತ್ತದೆ. ಅದು ಕೊನೆಗೂ ಒಂದು ಬಲೆಯನ್ನು ನಿರ್ಮಿಸಿಯೇ ನಿರ್ಮಿಸುತ್ತದೆ. ಒಬ್ಬ ರಾಜ ಯುದ್ಧದಲ್ಲಿ ಹಲವು ಬಾರಿ ವೈರಿಗಳಿಂದ ಸೋತುಹೋದ. ಸೋತ ಆತ ನಿರಾಶನಾದ. ಹಾಗೇ ಕುಳಿತಿದ್ದಾಗ ಅವನ ಕಣ್ಣಿಗೆ ಒಂದು ಜೇಡರಹುಳು ಕಾಣಿಸಿಕೊಂಡಿತು. ಅದನ್ನು ಆತ ಗಮನವಿಟ್ಟು ನೋಡಿದ! ಜೇಡರಹುಳು ತನ್ನ ಬಲೆ ರಚಿಸುವ ಕಾರ್ಯದಲ್ಲಿ ಹಲವು ಸಾರಿ ಸೋತಿತು. ಸೋತು ನೆಲಕ್ಕುರುಳಿತು. ಆದರೂ ಅದು ಸದ್ದು ಮಾಡಲಿಲ್ಲ. ಸಹನೆ ಕಳೆದುಕೊಳ್ಳಲಿಲ್ಲ. ಪ್ರಯತ್ನ ಬಿಡಲಿಲ್ಲ. ಮರಳಿ ಯತ್ನವ ಮಾಡು ಎಂಬಂತೆ ಆ ಜೇಡರ ಹುಳುವು ಎಡಬಿಡದೆ ಪ್ರಯತ್ನಿಸಿ ಕೊನೆಗೆ ಬಲೆಯೊಂದನ್ನು ನೇಯ್ದೇಬಿಟ್ಟಿತು! ಅದು ತನ್ನ ಪ್ರಯತ್ನದಲ್ಲಿ ಸಫಲತೆ ಪಡೆಯುವವರೆಗೂ ಸುಮ್ಮನಾಗಲಿಲ್ಲ. ಇದನ್ನು ರಾಜ ಕಂಡ. ಜೇಡರಹುಳುವೇ ಅವನ ಪಾಲಿಗೆ ಗುರುವಾಯಿತು. ಜೇಡರ ಹುಳು ಅವನಿಗೆ “ಮರಳಿ ಯತ್ನವ ಮಾಡು, ಜಯ ಪಡೆಯುವವರೆಗೂ ಹೋರಾಡು, ನಿರಾಶನಾಗಬೇಡ” ಎಂಬ ಪಾಠವನ್ನು ಬೋಧಿಸಿದಂತಾಯಿತು. ಜೇಡರಹುಳುವನ್ನು ಅನುಸರಿಸಿ, ಆ ರಾಜನೂ ಮರಳಿ ಯತ್ನವ ಮಾಡಿದ, ಮತ್ತೆ ವೈರಿಗಳನ್ನೆದುರಿಸಿದ, ಹೋರಾಡಿದ. ಅಂತೂ ಕೊನೆಗೆ ಆತ ಜಯಶಾಲಿಯಾದ. ಜೇಡರ ಹುಳುವಿಗೆ ಆ ರಾಜ ಕೃತಜ್ಞನಾದ. ಕಲಿಯುವವರಿಗೆ ಎಲ್ಲೆಲ್ಲೂ ಗುರುಗಳಿದ್ದಾರೆ! ಎಲ್ಲೆಲ್ಲೂ ನಮಗೆ ಪಾಠ ಹೇಳುವ ಘಟನೆಗಳು ನಡೆಯುತ್ತವೆ. ಎಡಬಿಡದೆ ಪ್ರಯತ್ನವನ್ನು ಸಾಧಿಸಿದರೆ ಸಾಧ್ಯವಾಗದ್ದು ಯಾವುದೂ ಇಲ್ಲ! ಗಾದೆಯೇ ಇದೆಯಲ್ಲ – ಸಾಧಿಸಿದರೆ ಸಬಳ (ಕಬ್ಬಿಣದ ಹಾರೆ) ನುಂಗಬಹುದಂತೆ!. ನೀತಿ: ಸತತ ಪ್ರಯತ್ನವೇ ಗೆಲುವಿನ ಗುಟ್ಟು.

"ಸತತ ಪ್ರಯತ್ನವೇ ಗೆಲುವಿನ ಗುಟ್ಟು." — The explicit moral printed at the end of the lesson: "Continuous effort is the secret to success." Additionally, the lesson highlights the proverb "ಸಾಧಿಸಿದರೆ ಸಬಳ ನುಂಗಬಹುದಂತೆ!" — meaning if one perseveres, they can achieve the impossible (literally, "If you persevere, you can even swallow an iron crowbar"). A perfect reminder of the power of grit and resilience.

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.

  1. ೧. ಜೇಡರಹುಳು ಯಾವ ಗುಣಗಳಿಗೆ ಆದರ್ಶವಾಗಿದೆ?

    Answer

    ಜೇಡರಹುಳು ಸಹನೆ ಮತ್ತು ಪ್ರಯತ್ನಶೀಲತೆ ಗುಣಗಳಿಗೆ ಆದರ್ಶವಾಗಿದೆ.

  2. ..........................................................................................................

    Answer

    ಜೇಡರಹುಳು ಸಹನೆ ಮತ್ತು ಪ್ರಯತ್ನಶೀಲತೆ ಗುಣಗಳಿಗೆ ಆದರ್ಶವಾಗಿದೆ.

  3. ೨. ಜೇಡರಹುಳು ಬಲೆ ನಿರ್ಮಿಸುವ ಕೆಲಸವನ್ನು ಹೇಗೆ ಮಾಡುತ್ತದೆ?

    Answer

    ಜೇಡರಹುಳು ಬಲೆ ನಿರ್ಮಿಸುವ ಕೆಲಸದಲ್ಲಿ ಹಲವು ಬಾರಿ ಸೋತು ನೆಲಕ್ಕೆ ಉರುಳಿದರೂ, ಸದ್ದಿಲ್ಲದೆ ಸಹನೆಯಿಂದ ತನ್ನ ಪ್ರಯತ್ನವನ್ನು ಮುಂದುವರೆಸಿ ಕೊನೆಗೆ ಬಲೆಯನ್ನು ನಿರ್ಮಿಸುತ್ತದೆ.

  4. ..........................................................................................................

    Answer

    ಜೇಡರಹುಳು ಬಲೆ ನಿರ್ಮಿಸುವ ಕೆಲಸದಲ್ಲಿ ಹಲವು ಬಾರಿ ಸೋತು ನೆಲಕ್ಕೆ ಉರುಳಿದರೂ, ಸದ್ದಿಲ್ಲದೆ ಸಹನೆಯಿಂದ ತನ್ನ ಪ್ರಯತ್ನವನ್ನು ಮುಂದುವರೆಸಿ ಕೊನೆಗೆ ಬಲೆಯನ್ನು ನಿರ್ಮಿಸುತ್ತದೆ.

  5. ೩. ಸೋತ ರಾಜನಿಗೆ ಜೇಡರಹುಳು ಯಾವ ರೂಪದಲ್ಲಿ ಕಂಡಿತು?

    Answer

    ಸೋತ ರಾಜನಿಗೆ ಜೇಡರಹುಳು ತನ್ನ ಬಲೆ ರಚಿಸುವ ಕಾರ್ಯದಲ್ಲಿ ಹಲವು ಸಾರಿ ಸೋತು ನೆಲಕ್ಕುರುಳಿ, ಮತ್ತೆ ಪ್ರಯತ್ನಿಸುವ ರೂಪದಲ್ಲಿ ಕಂಡಿತು.

  6. ..........................................................................................................

    Answer

    ಸೋತ ರಾಜನಿಗೆ ಜೇಡರಹುಳು ತನ್ನ ಬಲೆ ರಚಿಸುವ ಕಾರ್ಯದಲ್ಲಿ ಹಲವು ಸಾರಿ ಸೋತು ನೆಲಕ್ಕುರುಳಿ, ಮತ್ತೆ ಪ್ರಯತ್ನಿಸುವ ರೂಪದಲ್ಲಿ ಕಂಡಿತು.

  7. ೪. 'ಗುರುವಾದ ಜೇಡರಹುಳು' ಕಥೆಯಲ್ಲಿ ಬಳಕೆಯಾಗಿರುವ ಗಾದೆ ಮಾತು ಯಾವುದು?

    Answer

    'ಗುರುವಾದ ಜೇಡರಹುಳು' ಕಥೆಯಲ್ಲಿ ಬಳಕೆಯಾಗಿರುವ ಗಾದೆ ಮಾತು 'ಸಾಧಿಸಿದರೆ ಸಬಳ ನುಂಗಬಹುದಂತೆ' ಎಂಬುದು.

  8. ..........................................................................................................

    Answer

    'ಗುರುವಾದ ಜೇಡರಹುಳು' ಕಥೆಯಲ್ಲಿ ಬಳಕೆಯಾಗಿರುವ ಗಾದೆ ಮಾತು 'ಸಾಧಿಸಿದರೆ ಸಬಳ ನುಂಗಬಹುದಂತೆ' ಎಂಬುದು.

  9. ೫. 'ಗುರುವಾದ ಜೇಡರಹುಳು' ಕಥೆಯಿಂದ ಯಾವ ನೀತಿ ಕಲಿಯುವಿರಿ?

    Answer

    'ಗುರುವಾದ ಜೇಡರಹುಳು' ಕಥೆಯಿಂದ ಸತತ ಪ್ರಯತ್ನವೇ ಗೆಲುವಿನ ಗುಟ್ಟು ಎಂಬ ನೀತಿಯನ್ನು ಕಲಿಯುತ್ತೇವೆ.

  10. ..........................................................................................................

    Answer

    'ಗುರುವಾದ ಜೇಡರಹುಳು' ಕಥೆಯಿಂದ ಸತತ ಪ್ರಯತ್ನವೇ ಗೆಲುವಿನ ಗುಟ್ಟು ಎಂಬ ನೀತಿಯನ್ನು ಕಲಿಯುತ್ತೇವೆ.

Interactive Lab