ಗದ್ಯ (prose) · ಸಂಪಾದಿತ (Edited/Compiled)
ಪಠ್ಯFull text
ಅಭ್ಯಾಸexercises from the textbook
Model answers — a guide, not the only correct wording. Check with your teacher.
ಅ) ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.
೧. ಮಕ್ಕಳು ಗಾಳಿಪಟ ಹಾರಿಸಲು ಎಲ್ಲಿ ಸೇರಿದ್ದರು?
Answerಮಕ್ಕಳು ಗಾಳಿಪಟ ಹಾರಿಸಲು ಊರ ಮುಂದಿನ ಬಯಲಿನಲ್ಲಿ ಸೇರಿದ್ದರು.
೨. ವಿವಿಧ ಬಗೆಯ ಗಾಳಿಪಟಗಳು ಯಾವುವು?
Answerವಿವಿಧ ಬಗೆಯ ಗಾಳಿಪಟಗಳೆಂದರೆ ಬುಗುರಿ ಪಟ, ಹನುಮನ ಪಟ, ತಾರಾ ಪಟ, ಆಯತ ಪಟ, ಚೌಕದ ಪಟ, ಕೋಲ ಪಟ, ಗಾಳಿಯ ಪಟ, ಹಾವಿನ ಪಟ ಮತ್ತು ಸರಣಿ ಪಟಗಳು.
೩. ಗಾಳಿಪಟಗಳಿಗೆ ಬಾಲಂಗೋಚಿ ಏಕೆ ಬೇಕು?
Answerಗಾಳಿಪಟಗಳಿಗೆ ಮೇಲೆ ಮೇಲೆ ಹಾರಲು ಸಮತೋಲನಕ್ಕಾಗಿ ಬಾಲಂಗೋಚಿ ಬೇಕು.
೪. ಗಾಳಿಪಟಗಳ ಬಾಲಂಗೋಚಿ ಹರಿದರೆ ಏನಾಗುವುದು?
Answerಗಾಳಿಪಟಗಳ ಬಾಲಂಗೋಚಿ ಹರಿದರೆ ಅವು ಗಿರಿಗಿರಿ ತಿರುತಿರುಗಿ ಗಿರಕಿ ಹೊಡೆಯುತ್ತವೆ ಮತ್ತು ಮೇಲೆ ಹಾರಲಾರದೆ ಕೆಳಗಿಳಿದು ಬರುತ್ತವೆ.
೫. ಆಕಾಶದಲ್ಲಿ ಹಾರುವ ಗಾಳಿಪಟಗಳು ಜನರಿಗೆ ಹೇಗೆ ಕಾಣುತ್ತಿದ್ದವು?
Answerಆಕಾಶದಲ್ಲಿ ಹಾರುವ ಗಾಳಿಪಟಗಳು ಕೆಲವರಿಗೆ ಮಾವು ತರಲು ಹಾರಿದ ಬಾಲಹನುಮನಂತೆ, ಹಲವರಿಗೆ ನೀಲಿ ಸಾಗರದಲ್ಲಿ ಈಜುವ ರಂಗುರಂಗಿನ ಮೀನುಗಳಂತೆ ಮತ್ತು ತಿಳಿದವರಿಗೆ ಮಾನವರ ಸಂದೇಶವನ್ನು ದೇವಲೋಕಕ್ಕೆ ಸಾಗಿಸುವ ರಾಯಭಾರಿಗಳಂತೆ ಕಾಣುತ್ತಿದ್ದವು.
ಆ) ಈ ಸಾಲುಗಳನ್ನು ಗಟ್ಟಿಯಾಗಿ ಓದಿರಿ.
೧. ಮೇಲೆ ಕೆಳಗೆ ಲಾಗ ಹೊಡೆಯುವ ಚೆಲುವಿನ ತಾರೆಗಳು! ಪಟಪಟ ಗಾಳಿಪಟಗಳು.
೨. ವಿಧವಿಧ ರಂಗು, ಬಗೆಬಗೆ ಆಕಾರದ ಪಟಗಳು, ನೀಲಿ ನಭಕೆ ರಂಗು ಬಳಿಯುವ ಮಕ್ಕಳ ಆಟವಿದು. ಮೇಲಾಟದಲಿ ಸಂತಸ ಪಡುವ ತುಂಟಾಟವಿದು. ಮನ ಸೆಳೆಯುವ ನೋಟವಿದು.
೩. ತಂದೆ ತಾಯಿಗಳ ಗೋಳಾಟ. ಮಕ್ಕಳಿಗೆ ಆಟ, ಪಾಲಕರಿಗೆ ಸಂಕಟ.
ಇ) ಇವುಗಳನ್ನು ಹಲವು ಸಲ ವೇಗವಾಗಿ ಉಚ್ಚರಿಸಿರಿ.
೧. ಕಾಗೆಪುಕ್ಕ, ಗುಬ್ಬಿಪುಕ್ಕ.
೨. ಅಶ್ವತ್ಥರಳಿ ಮರದ ಬುಡದ ತಳಿರೊಡೆದೆರೆಡೆಲೆಯಾಯ್ತು.
೩. ಕಸ್ತೂರಿರಂಗ ಕಿತ್ತೂರು ರಸ್ತೇಲಿ ಪಿಸ್ತೂಲೇಟ್ ತಿಂದ್ ಸತ್‌ಬಿದ್ದಿದ್ದಂತೆ.
೪. ತರಿಕೆರೆ ಏರಿಮ್ಯಾಲೆ ಮೂರುಕರಿ ಕುರಿಮರಿ.
ಈ) ಕೆಳಗೆ ನೀಡಿರುವ ಜಾಗದಲ್ಲಿ ವಿವಿಧ ಗಾಳಿಪಟಗಳ ಚಿತ್ರ ಬರೆಯಿರಿ.
(A large empty rectangular box is provided for the student to draw pictures of different kinds of kites).