ಗದ್ಯ (prose) · ಸಂಪಾದಿತ (Edited/Compiled)
ಪಠ್ಯFull text
ಪದಗಳ ಅರ್ಥword meanings
| Kannada | Pronunciation | Meaning |
|---|---|---|
| ಅನಾರೋಗ್ಯ | — | ರೋಗದಿಂದ ನರಳುವುದು |
| ಏಳಿಗೆ | — | ಅಭಿವೃದ್ಧಿ; ಉನ್ನತಿ |
| ಘೋಷಣೆ | — | ಗಟ್ಟಿಯಾದ ಕೂಗು |
| ದೀನತೆ | — | ಬಡತನ ನಿಷೇಧ - ನಿರಾಕರಣೆ ಬಹಿಷ್ಕಾರ - ಹೊರಕ್ಕೆ ಹಾಕು |
| ವಿಚಾರಶಕ್ತಿ | — | ಆಲೋಚನಾ ಶಕ್ತಿ ಸಬಲ - ಶಕ್ತಿವಂತ ಹಲಗೆ - ತಮಟೆ ಆಶಯ - ಆಸೆ; ಇಂಗಿತ |
| ಕಷ್ಟಕೋಟಲೆ | — | ಕಷ್ಟಗಳ ಸರಮಾಲೆ |
| ದಂಗಾಗು | — | ಆಶ್ಚರ್ಯಪಡು ನತ್ತು - ಮೂಗುತಿ ಪುಡಿಪುಡಿಯಾಗು - ಚೂರುಚೂರಾಗು |
| ಭಾವಾವೇಶ | — | ಉದ್ರೇಕ ವಿಲೀನ - ಐಕ್ಯವಾಗು; ಕಣ್ಮರೆಯಾಗು |
| ಸಿಡಿದೆಳು | — | ರೊಚ್ಚಿಗೇಳು; ಕೋಪಗೊಳ್ಳು |
| ಹುಟ್ಟುಹಾಕು | — | ಪ್ರಾರಂಭಿಸು |
ಅಭ್ಯಾಸexercises from the textbook
Model answers — a guide, not the only correct wording. Check with your teacher.
II. ಪ್ರಶ್ನೆಗಳು :
ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.
೧. ಕಲ್ಯಾಣಮ್ಮ ಯಾರ ಏಳಿಗೆಗಾಗಿ ಚಿಂತಿಸಿದರು?
Answerಕಲ್ಯಾಣಮ್ಮನವರು ಅಬಲೆಯರ ಮತ್ತು ಮಕ್ಕಳ ಏಳಿಗೆಗಾಗಿ ಚಿಂತಿಸಿದರು.
೨. ಕಲ್ಯಾಣಮ್ಮನವರ ವಿಚಾರಶಕ್ತಿಗೆ ಹೇಗೆ ಹೊಳಪು ಬಂದಿತು?
Answerಮನೆಯಲ್ಲಿಯೇ ಓದು ಮುಂದುವರೆಸಿದ್ದರಿಂದ ಕಲ್ಯಾಣಮ್ಮನವರ ವಿಚಾರಶಕ್ತಿಗೆ ಹೊಸ ಹೊಳಪು ಬಂತು.
೩. ಹೈದ್ರಾಬಾದ್ ಪ್ರಾಂತ್ಯದ ಜನರು ನಿಜಾಮನ ವಿರುದ್ಧ ಏಕೆ ಸಿಡಿದೆದ್ದರು?
Answerಹೈದ್ರಾಬಾದ್ ಪ್ರಾಂತ್ಯದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ನಿಷೇಧಿಸಿದ್ದರಿಂದ ಜನರು ನಿಜಾಮನ ವಿರುದ್ಧ ಸಿಡಿದೆದ್ದರು.
೪. ಮಾಲಗತ್ತಿ ಗ್ರಾಮದ ಜನರು ಎಲ್ಲಿ ಧ್ವಜ ಏರಿಸಲು ನಿರ್ಧರಿಸಿದರು?
Answerಮಾಲಗತ್ತಿ ಗ್ರಾಮದ ಜನರು ಊರ ದೇವತೆ ಕೆಂಚವ್ವನ ಗುಡಿಯ ಬಯಲಿನಲ್ಲಿ ಧ್ವಜ ಏರಿಸಲು ನಿರ್ಧರಿಸಿದರು.
೫. ಹೈದರಾಬಾದ್ ಪ್ರಾಂತ್ಯ ಭಾರತದಲ್ಲಿ ಯಾವಾಗ ವಿಲೀನವಾಯಿತು?
Answerಹೈದರಾಬಾದ್ ಪ್ರಾಂತ್ಯ ೧೯೪೮ ಸೆಪ್ಟೆಂಬರ್ ೧೭ ರಂದು ಭಾರತದಲ್ಲಿ ವಿಲೀನವಾಯಿತು.
ಆ) ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.
೧. ಕಲ್ಯಾಣಮ್ಮ ಮಕ್ಕಳಿಗಾಗಿ ಯಾವ ಯಾವ ಕೆಲಸಗಳನ್ನು ಮಾಡಿದರು?
Answerಕಲ್ಯಾಣಮ್ಮನವರು ಮಕ್ಕಳಿಗಾಗಿ 'ಅಖಿಲ ಕರ್ನಾಟಕ ಮಕ್ಕಳ ಕೂಟ' ಕಟ್ಟಿದರು. ಮಕ್ಕಳನ್ನು ಸೇರಿಸಿ ಕಥೆ, ನಾಟಕ ರಚಿಸಿ, ಕುಣಿಸಿ, ಆಟವಾಡಿಸಿದರು. 'ಸರಸ್ವತಿ ಪತ್ರಿಕೆ'ಯಲ್ಲಿ ಮಕ್ಕಳಿಗಾಗಿ ಪುಟಗಳನ್ನು ಮೀಸಲಾಗಿರಿಸಿದರು.
೨. ಕಲ್ಯಾಣಮ್ಮನವರ ಜೀವನದಲ್ಲಿ ಬಂದು ಎರಗಿದ ಕಷ್ಟಗಳಾವುವು?
Answerಕಲ್ಯಾಣಮ್ಮನವರು ಓದುತ್ತಿರುವಾಗಲೇ ಮದುವೆಯಾಗಿ, ಮೂರು ತಿಂಗಳೊಳಗೆ ಗಂಡನನ್ನು ಕಳೆದುಕೊಂಡರು. ಇದರಿಂದ ಅವರ ಸಂಸಾರದ ಕನಸು ಪುಡಿಪುಡಿಯಾಯಿತು, ದಿಕ್ಕು ತೋರದಂತಾಯಿತು. ಅನಾರೋಗ್ಯದಿಂದಲೂ ಬಳಲುತ್ತಿದ್ದರು.
೩. ಧ್ವಜವೇರಿಸಲು ಬಂದ ಸೀತಮ್ಮನ ರೂಪವನ್ನು ವರ್ಣಿಸಿರಿ.
Answerಸೀತಮ್ಮ ಇಪ್ಪತ್ತು ವರ್ಷದ ತರುಣಿಯಾಗಿದ್ದು, ದುಂಡು ಮುಖ, ಹಣೆ ತುಂಬ ಕುಂಕುಮ, ಮೂಗಿನಲ್ಲಿ ನತ್ತು ಹೊಂದಿದ್ದಳು. ಕಚ್ಚೆ ಹಾಕಿದ ಇಳಕಲ್ಲ ಸೀರೆ ಉಟ್ಟು, ಎಡಗೈಯಲ್ಲಿ ಧ್ವಜ, ಬಲಗೈಯಲ್ಲಿ ಕುಡಗೋಲು ಹಿಡಿದು ಸಾಕ್ಷಾತ್ ಕಾಳಿಯಂತೆ ಕಾಣುತ್ತಿದ್ದಳು.
ಇ) 'ಅ' ಪಟ್ಟಿಗೆ 'ಬ' ಪಟ್ಟಿಯನ್ನು ಹೊಂದಿಸಿ ಬರೆಯಿರಿ.
'ಅ' ಪಟ್ಟಿ — 'ಬ' ಪಟ್ಟಿ
ಅ) ಬಡಿಗೇರ ಸೀತಮ್ಮ — ೧) ಸರಸ್ವತಿ ಪತ್ರಿಕೆ
Answerಅ) ಬಡಿಗೇರ ಸೀತಮ್ಮ — ೪) ಸ್ವಾತಂತ್ರ್ಯ ಹೋರಾಟಗಾರ್ತಿ
ಆ) ಶ್ಯಾವಂತ್ರವ್ವ — ೨) ರಾಮಸ್ವಾಮಿ ಅಯ್ಯಂಗಾರ್
Answerಆ) ಶ್ಯಾವಂತ್ರವ್ವ — ೩) ಬಸಪ್ಪ
ಇ) ಜಾನಕಮ್ಮ — ೩) ಬಸಪ್ಪ
Answerಇ) ಜಾನಕಮ್ಮ — ೨) ರಾಮಸ್ವಾಮಿ ಅಯ್ಯಂಗಾರ್
ಈ) ಆರ್. ಕಲ್ಯಾಣಮ್ಮ — ೪) ಸ್ವಾತಂತ್ರ್ಯ ಹೋರಾಟಗಾರ್ತಿ
Answerಈ) ಆರ್. ಕಲ್ಯಾಣಮ್ಮ — ೧) ಸರಸ್ವತಿ ಪತ್ರಿಕೆ
— ೫) ನಿಜಾಮ
ಈ) ಬಿಟ್ಟ ಸ್ಥಳವನ್ನು ನೀಡಿರುವ ನಾಲ್ಕು ಆಯ್ಕೆಗಳಲ್ಲಿ ಸರಿಯಾದುದನ್ನು ಆರಿಸಿ ಬರೆಯಿರಿ.
೧. ಭಾರತಕ್ಕೆ ಸ್ವಾತಂತ್ರ್ಯ ದೊರೆತರೂ ____________ ಭಾರತದಲ್ಲಿ ವಿಲೀನವಾಗಲಿಲ್ಲ.
Answerಭಾರತಕ್ಕೆ ಸ್ವಾತಂತ್ರ್ಯ ದೊರೆತರೂ ಹೈದ್ರಾಬಾದ್ ಭಾರತದಲ್ಲಿ ವಿಲೀನವಾಗಲಿಲ್ಲ.
ಅ) ಹೈದ್ರಾಬಾದ್
ಬ) ಸಿಕಂದರಾಬಾದ್
ಕ) ಅಲಹಾಬಾದ
ಡ) ಅಹಮದಾಬಾದ್
೨. ಆರ್.ಕಲ್ಯಾಣಮ್ಮನವರು ____________ ಪರೀಕ್ಷೆಯಲ್ಲಿ ಉತ್ತೀರ್ಣರಾದರು.
Answerಆರ್.ಕಲ್ಯಾಣಮ್ಮನವರು ಎಲ್.ಎಸ್. ಪರೀಕ್ಷೆಯಲ್ಲಿ ಉತ್ತೀರ್ಣರಾದರು.
ಅ) ಎಸ್.ಎಸ್.ಎಲ್.ಸಿ.
ಬ) ಎಲ್.ಎಸ್.
ಕ) ಪಿ.ಯು.ಸಿ.
ಡ) ಬಿ.ಎ.
೩. ಕಲ್ಯಾಣಮ್ಮನವರು ಹುಟ್ಟುಹಾಕಿದ ಪತ್ರಿಕೆಯ ಹೆಸರು ____________
Answerಕಲ್ಯಾಣಮ್ಮನವರು ಹುಟ್ಟುಹಾಕಿದ ಪತ್ರಿಕೆಯ ಹೆಸರು ಸರಸ್ವತಿ ಪತ್ರಿಕೆ.
ಅ) ಶಾರದಾ ಪತ್ರಿಕೆ
ಬ) ಸರಸ್ವತಿ ಪತ್ರಿಕೆ
ಕ) ಮಕ್ಕಳ ಬಾವುಟ
ಡ) ಮಕ್ಕಳ ಕೂಟ
೪. ಬಡಿಗೇರ ಸೀತಮ್ಮನ ಊರು ____________
Answerಬಡಿಗೇರ ಸೀತಮ್ಮನ ಊರು ಮಾಲಗತ್ತಿ.
ಅ) ಬೆಂಗಳೂರು
ಬ) ಹೈದ್ರಾಬಾದ್
ಕ) ಮಾಲಗತ್ತಿ
ಡ) ಧಾರವಾಡ
III. ಭಾಷಾಭ್ಯಾಸ :
ಅ) ಮಾದರಿಯಂತೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.
ಮಾದರಿ : ಜಾಗ್ರತೆ x ಅಜಾಗ್ರತೆ
೧. ಅನುಕೂಲ x ____________
Answerಪ್ರತಿಕೂಲ
೨. ಅಬಲೆ x ____________
Answerಸಬಲೆ
೩. ಆರೋಗ್ಯ x ____________
Answerಅನಾರೋಗ್ಯ
೪. ನೀತಿ x ____________
Answerಅನೀತಿ
೫. ಉತ್ತೀರ್ಣ x ____________
Answerಅನುತ್ತೀರ್ಣ
ಆ) ಮಾದರಿ ವಾಕ್ಯಗಳನ್ನು ಗಮನಿಸಿ. ಅದೇ ರೀತಿ ಗೆರೆ ಹಾಕಿದ ಪದಗಳನ್ನು ನಿಮ್ಮ ಸ್ವಂತ ವಾಕ್ಯದಲ್ಲಿ ಬಳಸಿ ಬರೆಯಿರಿ.
೧. ಪ್ರವಾಹದಿಂದ ಜನ **ಕಷ್ಟಕೋಟಲೆ**ಗಳಿಗೆ ಒಳಗಾದರು.
Model sentenceಪ್ರವಾಹದಿಂದ ಜನ ಕಷ್ಟಕೋಟಲೆಗಳಿಗೆ ಒಳಗಾದರು.
____________________________________________________________________
Model sentenceಮಳೆಗಾಲದಲ್ಲಿ ರಸ್ತೆಗಳು ಹಾಳಾಗಿ ನಮಗೆ ತುಂಬಾ ಕಷ್ಟಕೋಟಲೆ ಆಯಿತು.
೨. ನಾವು ಅನ್ಯಾಯದ ವಿರುದ್ಧ **ಸಿಡಿದೆಳ**ಬೇಕು.
Model sentenceನಾವು ಅನ್ಯಾಯದ ವಿರುದ್ಧ ಸಿಡಿದೆಳಬೇಕು.
____________________________________________________________________
Model sentenceತರಗತಿಯಲ್ಲಿ ಗಲಾಟೆ ನಡೆದಾಗ ಶಿಕ್ಷಕರು ಸಿಡಿದೆದ್ದರು.
೩. ಜೋಗ ಜಲಪಾತದ ಸೌಂದರ್ಯವನ್ನು ನೋಡಿ **ದಂಗಾದೆ**ನು.
Model sentenceಜೋಗ ಜಲಪಾತದ ಸೌಂದರ್ಯವನ್ನು ನೋಡಿ ದಂಗಾದೆನು.
____________________________________________________________________
Model sentenceಸರ್ಕಸ್ ಆಟ ನೋಡಿ ನಾನು ದಂಗಾದೆ.
೪. ಮೇಧಾ ಪಾಟ್ಕರ್ ನರ್ಮದಾ ಬಚಾವೋ ಆಂದೋಲನವನ್ನು **ಹುಟ್ಟುಹಾಕಿ**ದರು.
Model sentenceಮೇಧಾ ಪಾಟ್ಕರ್ ನರ್ಮದಾ ಬಚಾವೋ ಆಂದೋಲನವನ್ನು ಹುಟ್ಟುಹಾಕಿದರು.
____________________________________________________________________
Model sentenceನಮ್ಮ ಶಾಲೆಯಲ್ಲಿ ಹೊಸ ಓದುವ ಕೂಟವನ್ನು ಹುಟ್ಟುಹಾಕಿದರು.
೫. ವಿವೇಕಾನಂದರ ಲೇಖನಗಳನ್ನು ಓದಿ ಸುಭಾಷರು **ಭಾವಾವೇಶ**ಕ್ಕೆ ಒಳಗಾದರು.
Model sentenceವಿವೇಕಾನಂದರ ಲೇಖನಗಳನ್ನು ಓದಿ ಸುಭಾಷರು ಭಾವಾವೇಶಕ್ಕೆ ಒಳಗಾದರು.
____________________________________________________________________
Model sentenceಸ್ವಾತಂತ್ರ್ಯ ದಿನದಂದು ನನಗೆ ತುಂಬಾ ಭಾವಾವೇಶ ಉಂಟಾಯಿತು.
೬. ಕಲ್ಯಾಣಮ್ಮ ಮತ್ತು ಬಡಿಗೇರ ಸೀತಮ್ಮ **ಅಬಲೆ**ಯರಲ್ಲ ಸಬಲೆಯರು.
Model sentenceಕಲ್ಯಾಣಮ್ಮ ಮತ್ತು ಬಡಿಗೇರ ಸೀತಮ್ಮ ಅಬಲೆಯರಲ್ಲ ಸಬಲೆಯರು.
____________________________________________________________________
Model sentenceನಮ್ಮ ಅಮ್ಮ ಅಬಲೆಯರಲ್ಲ, ಅವರು ತುಂಬಾ ಸಬಲೆಯರು.
ಇ) ವಾಕ್ಯಗಳಲ್ಲಿ ಕಾಣುವ ಅರ್ಥ ವ್ಯತ್ಯಾಸವನ್ನು ತಿಳಿಯಿರಿ.
೧. ಕಲ್ಯಾಣಮ್ಮನವರು ಶಿಕ್ಷಣವನ್ನು ಬೆಂಗಳೂರಿನಲ್ಲಿ ಪಡೆದರು.
೨. ಕಲ್ಯಾಣಮ್ಮನವರು ಶಿಕ್ಷಣವನ್ನು ಬೆಂಗಳೂರಿನಲ್ಲಿ ಪಡೆಯುತ್ತಾರೆ.
೩. ಕಲ್ಯಾಣಮ್ಮನವರು ಶಿಕ್ಷಣವನ್ನು ಬೆಂಗಳೂರಿನಲ್ಲಿ ಪಡೆಯುವರು.
ಇಂತಹ ಮೂರು ವಾಕ್ಯಗಳನ್ನು ನೀವು ರಚಿಸಿರಿ.
................................................................................................................
Answerನಾನು ಊಟ ಮಾಡಿದೆ.
................................................................................................................
Answerನಾನು ಊಟ ಮಾಡುತ್ತೇನೆ.
................................................................................................................
Answerನಾನು ಊಟ ಮಾಡುವೆ.
ಈ) ಕೆಳಗಿನ ಜೋಡಿ ಪದಗಳನ್ನು ಗಮನಿಸಿರಿ.
೧. ನೋವು ಸಂಕಟ
೨. ಕಷ್ಟಕೋಟಲೆ
೩. ಸುತ್ತಮುತ್ತ
೪. ಜನ ಜಂಗುಳಿ
ಪೂರಕ ಓದು :
(ಕಿತ್ತೂರು ರಾಣಿ ಚೆನ್ನಮ್ಮನನ್ನು ಕುರಿತು ರಚಿತವಾಗಿರುವ ಈ ಕೆಳಗಿನ ಜನಪದ ಸಾಹಿತ್ಯವನ್ನು ಹಾಡಿರಿ ಹಾಗೂ ಪ್ರಸ್ತುತ ಗದ್ಯದಲ್ಲಿನ ವಿಚಾರಗಳೊಂದಿಗೆ ಇರುವ ಸಾಮ್ಯತೆಯನ್ನು ಗಮನಿಸಿರಿ.)
ಕಿತ್ತೂರು ಚೆನ್ನಮ್ಮ ಸುತ್ತೂರು ಒಡತ್ಯಾಗಿ
ಕತ್ತಿ ಕವಚಗಳ ಉಡುಪುಟ್ಟು । ಅಬ್ಬರದಿ
ಬತ್ತಲಗುದರಿಯ ಜಿಗದಾಳೋ ॥
– ತ್ರಿಪದಿ
ಚಂಡಿಯೊ, ಚೌಡಿಯೊ, ಮಾರಿಯೊ, ಮಸಣಿಯೊ
ಖಂಡಿತ ಮಾನವಳಿವಳಲ್ಲಾ ಪುಂಡ ರಕ್ಕಸರ
ತರಿವಳು ಚಾಮುಂಡಿಯೇ ಇವಳು ಬೇರಲ್ಲಾ.
– ಲಾವಣಿ
ಕಿತ್ತೂರ ಕೋಟೆಯ ಸುತ್ತವರಿಯಿತ ಚಾಪ್ಲಿನ್ ದಂಡ
ಕಿತ್ತೂರ ದಂಡ ಜಯಘೋಷ ಹೊರ ಚಿಂತ ಹರಹರ
ಮಹಾದೇವಂದ.... ಕೋಲ
ಭರತ ಖಂಡದೊಳಗ ಮೊದಲ ಕಿತ್ತೂರ ರಾಜ್ಯ
ಪರಸತ್ತೆಯ ಕಿತ್ತೆಸೆಯಾಕ ಕದನ ಹೂಡಿತ....ಕೋಲ
– ಕೋಲು ಪದ