ಪದ್ಯ (poem) · ಕಯ್ಯಾರ ಕಿಞ್ಞಣ್ಣ ರೈ
ಪಠ್ಯFull text
**ಶುಭ ನುಡಿ** > ನುಡಿಯಲು ಒಳ್ಳೆಯ ಮಾತುಗಳು ಇರುವಾಗ ಕೆಟ್ಟ ಮಾತುಗಳನ್ನು ಆಡುವುದೇಕೆ? > ಆತ್ಮಶಕ್ತಿ ಇರುವವರನ್ನು ಯಾವ ದುಷ್ಟಶಕ್ತಿಯೂ ನಾಶಗೊಳಿಸಲಾರದು. > ಗೌರವಕೊಟ್ಟು ಗೌರವ ಪಡೆಯೋಣ. — "Why speak bad words when there are good words to speak? No evil force can destroy those who have inner strength. Let us give respect and gain respect." Excellent principles for self-conduct and resilience.
ಪದಗಳ ಅರ್ಥword meanings
| Kannada | Pronunciation | Meaning |
|---|---|---|
| ಹೊರೆ | — | ತೂಕ, ಭಾರ, ಕಂತೆ; ಕಂಗಾಲು - ಅಶಕ್ತವಾಗು, ದುರ್ಬಲವಾಗು; ಉಪಕಾರ - ಸಹಾಯ; ಸೊಕ್ಕು - ಮದ, ಗರ್ವ, ಬೀಗು; ಹಿಗ್ಗು - ಸಂತೋಷ, ಚಾಳಿಸು - ಹೀಯಾಳಿಸು, ಪೀಡಿಸು |
ಅಭ್ಯಾಸexercises from the textbook
Model answers — a guide, not the only correct wording. Check with your teacher.
ಅ. ಬಿಟ್ಟ ಸ್ಥಳಗಳನ್ನು ಸರಿಯಾದ ಪದಗಳಿಂದ ಭರ್ತಿಮಾಡಿರಿ.
೧. ಕತ್ತೆಯ ಬೆನ್ನಿಗೆ ________________ ಕುದುರೆಯ ಜತೆಯಲಿ ________________
Answerಕತ್ತೆಯ ಬೆನ್ನಿಗೆ ಹೇರಿಸಿದ, ಕುದುರೆಯ ಜತೆಯಲಿ ಸಾಗಿಸಿದ.
೨. ನಡುಗಿತು ಕತ್ತೆಯ ________________ ಬಿದ್ದಿತು ಭೂಮಿಗೆ ________________
Answerನಡುಗಿತು ಕತ್ತೆಯ ಕೈಕಾಲು, ಬಿದ್ದಿತು ಭೂಮಿಗೆ ಕಂಗಾಲು.
೩. ಹೊತ್ತಿತು ಕುದುರೆಯು ________________ ಅತ್ತಿತು ಬಗ್ಗಿಸಿತದು ________________
Answerಹೊತ್ತಿತು ಕುದುರೆಯು ಹೊರೆಯನ್ನ, ಅತ್ತಿತು ಬಗ್ಗಿಸಿತದು ಬೆನ್ನ.
೪. ಒಂದಿಷ್ಟಾದರೂ ________________ ನನ್ನಯ ಪ್ರಾಣವ ________________
Answerಒಂದಿಷ್ಟಾದರೂ ಹೊತ್ತುಬಿಡು, ನನ್ನಯ ಪ್ರಾಣವ ಉಳಿಸಿಕೊಡು.
ಆ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.
೧. ಭೀಮಣ್ಣನು ಎಲ್ಲಿಗೆ ಹೋದನು ?
Answerಭೀಮಣ್ಣನು ಸಂತೆಗೆ ಹೋದನು.
೨. ಭೀಮಣ್ಣನು ಏನನ್ನು ಕೊಂಡನು ?
Answerಭೀಮಣ್ಣನು ಹತ್ತು ಮಣ ಹಿಂಡಿಯನ್ನು ಕೊಂಡನು.
೩. ಕತ್ತೆಯು ಹೊರೆಯನ್ನು ಯಾರಿಗೆ ಹೊರು ಎಂದು ಕೇಳಿತು ?
Answerಕತ್ತೆಯು ಹೊರೆಯನ್ನು ಕುದುರೆಗೆ ಹೊರು ಎಂದು ಕೇಳಿತು.
೪. ಕುದುರೆಯು "ನನ್ನಯ ಪ್ರಾಣವ ಉಳಿಸು" ಎಂದು ಯಾರನ್ನು ಕೇಳಿತು ?
Answerಕುದುರೆಯು "ನನ್ನಯ ಪ್ರಾಣವ ಉಳಿಸು" ಎಂದು ಕತ್ತೆಯನ್ನು ಕೇಳಿತು.
೫. 'ನೀ ನನಗಿದ್ದರೆ' ಈ ಪದ್ಯದ ನೀತಿ ಏನು ?
Answerಈ ಪದ್ಯದ ನೀತಿ 'ನೀ ನನಗಿದ್ದರೆ ನಾ ನಿನಗೆ' ಎಂಬ ಪರಸ್ಪರ ಸಹಾಯದ ಮನೋಭಾವ.
ಇ. ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯದಲ್ಲಿ ಉತ್ತರಿಸಿರಿ.
೧. ಕತ್ತೆಯು ಸಹಾಯ ಕೇಳಿದಾಗ ಕುದುರೆ ಏನೆಂದು ಹೇಳಿತು ?
Answerಕತ್ತೆಯು ಸಹಾಯ ಕೇಳಿದಾಗ ಕುದುರೆ ಅದನ್ನು ಚಾಳಿಸಿ, "ನಿನ್ನ ಬೆನ್ನಿಗೆ ಹಾಕಿದ್ದಾನೆ, ಅದಕ್ಕೇ ನಿನ್ನನ್ನು ಸಾಕಿದ್ದಾನೆ. ನೀನೇ ಹೊತ್ತುಕೊಂಡು ಬೇಗ ನಡಿ, ದಣಿಯದೆ ಹಾದಿ ಹಿಡಿದು ಬರುತ್ತಾನೆ" ಎಂದು ಹೇಳಿತು.
೨. ಕುದುರೆಯು ಕತ್ತೆಯನ್ನು ಏನೆಂದು ಬೇಡಿಕೊಂಡಿತು ?
Answerಕುದುರೆಯು ಕತ್ತೆಯನ್ನು, "ನಿನ್ನ ಉಪಕಾರವನ್ನು ಮರೆಯುವುದಿಲ್ಲ, ಒಂದಿಷ್ಟಾದರೂ ಹೊತ್ತುಬಿಟ್ಟು ನನ್ನ ಪ್ರಾಣವನ್ನು ಉಳಿಸಿಕೊಡು" ಎಂದು ಬೇಡಿಕೊಂಡಿತು.
ಈ. ಈ ಪದಗಳನ್ನು ಬಿಡಿಸಿ ಬರೆದು ಸಂಧಿ ಹೆಸರಿಸಿರಿ.
೧. ನಿನ್ನುಪಕಾರ
೨. ಒಂದಿಷ್ಟಾದರೂ
೩. ನನಗಿದ್ದರೆ
೪. ನಮ್ಮೊಳಗೆ
ಉ. ಈ ಪದ್ಯದಲ್ಲಿ ಬಂದಿರುವ ಪ್ರಾಸ ಪದಗಳನ್ನು ಪಟ್ಟಿಮಾಡಿ.
ಊ. ಈ ಪದ್ಯವನ್ನು ವೈಯಕ್ತಿಕವಾಗಿ ಹಾಗೂ ಸಾಮೂಹಿಕವಾಗಿ ಹಾಡಿರಿ.
ಋ. ಅಂಕಣದಲ್ಲಿರುವ ಅಕ್ಷರಗಳನ್ನು ಹೇಗೆ ಬೇಕಾದರೂ/ ಎಲ್ಲಿಂದ ಬೇಕಾದರೂ ಉಪಯೋಗಿಸಿ ೫೦ಕ್ಕಿಂತ ಹೆಚ್ಚು ಶಬ್ದಗಳನ್ನು ಮಾಡಬಹುದು. ನೀವೆಷ್ಟು ಮಾಡಬಲ್ಲಿರಿ? ಅತಿ ಹೆಚ್ಚು ಪದ ರಚಿಸಿದವರಿಗೆ ಮೆಚ್ಚುಗೆ ವ್ಯಕ್ತಪಡಿಸಿರಿ.
ಉದಾ : ದೊಡ್ಡ, ಮೊಗ್ಗು.
Answerಮೊಗ, ಹಣ, ಕರ, ಸುರ, ಚರ, ಮರ, ತರ, ಹರ, ಗರ, ಡರ, ಗುರ, ಚೊರ, ಕ್ಷರ, ಅರ, ಬೆಣ, ಹಿಮ, ಮೊಗ್ಗು
(A 5x5 letter grid puzzle to build words from intersecting letters. The grid rows from top to bottom read: Row 1: ಚ, ಕ್ಷ, ಚೊ, ಅ, ಮ. Row 2: ರೆ, ಸ, ಘ, ಗ್ನ, ರ. Row 3: ಬ, ಹ, ಣ, ಮೊ, ಹಿ. Row 4: ಬೆ, ಕ, ಚ್ಚ, ಬ, ತ. Row 5: ಸು, ಗ, ಡ, ಡೊ, ಗು.)
ವ್ಯಾಕರಣ ಮಾಹಿತಿ
ಸಮಾಸ :
ಕೆಳಗಿನ ಪದಗಳನ್ನು ಗಮನಿಸಿರಿ.
> ಅರಸನ + ಮನೆ = ಅರಮನೆ.
> ಹಿರಿದು + ಮರ = ಹೆಮ್ಮರ.
> ಗಿಡವೂ + ಮರವೂ + ಬಳ್ಳಿಯೂ = ಗಿಡಮರಬಳ್ಳಿಗಳು.
> ಕೈಯನ್ನು + ಮುಗಿ = ಕೈಮುಗಿ.
ಎರಡು ಅಥವಾ ಎರಡಕ್ಕಿಂತ ಹೆಚ್ಚು ಪದಗಳು ಅರ್ಥಕ್ಕೆ ಲೋಪಬಾರದ ರೀತಿಯಲ್ಲಿ ಸಮಾಸ ಪದಗಳಾಗುತ್ತವೆ. ಇವುಗಳಿಗೆ 'ಸಮಸ್ತಪದಗಳು' ಎಂದು ಕರೆಯುತ್ತಾರೆ. ಸಮಾಸಪದವನ್ನು ಬಿಡಿಸಿ ಬರೆಯುವುದಕ್ಕೆ 'ವಿಗ್ರಹ ವಾಕ್ಯ' ಎನ್ನುವರು.
ಉದಾ: ತಲೆಯಲ್ಲಿ + ನೋವು = ತಲೆನೋವು
ಇಲ್ಲಿ 'ತಲೆನೋವು' ಎಂಬ ಪದವನ್ನು 'ವಿಗ್ರಹವಾಕ್ಯ' ಮಾಡಿ ಬರೆಯಲಾಗಿದೆ. ಮೊದಲನೆಯ ಪದವನ್ನು 'ಪೂರ್ವಪದ'ವೆಂದೂ ಎರಡನೆಯ ಪದವನ್ನು 'ಉತ್ತರಪದ'ವೆಂದೂ ಕರೆಯುವರು.
ಸಮಾಸಗಳಲ್ಲಿ ಎಂಟು ವಿಧ.
> ತತ್ಪುರುಷ ಸಮಾಸ
> ಕರ್ಮಧಾರಯ ಸಮಾಸ
> ದ್ವಿಗು ಸಮಾಸ
> ದ್ವಂದ್ವ ಸಮಾಸ
> ಅಂಶಿ ಸಮಾಸ
> ಬಹುವ್ರೀಹಿ ಸಮಾಸ
> ಕ್ರಿಯಾ ಸಮಾಸ
> ಗಮಕ ಸಮಾಸ
ಭಾಷಾ ಆಟ
ಅ. ಶಿಕ್ಷಕರು ಬಾಯಾರಿದ ಕಾಗೆಯ ಕಥೆಯನ್ನು ಹೇಳುವುದು. ಅನಂತರ ವಿದ್ಯಾರ್ಥಿಗಳು ಕಥೆಯನ್ನು ತಮ್ಮ ಮಾತಿನಲ್ಲಿ ಬರೆಯುವುದು.
ಆ. ವೈದ್ಯ-ರೋಗಿ ಸಂಭಾಷಣೆಯನ್ನು ಮಕ್ಕಳಿಂದ ಮಾಡಿಸುವುದು.
ಉದಾ:-
**ವೈದ್ಯ:** (ಒಬ್ಬ ಹುಡುಗನನ್ನು ಮಲಗಿಸಿ ಸ್ಟೆಥೋಸ್ಕೋಪ್ ಇಟ್ಟು ನೋಡುತ್ತಾ ಏನಾಗಿದೆ ನಿನಗೆ?
**ರೋಗಿ:** (ನಡುಗುತ್ತಾ) ನನಗೆ ರಾತ್ರಿಯೆಲ್ಲ ಚಳಿಜ್ವರ ಬಂದಿತು.
**ವೈದ್ಯ:** ನಾಲಿಗೆ ಚಾಚು.
**ರೋಗಿ:** (ನಾಲಿಗೆ ಚಾಚುತ್ತ ಒಂಥರ ಧ್ವನಿ ಹೊರಡಿಸುವನು)
**ವೈದ್ಯ:** (ಮಾತ್ರೆ ಚೀಟಿ ಬರೆಯುತ್ತಾ) ಈ ಮಾತ್ರೆ ತೆಗೆದುಕೋ ಸರಿಯಾಗುತ್ತದೆ.
(ಇನ್ನೊಂದು ಸಂದರ್ಭವನ್ನು ಮಕ್ಕಳೇ ಬರೆಯಬೇಕು.)
ಯೋಜನೆ
> ಸಾಕುಪ್ರಾಣಿಗಳ ಚಿತ್ರಗಳನ್ನು ಸಂಗ್ರಹಿಸಿ ಚಿತ್ರಸಂಪುಟ ತಯಾರಿಸಿರಿ.
> ಪರಿಸರ ಸಂರಕ್ಷಣೆಗೆ ನೀವು ಕೈಗೊಂಡ ಕಾರ್ಯಗಳನ್ನು ಪಟ್ಟಿ ಮಾಡಿರಿ.
ಪೂರಕ ಓದು
> ಕೆ.ಎಸ್. ನರಸಿಂಹಸ್ವಾಮಿಯವರ 'ಮೈಸೂರು ಮಲ್ಲಿಗೆ' ಕವನ ಸಂಕಲನ ಓದಿರಿ.
> ಹೊರನಾಡ ಕನ್ನಡಿಗರು ಬರೆದ ಸಾಹಿತ್ಯ ಕೃತಿಗಳನ್ನು ಸಂಪಾದಿಸಿ ಓದಿರಿ.
> ಹನಿಗವನಗಳನ್ನು ಸಂಗ್ರಹಿಸಿ ಓದಿರಿ.