ಪದ್ಯ · ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ
ಪಠ್ಯFull text
> ಗಾಳಿ, ನೀರಿಗೆ ಜಾತಿ-ಮತವಿಲ್ಲ. > ಜಲವು ಸಕಲ ಜೀವರಾಶಿಗಳ ರಕ್ಷಕ. > ನದಿಗಳು ನಾಗರಿಕತೆಯ ತೊಟ್ಟಿಲು. "Wind and water have no caste or religion. Water is the protector of all living things. Rivers are the cradle of civilization."
ಪದಗಳ ಅರ್ಥword meanings
| Kannada | Pronunciation | Meaning |
|---|---|---|
| ದುಸ್ತರ | — | ಕಠಿಣ, ಕಷ್ಟಸಾಧ್ಯ |
| ಕಣ | — | ಅತ್ಯಂತ ಸೂಕ್ಷ್ಮವಾದ ಅಂಶ |
| ಪ್ರಾಣ | — | ಜೀವ, ಜೀವ ಉಳಿಯಲು ಕಾರಣವಾದ ಒಂದು ವಾಯು |
| ನಭ | — | ಆಕಾಶ, ಗಗನ, ಅಂಬರ |
| ಹೊಳೆ | — | ನದಿ, ಮಿನುಗು |
| ಕುಣಿ | — | ಕುಳಿ, ಹೊಂಡ, ನರ್ತಿಸು |
| ಕೊಳೆ | — | ಕಲ್ಮಷ, ಹೊಲಸು |
| ಚಿಮ್ಮು | — | ಹಾರು, ಜಿಗಿ, ನೆಗೆ |
| ತೊಳೆ | — | ನೀರಿನಿಂದ ಸ್ವಚ್ಛಗೊಳಿಸು |
| ಮಾಯ | — | ಇದ್ದಕ್ಕಿದ್ದಂತೆ ಕಾಣೆಯಾಗುವುದು, ಮರೆಯಾಗಿರುವುದು |
| ಹರಿ | — | ಓಡು, ಪ್ರವಹಿಸು, ಹೋಗು |
| ತುಣುಕು | — | ಚೂರು, ತುಂಡು |
| **ವಿವರ ತಿಳಿಯಿರಿ:** ಗಂಗವ್ವ | — | ಭಾರತದ ನೆಲದಲ್ಲಿ ಹರಿಯುವ ನೀರನ್ನು ಗಂಗೆ ಅಥವಾ ಗಂಗವ್ವ ಎಂದು ಕರೆಯುವರು |
| ಪದಪದರಾಗ | — | ಪ್ರತಿ ಹಂತ ಹಂತಗಳಲ್ಲಿಯೂ, ಪೊರೆಪೊರೆಗಳಲ್ಲಿಯೂ |
ಅಭ್ಯಾಸexercises from the textbook
Model answers — a guide, not the only correct wording. Check with your teacher.
ಅ. ಬಿಟ್ಟ ಸ್ಥಳವನ್ನು ಕೆಳಗೆ ನೀಡಲಾದ ಸೂಕ್ತ ಪದಗಳಿಂದ ಭರ್ತಿಮಾಡಿರಿ.
೧. ಬಾರವ್ವ ತಾಯಿ ______________ ತಾಯಿ.
Answerಗಂಗವ್ವ
೨. ಹೊಳೆಯವ್ವ ತಾಯಿ ______________ ತಾಯಿ.
Answerನೀರವ್ವ
೩. ಮೈಮನಸ ಹೊಲಸೆಲ್ಲ ______________ ತಾಯಿ.
Answerತೊಳೆಯವ್ವ
೪. ನೀರವ್ವ ಗಂಗವ್ವ ______________ ಬಾರವ್ವ.
Answerಮಳೆಯಾಗಿ
೫. ಒಣಗೇದ ನೆಲದಾಗ ______________ ಹೊಳೆಯವ್ವ.
Answerಹಸುರಾಗಿ
(ನೀರವ್ವ, ಹಸುರಾಗಿ, ಗಂಗವ್ವ, ತೊಳೆಯವ್ವ, ಮಳೆಯಾಗಿ, ಸುರಿಯುತ್ತ)
ಆ. ಸಮಾನಾರ್ಥಕ ಪದಗಳನ್ನು ಬರೆಯಿರಿ.
೧. ನೀರು
Answerಜಲ
೨. ನಭ
Answerಆಕಾಶ, ಗಗನ, ಅಂಬರ
೩. ಕುಣಿ
Answerಕುಳಿ, ಹೊಂಡ, ನರ್ತಿಸು
೪. ತಾಯಿ
Answerಮಾಯಿ
ಇ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.
೧. ನೀರು ಎಲ್ಲೆಲ್ಲಿ ತುಂಬಬೇಕು ಎಂದು ಕವಿ ಹೇಳುತ್ತಾರೆ?
Answerನೆಲದ ಕಣಕಣದಲ್ಲಿ ಮತ್ತು ಮನದ ಪದಪದರಗಳಲ್ಲಿ ನೀರು ತುಂಬಬೇಕು ಎಂದು ಕವಿ ಹೇಳುತ್ತಾರೆ.
೨. ನೀರು ಹೇಗೆಲ್ಲ ಹರಿದು ಬರಬೇಕೆಂದು ಕವಿ ವಿನಂತಿಸಿಕೊಂಡಿದ್ದಾರೆ?
Answerನೀರು ನಗುನಗುತ ನಲಿಯುತ್ತ, ಪುಟಿಯುತ್ತ ಕುಣಿಯುತ್ತ, ಚಿಮ್ಮುತ್ತ ಜಿಗಿಯುತ್ತ, ಹರಿಯುತ್ತ ಸುರಿಯುತ್ತ ಧೋ ಧೋ ಎಂದೂ, ಮಳೆಯಾಗಿ ಹೊಳೆಯಾಗಿ ಕಲಕಲ ನದಿಯಾಗಿ ಹನಿ ಹನಿ ಕಣ ಕಣವಾಗಿಯೂ ಹರಿದು ಬರಬೇಕೆಂದು ಕವಿ ವಿನಂತಿಸಿಕೊಂಡಿದ್ದಾರೆ.
೩. ಒಣಗಿದ ನೆಲದಲ್ಲಿ ನೀರು ಹೇಗೆ ಹೊಳೆಯಬೇಕು ಎಂದು ಕವಿ ಹೇಳುತ್ತಾರೆ?
Answerಒಣಗಿದ ನೆಲದಲ್ಲಿ ನೀರು ಹಸುರಾಗಿ ಹೊಳೆಯಬೇಕು ಎಂದು ಕವಿ ಹೇಳುತ್ತಾರೆ.
೪. ‘ಗಂಗವ್ವ ತಾಯಿ’ ಕವನವನ್ನು ಬರೆದವರು ಯಾರು?
ಈ. ಕೊಟ್ಟಿರುವ ಮಾತನ್ನು ಯಾರು ಯಾರಿಗೆ ಯಾವಾಗ ಹೇಳಿದರು?
೧. ನೆಲದ ಕಣಕಣದಾಗ ಮನದ ಪದಪದರಾಗ.
Answerಕವಿಯು ಗಂಗವ್ವ ತಾಯಿಗೆ ನೀರು ಎಲ್ಲೆಲ್ಲೂ ತುಂಬಬೇಕೆಂದು ಪ್ರಾರ್ಥಿಸುವಾಗ ಹೇಳಿದರು.
೨. ಹರಿಯುತ್ತ ಸುರಿಯುತ್ತ ಧೋಧೋ ಬಾರವ್ವ.
Answerಕವಿಯು ಗಂಗವ್ವ ತಾಯಿಗೆ ನೀರು ಹರಿದು ಸುರಿದು ಧೋ ಧೋ ಎಂದು ಬರಬೇಕೆಂದು ಪ್ರಾರ್ಥಿಸುವಾಗ ಹೇಳಿದರು.
೩. ಒಣಗೇದ ನೆಲದಾಗ ಹಸಿ ಹಸಿರು ನೆಡಲಾಕ.
Answerಕವಿಯು ಗಂಗವ್ವ ತಾಯಿಗೆ ಒಣಗಿದ ನೆಲದಲ್ಲಿ ಹಸಿರು ಬೆಳೆಸಬೇಕೆಂದು ಪ್ರಾರ್ಥಿಸುವಾಗ ಹೇಳಿದರು.
೪. ಜೀವದಾ ತುಣುಕಾಗಿ ಮೈಮನಸ ಹೊಲಸೆಲ್ಲ.
Answerಕವಿಯು ಗಂಗವ್ವ ತಾಯಿಗೆ ಮೈ-ಮನಸ್ಸಿನ ಕೊಳೆಯನ್ನು ತೊಳೆಯಬೇಕೆಂದು ಪ್ರಾರ್ಥಿಸುವಾಗ ಹೇಳಿದರು.
ಉ. ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯದಲ್ಲಿ ಉತ್ತರಿಸಿರಿ.
೧. ಗಂಗವ್ವ ಇದ್ದರೆ ಎಲ್ಲೆಲ್ಲಿ, ಏನೇನು ಆಗುವುದೆಂದು ಕವಿ ಹೇಳಿದ್ದಾರೆ?
Answerಗಂಗವ್ವ ಇದ್ದರೆ ಜಗತ್ತಿನಲ್ಲೂ ಆಕಾಶದಲ್ಲೂ ನೀರು ಜಳಜಳ ಜಲಜಲ ಎಂದು ತುಂಬಿ ಹರಿಯುತ್ತದೆ. ಒಣಗಿದ ನೆಲದಲ್ಲಿ ಹಸಿರು ಬೆಳೆಯುತ್ತದೆ, ಉಸಿರು ಉಳಿಯುತ್ತದೆ ಮತ್ತು ಕೊಳೆ ತೊಳೆಯುತ್ತದೆ.
೨. ನೀರು ಯಾವ ಯಾವ ಕೆಲಸಕ್ಕೆ ಬೇಕು ಎಂದು ಕವಿ ಹೇಳಿದ್ದಾರೆ?
Answerಒಣಗಿದ ನೆಲದಲ್ಲಿ ಹಸಿ ಹಸಿರು ನೆಡಲು, ಉಸಿರುಸಿರು ಉಳಿಸಲು ಮತ್ತು ಕೊಳೆಯನ್ನು ತೊಳೆಯಲು ನೀರು ಬೇಕು ಎಂದು ಕವಿ ಹೇಳಿದ್ದಾರೆ. ಮೈ-ಮನಸ್ಸಿನ ಹೊಲಸನ್ನು ತೊಳೆಯಲೂ ನೀರು ಬೇಕು ಎಂದು ಹೇಳಿದ್ದಾರೆ.
ಊ. ನೀರಿನ ಉಪಯೋಗವನ್ನು ಸಂಗ್ರಹ ರೂಪದಲ್ಲಿ ತಿಳಿಸಿರಿ.
ಭಾಷಾ ಆಟಗಳು
ಅ. ಮಕ್ಕಳು ವೃತ್ತಾಕಾರವಾಗಿ ನಿಲ್ಲಲಿ. ಅದರಲ್ಲಿ ಒಬ್ಬರಿಗೆ ಒಂದು ವಿಷಯವನ್ನು ಸ್ಪಷ್ಟವಾದ ವಾಕ್ಯದಲ್ಲಿ ಇತರರಿಗೆ ಕೇಳದಂತೆ ಹೇಳಿರಿ. ಆ ವಿದ್ಯಾರ್ಥಿಯು ಅದೇ ವಾಕ್ಯವನ್ನು ಪಕ್ಕದಲ್ಲಿರುವವರಿಗೆ ಗುಟ್ಟಾಗಿ ಹೇಳಲಿ. ಹಾಗೆಯೇ ಆ ವಾಕ್ಯವನ್ನು ಒಬ್ಬರಿಂದ ಒಬ್ಬರಿಗೆ ಹೇಳುತ್ತ ಸಾಗಲಿ. ಕೊನೆಯಲ್ಲಿರುವ ವಿದ್ಯಾರ್ಥಿಯು ತಾನು ಕೇಳಿಸಿಕೊಂಡದ್ದನ್ನು ಜೋರಾಗಿ ಎಲ್ಲರಿಗೂ ಕೇಳುವಂತೆ ಹೇಳಲಿ. ಮೊದಲು ಹೇಳಿದ ವಾಕ್ಯವನ್ನು ಕೊನೆಯ ವಿದ್ಯಾರ್ಥಿ ಹೇಳಿದ ವಾಕ್ಯವನ್ನು ಹೋಲಿಸಿರಿ. ಹೀಗೆಯೇ ಬೇರೆ ಬೇರೆ ವಾಕ್ಯಗಳನ್ನು ಹೇಳುತ್ತ ಆಟ ಆಡಿರಿ.
ಆ. ‘ನೀರು ಅತ್ಯಮೂಲ್ಯ ಸಂಪನ್ಮೂಲ’ ಈ ವಿಷಯದ ಕುರಿತು ಚರ್ಚಾಸ್ಪರ್ಧೆ ಏರ್ಪಡಿಸಿರಿ.
ಇ. ಜಲಸಂರಕ್ಷಣೆ, ನೀರಿನ ಮೂಲಗಳ ಸ್ವಚ್ಛತೆ ಕುರಿತು ಭಾಷಣ ಮಾಡಿರಿ.
ಯೋಜನೆ
> ಕರ್ನಾಟಕದಲ್ಲಿ ಹರಿಯುವ ನದಿಗಳ ಹೆಸರನ್ನು ಪಟ್ಟಿಮಾಡಿರಿ.
> ದ.ರಾ.ಬೇಂದ್ರೆಯವರು ಬರೆದ ‘ಇಳಿದು ಬಾ ತಾಯಿ’ ಕವನವನ್ನು ಸಂಗ್ರಹಿಸಿ ಹಾಡಿರಿ.
ಪೂರಕ ಓದು
> ಜನಪದ ಕಾವ್ಯದಲ್ಲಿ ಬರುವ ಮಳೆಗೆ ಸಂಬಂಧಿಸಿದ ಪದ್ಯಗಳನ್ನು ಸಂಗ್ರಹಿಸಿ ಓದಿರಿ.
> ಮಳೆಯಿಂದ ಭೂಮಿಯ ಮೇಲೆ ಆಗುವ ಪರಿಣಾಮಗಳನ್ನು ತಿಳಿಯಿರಿ.
ಶುಭ ನುಡಿ
> ಗಾಳಿ, ನೀರಿಗೆ ಜಾತಿ-ಮತವಿಲ್ಲ.
> ಜಲವು ಸಕಲ ಜೀವರಾಶಿಗಳ ರಕ್ಷಕ.
> ನದಿಗಳು ನಾಗರಿಕತೆಯ ತೊಟ್ಟಿಲು.