CRECT Education

Class 6 Kannada Lesson 17: Vachanas of the Heart | KTBS Kannada First Language – Poem

Description

Line-by-line walkthrough of the modern vachanas 'ಹೃದಯ ವಚನಗಳು' by Amruta Someshwara, with vocabulary and comprehension.

ಪದ್ಯ (poem) · ಅಮೃತ ಸೋಮೇಶ್ವರ

ಪಠ್ಯFull text

ಒಂಬತ್ತು ತಡವೆ ಉಪಕರಿಸಿ ಒಮ್ಮೆ ತಪ್ಪಲು, ಮೊದಲಿನೆಲ್ಲವ ಮರೆವರಯ್ಯ ಹತ್ತು ಬಾರಿ ಮೆಚ್ಚಿ ಮತ್ತೊಂದು ಬಾರಿ ಟೀಕಿಸಲು, ಕೆರಳಿ ಜರೆವರಯ್ಯ ಸ್ತುತಿಗೆ ತಲೆಯೋಲೆಯಿಸಿ ನಲಿದೊಲಿವುದಯ್ಯ ಲೋಕ ಒಳ್ಳೆಕೆಯ ಚಾಳಿಯ ದೂರೀಕರಿಸಯ್ಯ ಸ್ತೋತ್ರಾತೀತ ಹೃದಯೇಶ ಸೋಮೇಶಾ॥ ನೆಗೆವ ಹುಲ್ಲೆಯಾಗುವುದೊಮ್ಮೆ ಮೊರೆವ ಹುಲಿಯಾಗುವುದೊಮ್ಮೆ ಕೆನೆದು ಕುಪ್ಪಳಿಸುವ ಕುದುರೆಯಾಗುವುದೊಮ್ಮೆ ಗಂಭೀರಗತಿಯ ಗಜವಾಗುವುದೊಮ್ಮೆ ಗುಟುರುವ ಗೂಳಿಯಾಗುವುದೊಮ್ಮೆ ಚಪಲತೆಯ ಕೋತಿಯಾಗುವುದೊಮ್ಮೆ ನಂಜಿನ ನಾಗವಾಗುವುದೊಮ್ಮೆ ನೀರೊಳಗೆ ನಿರಾಳವಿಹ ಮೀನಾಗುವುದೊಮ್ಮೆ ಹೃದಯಕೆನಿತು ರೂಪಗಳೊ ಈ ಹದನವ ನೀನೆ ಬಲ್ಲೆ ಬಹುರೂಪಿ ಹೃದಯೇಶ ಸೋಮೇಶಾ॥ ಎನಿತು ಭಾಷೆಗಳ ಕಲಿತಡೇನು ಹೃದಯದ ಭಾಷೆ ಕಲಿಯದನ್ನಕ? ಎನಿತು ನುಡಿ ಸಡಗರ ತೋರ್ದಡೇನು ಎದೆಯ ಮಿಡಿತವರಿಯದನ್ನಕ? ಎನಿತು ಶೋಧನೆಗೈದಡೇನು ಹೃದಯ ಶೋಧನೆಗೈಯದನ್ನಕ? ಎನಿತು ಸಾಧನೆಗೈದಡೇನು ಹೃದಯದ ಬೆಸುಗೆ ಸಾಧಿತವಾಗದನ್ನಕ? ಇವೆಲ್ಲಕ್ಕೂ ಜೀವಭಾವದಾತ ನೀನೆ ಕಾಣ ಹೃದಯೇಶ ಸೋಮೇಶಾ॥ **ಕೌಶಲ :** ಓದುವುದು. **ಸಾಮರ್ಥ್ಯ :** ಓದಿದ ವಿಷಯಗಳ ಬಗ್ಗೆ ಆಲೋಚಿಸಿ ತಾರ್ಕಿಕವಾಗಿ ತೀರ್ಮಾನಿಸುವುದು.

"ಪರಿಶುದ್ಧ ಹೃದಯವು ಬದುಕನ್ನು ರೂಪಿಸುತ್ತದೆ." — A pure heart shapes life.

ಪದಗಳ ಅರ್ಥword meanings

KannadaPronunciationMeaning
ತಡವೆಬಾರಿ, ಸಲ
ಉಪಕರಿಸುಉಪಕಾರ ಮಾಡು, ನೆರವು ನೀಡು
ಜರೆನಿಂದಿಸು, ಬಯ್ಯು
ಸ್ತುತಿಹೊಗಳಿಕೆ
ಒಲೈಸುಮೆಚ್ಚಿಸು
ಚಾಳಿನಡವಳಿಕೆ, ವರ್ತನೆ
ಹುಲ್ಲೆಜಿಂಕೆ, ಚಿಗರೆ
ಮೊರೆವಗರ್ಜಿಸುವ, ಕುಪ್ಪಳಿಸು-ಹಾರು, ಜಿಗಿಯು
ಗಜಆನೆ
ಗುಟುರುಹೂಂಕರಿಸು, ಜೋರಾಗಿ ಧ್ವನಿ ಮಾಡು
ನಂಜುವಿಷ
ನಿರಾಳಶಾಂತಿ, ನೆಮ್ಮದಿ
ಹದನರೀತಿ
ಎನಿತುಎಷ್ಟು
ಮಿಡಿತಬಡಿತ, ಸ್ಪಂದನ
ಬೆಸುಗೆಹೊಂದಿಕೆ, ಜೋಡಣೆ
ಸಾಧಿತಸಾಧಿಸಿದ, ಸಿದ್ಧಿಯನ್ನು ಪಡೆದ
ದಾತಒಡೆಯ, ಸ್ವಾಮಿ
> ಬಹುರೂಪಿ :ಹಲವು ರೂಪಗಳಿಂದ ಕೂಡಿ ಕಾಣಿಸಿಕೊಳ್ಳುವಾತ
> ವಚನ :ಹನ್ನೆರಡನೆಯ ಶತಮಾನದ ಶಿವಶರಣರು ರಚಿಸಿದ ಸಾಹಿತ್ಯ ಪ್ರಕಾರ; ಆಧುನಿಕ ಸಂದರ್ಭದಲ್ಲೂ ಅಂತಹ ವಚನಗಳು ರಚನೆಯಾಗುತ್ತಿವೆ

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಪದಗಳ ಅರ್ಥ ಬರೆಯಿರಿ.

  1. ೧. ಉಪಕರಿಸು

  2. ೨. ಮೊರೆವ

  3. ೩. ನಿರಾಳ

  4. ೪. ಸಾಧಿತ

  5. ೫. ಬಹುರೂಪಿ

ಆ. ಕೊಟ್ಟಿರುವ ವಚನವನ್ನು ಪೂರ್ಣಗೊಳಿಸಿರಿ:

  1. ೧. ಎನಿತು ಭಾಷೆಗಳ __________________________________________________________________

    Answer

    ಕಲಿತಡೇನು ಹೃದಯದ ಭಾಷೆ ಕಲಿಯದನ್ನಕ?

  2. __________________________________________________________________ಮಿಡಿತವರಿಯದನ್ನಕ?

    Answer

    ಎನಿತು ನುಡಿ ಸಡಗರ ತೋರ್ದಡೇನು ಎದೆಯ

  3. __________________________________________________________________

    Answer

    ಎನಿತು ಶೋಧನೆಗೈದಡೇನು ಹೃದಯ ಶೋಧನೆಗೈಯದನ್ನಕ?

  4. __________________________________________________________________

    Answer

    ಎನಿತು ಸಾಧನೆಗೈದಡೇನು ಹೃದಯದ ಬೆಸುಗೆ ಸಾಧಿತವಾಗದನ್ನಕ?

  5. __________________________________________________________________ಹೃದಯೇಶ ಸೋಮೇಶಾ.

    Answer

    ಇವೆಲ್ಲಕ್ಕೂ ಜೀವಭಾವದಾತ ನೀನೆ ಕಾಣ

ಇ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

  1. ೧. ಯಾವ ಚಾಳಿಯನ್ನು ದೂರವಿಡಿ ಎಂದು ಅಮೃತ ಸೋಮೇಶ್ವರರು ಹೇಳುತ್ತಾರೆ?

    Answer

    ಅಮೃತ ಸೋಮೇಶ್ವರರು ಒಳ್ಳೆಕೆಯ ಚಾಳಿಯನ್ನು ದೂರವಿಡಿ ಎಂದು ಹೇಳುತ್ತಾರೆ.

  2. ೨. ಹೃದಯದ ಬೆಸುಗೆ ಸಾಧಿತವಾಗುವುದು ಯಾವಾಗ?

  3. ೩. ಅಂಕಿತನಾಮವು ವಚನದ ಯಾವ ಭಾಗದಲ್ಲಿ ಬರುತ್ತದೆ?

    Answer

    ಅಂಕಿತನಾಮವು ವಚನದ ಕೊನೆಯ ಸಾಲಿನಲ್ಲಿ ಬರುತ್ತದೆ.

  4. ೪. ನಾವು ಮೊದಲು ಯಾವ ಭಾಷೆಯನ್ನು ಕಲಿಯಬೇಕು?

    Answer

    ನಾವು ಮೊದಲು ಹೃದಯದ ಭಾಷೆಯನ್ನು ಕಲಿಯಬೇಕು.

  5. ೫. ಜನ ಕೆರಳಿ ಜರೆಯುವುದು ಯಾವಾಗ?

    Answer

    ಹತ್ತು ಬಾರಿ ಮೆಚ್ಚಿ ಒಂದು ಬಾರಿ ಟೀಕಿಸಿದಾಗ ಜನ ಕೆರಳಿ ಜರೆಯುತ್ತಾರೆ.

ಈ. ಈ ವಚನವನ್ನು ಪೂರ್ಣಗೊಳಿಸಿ ಕಂಠಪಾಠ ಮಾಡಿರಿ.

  1. ಒಂಬತ್ತು ತಡವೆ .......................................................................................................

    Answer

    ಉಪಕರಿಸಿ ಒಮ್ಮೆ ತಪ್ಪಲು, ಮೊದಲಿನೆಲ್ಲವ ಮರೆವರಯ್ಯ

  2. .................................................................................................................................

    Answer

    ಹತ್ತು ಬಾರಿ ಮೆಚ್ಚಿ ಮತ್ತೊಂದು ಬಾರಿ ಟೀಕಿಸಲು, ಕೆರಳಿ ಜರೆವರಯ್ಯ

  3. .................................................................................................................................

    Answer

    ಸ್ತುತಿಗೆ ತಲೆಯೋಲೆಯಿಸಿ ನಲಿದೊಲಿವುದಯ್ಯ ಲೋಕ

  4. .....................................................................................ಹೃದಯೇಶ ಸೋಮೇಶಾ॥

    Answer

    ಒಳ್ಳೆಕೆಯ ಚಾಳಿಯ ದೂರೀಕರಿಸಯ್ಯ ಸ್ತೋತ್ರಾತೀತ

ಉ. ಕೆಳಗಿನ ಚಿಹ್ನೆಗಳನ್ನು ಗಮನಿಸಿ ಅದರ ಹೆಸರು ಬರೆಯಿರಿ.

  1. ೧. ;

  2. ೨. ‘......’

  3. ೩. (.......)

  4. ೪. “.......”

  5. ೫. !

ಭಾಷಾ ಆಟ.

ಅ. ಕೆಳಗಿನ ಅಕ್ಷರಬೃಂದದಲ್ಲಿ ಹತ್ತು ಜನ ವಚನಕಾರರು ಅಡಗಿಕೊಂಡಿದ್ದಾರೆ. ನಿಮಗೆ ಸಾಧ್ಯವಾದಷ್ಟು ಹೆಸರನ್ನು ಹುಡುಕಿ ಬರೆಯಿರಿ.

  1. (A letter grid puzzle. The grid contains syllables arranged in rows and columns to find the names of 10 Vachanakaras hidden within. The grid contents are:

  2. Row 1: ಬ ಸಿ ದ್ದ ಯ್ಯ ಮಾ ಕ ಕ್ಯ ಯ್ಯ

  3. Row 2: ಅ ರ ಹಾ ಪು ದ ಚ ನ್ನ ಯ್ಯ

  4. Row 3: ಕ್ಕ ಮ ಣ್ಣಿ ಬಿ ಣೆ ಕ ಸಿ ಬ

  5. Row 4: ಮ ಹಾ ಮ ಡಿ ವಾ ಳ ದ್ಧ ರ

  6. Row 5: ದಾ ದೇ ವಿ ಪ್ರ ಭು ಮಾ ರಾ ಮ

  7. Row 6: ಸಿ ಅ ರ್ತ ಮ ಕ ಚ ಯ್ಯ ಕ

  8. Row 7: ಮ ಯ್ಯ ಚ ನ್ನ ಬ ಸ ವ ಣ್ಣ)

Interactive Lab

ತಡವೆಬಾರಿ, ಸಲ
ಉಪಕರಿಸುಉಪಕಾರ ಮಾಡು, ನೆರವು ನೀಡು
ಜರೆನಿಂದಿಸು, ಬಯ್ಯು
ಸ್ತುತಿಹೊಗಳಿಕೆ
ಒಲೈಸುಮೆಚ್ಚಿಸು
ಚಾಳಿನಡವಳಿಕೆ, ವರ್ತನೆ
ಹುಲ್ಲೆಜಿಂಕೆ, ಚಿಗರೆ
ಮೊರೆವಗರ್ಜಿಸುವ, ಕುಪ್ಪಳಿಸು-ಹಾರು, ಜಿಗಿಯು
ಗಜಆನೆ
ಗುಟುರುಹೂಂಕರಿಸು, ಜೋರಾಗಿ ಧ್ವನಿ ಮಾಡು
ನಂಜುವಿಷ
ನಿರಾಳಶಾಂತಿ, ನೆಮ್ಮದಿ
ಹದನರೀತಿ
ಎನಿತುಎಷ್ಟು
ಮಿಡಿತಬಡಿತ, ಸ್ಪಂದನ
ಬೆಸುಗೆಹೊಂದಿಕೆ, ಜೋಡಣೆ
ಸಾಧಿತಸಾಧಿಸಿದ, ಸಿದ್ಧಿಯನ್ನು ಪಡೆದ
ದಾತಒಡೆಯ, ಸ್ವಾಮಿ
> ಬಹುರೂಪಿ :ಹಲವು ರೂಪಗಳಿಂದ ಕೂಡಿ ಕಾಣಿಸಿಕೊಳ್ಳುವಾತ
> ವಚನ :ಹನ್ನೆರಡನೆಯ ಶತಮಾನದ ಶಿವಶರಣರು ರಚಿಸಿದ ಸಾಹಿತ್ಯ ಪ್ರಕಾರ; ಆಧುನಿಕ ಸಂದರ್ಭದಲ್ಲೂ ಅಂತಹ ವಚನಗಳು ರಚನೆಯಾಗುತ್ತಿವೆ