CRECT Education

Class 6 Kannada Lesson 18: Lion of Kittur | KTBS Class 6 Kannada

Description

Learn the heroic poem about Rani Chennamma of Kittur, line by line, with vocabulary and comprehension practice.

ಪದ್ಯ (poem) · ಪ.ಗು. ಸಿದ್ದಾಪುರ

ಪಠ್ಯFull text

ಕಟ್ಟುಕತೆ ಇದು ಅಲ್ಲ ದಿಟ್ಟ ಹೆಜ್ಜೆಯನಿಟ್ಟ ವೀರವನಿತೆಯ ಚರಿತೆ ನೀವ್ ಕೇಳಿರಿಂದು ಅನ್ನಕ್ಕೆ ಬಂದಿರುವ ಕುನ್ನಿಗಳ ಮನ್ನಿಸದೆ ಸಮರ ಸಾರಿದ ರಾಣಿ ಜನಜನಿತವಿಂದು ।।೧।। ಮಲ್ಲಸಜ್ಜನ ಮನಕೆ ನೋವಾಗದಿರಬಹುದೆ? ಹೋದರೀ ಸಿರಿನಾಡು ಪರಕೀಯರಾ ವಶಕೆ! ಮಂಚಕ್ಕೆ ಒರಗಿರುವ ಕಿರಿಯರಸಿ ಚೆನ್ನಮ್ಮ ಕನವರಿಸಿ ಕಟಕಟನೆ ಹಲ್ ಕಡಿದಳಾಕೆ ।।೨।। ತುತ್ತೂರಿ ಊದಿದಳು ಕಿತ್ತೂರು ಕಿರಿರಾಣಿ ಬನ್ನಿರೈ ನನ್ನವರೆ ತಾಯ್ ಸೇವೆಗೆಂದು ನಮ್ಮ ಅನ್ನವನುಂಡು ಕೊಬ್ಬಿರುವ ಕುನ್ನಿಗಳ ಶಿರಮಾಲೆ ಕೊರಳೊಳಗೆ ಧರಿಸೋಣವೆಂದು ।।೩।। ಗುಡುಗಿದಳು ಸಿಡಿಲಂತೆ ಸಿಂಹದಾ ಧ್ವನಿಯಂತೆ ಎಳಿರೈ ಕೆಚ್ಚೆದೆಯ ಕಲಿಗಳೇ ನೀವು! ಕರಿನೆಲದ ಗರಿಮೆಯನು ತೋರಿಸಲು ಬಿಳಿಯರಿಗೆ ಛಲ ತೊಟ್ಟು ಹುಲಿಯಂತೆ ನುಗ್ಗೋಣ ನಾವು ।।೪।। ಅಮಟೂರು ಬಾಳಪ್ಪ, ಸಂಗೊಳ್ಳಿ ರಾಯಣ್ಣ ಸಿಡಿಲಿನಾ ಕಿಡಿಯಂತೆ ಸಿಡಿದೆದ್ದರೊಡನೆ ನಾಡ ರಕ್ಷಣೆಗಾಗಿ ಪ್ರಾಣವನು ಪಣಕಿಟ್ಟು ರಾಜಗುರು ಕೃಪೆ ಪಡೆದು ಕಟ್ಟಿದರು ಸೇನೆ ।।೫।। ಆಕಾಶದೆತ್ತರಕೆ ಜಯಘೋಷ ಮೊಳಗಿಸುತ ನುಗ್ಗಿದಳು ಚೆನ್ನಮ್ಮ ರಣಚಂಡಿಯಾಗಿ ವೀರ ಯೋಧರ ಎದೆಗೆ ವಜ್ರಕವಚವ ಬಿಗಿದು ಬೀಸುತ್ತಿದ್ದಳು ಖಡ್ಗ ತಾ ಮುಂದೆ ಸಾಗಿ ।।೬।। ತನ್ನಾತ್ಮ ಛಲದಿಂದ ಧರಿಸಿದಳು ಜಯಮಾಲೆ ಸೋಲಾಯ್ತು ಮರುಕ್ಷಣವೆ ದುರ್ಮತಿಯರಿಂದ ಮಮ್ಮಲನೆ ಮರುಗಿದಳು ಮನನೊಂದು ಕೊರಗಿದಳು ತಾಯ್ ನೆಲದ ರಕ್ಷಣೆಯು ಕೈ ಮೀರಿತೆಂದು! ।।೭।। ಕಿತ್ತೂರ ಸಾಮ್ರಾಜ್ಯ ಕಟ್ಟುವೆನು ಇನ್ನೊಮ್ಮೆ ದುಷ್ಟ ಅರಿಗಳ ಮೆಟ್ಟಿ ಈ ಮಾತು ಸತ್ಯ ಸೆರೆಮನೆಯ ಸೇರಿದರು ಹಿಂಜರಿಯಲಿಲ್ಲೆನಿತು ಕಲಿಗಳಿಗೆ ಕಿವಿಮಾತು ಹೇಳಿದಳು ನಿತ್ಯ ।।೮।। ನಿನ್ನ ಋಣ ತೀರಿಸಲು ನನಗಾಗಲಿಲ್ಲಮ್ಮ ಈ ಒಂದೆ ಜನ್ಮದಲಿ ಕರುನಾಡ ಒಡತಿ 'ಮರುಜನ್ಮ ನೀಡೆನಗೆ ಹೆಣ್ಣಾಗಿ ಈ ನೆಲದಿ' ಕಣ್ಮುಚ್ಚಿ ಬೇಡಿದಳು ಕಿತ್ತೂರ ಕೇಸರಿ ।।೯।। **ಕೌಶಲ : ಆಲಿಸುವುದು.** **ಸಾಮರ್ಥ್ಯ : ವಿಷಯವನ್ನು ಆಲಿಸಿದ ಬಳಿಕ ಏಕೆ? ಹೇಗೆ? ಹಾಗಾದರೆ, ಹಾಗಾಗದಿದ್ದರೆ ಪ್ರಶ್ನೆಗಳಿಗೆ ಉತ್ತರಿಸುವುದು.** **ಕವಿ ಕೃತಿ ಪರಿಚಯ :** ಪರಗೊಂಡ ಗುರುಪಾದಪ್ಪ ಸಿದ್ದಾಪುರ ಇವರ ಕಾವ್ಯನಾಮ ಪ.ಗು.ಸಿದ್ದಾಪುರ. ಇವರು ೦೧-೦೨-೧೯೫೮ರಲ್ಲಿ ವಿಜಯಪುರ (ಬಿಜಾಪುರ) ಜಿಲ್ಲೆಯ ಬಸವನಬಾಗೇವಾಡಿಯ ದಾಶಾಳ ಎಂಬ ಊರಿನಲ್ಲಿ ಜನಿಸಿದರು. ಇವರ ತಂದೆ ಹೆಸರು ಗುರುಪಾದಪ್ಪ, ತಾಯಿ ಹೆಸರು ಯಮುನಾಬಾಯಿ. ಇವರು ಎಂ.ಎ, ಎ.ಎಂ.(ಆರ್ಟ್ ಮಾಸ್ಟರ್) ಪದವಿ ಪಡೆದಿದ್ದು, ಬಸವನ ಬಾಗೇವಾಡಿಯ ಮುಳವಾಡ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ನೂರಾರು ಮಕ್ಕಳ ಕವಿತೆಗಳು, ಕಥೆಗಳನ್ನು ರಚಿಸಿದ್ದಾರೆ. ಅನೇಕ ಕೃತಿಗಳನ್ನು ಸಂಪಾದನೆ ಮಾಡಿದ್ದಾರೆ. ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ-೨೦೧೦ರಲ್ಲಿ ಪಡೆದುಕೊಂಡಿರುವ ಇವರು ಅನೇಕ ಸಾಹಿತ್ಯ ಕೃತಿಗಳನ್ನು ನೀಡಿದ್ದಾರೆ. ಇವರ 'ಮಕ್ಕಳ ನೂರಾರು ಕವಿತೆಗಳು' ಎಂಬ ಕೃತಿಯಿಂದ ಈ ಪದ್ಯವನ್ನು ಆರಿಸಿಕೊಳ್ಳಲಾಗಿದೆ.

"ತಾನೆಲ್ಲಿದ್ದರೂ ತನ್ನ ನಾಡನ್ನು ಮರೆಯಬಾರದು." — "Wherever one is, one should not forget their homeland." A great reminder of rootedness and identity.

ಪದಗಳ ಅರ್ಥword meanings

KannadaPronunciationMeaning
ದಿಟ್ಟಹೆಜ್ಜೆಧೈರ್ಯದ ಹೆಜ್ಜೆ, ಸಾಹಸದ ನಡೆ
ಚರಿತ್ರೆಇತಿಹಾಸ
ಕುನ್ನಿನಾಯಿಮರಿ
ಜನಜನಿತಪ್ರಸಿದ್ಧವಾದ
ಪರಕೀಯವಿದೇಶಿಯರು, ಅನ್ಯ
ಕನವರಿಕೆನಿದ್ದೆಯಲ್ಲಿ ಮಾತಾಡಿಕೊಳ್ಳುವಿಕೆ, ಒಂದೇ ವಿಷಯವನ್ನು ಮತ್ತೆ ಮತ್ತೆ ಯೋಚಿಸುವಿಕೆ
ಕೆಚ್ಚೆದೆಗಟ್ಟಿಯಾದ ಎದೆ, ಎದೆಗಾರಿಕೆ
ರಣಚಂಡಿಯುದ್ಧದೇವತೆ, ದುರ್ಗೆ
ದುರ್ಮತಿಕೆಟ್ಟ ಬುದ್ಧಿ, ದುಷ್ಟ ವ್ಯಕ್ತಿ
ಮಮ್ಮಲ ಮರುಗುಅತಿಶಯವಾಗಿ ಮರುಗು, ವಿಶೇಷವಾಗಿ ದುಃಖಪಡು
ಅರಿಶತ್ರು
ಸೆರೆಮನೆಕಾರಾಗೃಹ, ಬಂದೀಖಾನೆ
ಕಲಿವೀರ, ಶೂರ
ಮರುಜನ್ಮಪುನರ್ಜನ್ಮ

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಬಿಟ್ಟ ಸ್ಥಳ ತುಂಬಿರಿ.

  1. ೧. ಅನ್ನಕ್ಕೆ ಬಂದಿರುವ ____________________ಮನ್ನಿಸದೆ

    Answer

    ಅನ್ನಕ್ಕೆ ಬಂದಿರುವ ಕುನ್ನಿಗಳ ಮನ್ನಿಸದೆ

  2. ೨. ಹೋದರೀ ____________________ ಪರಕೀಯರಾ ವಶಕೆ!

    Answer

    ಹೋದರೀ ಸಿರಿನಾಡು ಪರಕೀಯರಾ ವಶಕೆ!

  3. ೩. ಕರಿನೆಲದ ಗರಿಮೆಯನು ತೋರಿಸಲು ____________________

    Answer

    ಕರಿನೆಲದ ಗರಿಮೆಯನು ತೋರಿಸಲು ಬಿಳಿಯರಿಗೆ

  4. ೪. ಮಮ್ಮಲನೆ ಮರುಗಿದಳು____________________ಕೊರಗಿದಳು

    Answer

    ಮಮ್ಮಲನೆ ಮರುಗಿದಳು ಮನನೊಂದು ಕೊರಗಿದಳು

ಆ. ಕೊಟ್ಟಿರುವ ಪದ ಬಳಸಿ ಸ್ವಂತ ವಾಕ್ಯ ಬರೆಯಿರಿ.

  1. ೧. ಚರಿತ್ರೆ ೨. ಜಯಮಾಲೆ ೩. ಋಣ

    Model sentence

    ಚರಿತ್ರೆ: ನಮ್ಮ ಊರಿನ ಚರಿತ್ರೆ ತುಂಬಾ ಹಳೆಯದು. ಜಯಮಾಲೆ: ಅವಳು ಸ್ಪರ್ಧೆಯಲ್ಲಿ ಗೆದ್ದು ಜಯಮಾಲೆ ಪಡೆದಳು. ಋಣ: ನಾವು ನಮ್ಮ ದೇಶದ ಋಣ ತೀರಿಸಬೇಕು.

ಇ. ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

  1. ಅ. ಚೆನ್ನಮ್ಮ ಏನೆಂದು ಕನವರಿಸಿ ಹಲ್ಲು ಕಡಿದಳು?

    Answer

    ಚೆನ್ನಮ್ಮ ಸಿರಿನಾಡು ಪರಕೀಯರ ವಶಕ್ಕೆ ಹೋಗುವುದೆಂದು ಕನವರಿಸಿ ಹಲ್ಲು ಕಡಿದಳು.

  2. ಆ. ನಮ್ಮ ಅನ್ನವನ್ನು ಉಂಡು ಕೊಬ್ಬಿರುವವರು ಯಾರು?

    Answer

    ನಮ್ಮ ಅನ್ನವನ್ನು ಉಂಡು ಕೊಬ್ಬಿರುವವರು ಕುನ್ನಿಗಳು.

  3. ಇ. ಚೆನ್ನಮ್ಮ ಸೈನಿಕರನ್ನು ಕುರಿತು ಏನೆಂದು ಹೇಳಿದಳು?

    Answer

    ಚೆನ್ನಮ್ಮ ಸೈನಿಕರನ್ನು ಕುರಿತು, 'ಬನ್ನಿರೈ ನನ್ನವರೆ ತಾಯ್ ಸೇವೆಗೆಂದು' ಎಂದು ಹೇಳಿದಳು.

  4. ಈ. ಯಾರ ಕೃಪೆಯಿಂದ ಸೈನ್ಯವನ್ನು ಕಟ್ಟಲಾಯಿತು?

    Answer

    ರಾಜಗುರುಗಳ ಕೃಪೆಯಿಂದ ಸೈನ್ಯವನ್ನು ಕಟ್ಟಲಾಯಿತು.

  5. ಉ. ಮರುಜನ್ಮ ನೀಡೆಂದು ಚೆನ್ನಮ್ಮ ಯಾರಲ್ಲಿ, ಯಾಕೆ ಕೇಳಿದಳು?

    Answer

    ಚೆನ್ನಮ್ಮ ಕರುನಾಡ ಒಡತಿಯಲ್ಲಿ, ತಾಯ್ನೆಲದ ಋಣ ತೀರಿಸಲು ಮರುಜನ್ಮ ನೀಡೆಂದು ಕೇಳಿದಳು.

ಈ. ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ರಾಣಿ ಚೆನ್ನಮ್ಮ ಹಲ್ಲು ಕಡಿದದ್ದು ಯಾಕೆ?

    Answer

    ರಾಣಿ ಚೆನ್ನಮ್ಮ ತನ್ನ ಸಿರಿನಾಡು ಪರಕೀಯರ ವಶಕ್ಕೆ ಹೋಗುವುದನ್ನು ಕನವರಿಸಿದಳು. ಈ ಚಿಂತೆಯಿಂದ ಅವಳು ಕಟಕಟನೆ ಹಲ್ಲು ಕಡಿದಳು.

  2. ೨. ಕೆಚ್ಚೆದೆಯ ಕಲಿಗಳಿಗೆ ಚೆನ್ನಮ್ಮ ಏನೆಂದು ಹೇಳಿದಳು?

    Answer

    ಚೆನ್ನಮ್ಮ ಕೆಚ್ಚೆದೆಯ ಕಲಿಗಳಿಗೆ, 'ಬನ್ನಿರೈ ನನ್ನವರೆ ತಾಯ್ ಸೇವೆಗೆಂದು' ಎಂದು ಕರೆದು, 'ಕುನ್ನಿಗಳ ಶಿರಮಾಲೆ ಧರಿಸೋಣ' ಎಂದು ಹೇಳಿದಳು. 'ಛಲ ತೊಟ್ಟು ಹುಲಿಯಂತೆ ನುಗ್ಗೋಣ' ಎಂದು ಪ್ರೋತ್ಸಾಹಿಸಿದಳು.

  3. ೩. ಚೆನ್ನಮ್ಮನಿಗೆ ನೋವಾಗಲು ಕಾರಣವೇನು?

    Answer

    ಚೆನ್ನಮ್ಮ ಛಲದಿಂದ ಜಯಮಾಲೆ ಧರಿಸಿದರೂ, ದುರ್ಮತಿಗಳಿಂದ ಸೋಲಾಯಿತು. ತಾಯ್ನೆಲದ ರಕ್ಷಣೆ ಕೈಮೀರಿತೆಂದು ಅವಳು ಮಮ್ಮಲನೆ ಮರುಗಿದಳು. ಇದೇ ಅವಳ ನೋವಿಗೆ ಕಾರಣ.

  4. ೪. ಕಿತ್ತೂರ ಕೇಸರಿ ಕಣ್ಮುಚ್ಚಿ ಏನೆಂದು ಬೇಡಿಕೊಂಡಳು?

    Answer

    ಕಿತ್ತೂರ ಕೇಸರಿ ಕಣ್ಮುಚ್ಚಿ, 'ನಿನ್ನ ಋಣ ತೀರಿಸಲು ನನಗಾಗಲಿಲ್ಲಮ್ಮ, ಮರುಜನ್ಮ ನೀಡೆನಗೆ ಹೆಣ್ಣಾಗಿ ಈ ನೆಲದಿ' ಎಂದು ಬೇಡಿಕೊಂಡಳು. ಹೀಗೆ ತಾಯ್ನೆಲದ ಸೇವೆಗಾಗಿ ಮರುಜನ್ಮ ಬೇಡಿದಳು.

ಉ. ಪದ್ಯ ಪೂರ್ಣಗೊಳಿಸಿರಿ.

  1. ೧. ಮಲ್ಲಸಜ್ಜನ ____________________

    Answer

    ಮಲ್ಲಸಜ್ಜನ ಮನಕೆ ನೋವಾಗದಿರಬಹುದೆ?

  2. ________________________________________

    Answer

    ಹೋದರೀ ಸಿರಿನಾಡು ಪರಕೀಯರಾ ವಶಕೆ!

  3. ________________________________________

    Answer

    ಮಂಚಕ್ಕೆ ಒರಗಿರುವ ಕಿರಿಯರಸಿ ಚೆನ್ನಮ್ಮ

  4. ____________________ಹಲ್ ಕಡಿದಳಾಕೆ

    Answer

    ಕನವರಿಸಿ ಕಟಕಟನೆ

  5. ೨. ನಿನ್ನ ಋಣ____________________

    Answer

    ನಿನ್ನ ಋಣ ತೀರಿಸಲು ನನಗಾಗಲಿಲ್ಲಮ್ಮ

  6. ________________________________________

    Answer

    ಈ ಒಂದೆ ಜನ್ಮದಲಿ ಕರುನಾಡ ಒಡತಿ

  7. ________________________________________

    Answer

    'ಮರುಜನ್ಮ ನೀಡೆನಗೆ ಹೆಣ್ಣಾಗಿ ಈ ನೆಲದಿ'

  8. ____________________ಕಿತ್ತೂರ ಕೇಸರಿ.

    Answer

    ಕಣ್ಮುಚ್ಚಿ ಬೇಡಿದಳು

ಊ. ಈ ಪದ್ಯದಲ್ಲಿರುವ ಪ್ರಾಸಪದಗಳನ್ನು ಆರಿಸಿ ಪಟ್ಟಿ ಮಾಡಿರಿ.

ಭಾಷಾ ಆಟಗಳು

ಅ. ಕೆಳಗಿನ ಪದಗಳನ್ನು ಅಚ್ಚಗನ್ನಡ, ಸಂಸ್ಕೃತ, ಇಂಗ್ಲಿಷ್, ಪೋರ್ಚುಗೀಸ್ ಭಾಷೆಯ ಪದಗಳಾಗಿ ದೇಶಿಯ ಅನ್ಯದೇಶಿಯ ಇರುವಕಡೆ ವಿಂಗಡಿಸಿ ಬರೆಯಿರಿ.

  1. ರೋಡ್, ಅಲಮಾರು, ಛೇರ್‌ಮನ್, ಭೂಮಿ, ಮನೆ, ಕೋರ್ಟ್, ನದಿ, ಸ್ಕೂಲ್, ಸಾಬೂನು, ಸಂಧ್ಯಾ, ಬ್ಯಾಂಕ್, ಮೇಜು, ಆರ್ಯ, ಪಾದ್ರಿ, ರಾತ್ರಿ, ಹೊಲ, ಗದ್ದೆ, ಹಿತ್ತಿಲು, ತಿಳಿವಳಿಕೆ, ಬಾಯಿ.

    Answer

    ದೇಶೀಯ ಪದಗಳು: ಮನೆ, ನದಿ, ಹೊಲ, ಗದ್ದೆ, ಹಿತ್ತಿಲು, ತಿಳಿವಳಿಕೆ, ಬಾಯಿ. ಅನ್ಯದೇಶೀಯ ಪದಗಳು: ರೋಡ್, ಅಲಮಾರು, ಛೇರ್‌ಮನ್, ಭೂಮಿ, ಕೋರ್ಟ್, ಸ್ಕೂಲ್, ಸಾಬೂನು, ಸಂಧ್ಯಾ, ಬ್ಯಾಂಕ್, ಮೇಜು, ಆರ್ಯ, ಪಾದ್ರಿ, ರಾತ್ರಿ.

  2. - ಇಲ್ಲಿ ದೇಶೀಯ ಮತ್ತು ಅನ್ಯದೇಶೀಯ ಪದಗಳನ್ನು ಒಂದು ಚೌಕದಲ್ಲಿ ಮಿಶ್ರಣಗೊಳಿಸಿ ನೀಡಿದೆ. ಜಾಣರಾದ ನೀವು ಅವುಗಳನ್ನು ಪ್ರತ್ಯೇಕಿಸಿ ಬರೆಯಿರಿ.

  3. ದಿವಾನ, ಸೈಕಲ್, ಅನಾನಸು, ವಜಾ, ಜರೂರು, ಬೆಲ್ಲ, ಸರದಾರ, ಸಿನೆಮಾ, ಖಾನಾವಳಿ, ನೀರು, ಚೂಡ, ಶಿಫಾರಸ್ಸು, ಮೇಜು, ಹುಲ್ಲು, ಪಗಾರ, ಸಾಬೂನು, ಎಕರೆ, ಸರಕಾರ, ಹೊಲ, ಕಛೇರಿ,ಜಾನುವಾರು, ಆಟ, ಲಾವಣಿ, ಬಟಾಟೆ, ಅಮಲ್ದಾರ್.

    Answer

    ದೇಶೀಯ ಪದಗಳು: ಬೆಲ್ಲ, ನೀರು, ಹುಲ್ಲು, ಹೊಲ, ಆಟ, ಲಾವಣಿ. ಅನ್ಯದೇಶೀಯ ಪದಗಳು: ದಿವಾನ, ಸೈಕಲ್, ಅನಾನಸು, ವಜಾ, ಜರೂರು, ಸರದಾರ, ಸಿನೆಮಾ, ಖಾನಾವಳಿ, ಚೂಡ, ಶಿಫಾರಸ್ಸು, ಮೇಜು, ಪಗಾರ, ಸಾಬೂನು, ಎಕರೆ, ಸರಕಾರ, ಕಛೇರಿ, ಜಾನುವಾರು, ಬಟಾಟೆ, ಅಮಲ್ದಾರ್.

ಏ. ಈ ಪದ್ಯವನ್ನು ಓದಿ ಕೆಳಗಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ.

  1. ಬಂತಪ್ಪ ಬಂತು ಮಳೆಗಾಲ

  2. ಬೀಜವ ಬಿತ್ತುವ ಈ ಕಾಲ

  3. ಬೆಳೆಯನು ಬೆಳೆಯುವ ಈ ಕಾಲ

  4. ಕೊಡೆಯನು ಹಿಡಿಯುವ ಈ ಕಾಲ||

  5. ಬಂತಪ್ಪ ಬಂತು ಚಳಿಗಾಲ

  6. ಎಲೆಗಳು ಉದುರುವ ಈ ಕಾಲ

  7. ಗಡ ಗಡ ನಡುಗುವ ಈ ಕಾಲ

  8. ಕಂಬಳಿ ಹೊದೆಯುವ ಈ ಕಾಲ||

  9. ಬಂತಪ್ಪ ಬಂತು ಬೇಸಿಗೆ ಕಾಲ

  10. ನೀರನು ಕುಡಿಯುವ ಈ ಕಾಲ

  11. ಮಾವು ಸಿಗುವ ಈ ಕಾಲ

  12. ಬಿಸಿಲಿಗೆ ಒಣಗುವ ಈ ಕಾಲ||

ಪ್ರಶ್ನೆಗಳು

  1. ೧. ಕಾಲಗಳು ಯಾವುವು?

    Answer

    ಕಾಲಗಳು ಮಳೆಗಾಲ, ಚಳಿಗಾಲ ಮತ್ತು ಬೇಸಿಗೆ ಕಾಲ.

  2. ೨. ಯಾವ ಕಾಲದಲ್ಲಿ ಬೆಳೆಯುನ್ನು ಬೆಳೆಯುತ್ತಾರೆ ?

    Answer

    ಮಳೆಗಾಲದಲ್ಲಿ ಬೆಳೆಯನ್ನು ಬೆಳೆಯುತ್ತಾರೆ.

  3. ೩. ಎಲೆಗಳು ಯಾವ ಕಾಲದಲ್ಲಿ ಉದುರುತ್ತವೆ ?

    Answer

    ಚಳಿಗಾಲದಲ್ಲಿ ಎಲೆಗಳು ಉದುರುತ್ತವೆ.

  4. ೪. ಮಾವು ಹೆಚ್ಚಾಗಿ ಯಾವ ಕಾಲದಲ್ಲಿ ಸಿಗುತ್ತದೆ ?

    Answer

    ಬೇಸಿಗೆ ಕಾಲದಲ್ಲಿ ಮಾವು ಹೆಚ್ಚಾಗಿ ಸಿಗುತ್ತದೆ.

ವ್ಯಾಕರಣ ಮಾಹಿತಿ

ವಾಕ್ಯಗಳ ವಿಧಗಳು:

ವಾಕ್ಯಗಳಲ್ಲಿ ಮೂರು ವಿಧಗಳು:

  1. ೧) ಸಾಮಾನ್ಯ (ಸರಳ) ವಾಕ್ಯ

  2. ೨) ಸಂಯೋಜಿತ ವಾಕ್ಯ

  3. ೩) ಮಿಶ್ರವಾಕ್ಯ

  4. ೧) **ಸಾಮಾನ್ಯ ವಾಕ್ಯ** : ಒಂದೇ ಪೂರ್ಣ ಕ್ರಿಯಾಪದದೊಡನೆ ಸ್ವತಂತ್ರ ಮತ್ತು ಖಚಿತ ಅರ್ಥ ಕೊಡುವ ವಾಕ್ಯಗಳೇ 'ಸಾಮಾನ್ಯ ವಾಕ್ಯ'ಗಳು.

  5. ಉದಾ: ೧) ಹಕ್ಕಿ ಹಣ್ಣನ್ನು ತಿನ್ನುತ್ತದೆ.

  6. ೨) ಮೀನು ನೀರಲ್ಲಿ ಈಜುತ್ತದೆ.

  7. ೨) **ಸಂಯೋಜಿತ ವಾಕ್ಯ** : ಎರಡು ಅಥವಾ ಅನೇಕ ಸಾಮಾನ್ಯ ವಾಕ್ಯಗಳು ಅರ್ಥಸ್ಪಷ್ಟತೆಗಾಗಿ ಸಂಬಂಧಾವ್ಯಯದ ಮೂಲಕ ಸೇರಿಕೊಂಡು ಒಂದು ಪೂರ್ಣ ಅರ್ಥವನ್ನು ನೀಡುವಂತೆ ರಚಿತವಾದ ವಾಕ್ಯಗಳೇ 'ಸಂಯೋಜಿತ ವಾಕ್ಯಗಳು'.

  8. ಉದಾ: ೧) ಮಕ್ಕಳು ಹಾಲನ್ನು ಕುಡಿಯುತ್ತಾರೆ ಮತ್ತು ಹಣ್ಣನ್ನೂ ತಿನ್ನುತ್ತಾರೆ.

  9. ೨) ಬೆಕ್ಕು ಕಿಟಕಿಯಿಂದ ಹಾಲು ಕುಡಿಯಲು ಮನೆಯೊಳಗೆ ಬಂದಿತು ಆದರೆ ಮನೆಯೊಳಗೆ ಹಾಲಿರಲಿಲ್ಲ.

  10. ೩) ಮಕ್ಕಳು ಶಾಲೆಗೆ ಬರುತ್ತಾರೆ ಆದರೆ ಸರಿಯಾದ ವಾಹನ ವ್ಯವಸ್ಥೆ ಇರುವುದಿಲ್ಲ.

  11. ೩) **ಮಿಶ್ರವಾಕ್ಯ** : ಒಂದು ಅಥವಾ ಅನೇಕ ವಾಕ್ಯಗಳು ಒಂದು ಪ್ರಧಾನ ವಾಕ್ಯಕ್ಕೆ ಅಧೀನಗಳಾಗಿರುವಂತೆ ರಚಿತವಾದ ವಾಕ್ಯಗಳೇ 'ಮಿಶ್ರ ವಾಕ್ಯಗಳು'.

  12. ಉದಾ: ೧) ತಮ್ಮ ಗ್ರಾಮಕ್ಕೆ ಹೆಚ್ಚು ಬಸ್ಸು ಬರುವುದೆಂದು ತಿಳಿದು ಗ್ರಾಮಸ್ಥರು ಸಂತಸಪಟ್ಟರು.

  13. ೨) ಕುವೆಂಪು ಅವರ ಭಾವಗೀತೆಗಳನ್ನು ಕೇಳಿ ವಿದ್ಯಾರ್ಥಿಗಳು ಮೈಮರೆತರು.

ಯೋಜನೆ

  1. - ಬ್ರಿಟಿಷರ ವಿರುದ್ಧ ಹೋರಾಡಿದ ಕನ್ನಡಿಗರ ಭಾವ ಚಿತ್ರಗಳನ್ನು ಸಂಗ್ರಹಿಸಿರಿ ಮತ್ತು ಹೋರಾಟದ ಬಗ್ಗೆ ಮಾಹಿತಿ ಬರೆಯಿರಿ.

ಪೂರಕ ಓದು

  1. - ದೇಶಕ್ಕಾಗಿ ಹೋರಾಡಿದ ಮಹಾಪುರುಷರ, ವೀರ ಮಹಿಳೆಯರ ಕುರಿತ ಹಾಡುಗಳನ್ನು ಸಂಗ್ರಹಿಸಿ ರಾಗಬದ್ಧವಾಗಿ ಹಾಡಿರಿ.

  2. - ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆಗಳನ್ನು ಓದಿರಿ.

  3. - ರಾಣಿ ಚೆನ್ನಮ್ಮ, ಅಬ್ಬಕ್ಕ, ಓಬವ್ವನಂತಹ ಅನೇಕ ಕನ್ನಡ ನಾಡಿನ ವೀರ ಮಹಿಳೆಯರ ಬಗ್ಗೆ ತಿಳಿದುಕೊಳ್ಳಿರಿ.

Interactive Lab

ದಿಟ್ಟಹೆಜ್ಜೆಧೈರ್ಯದ ಹೆಜ್ಜೆ, ಸಾಹಸದ ನಡೆ
ಚರಿತ್ರೆಇತಿಹಾಸ
ಕುನ್ನಿನಾಯಿಮರಿ
ಜನಜನಿತಪ್ರಸಿದ್ಧವಾದ
ಪರಕೀಯವಿದೇಶಿಯರು, ಅನ್ಯ
ಕನವರಿಕೆನಿದ್ದೆಯಲ್ಲಿ ಮಾತಾಡಿಕೊಳ್ಳುವಿಕೆ, ಒಂದೇ ವಿಷಯವನ್ನು ಮತ್ತೆ ಮತ್ತೆ ಯೋಚಿಸುವಿಕೆ
ಕೆಚ್ಚೆದೆಗಟ್ಟಿಯಾದ ಎದೆ, ಎದೆಗಾರಿಕೆ
ರಣಚಂಡಿಯುದ್ಧದೇವತೆ, ದುರ್ಗೆ
ದುರ್ಮತಿಕೆಟ್ಟ ಬುದ್ಧಿ, ದುಷ್ಟ ವ್ಯಕ್ತಿ
ಮಮ್ಮಲ ಮರುಗುಅತಿಶಯವಾಗಿ ಮರುಗು, ವಿಶೇಷವಾಗಿ ದುಃಖಪಡು
ಅರಿಶತ್ರು
ಸೆರೆಮನೆಕಾರಾಗೃಹ, ಬಂದೀಖಾನೆ
ಕಲಿವೀರ, ಶೂರ
ಮರುಜನ್ಮಪುನರ್ಜನ್ಮ