ಗದ್ಯ (prose) · ಎಂ.ಎನ್. ಸುಂದರರಾಜ್
ಪಠ್ಯFull text
ಅಭ್ಯಾಸexercises from the textbook
Model answers — a guide, not the only correct wording. Check with your teacher.
I. ಪದಗಳ ಅರ್ಥ :
| | |
|---|---|
| ಅನಿವಾರ್ಯ - ತಪ್ಪಿಸಲಾಗದ | ಅದೃಷ್ಟ - ಭಾಗ್ಯ |
| ಆಲ್ಬಂ - ಹಾಡುಗಳ ಧ್ವನಿ ಸುರುಳಿ | ಎದೆಗುಂದು - ಭಯಪಡು |
| ಕಣ್ಮಣಿ - ಅಚ್ಚುಮೆಚ್ಚಾದ | ಗಿಟಾರ್ - ಸಂಗೀತದ ಒಂದು ತಂತಿ ವಾದ್ಯ. |
| ಚಿಕಿತ್ಸೆ - ವೈದ್ಯೋಪಚಾರ | ತಲ್ಲೀನ - ಮಗ್ನವಾಗು; ಆಸಕ್ತನಾಗು. |
| ದಾಖಲೆ - ಯಾರೂ ಮಾಡಿರದ | ದಾದಿ - ಸೇವಕಿ |
| ಪರಿಣತಿ - ಕುಶಲತೆ | ಪರಿಶ್ರಮ - ವಿಶೇಷ ಶ್ರಮ |
| ಭಾಜನ - ಪಾತ್ರ | ಭೀಕರ - ಭಯಂಕರ |
| ಮಿನುಗು - ಹೊಳೆಯುವುದು | ಯಶಸ್ಸು - ಗೆಲವು |
| ವ್ಯಾಧಿ - ರೋಗ | ವೃತ್ತಿ - ಉದ್ಯೋಗ |
| ಸಿದ್ಧಾಂತ - ನಿರ್ಧರಿಸಲ್ಪಟ್ಟ ತತ್ತ್ವ | ಸ್ಫೂರ್ತಿ - ಪ್ರೇರಣೆ |
| ಸ್ವಾಭಿಮಾನ - ಆತ್ಮಗೌರವ | ಸ್ವಾವಲಂಬನೆ - ಇನ್ನೊಬ್ಬರನ್ನು ಆಶ್ರಯಿಸದಿರು |
ಟಿಪ್ಪಣಿ :
೧. ಸ್ಪೇನ್ - ಯುರೋಪ್ ಖಂಡದ ಒಂದು ದೇಶ.
೨. ರಿಯಲ್ ಮ್ಯಾಡ್ರಿಡ್ ಕ್ಲಬ್ - ಸ್ಪೇನ್ ದೇಶದ ಒಂದು ಪ್ರಸಿದ್ಧ ಫುಟ್ಬಾಲ್ ಕ್ಲಬ್.
೩. ಪೋಲಿಯೋ - ಮಕ್ಕಳಿಗೆ ಬರುವ ಈ ವ್ಯಾಧಿಯಿಂದ ಕೈಕಾಲುಗಳು ಶಕ್ತಿಹೀನವಾಗಿ, ಶರೀರ ದುರ್ಬಲತೆಯನ್ನು ಹೊಂದುತ್ತದೆ.
೪. ಪುನರ್ವಸತಿ ಕೇಂದ್ರ - ಚಿಕಿತ್ಸೆ ಹಾಗೂ ವಸತಿ ವ್ಯವಸ್ಥೆ ಇರುವ ಸೇವಾಕೇಂದ್ರ. ಮನೆಯಲ್ಲಿ ಕೊಡಿಸಲಾಗದ ಚಿಕಿತ್ಸೆ ಹಾಗೂ ಸೇವಾಸೌಲಭ್ಯಗಳನ್ನು ಇಂತಹ ಕೇಂದ್ರಗಳು ನಿರ್ವಹಿಸುತ್ತವೆ.
೫. ಅಭಿನಂದನೆ - ಯಶಸ್ಸು ಸಾಧಿಸಿದಾಗ ಪ್ರಶಂಸಿಸುವ ರೀತಿ.
೬. ಸಂಶೋಧನಾ ಪ್ರಬಂಧ - ಯಾವುದಾದರೊಂದು ವಿಷಯ ಕುರಿತು ದೀರ್ಘ ವಿವರಗಳನ್ನು ಸಂಗ್ರಹಿಸಿ, ವಿಶ್ಲೇಷಿಸಿ ಬರೆದ ಅಧ್ಯಯನಪೂರ್ಣ ಬರಹ.
೭. ಗಾಲಿಕುರ್ಚಿ - ನಡೆಯಲಾಗದವರಿಗಾಗಿ ನಿರ್ಮಿಸಿರುವ ಚಕ್ರಗಳುಳ್ಳ ಕುರ್ಚಿ.
II. ಪ್ರಶ್ನೆಗಳು :
ಅ) ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.
೧. ಜೂಲಿಯೋ ಇಗ್ಲೇಶಿಯಸ್ ಯಾವ ದೇಶದವನು?
Answerಜೂಲಿಯೋ ಇಗ್ಲೇಶಿಯಸ್ ಸ್ಪೇನ್ ದೇಶದವನು.
೨. ಬಾಲಕ ಜೂಲಿಯೋ ಇಗ್ಲೇಶಿಯಸ್ ತಾನು ಮುಂದೆ ಏನಾಗಬೇಕೆಂದು ಬಯಸಿದ್ದನು?
Answerಬಾಲಕ ಜೂಲಿಯೋ ಇಗ್ಲೇಶಿಯಸ್ ಫುಟ್‌ಬಾಲ್ ಆಟಗಾರನಾಗಬೇಕೆಂದು ಬಯಸಿದ್ದನು.
೩. ಜೂಲಿಯೋ ಇಗ್ಲೇಶಿಯಸ್ ತನ್ನ ದುಃಖವನ್ನು ಹೇಗೆ ಮರೆತನು?
Answerಜೂಲಿಯೋ ಇಗ್ಲೇಶಿಯಸ್ ಹಾಡುಗಳನ್ನು ಬರೆದು ಹಾಡುವ ಮೂಲಕ ತನ್ನ ದುಃಖವನ್ನು ಮರೆತನು.
೪. ಮಾಲತಿ ಹೊಳ್ಳ ಅವರ ತಂದೆ ತಾಯಿಗಳ ಹೆಸರೇನು?
Answerಮಾಲತಿ ಹೊಳ್ಳ ಅವರ ತಂದೆ ಕೃಷ್ಣಮೂರ್ತಿ ಹೊಳ್ಳ ಮತ್ತು ತಾಯಿ ಪದ್ಮಾವತಿ.
೫. ಮಾಲತಿ ಅವರಿಗೆ ಬಾಲ್ಯದಲ್ಲೇ ತಗುಲಿದ ರೋಗ ಯಾವುದು?
Answerಮಾಲತಿ ಅವರಿಗೆ ಬಾಲ್ಯದಲ್ಲಿ ಪೋಲಿಯೋ ರೋಗ ತಗುಲಿತು.
೬. ಮಾಲತಿ ಅವರು ಚೆನ್ನೈನಲ್ಲಿ ಚಿಕಿತ್ಸೆ ಪಡೆದ ಪುನರ್ವಸತಿ ಕೇಂದ್ರ ಯಾವುದು?
Answerಮಾಲತಿ ಅವರು ಚೆನ್ನೈನಲ್ಲಿರುವ ದತ್ತಾತ್ರೇಯ ಮೆಡಿಕಲ್ ಸೆಂಟರ್ ಎಂಬ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆದರು.
೭. ಮಾಲತಿ ಹೊಳ್ಳ ಗಳಿಸಿದ ಮೂರು ಮುಖ್ಯ ಪ್ರಶಸ್ತಿಗಳು ಯಾವುವು?
Answerಮಾಲತಿ ಹೊಳ್ಳ ಗಳಿಸಿದ ಮೂರು ಮುಖ್ಯ ಪ್ರಶಸ್ತಿಗಳೆಂದರೆ ಅರ್ಜುನ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ ಮತ್ತು ಏಕಲವ್ಯ ಪ್ರಶಸ್ತಿ.
ಆ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.
೧. ಜೂಲಿಯೋ ಇಗ್ಲೇಶಿಯಸ್ ಫುಟ್ಬಾಲ್ ಆಟದಲ್ಲಿ ಯಾವ ರೀತಿ ಯಶಸ್ಸು ಸಾಧಿಸಿದರು?
Answerಜೂಲಿಯೋ ಇಗ್ಲೇಶಿಯಸ್ 'ರಿಯಲ್ ಮ್ಯಾಡ್ರಿಡ್ ಕ್ಲಬ್' ಸೇರಿ ನಿರಂತರ ಅಭ್ಯಾಸ ಮಾಡಿದರು. ತಮ್ಮ ಇಪ್ಪತ್ತನೆಯ ವಯಸ್ಸಿಗೆ ಉತ್ತಮ ಗೋಲ್ ಕೀಪರ್ ಎಂಬ ಖ್ಯಾತಿ ಪಡೆದು ರಾಷ್ಟ್ರಮಟ್ಟಕ್ಕೆ ಬೆಳೆದರು.
೨. ಜೂಲಿಯೋ ಯಾವ ಕನಸು ಹೊಂದಿದ್ದನು? ಅದು ನುಚ್ಚುನೂರಾದುದು ಹೇಗೆ?
Answerಜೂಲಿಯೋ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿ ದೇಶಕ್ಕೆ ಕೀರ್ತಿ ತರಬೇಕೆಂಬ ಕನಸು ಹೊಂದಿದ್ದನು. ೧೯೬೩ ರಲ್ಲಿ ಸ್ನೇಹಿತರೊಂದಿಗೆ ಕಾರಿನಲ್ಲಿ ಹೋಗುವಾಗ ಭೀಕರ ಅಪಘಾತಕ್ಕೆ ಒಳಗಾಗಿ ಸೊಂಟದ ಕೆಳಭಾಗ ಶಕ್ತಿಹೀನವಾದ್ದರಿಂದ ಅವನ ಕನಸು ನುಚ್ಚುನೂರಾಯಿತು.
೩. ಜೂಲಿಯೋ ಇಗ್ಲೇಶಿಯಸ್ ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆಗಳೇನು?
Answerಜೂಲಿಯೋ ಇಗ್ಲೇಶಿಯಸ್ ಹಾಡುಗಳನ್ನು ಬರೆದು 'ಜೀವನ ಹೀಗೆ ಸಾಗುತ್ತಿದೆ' ಎಂಬ ಆಲ್ಬಂ ಹೊರತಂದರು. ಅದು ವಿಶ್ವಾದ್ಯಂತ ಜನಪ್ರಿಯವಾಗಿ ೩೦೦ ಮಿಲಿಯನ್ ಆಲ್ಬಂಗಳು ಮಾರಾಟವಾದವು ಮತ್ತು ಅವರು ವಿಶ್ವದ ಹತ್ತು ಪ್ರಮುಖ ಗಾಯಕರಲ್ಲಿ ಒಬ್ಬರಾದರು.
೪. ಮಾಲತಿ ಅವರನ್ನು ಆಕ್ರಮಿಸಿದ ರೋಗದ ಲಕ್ಷಣವೇನು?
Answerಮಾಲತಿ ಅವರನ್ನು ಆಕ್ರಮಿಸಿದ ಪೋಲಿಯೋ ರೋಗದ ಲಕ್ಷಣವೆಂದರೆ ದೇಹದ ನರಗಳೆಲ್ಲ ಚೆಂಡಿನಂತೆ ಒಂದುಗೂಡುವುದು. ಇದರಿಂದ ಕಾಲುಗಳು ಶಕ್ತಿಹೀನವಾಗುತ್ತವೆ.
೫. ಅಹಮದಾಬಾದ್‌ನಲ್ಲಿ ನಡೆದ ಗಾಲಿಕುರ್ಚಿಯ ಓಟದ ಸ್ಪರ್ಧೆಯಲ್ಲಿ ಮಾಲತಿ ಹೊಳ್ಳ ಜಯಗಳಿಸಿದುದರ ವಿಶೇಷವೇನು?
Answerಅಹಮದಾಬಾದ್‌ನಲ್ಲಿ ನಡೆದ ಗಾಲಿಕುರ್ಚಿಯ ಓಟದ ಸ್ಪರ್ಧೆಯಲ್ಲಿ ಬೇರೆ ಮಹಿಳಾ ಸ್ಪರ್ಧಿಗಳಿಲ್ಲದ ಕಾರಣ ಮಾಲತಿ ಹೊಳ್ಳ ಪುರುಷ ಸ್ಪರ್ಧಿಗಳೊಂದಿಗೆ ಸ್ಪರ್ಧಿಸಬೇಕಾಯಿತು. ಆಗಲೇ ಹೆಸರು ಮಾಡಿದ್ದ ಪುರುಷರನ್ನು ಹಿಮ್ಮೆಟ್ಟಿಸಿ ಅವರು ಗೆದ್ದದ್ದು ವಿಶೇಷವಾಗಿತ್ತು.
೬. ಕ್ರೀಡೆಗಳತ್ತ ಮಾಲತಿಯವರಿಗೆ ಒಲವು ಬೆಳೆಯಲು ಕಾರಣವೇನು?
Answer೧೯೭೫ ರಲ್ಲಿ ರಾಷ್ಟ್ರೀಯ ಅಂಗವಿಕಲರ ಕ್ರೀಡಾಕೂಟದಲ್ಲಿ ಭಾಗವಹಿಸಿ ಎರಡು ಚಿನ್ನದ ಪದಕ ಮತ್ತು ಎರಡು ಬೆಳ್ಳಿಯ ಪದಕಗಳನ್ನು ಗಳಿಸಿದ ಯಶಸ್ಸು ಕ್ರೀಡೆಗಳತ್ತ ಮಾಲತಿಯವರಿಗೆ ಒಲವು ಬೆಳೆಯಲು ಕಾರಣವಾಯಿತು.
೭. ಸಾಮಾಜಿಕ ಸೇವೆಯಲ್ಲಿ ಮಾಲತಿ ಹೇಗೆ ಕ್ರಿಯಾಶೀಲರಾಗಿದ್ದಾರೆ?
Answerಮಾಲತಿ ಹೊಳ್ಳ ಅವರು ವಿಕಲಚೇತನರಾದ ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಆಶ್ರಯ, ಶಿಕ್ಷಣ, ವೈದ್ಯಕೀಯ ನೆರವು ನೀಡಲು 'ಮಾತೃ ಫೌಂಡೇಶನ್' ಎಂಬ ಸೇವಾ ಸಂಸ್ಥೆಯನ್ನು ಪ್ರಾರಂಭಿಸಿ ಸಾಮಾಜಿಕ ಸೇವೆಯಲ್ಲಿ ಕ್ರಿಯಾಶೀಲರಾಗಿದ್ದಾರೆ.
೮. ಮಾಲತಿ ಹೊಳ್ಳ ಜೀವನದಲ್ಲಿ ಕಂಡುಕೊಂಡ ಸಿದ್ಧಾಂತವೇನು?
Answerಕೀಳರಿಮೆಗಿಂತ ಮಿಗಿಲಾದ ಅಂಗವೈಕಲ್ಯವಿಲ್ಲ ಮತ್ತು ನಾವು ನಗುತ್ತಲೇ ಜೀವನವನ್ನು ಎದುರಿಸಬೇಕು ಎಂಬುದು ಮಾಲತಿ ಹೊಳ್ಳ ಅವರ ಸಿದ್ಧಾಂತವಾಗಿದೆ.
ಇ) ಬಿಟ್ಟ ಸ್ಥಳಗಳನ್ನು ನೀಡಿರುವ ಆಯ್ಕೆಯ ಉತ್ತರಗಳಲ್ಲಿ ಸರಿಯಾದುದನ್ನು ಆರಿಸಿ ಬರೆಯಿರಿ.
೧. ಪೋಲಿಯೋ ಎಂಬುದು ....................... ಬರುವ ವ್ಯಾಧಿ.
Answerಪೋಲಿಯೋ ಎಂಬುದು ಮಕ್ಕಳಿಗೆ ಬರುವ ವ್ಯಾಧಿ.
(ಮಕ್ಕಳಿಗೆ, ವಯಸ್ಕರಿಗೆ)
೨. ಮಾತೃ ಫೌಂಡೇಶನ್ ....................... ಪ್ರದೇಶದ ಮಕ್ಕಳಿಗಾಗಿ ಸ್ಥಾಪಿಸಿದ ಸೇವಾಸಂಸ್ಥೆ.
Answerಮಾತೃ ಫೌಂಡೇಶನ್ ಗ್ರಾಮಾಂತರ ಪ್ರದೇಶದ ಮಕ್ಕಳಿಗಾಗಿ ಸ್ಥಾಪಿಸಿದ ಸೇವಾಸಂಸ್ಥೆ.
(ನಗರ, ಗ್ರಾಮಾಂತರ)
೩. ಭಾರತ ಸರ್ಕಾರ ಮಾಲತಿ ಅವರಿಗೆ ....................... ಪ್ರಶಸ್ತಿಯನ್ನು ೨೦೦೧ ರಲ್ಲಿ ನೀಡಿತು.
Answerಭಾರತ ಸರ್ಕಾರ ಮಾಲತಿ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ೨೦೦೧ ರಲ್ಲಿ ನೀಡಿತು.
(ಪದ್ಮಭೂಷಣ, ಪದ್ಮಶ್ರೀ)
೪. ಮಾಲತಿ ಹೊಳ್ಳ ಅವರ ಕಾಲೇಜು ಶಿಕ್ಷಣ ....................... ನಲ್ಲಿ ನಡೆಯಿತು.
Answerಮಾಲತಿ ಹೊಳ್ಳ ಅವರ ಕಾಲೇಜು ಶಿಕ್ಷಣ ಮಹಾರಾಣಿ ಕಾಲೇಜಿನಲ್ಲಿ ನಡೆಯಿತು.
(ಬೆಂಗಳೂರು, ಮದ್ರಾಸು)
೫. ಮಾಲತಿ ಹೊಳ್ಳರ ತಂದೆ ತಾಯಿಗಳ ಊರು ....................... ಜಿಲ್ಲೆಯಲ್ಲಿದೆ.
Answerಮಾಲತಿ ಹೊಳ್ಳರ ತಂದೆ ತಾಯಿಗಳ ಊರು ಉಡುಪಿ ಜಿಲ್ಲೆಯಲ್ಲಿದೆ.
(ಶಿವಮೊಗ್ಗ, ಉಡುಪಿ)
೬. ಜೂಲಿಯೋ ಆಸ್ಪತ್ರೆಯಲ್ಲಿದ್ದಾಗ ದಾದಿಯೊಬ್ಬಳು ....................... ಒಂದನ್ನು ತಂದು ಕೊಟ್ಟಳು.
Answerಜೂಲಿಯೋ ಆಸ್ಪತ್ರೆಯಲ್ಲಿದ್ದಾಗ ದಾದಿಯೊಬ್ಬಳು ಗಿಟಾರ್ ಒಂದನ್ನು ತಂದು ಕೊಟ್ಟಳು.
(ಗಿಟಾರು, ಪಿಟೀಲು)
೭. ಜೂಲಿಯೋ ತನ್ನ ಇಪ್ಪತ್ತನೆಯ ವಯಸ್ಸಿಗೆ ಫುಟ್ಬಾಲ್ ಆಟದಲ್ಲಿ ಉತ್ತಮ ....................... ಎಂಬ ಖ್ಯಾತಿ ಪಡೆದನು.
Answerಜೂಲಿಯೋ ತನ್ನ ಇಪ್ಪತ್ತನೆಯ ವಯಸ್ಸಿಗೆ ಫುಟ್ಬಾಲ್ ಆಟದಲ್ಲಿ ಉತ್ತಮ ಗೋಲ್ ಕೀಪರ್ ಎಂಬ ಖ್ಯಾತಿ ಪಡೆದನು.
(ಗೋಲ್ ಕೀಪರ್, ನಾಯಕ)
III. ಭಾಷಾಭ್ಯಾಸ :
ಅ) ಇಲ್ಲಿ ನೀಡಿರುವ ಪದಗಳನ್ನು ನಿಮ್ಮ ಸ್ವಂತ ವಾಕ್ಯದಲ್ಲಿ ಬಳಸಿ ಬರೆಯಿರಿ.
೧. ನುಚ್ಚುನೂರಾಗು : __________________________________________________
Model sentenceನುಚ್ಚುನೂರಾಗು: ನನ್ನ ಆಟಿಕೆ ಕೆಳಗೆ ಬಿದ್ದು ನುಚ್ಚುನೂರಾಯಿತು.
೨. ಆತ್ಮವಿಶ್ವಾಸ : __________________________________________________
Model sentenceಆತ್ಮವಿಶ್ವಾಸ: ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಆತ್ಮವಿಶ್ವಾಸ ಬೇಕು.
೩. ಕಣ್ಮಣಿ : __________________________________________________
Model sentenceಕಣ್ಮಣಿ: ನನ್ನ ತಂಗಿ ಅಮ್ಮನ ಕಣ್ಮಣಿ.
೪. ಯಶಸ್ಸು : __________________________________________________
Model sentenceಯಶಸ್ಸು: ಕಠಿಣ ಪರಿಶ್ರಮದಿಂದ ಯಶಸ್ಸು ಸಿಗುತ್ತದೆ.
೫. ಭಾಜನ : __________________________________________________
Model sentenceಭಾಜನ: ನನ್ನ ಸ್ನೇಹಿತ ಉತ್ತಮ ವಿದ್ಯಾರ್ಥಿ ಪ್ರಶಸ್ತಿಗೆ ಭಾಜನನಾದನು.
೬. ಸ್ಫೂರ್ತಿ : __________________________________________________
Model sentenceಸ್ಫೂರ್ತಿ: ನಮ್ಮ ಶಿಕ್ಷಕರು ನಮಗೆ ಸ್ಫೂರ್ತಿಯಾಗಿದ್ದಾರೆ.
ಆ) ಇಲ್ಲಿರುವ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.
೧. ಆಸೆ x ................................. ೨. ಕೀರ್ತಿ x .................................
Answerಆಸೆ x ನಿರಾಸೆ ಕೀರ್ತಿ x ಅಪಕೀರ್ತಿ
೩. ಖ್ಯಾತಿ x ................................. ೪. ವಿಫಲತೆ x .................................
Answerಖ್ಯಾತಿ x ಅಪಖ್ಯಾತಿ ವಿಫಲತೆ x ಯಶಸ್ಸು
೫. ಸ್ವಾವಲಂಬನೆ x ................................. ೬. ಅದೃಷ್ಟ x .................................
Answerಸ್ವಾವಲಂಬನೆ x ಪರಾವಲಂಬನೆ ಅದೃಷ್ಟ x ದುರದೃಷ್ಟ
ಇ) ಇಲ್ಲಿರುವ ಪದಗಳನ್ನು ಮಾದರಿಯಂತೆ ಬಿಡಿಸಿ ಬರೆಯಿರಿ.
ಮಾದರಿ : ವಿದ್ಯಾಭ್ಯಾಸ = ವಿದ್ಯಾ + ಅಭ್ಯಾಸ
೧. ವಿಶ್ವಾದ್ಯಂತ = ................................. + .................................
Answerವಿಶ್ವಾದ್ಯಂತ = ವಿಶ್ವ + ಆದ್ಯಂತ
೨. ಕೋಟ್ಯಂತರ = ................................. + .................................
Answerಕೋಟ್ಯಂತರ = ಕೋಟಿ + ಅಂತರ
೩. ನೂರಾಯಿತು = ................................. + .................................
Answerನೂರಾಯಿತು = ನೂರು + ಆಯಿತು
೪. ಮುಟ್ಟಿರಲಿಲ್ಲ = ................................. + .................................
Answerಮುಟ್ಟಿರಲಿಲ್ಲ = ಮುಟ್ಟಿ + ಇರಲಿಲ್ಲ
೫. ತಿಂಗಳಿಗೊಮ್ಮೆ = ................................. + .................................
Answerತಿಂಗಳಿಗೊಮ್ಮೆ = ತಿಂಗಳಿಗೆ + ಒಮ್ಮೆ
IV. ಚಟುವಟಿಕೆಗಳು :
೧. ಕರ್ನಾಟಕದ ಕ್ರೀಡಾಪಟುಗಳ ವಿವರ ಸಂಗ್ರಹಿಸಿ.
೨. ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿದ ವಿಶೇಷಚೇತನರ ಹೆಸರುಗಳನ್ನು ಸಂಗ್ರಹಿಸಿ.
೩. ವಿಶೇಷಚೇತನವುಳ್ಳ ಮಕ್ಕಳ ಪುನರ್ವಸತಿ ಕೇಂದ್ರಕ್ಕೆ ನಿಮ್ಮ ಅಧ್ಯಾಪಕರೊಂದಿಗೆ ಭೇಟಿ ನೀಡಿ ಅಲ್ಲಿರುವ ಮಕ್ಕಳೊಂದಿಗೆ ಸಂಭಾಷಿಸಿ, ವರದಿ ಬರೆಯಿರಿ.
೪. ಇಲ್ಲಿ ಕೊಟ್ಟಿರುವ ವಿಷಯ ಹಾಗೂ ಗಾದೆಮಾತುಗಳ ನಡುವಿರುವ ಸಂಬಂಧವನ್ನು ಚರ್ಚಿಸಿರಿ.
ಬಸಯ್ಯ ಕಡು ಬಡತನದ ಯುವಕ. ರೈತನಾಗಬೇಕೆಂಬ ಬಯಕೆ. ತಂದೆಯಿಂದ ಬಂದ ಎರಡು ಎಕರೆ ಭೂಮಿಯಿತ್ತು. ಅದು ಬಂಜರು ಗುಡ್ಡಗಳಿಂದ ಕೂಡಿದ ಭೂಮಿ. ನೀರಾವರಿ ಸೌಲಭ್ಯವಿಲ್ಲ. ಆದರೂ ಸಾಧಿಸುವ ಛಲವಿತ್ತು. ತನ್ನ ಭೂಮಿಯಲ್ಲಿದ್ದ ಗಿಡಗಂಟೆಗಳನ್ನು ತೆಗೆದ. ಅಲ್ಲಲ್ಲಿ ಇದ್ದ ಸಣ್ಣ ಪುಟ್ಟ ಬಂಡೆಗಲ್ಲುಗಳನ್ನು ಒಡೆಸಿ ಹೊರ ಹಾಕಿದ. ನೇಗಿಲಿನಿಂದ ಉಳುಮೆ ಮಾಡಿದ. ಕೊಟ್ಟಿಗೆ ಗೊಬ್ಬರ ಹಾಕಿ ಭೂಮಿಯನ್ನು ಹದ ಮಾಡಿದನು.
ಮಳೆಗಾಲದಲ್ಲಿ ತನ್ನ ಭೂಮಿಯ ಪಕ್ಕದಲ್ಲಿ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಕಂಡನು. ಸರ್ಕಾರದಿಂದ ಹಣ ಸಹಾಯ ಪಡೆದು ಹೊಂಡ ತೆಗೆಸಿದ. ಮಳೆ ನೀರನ್ನು ಸಂಗ್ರಹಿಸಿದ. ಕೃಷಿ ಅಧಿಕಾರಿಗಳ ಜೊತೆ ಚರ್ಚಿಸಿದ. ಸಂಗ್ರಹಿಸಿದ ಮಳೆ ನೀರಿಗೆ ಹನಿ ನೀರಾವರಿ ಅಳವಡಿಸಿದನು. ವಿವಿಧ ಬೆಳೆ ಪದ್ಧತಿ ಅಳವಡಿಸಿಕೊಂಡನು. ದಾಳಿಂಬೆ, ಸಪೋಟ, ತೆಂಗು, ಹೂ ಬೆಳೆಗಳನ್ನು ಬೆಳೆದ. ಅಧಿಕ ಇಳುವರಿ ಪಡೆದನು. ಕೈತುಂಬ ಹಣ ಸಂಪಾದಿಸಿದನು. ಸುತ್ತಮುತ್ತಲಿನ ರೈತರು ಇವನ ಸಾಹಸ ಕಂಡು ಬೆರಗಾದರು. ಯುವಕನ ಸಾಧನೆ ಕಂಡು ಸರ್ಕಾರ 'ಕೃಷಿ ಪಂಡಿತ' ಪ್ರಶಸ್ತಿ ನೀಡಿ ಗೌರವಿಸಿತು.
ಗಾದೆಗಳು :
೧. ಕಾಯಕವೇ ಕೈಲಾಸ.
೨. ದುಡಿಮೆಯೇ ದುಡ್ಡಿನ ತಾಯಿ.
೩. ಕೈ ಕೆಸರಾದರೆ ಬಾಯಿ ಮೊಸರು.
೪. ಕಷ್ಟಪಟ್ಟರೆ ಫಲವುಂಟು.