ನಾಟಕ · ಸಮಿತಿ ರಚನೆ
ಪಠ್ಯFull text
"ಶರಣಾಗತರನ್ನು ರಕ್ಷಿಸುವುದು ಕನ್ನಡಿಗರ ವೀರ ಪರಂಪರೆ." — "Protecting those who seek refuge is the brave tradition of Kannadigas."
ಅಭ್ಯಾಸexercises from the textbook
Model answers — a guide, not the only correct wording. Check with your teacher.
I. ಪದಗಳ ಅರ್ಥ :
ಕೀರ್ತಿ - ಖ್ಯಾತಿ, ಸ್ತುತಿ; ದಶ - ಹತ್ತು; ಬಲಾಡ್ಯ- ಬಲಶಾಲಿ; ಕೃತಜ್ಞ - ಉಪಕಾರವನ್ನು ನೆನೆಯುವವನು; ಸಂಸ್ಥಾನ - ರಾಜ್ಯ, ದೇಶದ ಭಾಗ; ತೆರಿಗೆ-ಕರ, ಸುಂಕ, ಕಂದಾಯ; ಶರಣು - ರಕ್ಷಣೆ, ಮೊರೆಹೋಗು, ನಮಸ್ಕಾರ; ಘೋಷಿಸು- ಕೂಗಿ ಹೇಳು, ಏರುದ್ದನಿ; ತುರ್ತು - ಜರೂರು, ಜರೂರು ಪರಿಸ್ಥಿತಿ; ಬಿಡಾರ - ತಂಗುವ ಸ್ಥಳ; ಆಘಾತ - ಪೆಟ್ಟು, ಕೇಡು; ಆದೇಶ - ಅಪ್ಪಣೆ; ಮಾವುತ - ಮಾವಟಿಗ, ಆನೆಯನ್ನು ನಡೆಸುವವನು; ಶಸ್ತ್ರಾಸ್ತ್ರ - ಆಯುಧಗಳು; ಹೊಂಚು - ನಿರೀಕ್ಷಿಸು, ಯಾರಿಗೂ ಕಾಣದಂತೆ ಗುಪ್ತವಾಗಿರು; ದುಮ್ಮಾನ - ವ್ಯಸನ, ಚಿಂತೆ; ಆಸನ - ಕುಳಿತುಕೊಳ್ಳುವ ಸಾಧನ.
ಗಮನಿಸಿ - ತಿಳಿ
ಕಣ್ಣುತಪ್ಪಿಸು - ಮರೆಮಾಚು; ಪರಂಪರೆ - ಹಿಂದಿನಿಂದ ನಡೆದು ಬಂದ ಸಂಪ್ರದಾಯ; ಬೇಹುಗಾರ - ಗೂಢಚಾರ, ಗುಪ್ತಚಾರ; ಹೌಹಾರು - ಗಾಬರಿಯಾಗು, ಬೆಚ್ಚಿಬೀಳು; ಎದೆಗುಂದು - ಧೈರ್ಯಗೆಡು; ಕಂಗೆಡು - ದಿಕ್ಕು ತೋಚದಂತಾಗುವುದು, ದಾರಿ ಕಾಣದಾಗುವುದು; ಸಬ್ನವೀಸ - ಕಂದಾಯ ಅಧಿಕಾರಿ; ಧರ್ಮ - ಸರ್ವಸಮ್ಮತವಾದ ಬದುಕುವ ಕ್ರಮ; ಕೋಟೆ - ಬಲವಾದ ರಕ್ಷಣಾ ಗೋಡೆ; ಕೂಟ ಯುದ್ಧ - ಹಠಾತ್ತಾಗಿ ಎರಗಿ ದಾಳಿ ಮಾಡುವ ಯುದ್ಧದ ತಂತ್ರಗಾರಿಕೆ.
II. ಪ್ರಶ್ನೆಗಳು :
ಅ) ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.
೧. ಚೆನ್ನಮ್ಮ ಎಲ್ಲಿ ಆಳುತ್ತಿದ್ದಳು?
Answerಚೆನ್ನಮ್ಮಳು ಕೆಳದಿ ಸಂಸ್ಥಾನದಲ್ಲಿ ಆಳುತ್ತಿದ್ದಳು.
೨. ರಾಜಾರಾಮನು ಯಾರ ಮಗ?
Answerರಾಜಾರಾಮನು ಛತ್ರಪತಿ ಶಿವಾಜಿಯವರ ಮಗ.
೩. ಶಂಭಾಜಿಯನ್ನು ಸೆರೆ ಹಿಡಿದು ಕೊಲ್ಲಿಸಿದವನಾರು?
Answerದುಷ್ಟ ಔರಂಗಜೇಬನು ಶಂಭಾಜಿಯನ್ನು ಸೆರೆ ಹಿಡಿದು ಕೊಲ್ಲಿಸಿದನು.
೪. ರಾಜಾರಾಮನಿಗೆ ಯಾರೂ ರಕ್ಷಣೆ ನೀಡಲಿಲ್ಲ. ಏಕೆ?
Answerಬೇರೆ ರಾಜರು ಔರಂಗಜೇಬನ ಕೋಪಕ್ಕೆ ಹೆದರಿ ರಾಜಾರಾಮನಿಗೆ ರಕ್ಷಣೆ ನೀಡಲಿಲ್ಲ.
೫. ಔರಂಗಜೇಬ ಏಕೆ ಕೋಪಗೊಂಡನು?
Answerಚೆನ್ನಮ್ಮಳು ರಾಜಾರಾಮನಿಗೆ ಆಶ್ರಯ ಕೊಟ್ಟಿದ್ದನ್ನು ಕೇಳಿ ಔರಂಗಜೇಬನು ಕೋಪಗೊಂಡನು.
೬. ಸಿದ್ದಪ್ಪ ಶೆಟ್ಟರು ಸಭೆಯ ತೀರ್ಮಾನ ಏನೆಂದು ಹೇಳಿದರು?
Answerಸಿದ್ದಪ್ಪ ಶೆಟ್ಟರು ಯುದ್ಧಕ್ಕೆ ಸಿದ್ಧತೆ ಮಾಡಿಕೊಳ್ಳುವುದೇ ಸಭೆಯ ತೀರ್ಮಾನವೆಂದು ಹೇಳಿದರು.
ಆ) ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.
೧. ರಾಜಾರಾಮನು ರಾಣಿ ಚೆನ್ನಮ್ಮನಿಗೆ ಸಭೆಯಲ್ಲಿ ಏನೆಂದು ಕೇಳಿಕೊಂಡನು?
Answerರಾಜಾರಾಮನು ತನ್ನ ಸೋದರ ಶಂಭಾಜಿಯನ್ನು ಔರಂಗಜೇಬನು ಕೊಲ್ಲಿಸಿದ್ದಾಗಿಯೂ, ತನ್ನನ್ನೂ ಕೊಲ್ಲಿಸಲು ಹೊಂಚು ಹಾಕಿ ರಾಜ್ಯವನ್ನು ವಶಪಡಿಸಿಕೊಳ್ಳಲು ಸೈನ್ಯ ಕಳುಹಿಸಿದ್ದಾಗಿಯೂ ತಿಳಿಸಿದನು. ಶತ್ರುಗಳ ಕಣ್ಣು ತಪ್ಪಿಸಿ ಬಂದಿದ್ದೇವೆಂದು ಹೇಳಿ ತಮಗೆ ರಕ್ಷಣೆ ನೀಡಬೇಕೆಂದು ಕೇಳಿಕೊಂಡನು.
೨. ಬೇಹುಗಾರನು ಬಂದು ರಾಣಿಯವರಿಗೆ ಹೇಳಿದ್ದೇನು?
Answerಚೆನ್ನಮ್ಮಳು ರಾಜಾರಾಮನಿಗೆ ಆಶ್ರಯ ಕೊಟ್ಟಿದ್ದನ್ನು ಕೇಳಿ ಔರಂಗಜೇಬನು ಬಹಳ ಕೋಪಗೊಂಡಿದ್ದಾನೆಂದೂ, ರಾಜ್ಯವನ್ನು ಮುತ್ತಲು ಸೇನೆ ಕಳುಹಿಸಿದ್ದಾನೆಂದೂ ಬೇಹುಗಾರನು ತಿಳಿಸಿದನು. ರಾಜಾರಾಮನನ್ನು ಒಪ್ಪಿಸಬೇಕು ಇಲ್ಲವೇ ಯುದ್ಧಕ್ಕೆ ಸಿದ್ಧತೆ ನಡೆಸಬೇಕೆಂದೂ ಹೇಳಿದನು.
೩. ಮೊಗಲರ ಸೇನೆ ಕಾಡಿನಲ್ಲಿ ಭಯ-ಭೀತರಾಗಲು ಕಾರಣ ಹೇಳಿರಿ.
Answerಮಾರ್ಗ ಮಧ್ಯದಲ್ಲಿ ಜಡಿ ಮಳೆ ಸುರಿಯುತ್ತಿದ್ದು, ಅರಣ್ಯ ಮಾರ್ಗದಲ್ಲಿ ದಿಕ್ಕು ತಿಳಿಯದೆ ಮತ್ತು ಆಹಾರ ಸಿಗದಂತೆ ಮಾಡಿದ್ದರಿಂದ ಮೊಗಲರ ಸೇನೆ ಕಂಗೆಟ್ಟಿತ್ತು. ಜೊತೆಗೆ ಕೆಳದಿಯವರ ಕೂಟ ಕದನ ಹಾಗೂ ಪಳಗಿದ ಆನೆಗಳ ಸಹಾಯದಿಂದ ಕಾಡಾನೆಗಳನ್ನು ನುಗ್ಗಿಸಿದ್ದರಿಂದ ಅವರು ಭಯ-ಭೀತರಾದರು.
ಇ) ಈ ಮಾತನ್ನು ಯಾರು, ಯಾರಿಗೆ ಹೇಳಿದರು? ಬರೆಯಿರಿ.
೧. ನಾವು ಜಂಗಮರಲ್ಲ ತಾಯಿ!
Answerಈ ಮಾತನ್ನು ರಾಜಾರಾಮನು ಚೆನ್ನಮ್ಮಳಿಗೆ ಹೇಳಿದನು.
೨. ಆತನ ವೈರತ್ವ ಕಟ್ಟಿಕೊಳ್ಳುವುದು ಯಾರಿಗೂ ಸುಲಭದ ಮಾತಲ್ಲ.
Answerಈ ಮಾತನ್ನು ರಾಜಾರಾಮನು ಚೆನ್ನಮ್ಮಳಿಗೆ ಹೇಳಿದನು.
೩. ಶರಣು ಬಂದವರಿಗೆ ಆಶ್ರಯ ನೀಡುವುದು ನಮ್ಮ ಧರ್ಮ!
Answerಈ ಮಾತನ್ನು ಸಿದ್ದಪ್ಪ ಶೆಟ್ಟಿಯವರು ಚೆನ್ನಮ್ಮಳಿಗೆ ಹೇಳಿದರು.
೪. ಕೊಲ್ಲುವವನಿಗಿಂತ ಕಾಯುವವನು ದೊಡ್ಡವನು.
Answerಈ ಮಾತನ್ನು ಚೆನ್ನಮ್ಮಳು ಸಭೆಯಲ್ಲಿದ್ದ ಎಲ್ಲರಿಗೂ ಹೇಳಿದಳು.
೫. ಕೆಳದಿ ವೀರರು ಕರ್ನಾಟಕದ ಪರಂಪರೆ ಕಾಯ್ದರು.
Answerಈ ಮಾತನ್ನು ಚೆನ್ನಮ್ಮಳು ಸಭೆಯಲ್ಲಿದ್ದ ಎಲ್ಲರಿಗೂ ಹೇಳಿದಳು.
ಈ) ಬಿಟ್ಟ ಸ್ಥಳ ತುಂಬಿರಿ.
೧. ಶರಣಾಗತರನ್ನು ರಕ್ಷಿಸುವುದು ಕನ್ನಡಿಗರ ........................ .
Answerಶರಣಾಗತರನ್ನು ರಕ್ಷಿಸುವುದು ಕನ್ನಡಿಗರ ವೀರ ಪರಂಪರೆ.
೨. ಕೊಲ್ಲುವವನಿಗಿಂತ ........................ ದೊಡ್ಡವನು.
Answerಕೊಲ್ಲುವವನಿಗಿಂತ ಕಾಯುವವನು ದೊಡ್ಡವನು.
೩. ನಮ್ಮ ನೆರೆಯ ........................ ಸಹಾಯ ನೀಡುತ್ತಿದ್ದಾರೆ.
Answerನಮ್ಮ ನೆರೆಯ ಅರಸರು ಸಹಾಯ ನೀಡುತ್ತಿದ್ದಾರೆ.
೪. ಕೂಟ ಕದನದಿಂದ ........................ ಕಂಗೆಟ್ಟಿದ್ದಾರೆ.
Answerಕೂಟ ಕದನದಿಂದ ಮೊಗಲರು ಕಂಗೆಟ್ಟಿದ್ದಾರೆ.
೫. ಮೊಗಲರು ಪ್ರಾಣ ಭಯದಿಂದ ........................ ಬಿಟ್ಟು ದಿಕ್ಕೆಟ್ಟು ಓಡಿದರು.
Answerಮೊಗಲರು ಪ್ರಾಣ ಭಯದಿಂದ ಶಸ್ತ್ರಾಸ್ತ್ರಗಳನ್ನು ಬಿಟ್ಟು ದಿಕ್ಕೆಟ್ಟು ಓಡಿದರು.
ಉ) ಹೊಂದಿಸಿ ಬರೆಯಿರಿ.
೧. ಶಿವಾಜಿಯ ಮಗ ಕೃಷ್ಣಪ್ಪಯ್ಯ \_\_\_\_\_\_\_\_\_\_\_\_\_\_\_\_
Answerಶಿವಾಜಿಯ ಮಗ - ರಾಜಾರಾಮ
೨. ಸಿದ್ದಪ್ಪಶೆಟ್ಟಿ ಮಗಳು ಸೋಮಶೇಖರ ನಾಯಕ \_\_\_\_\_\_\_\_\_\_\_\_\_\_\_\_
Answerಸಿದ್ದಪ್ಪಶೆಟ್ಟಿ ಮಗಳು - ಕೆಳದಿಚೆನ್ನಮ್ಮ
೩. ಸಬ್ನವೀಸ ಕೆಳದಿಚೆನ್ನಮ್ಮ \_\_\_\_\_\_\_\_\_\_\_\_\_\_\_\_
Answerಸಬ್ನವೀಸ - ಕೃಷ್ಣಪ್ಪಯ್ಯ
೪. ಚೆನ್ನಮ್ಮನ ಪತಿ ರಾಜಾರಾಮ \_\_\_\_\_\_\_\_\_\_\_\_\_\_\_\_
Answerಚೆನ್ನಮ್ಮನ ಪತಿ - ಸೋಮಶೇಖರ ನಾಯಕ
III. ಭಾಷಾಭ್ಯಾಸ :
ಅ) ಈ ಪದಗಳನ್ನು ನಿಮ್ಮ ಸ್ವಂತ ವಾಕ್ಯಗಳಲ್ಲಿ ಬಳಸಿರಿ.
೧. ತುರ್ತು ........................................................................................
Model sentenceತುರ್ತು: ಅಮ್ಮನಿಗೆ ತುರ್ತಾಗಿ ಆಸ್ಪತ್ರೆಗೆ ಹೋಗಬೇಕಾಯಿತು.
೨. ಕಣ್ಣು ತಪ್ಪಿಸು ........................................................................................
Model sentenceಕಣ್ಣು ತಪ್ಪಿಸು: ಇಲಿಯು ಬೆಕ್ಕಿನ ಕಣ್ಣು ತಪ್ಪಿಸಿ ಓಡಿಹೋಯಿತು.
೩. ದಾಳಿ ಮಾಡು ........................................................................................
Model sentenceದಾಳಿ ಮಾಡು: ಗಿಡುಗವು ಕೋಳಿ ಮರಿಯ ಮೇಲೆ ದಾಳಿ ಮಾಡಿತು.
೪. ತಂಡ-ತಂಡವಾಗಿ ........................................................................................
Model sentenceತಂಡ-ತಂಡವಾಗಿ: ಮಕ್ಕಳು ತಂಡ-ತಂಡವಾಗಿ ಆಟವಾಡಲು ಮೈದಾನಕ್ಕೆ ಹೋದರು.
೫. ಹಠಾತ್ತಾಗಿ ........................................................................................
Model sentenceಹಠಾತ್ತಾಗಿ: ಹಠಾತ್ತಾಗಿ ಮಳೆ ಬಂದಿದ್ದರಿಂದ ನಾವು ನೆನೆದೆವು.
೬. ಭಯ-ಭೀತಿ ........................................................................................
Model sentenceಭಯ-ಭೀತಿ: ಕತ್ತಲೆಯಲ್ಲಿ ನಾಯಿ ಬೊಗಳಿದ್ದರಿಂದ ಮಗುವಿಗೆ ಭಯ-ಭೀತಿಯಾಯಿತು.
ಆ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಗಮನಿಸಿ ಓದಿರಿ. ಗಟ್ಟಿಯಾಗಿ ಹೇಳಿರಿ ಉಚ್ಚಾರ ದೋಷವಾಗದಿರಲಿ.
ದುಷ್ಟ × ಶಿಷ್ಟ
ಸತ್ಯ × ಅಸತ್ಯ
ಕೃತಜ್ಞ × ಕೃತಘ್ನ
ಆಶ್ರಯ × ನಿರಾಶ್ರಯ
ಜಯ × ಅಪಜಯ
ಧರ್ಮ × ಅಧರ್ಮ
IV. ಚಟುವಟಿಕೆಗಳು :
ಅ) ೧. ಕನ್ನಡನಾಡಿನ ವೀರ ಪುರುಷರ ಹೆಸರುಗಳನ್ನು ಪಟ್ಟಿ ಮಾಡಿರಿ.
೨. ವೀರರಾಣಿ ಕೆಳದಿ ಚೆನ್ನಮ್ಮ ನಾಟಕವನ್ನು ಕಲಿತು ನಿಮ್ಮ ಶಾಲಾ ವಾರ್ಷಿಕೋತ್ಸವದಲ್ಲಿ ಅಭಿನಯಿಸಿರಿ.
೩. ಕನ್ನಡ ನಾಡಿನ ವೀರ ಮಹಿಳೆಯರ ಕಥೆಗಳನ್ನು ಸಂಗ್ರಹಿಸಿ ಓದಿರಿ.
ಆ) ಕೆಳಗಿನ ಸಾಲುಗಳನ್ನು ಗಟ್ಟಿಯಾಗಿ ಓದಿ, ಪ್ರಶ್ನೆಗಳಿಗೆ ಉತ್ತರಿಸಿರಿ.
ಕನ್ನಡ ಪರಂಪರೆ ಎಂಬುದು ಕನ್ನಡಿಗರ ಜೀವನ ಧರ್ಮ. ಇದು ನಡೆದು ಬಂದ ಹಾದಿ. ಮಹಾಕವಿ ಕುವೆಂಪುರವರು “ಕರ್ನಾಟಕವೆಂಬುದು ಬರಿ ಹೆಸರಲ್ಲ, ಮಂತ್ರಕಣಾ, ಶಕ್ತಿ ಕಣಾ, ದೇವಿ ಕಣಾ” ಎನ್ನುತ್ತಾರೆ.
ಕರ್ನಾಟಕದ ಒಂದು ಶಾಸನವು ಕನ್ನಡಿಗರು ಸಾಧು ಜನರಿಗೆ ಸಾಧು. ಯಾರಾದರು ತೊಂದರೆ ಕೊಟ್ಟರೆ ಅವರನ್ನು ಬಂಧಿಸದೆ ಬಿಡರು ಎಂದು ಹೇಳುತ್ತದೆ. ಕನ್ನಡಿಗರು ವೀರರು. ಈ ಜನ ಕಾವೇರಿಯಿಂದ ಗೋದಾವರಿನದಿಯವರೆಗೆ, ಕರ್ನಾಟಕದಿಂದ ಬಂಗಾಳದವರೆಗೆ ಗೆದ್ದು ಬಂದಿದ್ದಾರೆ. ವೀರತನ ಮೆರೆದಿದ್ದಾರೆ.
ಇಲ್ಲಿಯ ಶರಣರು ಇತರರನ್ನು “ಇವನಾರವ ಇವನಾರವ ಎಂದೆನ್ನದಿರಯ್ಯ ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ” ಎಂದು ತಮ್ಮ ಹಿರಿತನ ತೋರಿದ್ದಾರೆ. ಕನಕದಾಸರು ಕುಲ-ಕುಲವೆಂದು ಹೊಡೆದಾಡದಿರಿ ಎಂದು ಎಚ್ಚರಿಸಿದ್ದಾರೆ. “ಏನಾದರು ಆಗು ಮೊದಲು ಮಾನವನಾಗು” ಎಂದು ಸಿದ್ದಯ್ಯ ಪುರಾಣಿಕರವರು ಜಗತ್ತಿಗೆ ಹೇಳಿದ್ದಾರೆ. ಇದುವೆ ಕನ್ನಡದ ಪರಂಪರೆ.
೧. ಕನ್ನಡ ಪರಂಪರೆ ಎಂದರೆ ಏನು?
Answerಕನ್ನಡ ಪರಂಪರೆ ಎಂಬುದು ಕನ್ನಡಿಗರ ಜೀವನ ಧರ್ಮ ಮತ್ತು ನಡೆದು ಬಂದ ಹಾದಿಯಾಗಿದೆ.
೨. ಕುವೆಂಪುರವರು ಕರ್ನಾಟಕದ ಬಗ್ಗೆ ಏನು ಹೇಳುತ್ತಾರೆ?
Answerಕುವೆಂಪುರವರು ಕರ್ನಾಟಕವೆಂಬುದು ಬರಿ ಹೆಸರಲ್ಲ, ಅದು ಮಂತ್ರ, ಶಕ್ತಿ ಮತ್ತು ದೇವಿ ಎಂದು ಹೇಳುತ್ತಾರೆ.
೩. ಶರಣರು ಹೇಳಿದ್ದೇನು?
Answerಶರಣರು 'ಇವನಾರವ ಇವನಾರವ ಎಂದೆನ್ನದಿರಯ್ಯ, ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ' ಎಂದು ಹೇಳಿದರು.
೪. ಸಿದ್ದಯ್ಯ ಪುರಾಣಿಕರವರು ಜಗತ್ತಿಗೆ ಹೇಳಿದ್ದೇನು?
Answerಸಿದ್ದಯ್ಯ ಪುರಾಣಿಕರವರು 'ಏನಾದರು ಆಗು ಮೊದಲು ಮಾನವನಾಗು' ಎಂದು ಜಗತ್ತಿಗೆ ಹೇಳಿದರು.