CRECT Education

Class 6 Kannada Second Language Lesson 17: Short Poems (ಚುಟುಕುಗಳು) | KTBS

Description

Three playful Kannada short poems by Dinakara Desai — read line‑by‑line, learn vocabulary, and test your understanding.

ಪದ್ಯ (poem) · ದಿನಕರ ದೇಸಾಯಿ

ಪಠ್ಯFull text

**ಪ್ರವೇಶ :** ಪುಟ್ಟ ಪುಟ್ಟ ವಾಕ್ಯಗಳ, ಮೂರು-ನಾಲ್ಕು ಸಾಲುಗಳ ಪದ್ಯವನ್ನು ಚುಟುಕ, ತ್ರಿಪದಿ, ಚೌಪದಿ ಮುಂತಾದ ಹೆಸರುಗಳಿಂದ ಗುರುತಿಸುತ್ತೇವೆ. ಸೂರ್ಯನು ಭೂಮಿಯ ಮೇಲೆ ಬೆಳೆ ಬೆಳೆಯಲು ಕಾರಣನಾಗುವ, ಕೋಳಿಯ ಬಗ್ಗೆ ತಮಾಷೆ ಮಾಡುವ, ತಂಗಿಗೆ ಆಕಾಶದ ಬೆರಗನ್ನು ವಿವರಿಸುವ ಚುಟುಕುಗಳು ಇಲ್ಲಿವೆ. ಇವುಗಳ ರಚನಾ ಕ್ರಮದಲ್ಲಿ ಹಾಸ್ಯ, ವಿಡಂಬನೆ, ಜ್ಞಾನ ಎಲ್ಲವೂ ಸೇರಿರುವುದನ್ನು ಗಮನಿಸಿ. ಓದಲು, ನೆನಪಿಟ್ಟುಕೊಳ್ಳಲು ಸುಲಭವಾದ ರಚನೆಗಳಿವು. **೧. ಹತ್ತಿಯ ಬೆಳೆ** ಆಗಸದ ಹೊಲದೊಳಗೆ ಚಿಕ್ಕೆಗಳ ಬಿತ್ತಿ ಮುಂಜಾನೆ ನೋಡಿದರೆ ಬಿಳಿ ಮುಗಿಲ ಹತ್ತಿ, ಈ ಹತ್ತಿಯನು ಹಿಂಜಿದವರಾರು ನೀರೆ? ಸೂರ್ಯನಲ್ಲದೆ, ಮತ್ತೆ ಯಾರಲ್ಲ ಬೇರೆ. **೨. ಸೋಜಿಗದ ಕೋಳಿ** ಎಲುಬು ಇಲ್ಲದ ಕೋಳಿ ತೋರಿಸಲೆ ನಿನಗೆ? ನೋಡಬೇಕೆನಿಸಿದರೆ ಬಾ ನನ್ನ ಮನೆಗೆ ಹೀಗೆನಲು ಆ ಹುಡುಗ ನೋಡಲಿಕೆ ಬಂದ ಕೋಳಿ ಮೊಟ್ಟೆಯ ತಂದು ತೋರಿಸಿದ ಕಂದ. **೩. ತಂಗಿಗೆ** ಗಗನ ದೇವಿಯ ಹಣೆಗೆ ಚಂದಿರನ ಬೊಟ್ಟು ರಂಗೋಲೆಗಾಗಿ ಬೆಳದಿಂಗಳಿನ ಹಿಟ್ಟು ಬಾಂದಳವ ಸಿಂಗರಿಸಿದವರಾರು, ತಂಗಿ? ಹೇಳಿದರೆ ಹೊಲಿಸುವೆನು ಚಿಕ್ಕೆಗಳ ಅಂಗಿ.

ಅಭ್ಯಾಸexercises from the textbook

Model answers — a guide, not the only correct wording. Check with your teacher.

I. ಪದಗಳ ಅರ್ಥ :

  1. | | |

  2. |---|---|

  3. | ಗಗನ - ಆಕಾಶ, ಬಾಂದಳ, ಆಗಸ | ಎಲುಬು - ಮೂಳೆ |

  4. | ನೀರೆ - ಸುಂದರಿ | ಚಿಕ್ಕೆ - ನಕ್ಷತ್ರ; ತಾರೆ. |

  5. | ಬೊಟ್ಟು - ತಿಲಕ | ಮುಂಜಾನೆ -ಸೂರ್ಯ ಉದಯಿಸುವ ಸಮಯ. |

  6. | ಮುಗಿಲು - ಮೋಡ | ಸೋಜಿಗ - ವಿಸ್ಮಯ; ಆಶ್ಚರ್ಯದ ವಿಷಯ. |

  7. | ಹಿಟ್ಟು - ನಯವಾದ ಪುಡಿ | ಹಿಂಜು - ಬಿಡಿಸು; ಹಿಗ್ಗಿಸು. |

II. ಪ್ರಶ್ನೆಗಳು :

ಅ) ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

  1. ೧. ಆಗಸದ ಹೊಲದಲ್ಲಿ ಏನನ್ನು ಬಿತ್ತಿದೆ?

    Answer

    ಆಗಸದ ಹೊಲದಲ್ಲಿ ಚಿಕ್ಕೆಗಳನ್ನು ಬಿತ್ತಿದೆ.

  2. ೨. ಬಿಳಿ ಮುಗಿಲ ಹತ್ತಿಯನ್ನು ಹಿಂಜಿದವರು ಯಾರು?

    Answer

    ಬಿಳಿ ಮುಗಿಲ ಹತ್ತಿಯನ್ನು ಹಿಂಜಿದವರು ಸೂರ್ಯ.

  3. ೩. ಕಂದನು ಹುಡುಗನಿಗೆ ಎಂತಹ ಕೋಳಿ ತೋರುವೆನು ಎಂದನು?

    Answer

    ಕಂದನು ಹುಡುಗನಿಗೆ ಎಲುಬು ಇಲ್ಲದ ಕೋಳಿ ತೋರುವೆನು ಎಂದನು.

  4. ೪. ಹುಡುಗನು ಕಂದನ ಮನೆಗೆ ಏಕೆ ಹೋದನು?

    Answer

    ಹುಡುಗನು ಕಂದನ ಮನೆಗೆ ಎಲುಬು ಇಲ್ಲದ ಕೋಳಿಯನ್ನು ನೋಡಲು ಹೋದನು.

  5. ೫. ಕಂದನು ಹುಡುಗನಿಗೆ ತೋರಿಸಿದ ಸೋಜಿಗದ ಕೋಳಿ ಯಾವುದು?

    Answer

    ಕಂದನು ಹುಡುಗನಿಗೆ ತೋರಿಸಿದ ಸೋಜಿಗದ ಕೋಳಿ ಕೋಳಿ ಮೊಟ್ಟೆ.

  6. ೬. ಕವಿ ತಂಗಿಗೆ ಎಂತಹ ಅಂಗಿ ಹೊಲಿಸುವೆನು ಎಂದರು?

    Answer

    ಕವಿ ತಂಗಿಗೆ ಚಿಕ್ಕೆಗಳ ಅಂಗಿ ಹೊಲಿಸುವೆನು ಎಂದರು.

  7. ೭. ಚುಟುಕಗಳ ಬ್ರಹ್ಮ ಎಂದು ಯಾವ ಕವಿಯನ್ನು ಕರೆಯಲಾಗುತ್ತದೆ?

ಆ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

  1. ೧. ಆಗಸದಲ್ಲಿ ಸೂರ್ಯನ ಕೆಲಸಗಳನ್ನು ಕವಿ ಏನೆಂದು ವರ್ಣಿಸಿದ್ದಾರೆ?

    Answer

    ಆಗಸದ ಹೊಲದಲ್ಲಿ ಚಿಕ್ಕೆಗಳನ್ನು ಬಿತ್ತಲಾಗಿದೆ. ಮುಂಜಾನೆ ಬಿಳಿ ಮುಗಿಲುಗಳು ಹತ್ತಿಯಂತೆ ಕಾಣುತ್ತವೆ. ಈ ಹತ್ತಿಯನ್ನು ಹಿಂಜುವವನು ಸೂರ್ಯನು ಎಂದು ಕವಿ ವರ್ಣಿಸಿದ್ದಾರೆ.

  2. ೨. ಸೋಜಿಗದ ಕೋಳಿ ಯಾವುದು? ಏಕೆ?

    Answer

    ಸೋಜಿಗದ ಕೋಳಿ ಎಂದರೆ ಕೋಳಿ ಮೊಟ್ಟೆ. ಏಕೆಂದರೆ ಮೊಟ್ಟೆಯಲ್ಲಿ ಎಲುಬು ಇರುವುದಿಲ್ಲ. ಕಂದನು ಎಲುಬು ಇಲ್ಲದ ಕೋಳಿ ತೋರಿಸುವೆನೆಂದು ಹೇಳಿ ಮೊಟ್ಟೆಯನ್ನು ತೋರಿಸಿದನು.

  3. ೩. ಬಾಂದಳವು ಹೇಗೆ ಸಿಂಗಾರಗೊಂಡಿದೆ ಎಂದು ಕವಿ ವರ್ಣಿಸಿದ್ದಾರೆ?

    Answer

    ಗಗನ ದೇವಿಯ ಹಣೆಗೆ ಚಂದಿರನು ಬೊಟ್ಟಿನಂತೆ ಇದೆ. ರಂಗೋಲೆಗಾಗಿ ಬೆಳದಿಂಗಳ ಹಿಟ್ಟು ಇದೆ. ಹೀಗೆ ಬಾಂದಳವು ಸಿಂಗಾರಗೊಂಡಿದೆ ಎಂದು ಕವಿ ವರ್ಣಿಸಿದ್ದಾರೆ.

ಇ) ಈ ಕೆಳಗಿನ ಹೇಳಿಕೆಗಳಿಗೆ ನಾಲ್ಕು ಪರ್ಯಾಯ ಉತ್ತರಗಳನ್ನು ನೀಡಿದೆ. ಅವುಗಳಲ್ಲಿ ಸರಿಯಾದುದನ್ನು ಆರಿಸಿ ಬರೆಯಿರಿ.

  1. ೧. ಬಿಳಿ ಮುಗಿಲ ಹತ್ತಿ ಎಂದರೆ ______________

    Answer

    ಬಿಳಿ ಮುಗಿಲ ಹತ್ತಿ ಎಂದರೆ ಮೋಡ.

  2. ಅ) ಮೋಡ ಆ) ಆಕಾಶ ಇ) ಚಿಕ್ಕೆ ಈ) ಸೂರ್ಯ

  3. ೨. ಎಲುಬು ಇಲ್ಲದ ಕೋಳಿ ಎಂದರೆ ______________

    Answer

    ಎಲುಬು ಇಲ್ಲದ ಕೋಳಿ ಎಂದರೆ ಮೊಟ್ಟೆ.

  4. ಅ) ಮೊಟ್ಟೆ ಆ) ಮರಿ ಇ) ಮಾಂಸ ಈ) ಹೊಟ್ಟೆ

  5. ೩. ಗಗನ ದೇವಿಯ ಹಣೆಗೆ ಬೊಟ್ಟು ______________

    Answer

    ಗಗನ ದೇವಿಯ ಹಣೆಗೆ ಬೊಟ್ಟು ಚಂದಿರ.

  6. ಅ) ಚಿಕ್ಕೆ ಆ) ಚಂದಿರ ಇ) ಹಿಟ್ಟು ಈ) ಬೆಳದಿಂಗಳು

III. ಭಾಷಾಭ್ಯಾಸ :

ಅ) ಇಲ್ಲಿರುವ “ಅ” ಪಟ್ಟಿಯ ಪದಗಳಿಗೆ “ಬ” ಪಟ್ಟಿಯ ಪದಗಳನ್ನು ಹೊಂದಿಸಿ ಬರೆಯಿರಿ.

  1. | 'ಅ' ಪಟ್ಟಿ | | 'ಬ' ಪಟ್ಟಿ |

  2. |---|---|---|

  3. | ೧) ಬಾಂದಳ | - | ಅ) ಸುಂದರಿ |

    Answer

    ೧) ಬಾಂದಳ - ಇ) ಆಕಾಶ

  4. | ೨) ಬೊಟ್ಟು | - | ಆ) ಮೋಡ |

    Answer

    ೨) ಬೊಟ್ಟು - ಈ) ತಿಲಕ

  5. | ೩) ಮುಗಿಲು | - | ಇ) ಆಕಾಶ |

    Answer

    ೩) ಮುಗಿಲು - ಆ) ಮೋಡ

  6. | ೪) ನೀರೆ | - | ಈ) ತಿಲಕ |

    Answer

    ೪) ನೀರೆ - ಅ) ಸುಂದರಿ

  7. | | | ಉ) ನಕ್ಷತ್ರ |

ಆ) ಈ ಕೆಳಗಿನ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ಆರಿಸಿ ಬರೆಯಿರಿ.

  1. ೧. ಈ ಕೆಳಗಿನವುಗಳಲ್ಲಿ ವ್ಯಾಕರಣ ಶುದ್ಧ ಪದ ಯಾವುದು?

    Answer

    ವ್ಯಾಕರಣ ಶುದ್ಧ ಪದ ಆಕಾಶ.

  2. ಅ) ಅಕಾಸ ಆ) ಆಕಶ ಇ) ಆಕಾಶ ಈ) ಅಕಸ

  3. ೨. 'ಎಲುಬು' ಪದದ ಅರ್ಥವೇನು?

    Answer

    'ಎಲುಬು' ಪದದ ಅರ್ಥ ಮೂಳೆ.

  4. ಅ) ಮೂಳೆ ಆ) ಮಾಂಸ ಇ) ರಕ್ತ ಈ) ಚರ್ಮ

  5. ೩. 'ಸತ್ಯ' ಇದರ ವಿರುದ್ಧಾರ್ಥಕ ಪದ ಯಾವುದು?

    Answer

    'ಸತ್ಯ' ಇದರ ವಿರುದ್ಧಾರ್ಥಕ ಪದ ಅಸತ್ಯ.

  6. ಅ) ಮೋಸ ಆ) ನಿಜ ಇ) ಋತ ಈ) ಅಸತ್ಯ

  7. ೪. 'ಕೋಳಿ' ಇದು ಯಾವ ಲಿಂಗಕ್ಕೆ ಉದಾಹರಣೆಯಾಗುತ್ತದೆ?

    Answer

    'ಕೋಳಿ' ಇದು ನಪುಂಸಕ ಲಿಂಗಕ್ಕೆ ಉದಾಹರಣೆ.

  8. ಅ) ಪುಲ್ಲಿಂಗ ಆ) ಸ್ತ್ರೀಲಿಂಗ ಇ) ನಪುಂಸಕ ಲಿಂಗ ಈ) ಅನ್ಯಲಿಂಗ

ಇ) ಪದಬಳ್ಳಿ : ಪದ ಒಂದು ವಸ್ತುವನ್ನು ಪ್ರತಿನಿಧಿಸುತ್ತದೆ. ಆ ವಸ್ತುವಿಗೆ ಸಂಬಂಧಿಸಿದ ಇನ್ನಿತರ ಪದಗಳನ್ನು ಬರೆಯುತ್ತಾ ಹೋಗಿ. ಈ ಕೆಳಗಿನ ಮಾದರಿಯನ್ನು ಗಮನಿಸಿರಿ.

  1. ಮಾದರಿ : ಗಿಡ - ಮರ, ಬಳ್ಳಿ, ಚಿಗುರು, ಹೂ, ಕಾಯಿ, ಹಣ್ಣು, ಎಲೆ, ಕಾಂಡ, ಬೇರು....

  2. ೧. ಆಗಸ -

    Answer

    ಆಗಸ - ನಕ್ಷತ್ರ, ಚಂದ್ರ, ಸೂರ್ಯ, ಮೋಡ, ಮಿಂಚು, ಗಾಳಿ

  3. ೨. ಕೋಳಿ -

    Answer

    ಕೋಳಿ - ಮೊಟ್ಟೆ, ಮರಿ, ಹುಂಜ, ಕೂಗು, ಗೂಡು

  4. ೩. ಹೊಲ -

    Answer

    ಹೊಲ - ಬೆಳೆ, ರೈತ, ನೀರು, ಮಣ್ಣು, ಬೀಜ, ಸಸಿ

IV. ಚಟುವಟಿಕೆಗಳು :

  1. ಅ. ದಿನಕರ ದೇಸಾಯಿ ಅವರ ಇನ್ನಿತರ ಚುಟುಕುಗಳನ್ನು ಓದಿರಿ.

  2. ಆ. ವೃತ್ತ ಪತ್ರಿಕೆಗಳಲ್ಲಿ ಬರುವ ಚುಟುಕುಗಳನ್ನು ಸಂಗ್ರಹಿಸಿ ಒಂದು ಆಲ್ಬಂ ಮಾಡಿರಿ.

  3. ಇ. ಪ್ರಸ್ತುತ ಪಾಠದಲ್ಲಿರುವ ಚುಟುಕುಗಳನ್ನು ಕಂಠಪಾಠ ಮಾಡಿರಿ.

Interactive Lab