ಗದ್ಯ (prose) · ಎ.ಆರ್. ಮಣಿಕಾಂತ್
ಪಠ್ಯFull text
ಪದಗಳ ಅರ್ಥword meanings
| Kannada | Pronunciation | Meaning |
|---|---|---|
| ಸಂಕ್ರಾಂತಿ | — | ದಾಟುವಿಕೆ, ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಹೋಗುವ ದಿನ; ಕಿಚ್ಚು-ಬೆಂಕಿ; 'ಟೊ' ಬಿಡು-ವಾತುಬಿಡು; ಪಟೇಲ-ಹಿಂದೆ ಊರಿನ ಕ್ಷೇಮಸಮಾಚಾರಗಳನ್ನು ನೋಡಿಕೊಳ್ಳುತ್ತಿದ್ದ ಹಿರಿಯ; ಮೀಯು-ಸ್ನಾನ ವಾಡು; ತರಹೇವಾರಿ-ವಿಧವಿಧವಾದ; ಬ್ಯುಸಿ-ಬಿಡುವಿಲ್ಲದಿರುವುದು (ಇಂಗ್ಲೀಷ್ ಪದ); ಪ್ಯಾಕ್ ಮಾಡು-ಪೊಟ್ಟಣ ಕಟ್ಟು; ರೆಡಿಮೇಡ್-ಸಿದ್ಧವಾದ; ಫ್ಯಾಬ್ ಮಾಲ್-ಆಧುನಿಕ ಮಾರುಕಟ್ಟೆಯ ಒಂದು ರೂಪ |
| **'ಸಂಕ್ರಾಂತಿಯಂದು ಸುಖ | — | ದುಃಖ'** ಈ ಪ್ರಬಂಧವನ್ನು ಮಣಿಕಾಂತ್ ಅವರ **'ಅಮ್ಮ ಹೇಳಿದ ಎಂಟು ಸುಳ್ಳುಗಳು'** ಎಂಬ ಕೃತಿಯಿಂದ ಆರಿಸಲಾಗಿದೆ |
ಅಭ್ಯಾಸexercises from the textbook
Model answers — a guide, not the only correct wording. Check with your teacher.
ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.
೧. ಸಂಕ್ರಾಂತಿ ಯಾವ ರೀತಿಯ ಹಬ್ಬ?
Answerಸಂಕ್ರಾಂತಿ ದನಗಳ ಹಬ್ಬ.
೨. ಕಿಚ್ಚು ಹಾಯಿಸುವುದು ಎಂದರೆ ಏನು?
Answerಕಿಚ್ಚು ಹಾಯಿಸುವುದು ಎಂದರೆ ದನಕರುಗಳನ್ನು ಬೆಂಕಿಯಲ್ಲಿ ಜಿಗಿಸುವುದು.
೩. ಹಳ್ಳಿಗಳಲ್ಲಿ ಪಟೇಲರು ಏನು ಕೊಡಿಸಿ ರಾಜಿ ಮಾಡುತ್ತಿದ್ದರು?
Answerಹಳ್ಳಿಗಳಲ್ಲಿ ಪಟೇಲರು ಎಳ್ಳು ಬೆಲ್ಲ ಕೊಡಿಸಿ ರಾಜಿ ಮಾಡಿಸುತ್ತಿದ್ದರು.
೪. ಕೃಷಿಕರ ಮನೆಯಲ್ಲಿ ದನಕರುಗಳ ಜಾಗಕ್ಕೆ ಏನು ಬಂದು ನಿಂತಿವೆ?
Answerಕೃಷಿಕರ ಮನೆಯಲ್ಲಿ ದನಕರುಗಳ ಜಾಗಕ್ಕೆ ಟ್ರ್ಯಾಕ್ಟರ್‌ಗಳು ಬಂದು ನಿಂತಿವೆ.
೫. ನಮ್ಮ ಸಂಕ್ರಾಂತಿಯಲ್ಲಿ ಏನು ಇರಬೇಕು?
Answerನಮ್ಮ ಸಂಕ್ರಾಂತಿಯಲ್ಲಿ ಸಂಸ್ಕೃತಿ, ಸಂಪ್ರದಾಯ, ಪ್ರೀತಿ, ವಿಶ್ವಾಸ ಮತ್ತು ಕೃತಜ್ಞತೆ ಇರಬೇಕು.
ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.
೧. ಸಂಕ್ರಾಂತಿಯಲ್ಲಿ ದನಗಳಿಗೆ ಏನು ಮಾಡಲಾಗುತ್ತದೆ?
Answerಸಂಕ್ರಾಂತಿಯಲ್ಲಿ ದನಗಳಿಗೆ ಪೂಜೆ ಮಾಡಲಾಗುತ್ತದೆ. ಅವುಗಳನ್ನು ಸಿಂಗರಿಸಿ, ಮೆರವಣಿಗೆ ಮಾಡಿ, ಕಿಚ್ಚು ಹಾಯಿಸಲಾಗುತ್ತದೆ. ಹಿಂದೆ ಅವುಗಳ ಮೈ ತೊಳೆದು, ಕೊಂಬಿಗೆ ಬಣ್ಣ ಬಳಿದು, ಹೂ ಮುಡಿಸಿ ಅಲಂಕರಿಸುತ್ತಿದ್ದರು.
೨. ಸಂಕ್ರಾಂತಿಯಲ್ಲಿ ಎಳ್ಳು, ಬೆಲ್ಲ, ಕೊಬ್ಬರಿ ಏಕೆ ತಿನ್ನಬೇಕು?
Answerಚಳಿಗಾಲದಲ್ಲಿ ಚರ್ಮ ಒಡೆದು ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ. ಎಳ್ಳು, ಕೊಬ್ಬರಿ, ಕಡಲೆಯಲ್ಲಿ ಕೊಬ್ಬಿನ ಅಂಶ ಹೆಚ್ಚಾಗಿರುವುದರಿಂದ ಅವುಗಳನ್ನು ತಿನ್ನುವುದರಿಂದ ದೇಹ ಸರಿಯಾಗುತ್ತದೆ. ಹೀಗಾಗಿ ಸಂಕ್ರಾಂತಿಯಲ್ಲಿ ಎಳ್ಳು-ಬೆಲ್ಲ-ಕೊಬ್ಬರಿ ತಿನ್ನಬೇಕು.
೩. ಸಂಕ್ರಾಂತಿಯ ದಿನದಿಂದ ಸೂರ್ಯನ ಚಲನೆ ಹೇಗಿರುತ್ತದೆ?
Answerಸಂಕ್ರಾಂತಿಯ ದಿನದಿಂದ ಸೂರ್ಯನು ದಕ್ಷಿಣದಿಂದ ಉತ್ತರ ದಿಕ್ಕಿಗೆ ಸಂಚರಿಸಲು ಪ್ರಾರಂಭಿಸುತ್ತಾನೆ. ಆಗ ಹಗಲು ದೀರ್ಘವಾಗಿ ರಾತ್ರಿಯ ಅವಧಿ ಕಡಿಮೆಯಾಗುತ್ತದೆ.
೪. ಎಳ್ಳು-ಬೆಲ್ಲ ನೀಡುವುದು ಇಂದಿನ ಕಾಲದಲ್ಲಿ ಹೇಗಿದೆ?
Answerಇಂದು ಎಳ್ಳು-ಬೆಲ್ಲ ನೀಡುವುದು ಪ್ರತಿಷ್ಠೆಯ ವಿಚಾರವಾಗಿದೆ. ಜಾಸ್ತಿ ಕೊಟ್ಟವರು ಶ್ರೀಮಂತರು ಎಂಬ ಭಾವನೆ ಬಂದಿದೆ. ದಪ್ಪ ಸಕ್ಕರೆ ಅಚ್ಚು ಸೇರಿಸಿ ಪ್ಯಾಕ್ ಮಾಡಲಾಗುತ್ತದೆ, ರೆಡಿಮೇಡ್ ಪ್ಯಾಕ್‌ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ, ಕಳಪೆ ಮಾಲೂ ಬಂದಿದೆ.
ಇ. ಹೊಂದಿಸಿ ಬರೆಯಿರಿ.
ಅ - ಆ
ಯುಗಾದಿ - ಎಳ್ಳು-ಬೆಲ್ಲ
ದೀಪಾವಳಿ - ದಸರಾ
ರಂಜಾನ್ - ಯೇಸು ಹುಟ್ಟಿದ ದಿನ
ಕ್ರಿಸ್‌ಮಸ್ - ಬೇವು-ಬೆಲ್ಲ
ವಿಜಯದಶಮಿ - ಬೆಳಕಿನ ಹಬ್ಬ
ಮಕರ ಸಂಕ್ರಾಂತಿ - ಉಪವಾಸದ ಪರ್ವದಿನ
ಈ. ಕೆಳಗೆ ನೀಡಿರುವ ಪಟ್ಟಿಯಲ್ಲಿ ರಾಷ್ಟ್ರೀಯ/ನಾಡ ಹಬ್ಬಗಳ ಮಹತ್ವವನ್ನು ಐದು-ಆರು ವಾಕ್ಯಗಳಲ್ಲಿ ತಿಳಿಸಿ.
೧. ಸ್ವಾತಂತ್ರ್ಯೋತ್ಸವ
೨. ಗಣರಾಜ್ಯದಿನ
೩. ಕನ್ನಡ ರಾಜ್ಯೋತ್ಸವ
ವ್ಯಾಕರಣ ಮಾಹಿತಿ
ಲೇಖನ ಚಿಹ್ನೆಗಳು
ನಾವು ಬರೆದ ವಿಚಾರಗಳು ಓದುಗರಿಗೆ ಸ್ಪಷ್ಟವಾಗಿ ಅರ್ಥವಾಗಲೆಂದು ಅಲ್ಲಲ್ಲಿ ಉಪಯೋಗಿಸುವ ಚಿಹ್ನೆಗಳಿಗೆ ಲೇಖನ ಚಿಹ್ನೆಗಳೆಂದು ಕರೆಯುವರು.
ಅ) ಪೂರ್ಣವಿರಾಮ (.)
* ಅರ್ಥಪೂರ್ಣವಾಕ್ಯದ ಕೊನೆಯನ್ನು ಸೂಚಿಸಲು ಬಳಸುವ ಚಿಹ್ನೆ.
ಉದಾ : ನನ್ನ ಊರು ಚೆಂದ.
* ಅಂಕಿ, ಅಕ್ಷರಗಳನ್ನು ಒಂದೊಂದಾಗಿ ಪಟ್ಟಿ ಮಾಡುವಾಗ ಅಂಕಿ, ಅಕ್ಷರದ ನಂತರ ಪೂರ್ಣವಿರಾಮ ಹಾಕಬೇಕು.
೧. ಅ. ೨. ಇ. ೩. ಉ.
* ಸಂಕ್ಷೇಪಗಳನ್ನು ಬಳಸುವಾಗ ಪ್ರತಿ ಸಂಕ್ಷೇಪಾಕ್ಷರದ ನಂತರ ಪೂರ್ಣವಿರಾಮ ಬಳಸುವುದು ವಾಡಿಕೆ.
ಕ.ಸಾ.ಪ. (ಕನ್ನಡ ಸಾಹಿತ್ಯ ಪರಿಷತ್ತು) ಸಾ.ಶ. (ಸಾಮಾನ್ಯ ಶಕ)
* ಕೆಲವು ಸಂಕ್ಷೇಪಗಳನ್ನು ಪೂರ್ಣವಿರಾಮವಿಲ್ಲದೇ ಬರೆಯುವುದೂ ರೂಢಿಯಲ್ಲಿದೆ.
ಕುವೆಂಪು - (ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ)
ಚಂಪಾ - (ಚಂದ್ರಶೇಖರ ಪಾಟೀಲ)
ವಿಸೀ - (ವಿ.ಸೀತಾರಾಮಯ್ಯ)
ಪಾಪ - (ಪಾಟೀಲ ಪುಟ್ಟಪ್ಪ)
ಆ) ಅಲ್ಪವಿರಾಮ (,)
* ಮಾತಿನಲ್ಲಿ ಧ್ವನಿವಿರಾಮ ಇರುವ ಕಡೆ, ವಾಕ್ಯಗಳಲ್ಲಿ ಅರ್ಥಸ್ಪಷ್ಟತೆಗಾಗಿ, ದೀರ್ಘ ವಾಕ್ಯದಲ್ಲಿ ಅರ್ಥದ ಗೊಂದಲವನ್ನು ಹೋಗಲಾಡಿಸಲು, ಸರಿಯಾದ ಅರ್ಥ ತಿಳಿಯುವಂತೆ ಮಾಡಲು ಬಳಸುವ ಚಿಹ್ನೆ.
ಉದಾ: ಬಲಮುರಿ ಪುಟ್ಟದಾದ, ಸುಂದರ, ಆಕರ್ಷಣೀಯ ಸ್ಥಳ.
* ಸಂಬೋಧನೆಯ ಅನಂತರ ಅಲ್ಪವಿರಾಮ ಬಳಸಬೇಕು.
ಮಾನ್ಯರೆ, ನಿಮ್ಮ ಪತ್ರ ತಲುಪಿದೆ.
ವಿದ್ಯಾರ್ಥಿ ವಿದ್ಯಾರ್ಥಿನಿಯರೇ, ಬರೆಯಲು ಸಿದ್ಧರಾಗಿರಿ.
ಇ) ಅರ್ಧ ವಿರಾಮ (;)
* ಇದು ಅಲ್ಪವಿರಾಮದಂತೆ ಬಳಕೆಯಾದರೂ ಕೆಲವು ವಿಶಿಷ್ಟ ಸಂದರ್ಭಗಳಲ್ಲಿ ಮಾತ್ರ ಬಳಕೆಯಾಗುತ್ತದೆ. ವಾಕ್ಯ ಅಥವಾ ವಾಕ್ಯಾಂಶ ದೊಡ್ಡ ವಾಕ್ಯವೊಂದರ ಭಾಗವಾಗಿದ್ದು, ಅರ್ಥಪೂರ್ಣತೆ ಹೊಂದಿ ಮುಂದುವರಿಯುವಂತಿದ್ದರೆ ಅಂತಹ ವಾಕ್ಯ ಅಥವಾ ವಾಕ್ಯಾಂಶದ ಅನಂತರ ಅರ್ಧವಿರಾಮ ಬಳಸುವುದು ರೂಢಿ.
ಉದಾ: ಸಾಲುಮರದ ತಿಮ್ಮಕ್ಕ ಮರಗಳನ್ನು ಬೆಳೆಸಿದರು; ಈಗ ಅವರಿಗೆ ವಯಸ್ಸಾಗಿದೆ; ಮರವನ್ನು ನೋಡುವುದರಲ್ಲಿ ಅವರಿಗೆ ಸಂತೋಷ; ಮುಂದೆ ಹೀಗೆ ಮರಗಳನ್ನು ನೆಡುವವರು ಯಾರು ಎಂಬುದೇ ಯೋಚನೆ; ಮುಂದಿನ ಜನಾಂಗ ಈ ಬಗ್ಗೆ ಚಿಂತಿಸಬೇಕು.
ಈ) ವಿವರಣ ಚಿಹ್ನೆ (:)
* ವಿಷಯಕ್ಕೆ ವಿವರಣೆ ನೀಡಲು ವಿವರಣ ಚಿಹ್ನೆ ಬಳಕೆಯಾಗುತ್ತದೆ. ಇದು ಪೂರ್ಣವಿರಾಮದಂತೆ ವಾಕ್ಯದ ಕೊನೆಯಲ್ಲಿ ಬಳಕೆಯಾಗುತ್ತದೆ.
ನಗರ ಜೀವನ ಹಾಳಾಗಲು ಕಾರಣಗಳು : ವಾಯು ಮಾಲಿನ್ಯ, ಶಬ್ದ ಮಾಲಿನ್ಯ, ಕಾನೂನುಬಾಹಿರವಾಗಿ ನಡೆಯುವ ನಿರ್ಮಾಣಗಳು ಮುಂತಾದವು.
* ಕೆಲವು ನಮೂನೆ, ವೈಯಕ್ತಿಕ ವಿವರ ಮುಂತಾದ ಬಳಕೆಯಲ್ಲಿ ವಿವರಣ ಚಿಹ್ನೆ ನೀಡಬೇಕು.
ಹೆಸರು :
ಸ್ಥಳ :
ಹುಟ್ಟಿದ ದಿನಾಂಕ :
ಸೂಚನೆ :
ಉ) ಪ್ರಶ್ನೆಸೂಚಕ (?)
* ಪ್ರಶ್ನಾರ್ಥಕ ವಾಕ್ಯದ ಕೊನೆಯಲ್ಲಿ ಬಳಸಬೇಕು.
ಉದಾ : ನೀವು ಯಾರು? ನಿಮ್ಮ ಹೆಸರೇನು?
* ಪ್ರಶ್ನಾರ್ಥಕ ವಾಕ್ಯದ ರೂಪದಲ್ಲಿಲ್ಲದಿದ್ದರೂ ಅರ್ಥದ ದೃಷ್ಟಿಯಿಂದ ಪ್ರಶ್ನೆ ಅಡಕವಾಗಿದ್ದರೆ ಅಲ್ಲಿ ಪ್ರಶ್ನೆಸೂಚಕ ಬಳಸಬಹುದು.
ಜನವರಿಯಲ್ಲಿ ಏಳನೆಯ ತರಗತಿ ಪರೀಕ್ಷೆ?
ಊ) ಭಾವಸೂಚಕ (!)
* ಸಂತೋಷ, ದುಃಖ, ಆಶ್ಚರ್ಯ, ಕೋಪ ಮುಂತಾದ ಭಾವನೆಗಳನ್ನು ಸೂಚಿಸುವ ಪದ ಅಥವಾ ವಾಕ್ಯದ ಕೊನೆಯಲ್ಲಿ ಭಾವಸೂಚಕ ಬಳಕೆಯಾಗುತ್ತದೆ
ಓ ಬನ್ನೀ, ಬನ್ನೀ !
ಹೌದಾ !
ಛೇ !
ಭಾರತದಲ್ಲಿ ಎಷ್ಟೊಂದು ಭಾಷೆಗಳು!
ಋ) ವಾಕ್ಯವೇಷ್ಟನ (‘ ’)
* ವಾಕ್ಯದಲ್ಲಿ ಯಾವುದಾದರೂ ಅಕ್ಷರ, ಪ್ರತ್ಯಯ, ಪದ, ಪದಪುಂಜವನ್ನು ವಿಶೇಷವಾಗಿ ಹೇಳಬೇಕಾದಾಗ ವಾಕ್ಯವೇಷ್ಟನ ಚಿಹ್ನೆ ಬಳಸಬೇಕು. ಉದಾ : ಶಾಲೆಯ ಮುಂಭಾಗ ರಸ್ತೆಯಲ್ಲಿ ‘ನಿಧಾನವಾಗಿ ಚಲಿಸಿ’ ಎಂಬ ಫಲಕವನ್ನು ಅಳವಡಿಸಬೇಕು.
* ಬರವಣಿಗೆಯಲ್ಲಿ ವಿಷಯದ ಭಾಗವಾಗಿ ಬರುವ ವಿಶಿಷ್ಟ ಪದ, ಪದಪುಂಜ, ಲೇಖನ, ಪುಸ್ತಕ, ಪತ್ರಿಕೆ ಮುಂತಾದುವುಗಳನ್ನು ವಾಕ್ಯವೇಷ್ಟನ ಚಿಹ್ನೆಯೊಳಗೆ ಬರೆಯಬೇಕು.
‘ನೆನಪಿನ ದೋಣಿಯಲ್ಲಿ’ ಎಂಬ ‘ಆತ್ಮಕಥನ’ದ ಕರ್ತೃ ಕುವೆಂಪುರವರು. ಇವರು ‘ಮಲೆಗಳಲ್ಲಿ ಮದುಮಗಳು’, ‘ಕಾನೂರು ಹೆಗ್ಗಡಿತಿ’ ಎಂಬ ಕಾದಂಬರಿಗಳನ್ನು ರಚಿಸಿದ್ದಾರೆ.
* ಬರವಣಿಗೆಯಲ್ಲಿ ಯಾವುದಾದರೂ ಭಾಗವೊಂದನ್ನು ಅಳವಡಿಸಿದಾಗ ಅದರ ಪ್ರತ್ಯೇಕತೆ ಸೂಚಿಸಲು ಆ ಭಾಗವನ್ನು ವಾಕ್ಯವೇಷ್ಟನ ಚಿಹ್ನೆಯೊಳಗೆ ಬರೆಯಬೇಕು.
‘ಭಾರತ ಜನನಿಯ ತನುಜಾತೆ’ಯಾದ ‘ಕರ್ನಾಟಕ ಮಾತೆ’ ಇಂದು ಭಾರತದ ಭೂಪಟದಲ್ಲಿ ತನ್ನದೇ ಆದ ವೈಶಿಷ್ಟ್ಯತೆಗಳಿಂದ ರಾರಾಜಿಸುತ್ತಿದ್ದಾಳೆ.
ಎ) ಉದ್ಧರಣ ಚಿಹ್ನೆ (“ ”)
* ನಮ್ಮ ಬರವಣಿಗೆಯಲ್ಲಿ ಮತ್ತೊಬ್ಬರ ಮಾತುಗಳನ್ನು ಬಳಸಿದಾಗ ಅವರ ಮಾತುಗಳನ್ನು ಎಂದು ಎಂಬ ಪದದ ಸಹಾಯದಿಂದ ಅವರ ಮಾತುಗಳನ್ನು ಉದ್ಧರಿಸಬಹುದು.
ದುಃಖ ಮತ್ತು ಸುಖದ ಬಗ್ಗೆ ಹೇಳುವಾಗ “ದುಃಖಕ್ಕೆ ಕಾರಣ ಸಿಕ್ಕಷ್ಟು ಬೇಗ ಸುಖಕ್ಕೆ ಕಾರಣ ಸಿಗುವುದಿಲ್ಲ” ಎಂದು ಸಾಹಿತಿ ಪಿ. ಲಂಕೇಶ್ ಅವರು ಹೇಳಿದ್ದಾರೆ.