CRECT Education

Class 7 Kannada Lesson 15: We Will Light the Kannada Lamp | KTBS Kannada First Language

Description

Learn the poem 'ಹಚ್ಚೇವು ಕನ್ನಡದ ದೀಪ' by D.S. Karki, line by line, with vocabulary and practice questions. Class 7 Kannada First Language (KTBS).

ಪದ್ಯ (poem) · ಡಿ.ಎಸ್. ಕರ್ಕಿ

ಪಠ್ಯFull text

ಹಚ್ಚೇವು ಕನ್ನಡದ ದೀಪ ಕರುನಾಡ ದೀಪ ಸಿರಿನುಡಿಯ ದೀಪ ಒಲವೆತ್ತಿ ತೋರುವಾ ದೀಪ । ಹಚ್ಚೇವು । ಬಹುದಿನಗಳಿಂದ ಮೈಮರೆವೆಯಿಂದ ಕೂಡಿರುವ ಕೊಳೆಯ ಕೊಚ್ಚೇವು ಎಲ್ಲೆಲ್ಲಿ ಕನ್ನಡದ ಕಂಪು ಸೂಸ- ಲಲ್ಲಲ್ಲಿ ಕರಣ ಚಾಚೇವು ನಡುನಾಡೆ ಇರಲಿ, ಗಡಿನಾಡೆ ಇರಲಿ ಕನ್ನಡದ ಕಳೆಯ ಕೆಚ್ಚೇವು ಮರೆತೇವು ಮರೆವ, ತೆರೆದೇವು ಮನವ, ಎರೆದೇವು ಒಲವ- ಹಿಡಿ ನೆನಪ ನರನರವನೆಲ್ಲ ಹುರಿಗೊಳಿಸಿ ಹೊಸೆದು ಹಚ್ಚೇವು ಕನ್ನಡದ ದೀಪ ಕಲ್ಪನೆಯ ಕಣ್ಣು ಹರಿವನಕ ಸಾಲು ದೀಪಗಳ ಬೆಳಕ ಬೀರೇವು ಹಚ್ಚಿರುವ ದೀಪದಲಿ ತಾಯ ರೂಪ ಅಚ್ಚಳಿಯದಂತೆ ತೋರೇವು ಒಡಲೊಡಲ ಕಿಚ್ಚಿನಾ ಕಿಡಿಗಳನ್ನು ಗಡಿನಾಡಿನಾಚೆ ತೂರೇವು ಹೊಮ್ಮಿರಲು ಪ್ರೀತಿ ಎಲ್ಲಿಯದು ಭೀತಿ? ನಾಡೊಲವೆ ನೀತಿ ಹಿಡಿ ನೆನಪ ಮನೆ ಮನೆಗಳಲ್ಲಿ ಮನಮನಗಳಲ್ಲಿ ಹಚ್ಚೇವು ಕನ್ನಡದ ದೀಪ ನಮ್ಮವರು ಗಳಿಸಿದಾ ಹೆಸರ ಉಳಿಸ- ಲೆಲ್ಲಾರು ಒಂದುಗೂಡೇವು ನಮ್ಮೆದೆಯ ಮಿಡಿಯುವೀ ಮಾತಿನಲ್ಲಿ ಮಾತೆಯನು ಪೂಜೆ ಮಾಡೇವು ನಮ್ಮುಸಿರು ತೀಡುವೀ ನಾಡಿನಲ್ಲಿ ಮಾಂಗಲ್ಯಗೀತ ಹಾಡೇವು ತೊರೆದೇವು ಮರುಳ, ಕಡೆದೇವು ಇರುಳ, ಪಡೆದೇವು ತಿರುಳ- ಹಿಡಿ ನೆನಪ ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ ಹಚ್ಚೇವು ಕನ್ನಡದ ದೀಪ

"ಕನ್ನಡದ ಕಸ್ತೂರಿಯನ್ನು ಹೊಸ ಉಸಿರಿಂದ ತೀಡಿ, ಹೊಸ ಶಕ್ತಿಯನ್ನಾಗಿ ಅದನ್ನು ಎಬ್ಬಿಸಿ, ಅದರ ಸುಗಂಧವನ್ನು ಎಲ್ಲ ದಿಕ್ಕಿಗೆ ಹರಡಬೇಕಾಗಿದೆ." — "We must nurture the musk of Kannada with new breath, awaken it as a new strength, and spread its fragrance in all directions." (A reminder to cherish and promote our own rich culture and language).

ಪದಗಳ ಅರ್ಥword meanings

KannadaPronunciationMeaning
ಹಚ್ಚೇವುಹಚ್ಚುವೆವು; ಕರುನಾಡು-ಕನ್ನಡನಾಡು; ಕೊಚ್ಚೇವು- ಕತ್ತರಿಸುತ್ತೇವೆ; ಸೂಸು-ಹರಡು, ಚಿಮುಕಿಸು; ಕರಣ-ಒಡಲು, ಶರೀರ; ಕಳೆ-ಕಾಂತಿ, ತೇಜಸ್ಸು, ಪ್ರಕಾಶ; ಎರೆ-ಹೊಯ್ಯು; ಹುರಿಗೊಳಿಸು- ಬಲಪಡಿಸು; ಕೆಚ್ಚು-ಕೂಡುವಿಕೆ, ಬೆಸುಗೆ, ಸೇರಿಸು; ಅಚ್ಚಳಿಯದೆ-ಅಂದಗೆಡದಂತೆ, ರೂಪುಗೆಡದಂತೆ; ಒಂದುಗೂಡೇವು-ಒಂದಾಗಿ ಸೇರುತ್ತೇವೆ; ತೀಡು-ಬೀಸು, ಹೊರಹೊಮ್ಮು; ಮಾಂಗಲ್ಯಗೀತ- ಮಂಗಳಕರವಾದ ಹಾಡು; ಮರುಳು- ಹುಚ್ಚು; ಕಡೆ-ನಿವಾರಿಸು; ಮೈಮರೆವು- ದೇಹದ ಅರಿವು ಇಲ್ಲವಾಗು, ಮೂರ್ಛೆ; ಮಾತೆ-ತಾಯಿ, ಜನನಿ; ಕೊಳೆ-ಹೊಲಸು; ಕಂಪು-ಸುಗಂಧ, ಪರಿಮಳ; ನಾಡು-ಜನವಸತಿಯುಳ್ಳ ಪ್ರದೇಶ, ರಾಜ್ಯ; ಹಿಡಿ-ಗ್ರಹಿಸು, ಹಿಡಿದಿಟ್ಟುಕೊ; ಹೊಸೆ-ಹುರಿ ಮಾಡು, ಹೆಣೆ: ಹರಿವು-ಪ್ರವಹಿಸು, ಹರಿಯುವಿಕೆ; ಬೀರು-ಹರಡು; ಅಚ್ಚಳಿ-ಅಂದಕೆಡು; ತೋರು- ಕಾಣುವಂತೆ ಮಾಡು; ಒಡಲು-ಹೊಟ್ಟೆ; ತೂರು-ಎಸೆ
** ಕೊಳೆಯ ಕೊಚ್ಚೇವುನಾಡು ನುಡಿಯ ಬಗೆಗಿನ ಮರೆವಿನಿಂದಾಗಿ ಮೂಡಿರುವ ತಿರಸ್ಕಾರದ ಭಾವನೆಯನ್ನು ದೂರಮಾಡುತ್ತೇವೆ
ಕರಣ ಚಾಚೇವುಕನ್ನಡ ಭಾಷೆಯ ಪರಿಮಳ ಬೀರುವಲ್ಲಿಗೆ ಹೋಗುತ್ತೇವೆ
ಕಳೆಯಾ ಕೆಚ್ಚೇವುಕನ್ನಡದ ಕಾಂತಿಯನ್ನು ಬೆಳಗುತ್ತೇವೆ
ಬೆಳಕ ಬೀರುಬೆಳಕನ್ನು ತೋರು
ಅಚ್ಚಳಿಯದಂತೆ ತೋರುಕೆಡದಂತೆ ತೋರಿಸುತ್ತೇವೆ
ಹಿಡಿನೆನಪಜ್ಞಾಪಕ ಇಟ್ಟುಕೊ, ನೆನಪಿಟ್ಟುಕೊ ಕಡೆದೇವು ಇರುಳಾ - ಕತ್ತಲನ್ನು (ಕೆಟ್ಟದ್ದನ್ನು) ನಾಶ ಮಾಡುತ್ತೇವೆ

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

  1. ೧. ಕನ್ನಡದ ಕಂಪನ್ನು ಸೂಸುವಲ್ಲಿ ಏನನ್ನು ಚಾಚುತ್ತೇವೆ?

    Answer

    ಕನ್ನಡದ ಕಂಪನ್ನು ಸೂಸುವಲ್ಲಿ ಕರಣವನ್ನು ಚಾಚುತ್ತೇವೆ.

  2. ೨. ಕಲ್ಪನೆಯ ಕಣ್ಣು ಹರಿವ ತನಕ ಯಾವ ದೀಪಗಳನ್ನು ಹಚ್ಚುತ್ತೇವೆ?

    Answer

    ಕಲ್ಪನೆಯ ಕಣ್ಣು ಹರಿವ ತನಕ ಸಾಲು ದೀಪಗಳ ಬೆಳಕನ್ನು ಬೀರುತ್ತೇವೆ.

  3. ೩. ನಮ್ಮವರು ಗಳಿಸಿದ ಹೆಸರುಳಿಸಲು ಎಲ್ಲರೂ ಏನು ಮಾಡುತ್ತೇವೆ?

    Answer

    ನಮ್ಮವರು ಗಳಿಸಿದ ಹೆಸರನ್ನು ಉಳಿಸಲು ಎಲ್ಲರೂ ಒಂದುಗೂಡುತ್ತೇವೆ.

  4. ೪. ನಮ್ಮುಸಿರು ತೀಡುವ ನಾಡಿನಲ್ಲಿ ಯಾವ ಗೀತೆ ಹಾಡುತ್ತೇವೆ?

    Answer

    ನಮ್ಮುಸಿರು ತೀಡುವ ನಾಡಿನಲ್ಲಿ ಮಾಂಗಲ್ಯಗೀತವನ್ನು ಹಾಡುತ್ತೇವೆ.

  5. ೫. ಕರುಳೆಂಬ ಕುಡಿಗೆ ಏನನ್ನು ಮುಡಿಸುತ್ತೇವೆ?

    Answer

    ಕರುಳೆಂಬ ಕುಡಿಗೆ ಮಿಂಚನ್ನು ಮುಡಿಸುತ್ತೇವೆ.

ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯದಲ್ಲಿ ಉತ್ತರಿಸಿ.

  1. ೧. ಕನ್ನಡಿಗರು ಯಾವ ದೀಪವನ್ನು ಹಚ್ಚುತ್ತಾರೆ?

    Answer

    ಕನ್ನಡಿಗರು ಕನ್ನಡದ ದೀಪವನ್ನು ಹಚ್ಚುತ್ತಾರೆ. ಅದು ಕರುನಾಡ ದೀಪ, ಸಿರಿನುಡಿಯ ದೀಪ ಮತ್ತು ಒಲವೆತ್ತಿ ತೋರುವ ದೀಪವಾಗಿದೆ.

  2. ೨. ಏನನ್ನು ಮರೆತು, ಏನನ್ನು ಎರೆದು, ಹೇಗೆ ಕನ್ನಡದ ದೀಪ ಹಚ್ಚುತ್ತಾರೆ?

    Answer

    ಕನ್ನಡಿಗರು ಮರೆವನ್ನು ಮರೆತು, ಮನವನ್ನು ತೆರೆದು, ಒಲವನ್ನು ಎರೆಯುತ್ತಾರೆ. ನರನರವನ್ನೆಲ್ಲ ಹುರಿಗೊಳಿಸಿ ಹೊಸೆದು ಕನ್ನಡದ ದೀಪವನ್ನು ಹಚ್ಚುತ್ತಾರೆ.

  3. ೩. ಕನ್ನಡ ಮಾತೆಯನ್ನು ಹೇಗೆ ಆದರಿಸುತ್ತಾರೆ?

    Answer

    ಹಚ್ಚಿರುವ ದೀಪದಲ್ಲಿ ತಾಯಿಯ ರೂಪವನ್ನು ಅಚ್ಚಳಿಯದಂತೆ ತೋರಿಸಿ ಕನ್ನಡ ಮಾತೆಯನ್ನು ಆದರಿಸುತ್ತಾರೆ. ನಮ್ಮೆದೆ ಮಿಡಿಯುವ ಮಾತಿನಲ್ಲಿ ಮಾತೆಯನ್ನು ಪೂಜೆ ಮಾಡುತ್ತಾರೆ.

ಇ. ಕೆಳಗಿನ ಸಾಲುಗಳಲ್ಲಿ ಖಾಲಿ ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿ.

  1. ೧. ಮೈಮರೆವೆಯಿಂದ ಕೂಡಿರುವ _______________

    Answer

    ಕೊಳೆಯ

  2. ೨. ಹಚ್ಚಿರುವ ದೀಪದಲಿ ತಾಯರೂಪ _______________

    Answer

    ಅಚ್ಚಳಿಯದಂತೆ

  3. ೩. ನಮ್ಮೆದೆಯ ಮಿಡಿಯುವೀ ಮಾತಿನಲ್ಲಿ ಮಾತೆಯನು _______________

    Answer

    ಪೂಜೆ ಮಾಡೇವು

  4. ೪. ಕರುಳೆಂಬ ಕುಡಿಗೆ _______________

    Answer

    ಮಿಂಚನ್ನೆ

ಈ. ‘ಹಚ್ಚೇವು’ ಎಂಬ ಪದಕ್ಕೆ ಸರಿಹೊಂದುವ, ಪದ್ಯದಲ್ಲಿ ಇರುವ ಪ್ರಾಸಪದಗಳನ್ನು ಬರೆಯಿರಿ.

ಉ. ‘ಬೀರೇವು’ ಎಂಬ ಪದದಂತೆ ಪದಮಧ್ಯದಲ್ಲಿ ‘ರ’ ಅಕ್ಷರ ಬರುವ ಪದಗಳನ್ನು ಪಟ್ಟಿ ಮಾಡಿ.

  1. **ಊ. ಕೈಗೆ ಕಾಲ್ಗೆ ಮೊಳೆಯ ಜಡಿಯಿ

  2. ಶಿಲುಬೆಗಿಕ್ಕಿ ಸಾಯಿ ಬಡಿಯಿ

  3. ಅವರ ತಪ್ಪ ಕ್ಷಮಿಸುಯೆಂದು

  4. ಮೊರೆಯನಿಟ್ಟ ತಂದೆಗೆಂದು

  5. ಕ್ರಿಸ್ತ ಸತ್ತು ಬದುಕಿದ

  6. ಯುಗವೊಂದನು ತೊಡಗಿದ- ಕಯ್ಯಾರ ಕಿಞ್ಞಣ್ಣ ರೈ (ಶತಮಾನದ ಗಾನ)

  7. ಈ ಪದ್ಯದಲ್ಲಿ ಬರುವ ಪ್ರಾಸ ಪದಗಳನ್ನು ಪಟ್ಟಿಮಾಡಿ.**

Interactive Lab