CRECT Education

Class 7 Kannada Lesson 16: The Song of Liberation | KTBS First Language

Description

Line-by-line poem lesson for Class 7 Kannada First Language: 'ಬಿಡುಗಡೆಯ ಹಾಡು' by Mudenuru Sanganna. Vocabulary, comprehension, and growth mindset.

ಪದ್ಯ (poem) · ಮುದೇನೂರು ಸಂಗಣ್ಣ (Mudenuru Sanganna)

ಪಠ್ಯFull text

ಹಂಗಿನರಮನೆಯ ಮುಳ್ಳಿನೀ ಪಂಜರದಲ್ಲಿ ರೆಕ್ಕೆಗಳ ಬಿಗಿ ಹಿಡಿದು ನರಳುತಿದೆ ಹಕ್ಕಿ ಕದ ಮುರಿದು ಹೊರಬಂದು ಬಾನಾಡಿಯಾಗುತ್ತ ವಿಹರಿಸಲಿ, ಹರ್ಷಿಸಲಿ ಹಿಗ್ಗಿನೊಳು ಸೊಕ್ಕಿ ಮಡುಗಟ್ಟಿ ನಿಲ್ಲಿಸಿದ ನೀರು ತಾ ಕೊಳೆಗೊಂಡು ಚಡಪಡಿಸುತಿದೆ ಮುನ್ನಡೆವ ಹಾದಿ ಹುಡುಕಿ ಹಸಿದ ನೆಲವನು ತಣಿಸಿ ಹಸಿರು ವಸನವನುಡಿಸಿ ಅಡೆತಡೆಯ ಗೋಡೆಗಳು ಕೆಡಹಲ್ಯೆ ದುಡುಕಿ ಸುತ್ತಿಟ್ಟು ಮೃಗರಾಜ ಹತ್ತಡಿಯ ಹದ್ದಿನೊಳು ಗೊಣಗುತಿಹ - “ಇನ್ನು ಈ ಬಂಧನ ಸಾಕು” ಕನಲಿ ಕೆಂಗಿಡಿಯುಗುಳಿ ಪಂಜರಗಳನೆತ್ತುತಿಹ- “ಸೆರೆಯಿಂದ ನಾ ಜಿಗಿದು ಸದರೇರಬೇಕು” ರವಿಕಿರಣಗಳ ಸೆರೆಯೊಳಡಗಿಸಿಹ ಕಾರಿರುಳೆ ಹೊರಗೆ ಬಿಡು, ದೂರ ಸರಿ ಹರಡಲೀ ಬೆಳಕು; ತೊಳೆದು ಹೋಗಲಿ ಸಕಲ ಮೈ ಮನದ ಕೊಳಕುಗಳು। ಒಳ - ಹೊರಗು ತಿಳಿನೀರ ಮಳೆ ಸುರಿಯಬೇಕು ಪ್ರಾಣ ಪಣಕಿಟ್ಟಿಹೆವು - ಸಿಡಿಲ ಮರಿಗಳು ನಾವು ಪ್ರಳಯ ರುದ್ರರೆ ಹೌದು - ಭಾರತಿಯ ಆಣೆ. ಇನ್ನು ನಿನಗುಳಿಗಾಲವಿಲ್ಲ - ನೀ ತೊಲಗು ಇನ್ನೆಲ್ಲ ನೀನೇಳು ಕಡಲುಗಳ ರಾಣಿ. ಜಾತಿಮತ ಪಂಥಗಳ ಹುಟ್ಟುರುಹಿ ಮನುಜಮತ ಮೆರೆಸುವೆವು ಮೂರು ಬಣ್ಣದ ಗುಡಿಯ ಹಿಡಿದು, ಸರ್ವರಿಗು ಸಮನಾವು, ಮನದುಂಬಿ ದನಿಯೆತ್ತಿ ಹಾಡುವೆವು ಬಿಡುಗಡೆಯ ಒಕ್ಕೊರಲ ಹಾಡು.

**ಚಿನ್ನುಡಿ** ‘ಬಂದ ಸುಖವ ಬಿಡಬೇಡ, ಬಾರದುದ ಬೇಕೆಂದು ಬಯಸಬೇಡ’ –ರತ್ನಾಕರವರ್ಣಿ (‘ಭರತೇಶ ವೈಭವ’ ಕೃತಿಯ ಕವಿಯ ಕಾಲ ಸುಮಾರು ೧೫೦೦) ("Do not give up the joy that has come, do not desire what has not come." — A reminder to appreciate the present and let go of unattainable desires.)

ಪದಗಳ ಅರ್ಥword meanings

KannadaPronunciationMeaning
ಹಂಗುಋಣ, ಆಶ್ರಯ; ಪಂಜರ - ಪಕ್ಷಿಗಳ ಬೋನು; ಬಾನಾಡಿ - ಪಕ್ಷಿ; ವಿಹರಿಸು - ಸಂಚರಿಸು; ಹರ್ಷ - ಹಿಗ್ಗು, ಸಂತೋಷ; ಸೊಕ್ಕಿ - ಗರ್ವ, ಜಂಭ; ಕೊಳೆಗೊಂಡು - ಮಾಲಿನ್ಯಗೊಂಡು, ತೃಪ್ತಿಗೊಂಡು; ತಣಿಸು - ತಂಪಾಗಿಸು, ತೃಪ್ತಿಗೊಳಿಸು; ವಸನ - ವಸ್ತ್ರ, ಬಟ್ಟೆ; ಹದ್ದು - ಎಲ್ಲೆ, ಗಡಿ; ಕನಲು - ಕೋಪಗೊಳ್ಳು, ಸಿಟ್ಟಾಗು; ಕೆಂಗಿಡಿ - ಉರಿಬೆಂಕಿ, ಕೆಂಪಾದ ಬೆಂಕಿ; ಸದರೇರು - ಅಂಗಳ ಸೇರು, ಬಂಧಮುಕ್ತವಾಗು; ಸೆರೆ - ಬಂಧನ; ಅಡಗು - ಕಾಣದಂತಾಗು; ಕಾರಿರುಳು - ದಟ್ಟವಾದ ಕತ್ತಲೆ; ಪಣ - ಒತ್ತೆಇಡು; ತೊಲಗು - ಬಿಟ್ಟುಹೋಗು, ಹೊರಟುಹೋಗು; ಗುಡಿ - ಬಾವುಟ, ಕೇತನ; ಒಕ್ಕೊರಲು - ಒಗ್ಗಟ್ಟು, ಒಂದೇ ಧ್ವನಿಯಾಗು

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ. ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

  1. ೧. ಪಂಜರದ ಹಕ್ಕಿ ಯಾವುದರ ಸಂಕೇತವಾಗಿದೆ?

    Answer

    ಪಂಜರದ ಹಕ್ಕಿ ಬಂಧನದಲ್ಲಿ ನರಳುವವರ ಸಂಕೇತವಾಗಿದೆ.

  2. ೨. ಹಂಗಿನ ಅರಮನೆಯಲ್ಲಿ ಹಕ್ಕಿ ಹೇಗೆ ನರಳುತ್ತಿದೆ?

    Answer

    ಹಂಗಿನ ಅರಮನೆಯ ಪಂಜರದಲ್ಲಿ ಹಕ್ಕಿ ರೆಕ್ಕೆಗಳ ಬಿಗಿ ಹಿಡಿದು ನರಳುತ್ತಿದೆ.

  3. ೩. ಮೃಗರಾಜ ಏನೆಂದು ಗೊಣಗುತ್ತಿದೆ?

    Answer

    ಮೃಗರಾಜ ಇನ್ನು ಈ ಬಂಧನ ಸಾಕು ಎಂದು ಗೊಣಗುತ್ತಿದೆ.

  4. ೪. ಯಾವುದು ರವಿಕಿರಣಗಳನ್ನು ಸೆರೆಯೊಳಗೆ ಅಡಗಿಸಿಟ್ಟುಕೊಂಡಿದೆ?

    Answer

    ಕಾರಿರುಳು ರವಿಕಿರಣಗಳನ್ನು ಸೆರೆಯೊಳಗೆ ಅಡಗಿಸಿಟ್ಟುಕೊಂಡಿದೆ.

  5. ೫. ನಮ್ಮ ಗುಡಿಯು (ಬಾವುಟ) ಎಷ್ಟು ಬಣ್ಣಗಳನ್ನು ಹೊಂದಿದೆ?

    Answer

    ನಮ್ಮ ಗುಡಿಯು ಮೂರು ಬಣ್ಣಗಳನ್ನು ಹೊಂದಿದೆ.

ಆ. ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.

  1. ೧. ಪಂಜರದಲ್ಲಿ ನರಳುತ್ತಿರುವ ಹಕ್ಕಿ ಹರ್ಷದಲಿ ವಿಹರಿಸಲು ಏನು ಮಾಡಬೇಕು?

    Answer

    ಪಂಜರದ ಕದವನ್ನು ಮುರಿದು ಹೊರಗೆ ಬರಬೇಕು. ಆಗ ಹಕ್ಕಿ ಬಾನಾಡಿಯಾಗಿ ಹರ್ಷದಿಂದ ವಿಹರಿಸಬಹುದು.

  2. ೨. ತಿಳಿನೀರ ಮಳೆ ಏಕೆ ಸುರಿಯಬೇಕು?

    Answer

    ತಿಳಿನೀರ ಮಳೆಯು ಮೈ ಮತ್ತು ಮನದ ಸಕಲ ಕೊಳಕುಗಳನ್ನು ತೊಳೆಯಲು ಸುರಿಯಬೇಕು. ಒಳ-ಹೊರಗು ಶುದ್ಧವಾಗಲು ಅದು ಅಗತ್ಯ.

  3. ೩. ಕಡಲುಗಳ ರಾಣಿಗೆ ಇನ್ನು ಉಳಿಗಾಲವಿಲ್ಲವೇಕೆ?

    Answer

    ನಾವು ಪ್ರಾಣ ಪಣಕಿಟ್ಟ ಸಿಡಿಲ ಮರಿಗಳು, ಪ್ರಳಯ ರುದ್ರರು ಎಂಬುದು ಭಾರತಿಯ ಆಣೆ. ಆದ್ದರಿಂದ ಕಡಲುಗಳ ರಾಣಿಗೆ ಇನ್ನು ಉಳಿಗಾಲವಿಲ್ಲ.

  4. ೪. ಒಕ್ಕೊರಲ ಹಾಡನ್ನು ನಾವು ಹೇಗೆ ಹಾಡಬೇಕೆಂದು ಕವಿ ಬಯಸುತ್ತಾನೆ?

    Answer

    ಕವಿಯು ಜಾತಿ, ಮತ, ಪಂಥಗಳನ್ನು ಹುಟ್ಟುರುಹಿ ಮನುಜಮತವನ್ನು ಮೆರೆಸಬೇಕೆಂದು ಬಯಸುತ್ತಾನೆ. ಸರ್ವರಿಗೂ ಸಮನಾಗಿ, ಮನದುಂಬಿ ದನಿಯೆತ್ತಿ ಬಿಡುಗಡೆಯ ಒಕ್ಕೊರಲ ಹಾಡನ್ನು ಹಾಡಬೇಕೆಂದು ಬಯಸುತ್ತಾನೆ.

ಇ. ಖಾಲಿಬಿಟ್ಟ ಜಾಗವನ್ನು ಸೂಕ್ತ ಪದಗಳಿಂದ ತುಂಬಿರಿ.

  1. ೧. ಚಡಪಡಿಸುತಿದೆ _________________ ಹಾದಿ ಹುಡುಕಿ.

    Answer

    ಚಡಪಡಿಸುತಿದೆ ಮುನ್ನಡೆವ ಹಾದಿ ಹುಡುಕಿ.

  2. ೨. ಸೆರೆಯಿಂದ ನಾ _________________ ಸದರೇರಬೇಕು.

    Answer

    ಸೆರೆಯಿಂದ ನಾ ಜಿಗಿದು ಸದರೇರಬೇಕು.

  3. ೩. ಇನ್ನೆಲ್ಲ ನೀನೇಳು _________________ ರಾಣಿ.

    Answer

    ಇನ್ನೆಲ್ಲ ನೀನೇಳು ಕಡಲುಗಳ ರಾಣಿ.

  4. ೪. ಹಾಡುವೆವು ಬಿಡುಗಡೆಯ _________________ ಹಾಡು.

    Answer

    ಹಾಡುವೆವು ಬಿಡುಗಡೆಯ ಒಕ್ಕೊರಲ ಹಾಡು.

Interactive Lab

ಹಂಗುಋಣ, ಆಶ್ರಯ; ಪಂಜರ - ಪಕ್ಷಿಗಳ ಬೋನು; ಬಾನಾಡಿ - ಪಕ್ಷಿ; ವಿಹರಿಸು - ಸಂಚರಿಸು; ಹರ್ಷ - ಹಿಗ್ಗು, ಸಂತೋಷ; ಸೊಕ್ಕಿ - ಗರ್ವ, ಜಂಭ; ಕೊಳೆಗೊಂಡು - ಮಾಲಿನ್ಯಗೊಂಡು, ತೃಪ್ತಿಗೊಂಡು; ತಣಿಸು - ತಂಪಾಗಿಸು, ತೃಪ್ತಿಗೊಳಿಸು; ವಸನ - ವಸ್ತ್ರ, ಬಟ್ಟೆ; ಹದ್ದು - ಎಲ್ಲೆ, ಗಡಿ; ಕನಲು - ಕೋಪಗೊಳ್ಳು, ಸಿಟ್ಟಾಗು; ಕೆಂಗಿಡಿ - ಉರಿಬೆಂಕಿ, ಕೆಂಪಾದ ಬೆಂಕಿ; ಸದರೇರು - ಅಂಗಳ ಸೇರು, ಬಂಧಮುಕ್ತವಾಗು; ಸೆರೆ - ಬಂಧನ; ಅಡಗು - ಕಾಣದಂತಾಗು; ಕಾರಿರುಳು - ದಟ್ಟವಾದ ಕತ್ತಲೆ; ಪಣ - ಒತ್ತೆಇಡು; ತೊಲಗು - ಬಿಟ್ಟುಹೋಗು, ಹೊರಟುಹೋಗು; ಗುಡಿ - ಬಾವುಟ, ಕೇತನ; ಒಕ್ಕೊರಲು - ಒಗ್ಗಟ್ಟು, ಒಂದೇ ಧ್ವನಿಯಾಗು