ಪದ್ಯ · ಮಧುರಚೆನ್ನ
ಪಠ್ಯFull text
ಅಭ್ಯಾಸexercises from the textbook
Model answers — a guide, not the only correct wording. Check with your teacher.
ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ.
೧. 'ರಮ್ಯಸೃಷ್ಟಿ' ಕವಿತೆಯಲ್ಲಿ ಯಾವ ಸಂದರ್ಭವನ್ನು ವರ್ಣಿಸಲಾಗಿದೆ?
Answerರಮ್ಯಸೃಷ್ಟಿ ಕವಿತೆಯಲ್ಲಿ ಬಾನು ಭೂಮಿ ಅಪ್ಪಿದ ಸುಂದರ ಸನ್ನಿವೇಶವನ್ನು ಮತ್ತು ಸೂರ್ಯೋದಯದ ಪ್ರಕೃತಿಯ ಸೌಂದರ್ಯವನ್ನು ವರ್ಣಿಸಲಾಗಿದೆ.
೨. ಸೂರ್ಯ ಎಲ್ಲಿ ವಿರಾಜಿಸುತ್ತಿದ್ದಾನೆ?
Answerಸೂರ್ಯನು ನಭಾಂಗಣದಲ್ಲಿ ವಿರಾಜಿಸುತ್ತಿದ್ದಾನೆ.
೩. ಸೂರ್ಯೋದಯದ ಪ್ರಕೃತಿಸೌಂದರ್ಯ ಹೇಗಿದೆ?
Answerಸೂರ್ಯೋದಯದ ಪ್ರಕೃತಿಸೌಂದರ್ಯವು ಹೊನ್ನ ಬಿಸಿಲು ಸೂಸುತ್ತಾ, ನೆಲದ ಮೇಲೆ ರನ್ನ ಹಾಸಿದಂತೆ, ಗಿಡಮರಗಳು ಹಸಿರಾಗಿ, ಹುಲ್ಲು ಹಚ್ಚಹಸಿರಾಗಿ, ಹಾಲು ಮೋಡಗಳು ನೀಲಗಗನದಲ್ಲಿ ಹರಡಿ ಬಹಳ ಸುಂದರವಾಗಿದೆ.
೪. ಜೀವರಾಶಿಯ ವರ್ಣನೆ 'ರಮ್ಯಸೃಷ್ಟಿ' ಕವನದಲ್ಲಿ ಹೇಗೆ ಮೂಡಿಬಂದಿದೆ?
Answerಜೀವರಾಶಿಯ ವರ್ಣನೆಯಲ್ಲಿ ಮೇಕೆ, ತೆರೆದ ಹಕ್ಕಿ, ಎತ್ತು, ಎಮ್ಮೆ, ಆಡು, ಆವುಗಳು ಚಿತ್ತಗೊಟ್ಟು ಮೇಯುವ ಠೀವು ಮತ್ತು ಹೆಣ್ಣು ಗಂಡು ಕೂಸು ಕುನ್ನಿಗಳ ಚೆಲುವು ಮೂಡಿಬಂದಿದೆ.
೫. 'ರಮ್ಯಸೃಷ್ಟಿ' ಪದ್ಯದಲ್ಲಿ ಯಾವ ಯಾವ ಪ್ರಾಣಿಗಳು ಮೇಯುವ ಠೀವಿಯನ್ನು ವರ್ಣಿಸಲಾಗಿದೆ?
Answerರಮ್ಯಸೃಷ್ಟಿ ಪದ್ಯದಲ್ಲಿ ಮೇಕೆ, ಹಕ್ಕಿ, ಎತ್ತು, ಎಮ್ಮೆ, ಆಡು ಮತ್ತು ಆವುಗಳ ಮೇಯುವ ಠೀವಿಯನ್ನು ವರ್ಣಿಸಲಾಗಿದೆ.
೬. ಯಾವುದರ ಚೆಲುವಿಗೆ ಮಿಗಿಲಿಲ್ಲದಂತಾಗಿದೆ?
Answerಹೆಣ್ಣು ಗಂಡು ಕೂಸು ಕುನ್ನಿ, ದಿನ್ನಿ ದಿಬ್ಬ ಹಾದಿ ಬೀದಿ ಸೇರಿದಂತೆ ಇಡೀ ಸೃಷ್ಟಿಯ ಚೆಲುವಿಗೆ ಮಿಗಿಲಿಲ್ಲದಂತಾಗಿದೆ.