CRECT Education

Class 7 Kannada Lesson 11: The Ant and the Grasshopper | KTBS Second Language – Practice & Play

Description

Comprehension quiz and language games for Lesson 11, The Ant and the Grasshopper, from the Class 7 Second Language textbook.

ಗದ್ಯ (prose) · ಸಂಪಾದಿತ

ಪಠ್ಯFull text

ವಸಂತ ಋತು ಎಲ್ಲೆಡೆ. ಮರಗಿಡಗಳಲ್ಲಿ ಹೊಸ ಚಿಗುರು ಹೊಮ್ಮಿದೆ. ಬಣ್ಣ ಬಣ್ಣದ ಹೂವುಗಳು ಅರಳಿವೆ. ವನಗಳಲ್ಲಿನ ಸೊಬಗು ಕಣ್ಮನಗಳನ್ನು ಸೆಳೆದಿದೆ. ಮಿಡತೆಯೊಂದು ಅತ್ತಿತ್ತ ಸುತ್ತಾಡುತ್ತ ಕಾಲಕಳೆಯುತ್ತಿದೆ. ಒಂದು ದಿನ ಇರುವೆಯೊಂದು ಬಾಯಲ್ಲಿ ಕಾಳು ಕಚ್ಚಿಕೊಂಡು ಹೋಗುತ್ತಿತ್ತು. ಅದನ್ನು ಕಂಡ ಮಿಡತೆ ವನವ ಸುತ್ತಿ ಬರಲು ಜೊತೆಗೆ ಕರೆಯಿತು. ನಾನು ಆಹಾರ ಸಂಗ್ರಹಿಸಬೇಕಿದೆ. ಈಗ ನಿನ್ನೊಂದಿಗೆ ಬರಲು ನನಗೆ ಸಮಯವಿಲ್ಲವೆಂದು ಇರುವೆ ಹೇಳಿತು. ಇರುವೆ ಮಾತಿಗೆ ನಕ್ಕು ಮಿಡತೆ ಹಾರಿಹೋಯಿತು. ಮಳೆಗಾಲದ ಒಂದು ದಿನ ಮಿಡತೆಗೆ ಆಹಾರ ಸಿಗದೇ ಹೋಯಿತು. ಹಸಿವನ್ನು ತಾಳಲಾರದೆ ಇರುವೆಯ ಬಳಿ ಕೇಳಿತು, "ಗೆಳೆಯಾ ನನಗೂ ಸ್ವಲ್ಪ ಆಹಾರ ಕೊಡುವೆಯಾ" ಎಂದು. "ವಸಂತ ಋತುವಿನಲ್ಲಿ ನಾನು ಕಷ್ಟಪಟ್ಟು ಆಹಾರ ಸಂಗ್ರಹ ಮಾಡಿದ್ದೇನೆ. ನೀನು ಆಗ ಸುತ್ತಾಡುತ್ತಾ ಕಾಲಹರಣ ಮಾಡಿದೆ. ಏನು ಮಾಡಲಿ ನಿನಗೆ ಆಹಾರ ಕೊಟ್ಟರೆ ನನ್ನ ಪರಿವಾರಕ್ಕೆ ಕೊರತೆಯಾಗುತ್ತದಲ್ಲಾ" ಎಂದಿತು ಇರುವೆ. ಇರುವೆಯ ಮಾತಿನಿಂದ ಮಿಡತೆಗೆ ತನ್ನ ತಪ್ಪಿನ ಅರಿವಾಯಿತು. "ಗೆಳೆಯಾ ನಿನ್ನಿಂದ ನಾನು ಪಾಠ ಕಲಿತಿರುವೆ" ಎಂದು ವಿನಯದಿಂದ ಹೇಳಿತು. ಮಿಡತೆಯಲ್ಲಾದ ಪರಿವರ್ತನೆಗೆ ಇರುವೆ ಮೆಚ್ಚುಗೆ ವ್ಯಕ್ತಪಡಿಸಿತು. ತನ್ನ ಆಹಾರವನ್ನು ಮಿಡತೆಯೊಂದಿಗೆ ಹಂಚಿ ತಿಂದಿತು.

ಅಭ್ಯಾಸexercises from the textbook

Model answers — a guide, not the only correct wording. Check with your teacher.

ಅ) ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಹೇಳಿ, ಬರೆಯಿರಿ.

  1. ೧. ವಸಂತ ಋತು ಕಣ್ಮನಗಳಿಗೆ ಸೊಬಗನ್ನು ತರುತ್ತಿತ್ತು ಏಕೆ?

    Answer

    ವಸಂತ ಋತುವಿನಲ್ಲಿ ಮರಗಿಡಗಳಲ್ಲಿ ಹೊಸ ಚಿಗುರು ಹೊಮ್ಮಿ, ಬಣ್ಣ ಬಣ್ಣದ ಹೂವುಗಳು ಅರಳಿ ವನಗಳ ಸೊಬಗು ಕಣ್ಮನಗಳನ್ನು ಸೆಳೆಯುತ್ತಿದ್ದುದರಿಂದ ವಸಂತ ಋತು ಕಣ್ಮನಗಳಿಗೆ ಸೊಬಗನ್ನು ತರುತ್ತಿತ್ತು.

  2. ೨. ವಸಂತ ಕಾಲದಲ್ಲಿ ಮಿಡತೆ ಯಾವ ರೀತಿ ಕಾಲ ಕಳೆಯುತ್ತಿತ್ತು?

    Answer

    ವಸಂತ ಕಾಲದಲ್ಲಿ ಮಿಡತೆ ಅತ್ತಿತ್ತ ಸುತ್ತಾಡುತ್ತಾ ಕಾಲ ಕಳೆಯುತ್ತಿತ್ತು.

  3. ೩. ವಸಂತ ಕಾಲದಲ್ಲಿ ಇರುವೆ ಯಾವ ಕೆಲಸದಲ್ಲಿ ನಿರತವಾಗಿತ್ತು?

    Answer

    ವಸಂತ ಕಾಲದಲ್ಲಿ ಇರುವೆ ಆಹಾರ ಸಂಗ್ರಹಿಸುವ ಕೆಲಸದಲ್ಲಿ ನಿರತವಾಗಿತ್ತು.

  4. ೪. ಮಳೆಗಾಲದಲ್ಲಿ ಮಿಡತೆಗೆ ಯಾವ ತೊಂದರೆ ಉಂಟಾಯಿತು?

    Answer

    ಮಳೆಗಾಲದಲ್ಲಿ ಮಿಡತೆಗೆ ಆಹಾರ ಸಿಗದೇ ಹೋಯಿತು, ಹಸಿವನ್ನು ತಾಳಲಾರದಂತಹ ತೊಂದರೆ ಉಂಟಾಯಿತು.

  5. ೫. ಇರುವೆ ಮಿಡತೆಗೆ ಏನೆಂದು ಬುದ್ದಿ ಹೇಳಿತು?

    Answer

    ಇರುವೆ ಮಿಡತೆಗೆ, 'ವಸಂತ ಋತುವಿನಲ್ಲಿ ನಾನು ಕಷ್ಟಪಟ್ಟು ಆಹಾರ ಸಂಗ್ರಹ ಮಾಡಿದ್ದೇನೆ, ನೀನು ಆಗ ಸುತ್ತಾಡುತ್ತಾ ಕಾಲಹರಣ ಮಾಡಿದೆ' ಎಂದು ಬುದ್ಧಿ ಹೇಳಿತು.

  6. ೬. ಮಿಡತೆ ಮತ್ತು ಇರುವೆ ಇವುಗಳಲ್ಲಿ ನೀವು ಯಾವುದನ್ನು ಮೆಚ್ಚುವಿರಿ? ಏಕೆ?

    Answer

    ನಾನು ಇರುವೆಯನ್ನು ಮೆಚ್ಚುವೆ. ಏಕೆಂದರೆ ಅದು ವಸಂತ ಕಾಲದಲ್ಲಿ ಕಷ್ಟಪಟ್ಟು ಆಹಾರ ಸಂಗ್ರಹಿಸಿ, ನಂತರ ತನ್ನ ತಪ್ಪಿನ ಅರಿವಾದ ಮಿಡತೆಯೊಂದಿಗೆ ಆಹಾರವನ್ನು ಹಂಚಿಕೊಂಡಿತು.

  7. * * * * *

Interactive Lab