ಗದ್ಯ (prose) · ಚಿದ್ರೆ ಶಂಕರಯ್ಯಸ್ವಾಮಿ
ಪಠ್ಯFull text
ಅಭ್ಯಾಸexercises from the textbook
Model answers — a guide, not the only correct wording. Check with your teacher.
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.
೧. ಅಥರ್ಗಾ ಗ್ರಾಮವು ಸಾಕ್ಷರತೆಯ ದೃಷ್ಟಿಯಿಂದ ಮೊದಲು ಹೇಗಿತ್ತು?
Answerಅಥರ್ಗಾ ಗ್ರಾಮವು ಸಾಕ್ಷರತೆಯ ದೃಷ್ಟಿಯಿಂದ ಮೊದಲು ಅನಕ್ಷರತೆಯ ತವರಾಗಿತ್ತು.
೨. ರೇವಣಸಿದ್ದಪ್ಪ ಮಾಸ್ತರರು ಅಥರ್ಗಾ ಗ್ರಾಮವನ್ನು ಹೇಗೆ ಸುಧಾರಣೆ ಮಾಡಿದರು?
Answerರೇವಣಸಿದ್ದಪ್ಪ ಮಾಸ್ತರರು ಜನರನ್ನು ತಿದ್ದಿ, ದುಡಿಯಲು ಶಕ್ತಿ ನೀಡಿ, ಗ್ರಾಮಸುಧಾರಣೆ, ಯುವಕರಿಗೆ ಮಾರ್ಗದರ್ಶನ, ಕೃಷಿಯಲ್ಲಿ ಉತ್ತೇಜನ, ಮೂಢನಂಬಿಕೆ ವಿರುದ್ಧ ತಿಳಿವಳಿಕೆ, ಗುಡಿ ಕೈಗಾರಿಕೆ, ಹೆಣ್ಣುಮಕ್ಕಳ ಸಮಾನತೆ ಮತ್ತು ಮದ್ಯವ್ಯಸನಿಗಳನ್ನು ವ್ಯಸನಮುಕ್ತರನ್ನಾಗಿಸುವ ಮೂಲಕ ಅಥರ್ಗಾ ಗ್ರಾಮವನ್ನು ಸುಧಾರಣೆ ಮಾಡಿದರು.
೩. ಮಾಸ್ತರರನ್ನು ಊರಿನ ಜನ ಹೇಗೆ ಆರಾಧಿಸುತ್ತಾರೆ?
Answerಊರಿನ ಜನರು ಮಾಸ್ತರರಿಗೆ ಗುಡಿ ಕಟ್ಟಿ ಪ್ರತಿಮೆ ಸ್ಥಾಪಿಸಿ ನಿತ್ಯ ಎರಡು ಬಾರಿ ಪೂಜೆ ಮಾಡುತ್ತಾರೆ; ಪ್ರತಿ ವರ್ಷ ಶಿವರಾತ್ರಿಯಂದು ಜಾತ್ರೆ ನಡೆಸಿ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡುತ್ತಾರೆ ಮತ್ತು ರಾತ್ರಿ ಭಜನೆ-ಕೀರ್ತನೆ ನಡೆಸುತ್ತಾರೆ.
೪. 'ನಾನು ಶಿಕ್ಷಕನಾದರೆ' ವಿಷಯ ಕುರಿತು ತರಗತಿಯಲ್ಲಿ ನಿಮ್ಮ ಚಿಂತನೆಗಳನ್ನು ಹಂಚಿಕೊಳ್ಳಿರಿ.