ಪದ್ಯ (poem) · ಸತ್ಯಾರ್ಥಿ
ಪಠ್ಯFull text
ಅಭ್ಯಾಸexercises from the textbook
Model answers — a guide, not the only correct wording. Check with your teacher.
I. ಪದಗಳ ಅರ್ಥ ತಿಳಿಯಿರಿ :
ಅನ್ನ - ಆಹಾರ
ತ್ಯಾಗಿ - ತ್ಯಾಗ ಮಾಡುವವನು; ವಿರಾಗಿ.
ದಾತ - ದಾನಿ; ಒಡೆಯ; ಕೊಡುವವ.
ನಾಡ - ನಾಡಿನ; ಪ್ರಾಂತದ.
ಹೊಲ - ಜಮೀನು; ಕೃಷಿ ಭೂಮಿ.
ಅನ್ನದಾತ - ರೈತ
ದವಸಧಾನ್ಯ - ಆಹಾರ ಪದಾರ್ಥಗಳು
ದುಡಿ - ಕೆಲಸಮಾಡು; ಶ್ರಮಪಡು.
ಸಹಿಸು - ತಾಳಿಕೊಳ್ಳು; ಸೈರಿಸು.
ಬೇಗೆ - ಉರಿ; ಉಷ್ಣತೆ.
ಟಿಪ್ಪಣಿ :
ಯೋಗಿ - ನಿಯಮಬದ್ಧವಾಗಿ ಕಾರ್ಯನಿರ್ವಹಿಸುತ್ತ ಜೀವನ ನಡೆಸುವವ, ಯೋಗದಲ್ಲಿ ನಿರತನಾದವ.
ಹಿಗ್ಗುಕುಗ್ಗು - ಏರುಪೇರು, ಉತ್ಸಾಹ ನಿರಾಸೆ, ಕೆಲವೊಮ್ಮೆ ಆನಂದ, ಮಗದೊಮ್ಮೆ ದುಃಖ.
ಗುಡುಗು - ಮಳೆಗಾಲದಲ್ಲಿ ಮೋಡಗಳ ಘರ್ಷಣೆಯಿಂದ ಉಂಟಾಗುವ ಶಬ್ದ.
II. ಪ್ರಶ್ನೆಗಳು :
ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.
೧. ಅನ್ನದಾತ ಎಂದು ಯಾರನ್ನು ಕರೆಯಲಾಗುತ್ತದೆ?
Answerಅನ್ನದಾತ ಎಂದು ರೈತನನ್ನು ಕರೆಯಲಾಗುತ್ತದೆ.
೨. ಅನ್ನದಾತ ಎಲ್ಲಿ ದುಡಿಯುವನು?
Answerಅನ್ನದಾತನು ಹೊಲದಲ್ಲಿ ದುಡಿಯುವನು.
೩. ಅನ್ನದಾತನು ದವಸಧಾನ್ಯಗಳನ್ನು ಯಾರಿಗಾಗಿ ಬೆಳೆಯುವನು?
Answerಅನ್ನದಾತನು ನಾಡ ಜನರಿಗಾಗಿ ದವಸಧಾನ್ಯಗಳನ್ನು ಬೆಳೆಯುವನು.
೪. ಅನ್ನದಾತನು ಯಾವ ಕಷ್ಟಗಳನ್ನು ಸಹಿಸುತ್ತಾನೆ?
೫. ರೈತನು ದೇವರಿಂದ ಪಡೆದ ವರ ಯಾವುದು?
೬. ಚೆನ್ನಬಸಪ್ಪ ಹೊಸಮನಿಯವರ ಕಾವ್ಯನಾಮವೇನು?
ಆ) ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.
೧. ಅನ್ನದಾತನು ನಾಡಿಗೆ ಹೇಗೆ ಸಹಕಾರಿಯಾಗಿದ್ದಾನೆ?
೨. ರೈತನು ಎಂತಹ ಕಷ್ಟಗಳನ್ನು ಸಹಿಸಿಕೊಂಡು ದುಡಿಯುತ್ತಾನೆ?
೩. ರೈತನನ್ನು ಯೋಗಿ ತ್ಯಾಗಿ ಎಂದು ಏಕೆ ಕರೆಯಲಾಗುತ್ತದೆ?
೪. ಎತ್ತುಗಳ ಜೊತೆ ರೈತ ಯಾವ ರೀತಿಯ ಸಂಬಂಧ ಹೊಂದಿದ್ದಾನೆ?
ಇ) ಈ ಕೆಳಗಿನ ಪ್ರಶ್ನೆಗಳಿಗೆ ಆರು-ಏಳು ವಾಕ್ಯಗಳಲ್ಲಿ ಉತ್ತರಿಸಿರಿ.
೧. ಕವಿ ರೈತನ ದುಡಿಮೆಯನ್ನು ಯಾವ ರೀತಿ ವರ್ಣಿಸಿದ್ದಾರೆ?
೨. ರೈತನು ಬೆಳೆಯುವ ಬೆಳೆಗಳನ್ನು ಪಟ್ಟಿ ಮಾಡಿ.
III. ಭಾಷಾಭ್ಯಾಸ :
ಅ) ‘ಅ’ ಪಟ್ಟಿಗೆ ಸರಿ ಹೊಂದುವ ಪದವನ್ನು ‘ಬ’ ಪಟ್ಟಿಯಿಂದ ಆರಿಸಿ ಬರೆಯಿರಿ.
‘ಅ’ ಪಟ್ಟಿ
೧. ಅನ್ನದಾತ
೨. ಮಳೆ
೩. ಚಳಿ
೪. ಹಿಗ್ಗು
೫. ದವಸ
‘ಬ’ ಪಟ್ಟಿ
ಅ) ಧಾನ್ಯ __________
ಆ) ಕುಗ್ಗು __________
ಇ) ರೈತ __________
ಈ) ಗುಡುಗು __________
ಉ) ನಡುಗು __________
ಆ) ಗುಂಪಿಗೆ ಸೇರದಿರುವ ಪದವನ್ನು ಆರಿಸಿ ಬರೆಯಿರಿ.
೧. ಚಳಿಗಾಲ, ಮಳೆಗಾಲ, ನಡುಗಾಲ, ಬೇಸಿಗೆಕಾಲ. __________
೨. ಎತ್ತು, ಎಮ್ಮೆ, ಹೋರಿ, ನಂದಿ. __________
೩. ಬೆಟ್ಟ, ಹೊಲ, ತೋಟ, ಗದ್ದೆ. __________
೪. ಗೆಳೆಯ, ಸ್ನೇಹಿತ, ಮಿತ್ರ, ಶತ್ರು. __________
೫. ರೈತ, ಅನ್ನದಾತ, ಕೃಷಿಕ, ವ್ಯಾಪಾರಿ. __________
ಇ) ಕೃಷಿ ಸಂಬಂಧಿತ ಆರು ಪದಗಳನ್ನು ಬರೆಯಿರಿ.
ಮಾದರಿ : ಎತ್ತು
೧. _________________
೨. _________________
೩. _________________
೪. _________________
೫. _________________
೬. _________________
ಈ) ‘ಅನ್ನದಾತ’ ಪದ್ಯದಲ್ಲಿ ಬಳಕೆಯಾಗಿರುವ ಪ್ರಾಸ ಪದಗಳನ್ನು ಆಯ್ದು ಬರೆಯಿರಿ.
ಮಾದರಿ : ದುಡಿವನು - ಬೆಳೆವನು
೧. _________________ _________________
೨. _________________ _________________
೩. _________________ _________________
ಉ) ಇಲ್ಲಿರುವ ಪದಗಳನ್ನು ನಿಮ್ಮ ಸ್ವಂತ ವಾಕ್ಯಗಳಲ್ಲಿ ಬಳಸಿ ಬರೆಯಿರಿ.
೧. ದೊಡ್ಡಮನಸು : __________________________________________________
Model sentenceದೊಡ್ಡಮನಸು: ನಮ್ಮ ಶಿಕ್ಷಕರು ಬಡ ಮಕ್ಕಳಿಗೆ ಪುಸ್ತಕ ಕೊಟ್ಟು ದೊಡ್ಡಮನಸ್ಸು ತೋರಿದರು.
೨. ಹಿಗ್ಗು : __________________________________________________
Model sentenceಹಿಗ್ಗು: ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಬಂದಾಗ ನನಗೆ ತುಂಬಾ ಹಿಗ್ಗಾಯಿತು.
೩. ತ್ಯಾಗಿ : __________________________________________________
Model sentenceತ್ಯಾಗಿ: ನಮ್ಮ ಸೈನಿಕರು ದೇಶಕ್ಕಾಗಿ ತಮ್ಮ ಸುಖವನ್ನು ತ್ಯಾಗ ಮಾಡುವ ತ್ಯಾಗಿಗಳು.
೪. ಬೆವರು ಸುರಿಸಿ : __________________________________________________
Model sentenceಬೆವರು ಸುರಿಸಿ: ಅಪ್ಪ ಬಿಸಿಲಿನಲ್ಲಿ ಬೆವರು ಸುರಿಸಿ ದುಡಿಯುತ್ತಾರೆ.
೫. ಅನ್ನದಾತ : __________________________________________________
Model sentenceಅನ್ನದಾತ: ರೈತರು ನಮಗೆಲ್ಲಾ ಅನ್ನ ಕೊಡುವ ಅನ್ನದಾತರು.
ಊ) ಕೆಳಗಿನ ಕೋಷ್ಟಕದಲ್ಲಿ ಅನ್ನದಾತನಿಗೆ ಸಂಬಂಧಿಸಿದ ಪದಗಳಿವೆ. ಅವನ್ನು ನೀವು ಪತ್ತೆಹಚ್ಚಿ, ಮಾದರಿಯಂತೆ ಗೆರೆ ಎಳೆಯಿರಿ.
(A 9x9 grid of Kannada letters is shown. The student is asked to find and circle words related to the farmer/food provider. Examples already circled in the grid: "ಬೆಳೆ" horizontally and "ದವಸಧಾನ್ಯ" vertically.)
IV. ಚಟುವಟಿಕೆಗಳು :
೧. ರೈತರು ಬಳಸುವ ಉಪಕರಣಗಳ ಹೆಸರನ್ನು ಪಟ್ಟಿಮಾಡಿರಿ.
೨. ರೈತರು ಬೆಳೆಯುವ ಬೆಳೆಗಳನ್ನು ಪಟ್ಟಿಮಾಡಿರಿ.
೩. ಕುವೆಂಪು ಅವರ ‘ನೇಗಿಲ ಯೋಗಿ’ ಪದ್ಯವನ್ನು ಓದಿರಿ.
೪. ನಿಮ್ಮ ಸಮೀಪದ ಗದ್ದೆಗಳಿಗೆ ಭೇಟಿನೀಡಿ ರೈತನ ಕೆಲಸಗಳನ್ನು ಗಮನಿಸಿ.